Weight Loss Tips: ಡಯೆಟ್​ನಲ್ಲಿ ಇರುವವರು ಅವಲಕ್ಕಿ ತಿನ್ನಬೇಕಂತೆ, ಏನಿದರ ಪ್ರಯೋಜನ ?

Weight Loss: ಅವಲಕ್ಕಿ ಒಂದು ಲೈಟ್‌ ಉಪಹಾರವಾಗಿದ್ದು,ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ. ಜೀರ್ಣಿಸಿಕೊಳ್ಳಲು ಸುಲಭವಾದ ಕಾರಣ ಇದು ಹೊಟ್ಟೆ ಉಬ್ಬಿಸಿರಿಕೊಳ್ಳುವಂತಹ ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ ಹಾಗೂ ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ಹಸಿವಾಗುವುದಿಲ್ಲ.

ಅವಲಕ್ಕಿ

ಅವಲಕ್ಕಿ

  • Share this:

Diet Tips: ತೂಕವನ್ನು ಇಳಿಸಿಕೊಳ್ಳಲು ಬಯಸುವವರು ಓಟ್ ಮೀಲ್ ಮತ್ತು ಮೊಟ್ಟೆಗಳನ್ನು ಪ್ರಧಾನ ಉಪಹಾರವಾಗಿ ಸೇವಿಸುವವರು. ಆದರೆ ಆರೋಗ್ಯ ಮತ್ತು ಅಭಿರುಚಿಯ ನಡುವಿನ ಪರಿಪೂರ್ಣ ಸಮತೋಲನವನ್ನು ಬಯಸುವವರು ದೇಸಿ ಆಹಾರಗಳತ್ತ ಸೆಳೆದುಕೊಳ್ಳುತ್ತಾರೆ. ಪ್ರತಿದಿನ ಓಟ್ ಮೀಲ್ ಮತ್ತು ಮೊಟ್ಟೆಗಳನ್ನು ತಿನ್ನುವುದು ಕಷ್ಟ. ಅಂತಹ ಸಮಯದಲ್ಲಿ ಅವಲಕ್ಕಿ ಉತ್ತಮ ಆಯ್ಕೆ. ಏಕೆಂದರೆ ಇದು ಆರೋಗ್ಯಕರ ಡಯಟ್‌ ಆಹಾರವಾಗಿದೆ ಹಾಗೂ ಉತ್ತಮ ರುಚಿಯನ್ನು ಹೊಂದಿದೆ. ಹಾಗೂ ಇದು ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳನ್ನು ಹೊಂದಿದೆ, ಅಂಟು ರಹಿತ ಮತ್ತು ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿದೆ. ಅವಲಕ್ಕಿಯನ್ನು ಬೀಟನ್‌ ರೈಸ್‌ ಎಂದು ಕೂಡ ಕರೆಯುತ್ತಾರೆ.


ಅವಲಕ್ಕಿ ತಿನ್ನುವುದರಿಂದ ಸಿಗುವ ಆರು ಪ್ರಮುಖ ಆರೋಗ್ಯ ಪ್ರಯೋಜನಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ:




  • ಅವಲಕ್ಕಿಯನ್ನು ಜೀರ್ಣಿಸಿಕೊಳ್ಳಲು ಸುಲಭವಾದ ಕಾರಣ ಇದು ನಿಮ್ಮ ಕರುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ:ಅವಲಕ್ಕಿ ಒಂದು ಲೈಟ್‌ ಉಪಹಾರವಾಗಿದ್ದು,ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ. ಜೀರ್ಣಿಸಿಕೊಳ್ಳಲು ಸುಲಭವಾದ ಕಾರಣ ಇದು ಹೊಟ್ಟೆ ಉಬ್ಬಿಸಿರಿಕೊಳ್ಳುವಂತಹ ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ ಹಾಗೂ ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ಹಸಿವಾಗುವುದಿಲ್ಲ. ದೆಹಲಿಯ ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆಗಳ ಹಿರಿಯ ಪೌಷ್ಟಿಕತಜ್ಞ ಮತ್ತು ಆಹಾರ ಪದ್ಧತಿ ಡಾ. ದಿವ್ಯಾ ಮಲಿಕ್, ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಆ್ಯಸಿಡಿಟಿ ತಪ್ಪಿಸಲು ನೀವು ಬಯಸಿದರೆ ಇದು ಆರೋಗ್ಯಕರ ಮತ್ತು ಸೂಕ್ತವಾದ ಉಪಹಾರವಾಗಿದೆ ಎಂದು ತಿಳಿಸಿದ್ದಾರೆ. ಹಾಗೂ ಪೋಹಾ ಸಹ ಉತ್ತಮ ಪ್ರೋಬಯಾಟಿಕ್ ಅಕ್ಕಿಯನ್ನು ಬೇಸಿಕೊಂಡು ಮತ್ತು ನಂತರ ಇದನ್ನು ಬಿಸಿಲಿನಲ್ಲಿ ಒಣಗಿಸಿ ತಯಾರಿಸಲಾಗುತ್ತದೆ.

  • ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವುದರಿಂದ ಪೋಹಾ ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ:ಇದು ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲಗಳಲ್ಲಿ ಒಂದಾಗಿದೆ, ಇದು ನಿಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ. ಇದು ಸಮಾರು 76.9% ಶಿಫಾರಸು ಮಾಡಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಸುಮಾರು 23% ಕೊಬ್ಬಿನ ಅಂಶವನ್ನು ಹೊಂದಿದೆ. ಆದ್ದರಿಂದ, ಉಪಾಹಾರಕ್ಕಾಗಿ ಅವಲಕ್ಕಿ ಸೇವಿಸುವುದು ಉತ್ತಮ.


ಇದನ್ನೂ ಓದಿ: ದಿನಾ ಬೆಳಗ್ಗೆ 2 ಲವಂಗ ತಿಂದರೆ ಸಾಕು, ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೇ ಮಾಯವಾಗುತ್ತವೆ !

  • ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ:ಅವಲಕ್ಕಿಯಲ್ಲಿ ಫೈಬರ್‌ ಸಮೃದ್ಧವಾಗಿದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆಯನ್ನು ತಡೆಯುತ್ತದೆ. ಹೀಗಾಗಿ, ಮಧುಮೇಹ ಇರುವವರಿಗೂ ಇದು ಸೂಕ್ತವಾಗಿದೆ.

  • ರಕ್ತಹೀನತೆಯ ವಿರುದ್ಧ ಹೋರಾಡಲು ಇದು ನಿಮಗೆ ಸಹಾಯ ಮಾಡುತ್ತದೆ,ಏಕೆಂದರೆ ಇದು ಕಬ್ಬಿಣ ಅಂಶವನ್ನು ಹೊಂದಿದೆ:ಕಬ್ಬಿಣದ ಕೊರತೆಯಿರುವವರು ಈಗಲೇ ನಿಮ್ಮ ಉಪಾಹಾರ ಮೆನುಗೆ ನೀವು ಅವಲಕ್ಕಿ ಸೇರಿಸಿ ಇದು ಕಬ್ಬಿಣದ ಕೊರತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ."ಈ ಖಾದ್ಯವು ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಹ ಪ್ರಯೋಜನಕಾರಿಯಾಗಿದೆ. ಉತ್ತಮ ಕಬ್ಬಿಣದ ಅಂಶವನ್ನು ನಿಮ್ಮ ದೇಹದಲ್ಲಿ ಹೆಚ್ಚಿಸಲು ,ನೀವು ಅವಲಕ್ಕಿಹೊಂದಿಗೆ ನಿಂಬೆ ರಸವನ್ನು ಸೇರಿಸಿ ತಿನ್ನಬೇಕು ”ಎಂದು ಡಾ. ಮಲಿಕ್ ಶಿಫಾರಸು ಮಾಡುತ್ತಾರೆ.

  • ಅಂಟು ಕಡಿಮೆ ಇರುವುದರಿಂದ ಇದು ಉತ್ತಮ ತೂಕ ಇಳಿಸುವ ಆಹಾರವಾಗಿದೆ:ನೀವು ಅಂಟಿಗೆ ಸೂಕ್ಷ್ಮವಾಗಿದ್ದಾರೆ ನಿಮಗೆ ಅವಲಕ್ಕಿ ಉತ್ತಮ ಆಯ್ಕೆ ಎಂದು ನೀವು ತಿಳಿದುಕೊಳ್ಳಬೇಕು. ಕಡಿಮೆ ಗ್ಲೂಟೆನ್‌ ಅಥವಾ ಅಂಟು ಹೊಂದಿದ್ದು, ನಿಮ್ಮ ವೈದ್ಯರ ಶಿಫಾರಸಿನ ನಂತರ ತಿನ್ನಬಹುದು. ಇದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ" ಎಂದು ಡಾ ಮಲಿಕ್ ಹೇಳುತ್ತಾರೆ.

  • ಅವಲಕ್ಕಿ ನಿಮ್ಮ ಮೆದುಳಿಗೆ ಬೂಸ್ಟರ್:"ನಿಮಗೆ ಗೊತ್ತೆ? ಬೇಯಿಸಿದ ಒಂದು ಬಟ್ಟಲಿನ ಅವಲಕ್ಕಿಯಲ್ಲಿ ಸುಮಾರು 250 ಕ್ಯಾಲೋರಿ ಅನ್ನು ಹೊಂದಿರುತ್ತದೆ, ಮತ್ತು ನೀವು ಅದರ ಜೊತೆ ತರಕಾರಿಗಳನ್ನು ಸೇರಿಸಿದ್ದರೆ ಅದರ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಸತ್ತವನ್ನು ಹೆಚ್ಚಿಸುತ್ತದೆ. ಕಡಲೆಕಾಯಿ ಮತ್ತು ಆಲೂಗಡ್ಡೆಯನ್ನು ಅವಲಕ್ಕಿಯ ಜೊತೆ ಸೇರಿಸಬೇಡಿ, ಏಕೆಂದರೆ ಅವು ಕ್ಯಾಲೋರಿಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ” ಎಂದು ಡಾ ಮಲಿಕ್ ಸೂಚಿಸುತ್ತಾರೆ.

Published by:Soumya KN
First published: