ಬನ್ನಿ ಸ್ವಾಮಿ, ನಮ್ಮ ರಸ್ತೆಗಳನ್ನ ಒಂದ್ಸಲ ನೋಡಿ... ಪ್ರಧಾನಿಗೆ ಆಹ್ವಾನ ಕೊಟ್ಟ ಬೆಂಗ್ಳೂರಿನ ಜನ!

Potholes: ವಿಐಪಿಗಳು ಮಾತ್ರ ಸುರಕ್ಷಿತವಾಗಿ ಸವಾರಿ ಮಾಡಬೇಕೆಂದು ಬಿಬಿಎಂಪಿ ಬಯಸುತ್ತಿರುವಂತೆ ತೋರುತ್ತಿದೆ" ಎಂದೂ ಆರೋಪಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರನ್ನು ರಾಜ್ಯ ರಾಜಧಾನಿ, ಸಿಲಿಕಾನ್‌ ಸಿಟಿ, ಗಾರ್ಡನ್‌ ಸಿಟಿ,(Garden city) ಐಟಿ ಸಿಟಿ - ಇನ್ನೂ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಇದು ದೇಶದ(Country) ಪ್ರಮುಖ ನಗರಗಳಲ್ಲಿ ಒಂದು ಎನಿಸಿಕೊಂಡಿದೆ. ಆದರೂ, ನಗರದ ರಸ್ತೆಗಳ ಸ್ಥಿತಿ ಬಗ್ಗೆ ಸ್ಥಳೀಯ ಜನತೆಗೆ ಹೊಸದೇನೂ ಹೇಳೋದಿಲ್ಲ. ಬೆಂಗಳೂರಲ್ಲಿ ವಾಹನ ಸವಾರಿ ಮಾಡುವುದು ಸವಾಲಿನ ಕೆಲಸವೇ ಸರಿ. ರಸ್ತೆ ತುಂಬಾ ತುಂಬಿರುವ ಗುಂಡಿಗಳನ್ನು (Potholes)ದಾಟಿಕೊಂಡು ಹೋಗುವುದು, ಪಾರಾಗುವುದು ಕಷ್ಟಸಾಧ್ಯ. ಈ ಹಿನ್ನೆಲೆ ಬೆಂಗಳೂರಿನ (Bangalore)ರಸ್ತೆಗಳ ದಯನೀಯ ಸ್ಥಿತಿ ನೋಡಲು ತಮ್ಮ ಪ್ರದೇಶಗಳಿಗೆ ಭೇಟಿ ನೀಡುವಂತೆ ಅನೇಕ ಸಾಮಾಜಿಕ ಜಾಲತಾಣ(Social media) ಬಳಕೆದಾರರು ಪ್ರಧಾನಿ ನರೇಂದ್ರ ಮೋದಿಯನ್ನು(PM Narendra Modi) ಆಹ್ವಾನಿಸುತ್ತಿದ್ದಾರೆ. ಸೋಷಿಯಲ್‌ ಮೀಡಿಯಾಗಳಲ್ಲಿಇದು ಟ್ರೆಂಡ್‌ ಆಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) (BBMP)ಮೋದಿ ಅವರ ಭೇಟಿಗೆ ಮುನ್ನ ಜ್ಞಾನಭಾರತಿ ಕ್ಯಾಂಪಸ್‌ಗೆ ಹೋಗುವ ರಸ್ತೆಯ ವಿಸ್ತರಣೆಯ ನಂತರ ಈ ಸಾಮೂಹಿಕ ಆಹ್ವಾನ (Inviting) ಬಂದಿದೆ.

ಸಂಚಾರಕ್ಕೆ ಯೋಗ್ಯವಿಲ್ಲ
ಡಿಸೆಂಬರ್ 6 ರಂದು ಬೆಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿರುವ ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಟ್ಟಡವನ್ನು ಮೋದಿ ಉದ್ಘಾಟಿಸಲಿರುವ ಕಾರಣ ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡಲಾಗಿದೆ. ಇನ್ನು, ಬೆಂಗಳೂರಿನ ರಸ್ತೆಗಳ ಬಗ್ಗೆ ಆಮ್ ಆದ್ಮಿ ಪಕ್ಷದ ಅಶೋಕ್ ಮೃತ್ಯುಂಜಯ ಮಾತನಾಡಿ, ಮಹದೇವಪುರದ ಬಹುತೇಕ ಎಲ್ಲಾ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Bengaluru Potholes; ಸಿಎಂ ತಾತಾ, ಪ್ಲೀಸ್ ರಸ್ತೆಗುಂಡಿಗಳನ್ನು ಮುಚ್ಚಿ,ನನ್ನ ಚಾಕ್ಲೆಟ್ ಹಣ ಕೊಡ್ತೀನಿ: 7 ವರ್ಷದ ಬಾಲಕಿ ಮನವಿ

ಭೇಟಿ ನೀಡುವಂತೆ ಪ್ರಧಾನಿಗೆ ಆಹ್ವಾನ
ನಾವು ಕಾಣುವುದು ಮಣ್ಣಿನಿಂದ ಆವೃತವಾಗಿರುವ ಅಥವಾ ಗುಂಡಿಗಳಿಂದ ತುಂಬಿದ ರಸ್ತೆ. ರಸ್ತೆಗಳು ಧೂಳಿನಿಂದ ಕೂಡಿರುವುದರಿಂದ ದ್ವಿಚಕ್ರ ವಾಹನ ಸವಾರಿ ಇನ್ನಷ್ಟು ಹದಗೆಡುತ್ತಿದೆ' ಎಂದು ಹೇಳಿದರು. "ವಿಐಪಿಗಳು ಮಾತ್ರ ಸುರಕ್ಷಿತವಾಗಿ ಸವಾರಿ ಮಾಡಬೇಕೆಂದು ಬಿಬಿಎಂಪಿ ಬಯಸುತ್ತಿರುವಂತೆ ತೋರುತ್ತಿದೆ" ಎಂದೂ ಆರೋಪಿಸಿದರು. ಕೆಲವು ಟ್ವಿಟ್ಟರ್ ಬಳಕೆದಾರರು ತಮ್ಮ ಪ್ರದೇಶಗಳಿಗೆ ಭೇಟಿ ನೀಡುವಂತೆ ಪ್ರಧಾನಿಯನ್ನು ಆಹ್ವಾನಿಸಿದರು.

“ಬೆಂಗಳೂರು ರಸ್ತೆಗಳು ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿವೆ. ರಸ್ತೆಯ ಮೂಲಕ ನಿಮ್ಮ ನಿಗದಿತ ಪ್ರಯಾಣ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹೊಸ ರೂಪ ನೀಡಿದೆ. ಈ ಹಿನ್ನೆಲೆ, ಇನ್ನು ಕೆಲವು ಪ್ರದೇಶಗಳಿಗೆ ರಸ್ತೆಯ ಮೂಲಕ ಪ್ರಯಾಣಿಸಲು ವಿನಂತಿಸುತ್ತೇನೆ. ಇದರಿಂದ ನಗರವು ಉತ್ತಮ ರಸ್ತೆಗಳನ್ನು ಪಡೆಯುತ್ತದೆ" ಎಂದು ದೀಪಕ್ ಕೃಷ್ಣಪ್ಪ ಎಂಬುವವರು ಟ್ವೀಟ್ ಮಾಡಿದ್ದಾರೆ.

25 ದಿನಗಳಲ್ಲಿ ದುರಸ್ತಿ: ಬಿಬಿಎಂಪಿ ಭರವಸೆ
ಈ ಮಧ್ಯೆ, ಇನ್ನು 25 ದಿನಗಳಲ್ಲಿ ಬೆಂಗಳೂರಿನ ಎಲ್ಲ ಕಡೆ ಗುಂಡಿ ಮುಕ್ತ ರಸ್ತೆ ಕಲ್ಪಿಸುವುದಾಗಿ ಬಿಬಿಎಂಪಿ ಭರವಸೆ ನೀಡಿದೆ. ಮುಂದಿನ 3 - 4 ವಾರಗಳಲ್ಲಿ ಮಳೆ ಬಾರದಿದ್ದರೆ ಬೆಂಗಳೂರಿನಲ್ಲಿ ರಸ್ತೆ ಪುನಶ್ಚೇತನ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಈಗಾಗಲೇ ಎಲ್ಲ ವಲಯಗಳಲ್ಲೂ ಪೂರ್ಣ ಪ್ರಮಾಣದ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ನಮ್ಮ ಬ್ಯಾಚ್ ಮಿಕ್ಸ್ ಪ್ಲಾಂಟ್ ಕಾರ್ಯಾಚರಣೆ ಪ್ರಾರಂಭಿಸಿದೆ. ಅಲ್ಲದೆ ವಾರ್ಡ್‌ಗಳಲ್ಲಿ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ’’ ಎಂದೂ ಅವರು ಹೇಳಿದರು. ಅಲ್ಲದೆ, ಈಗಾಗಲೇ ನಗರದ 300 ಕಿ.ಮೀ ಪ್ರಮುಖ ರಸ್ತೆಗಳಲ್ಲಿ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ ಎಂದರು. ದೋಷದ ಹೊಣೆಗಾರಿಕೆ ಅವಧಿಯಲ್ಲಿರುವ ರಸ್ತೆಗಳನ್ನು ಮುಂದಿನ ದಿನಗಳಲ್ಲಿ ದುರಸ್ತಿ ಮಾಡಲಾಗುವುದು" ಎಂದೂ ತಿಳಿಸಿದರು

ರಸ್ತೆ ಗುಂಡಿ ಮುಚ್ಚುವಂತೆ ತಲೆ ಬೋಳಿಸಿಕೊಂಡು ಪ್ರತಿಭಟನೆ
ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದವಿನೂತನ ಪ್ರತಿಭಟನೆ ಭಾರಿ ಸುದ್ದಿಯಾಯಿತು. ಪ್ರತಿಭಟನಾಕಾರರು ಬಿಬಿಎಂಪಿ ಪ್ರತಿಕೃತಿಯ ಶವಯಾತ್ರೆ ನಡೆಸಿದಲ್ಲದೇ, ಅದೇ ಪ್ರತಿಕೃತಿಯನ್ನ ಮರಳು- ಜಲ್ಲಿಕಲ್ಲು ಹಾಕಿ ರಸ್ತೆ ಗುಂಡಿಯಲ್ಲಿ ಮುಚ್ಚಿದ್ದಾರೆ.

ಇದನ್ನೂ ಓದಿ: ರಸ್ತೆ ಗುಂಡಿಗಳಿಗೆ ಕಾರಣರಾದ BBMP ಅಧಿಕಾರಿಗಳ ವಿರುದ್ಧ ಕೇಸ್ ಹಾಕಿ; ಬೆಂಗಳೂರಿಗರ ಒತ್ತಾಯ

ಬಳಿಕ ಮಡಿಕೆ ಹೊಡೆದು, ತಲೆ ಬೋಳಿಸಿಕೊಂಡು, ಹಾಲು ತುಪ್ಪ ಬಿಟ್ಟು, ಶಾಸ್ತ್ರಬದ್ದವಾಗಿ ಅಂತ್ಯಕ್ರಿಯೆ ಮಾಡಿ, ಆಕ್ರೋಶ ಹೊರಹಾಕುವ ಮೂಲಕ ರಸ್ತೆಗುಂಡಿ ಮುಚ್ಚುವಂತೆ ಒತ್ತಾಯಿಸಿದರು. ಪುಣ್ಯತಿಥಿಯೊಳಗೆ ರಸ್ತೆ ಗುಂಡಿ ಮುಚ್ಚುವಂತೆ ಸುಂಕದಕಟ್ಟೆ ಬಸ್ ನಿಲ್ದಾಣದ ಮುಂದೆ ಸ್ಥಳೀಯ ವ್ಯಾಪಾರಸ್ಥರು, ಆಟೋ ಚಾಲಕರು ಕಾರ್ಮಿಕ ಒಕ್ಕೂಟದ ಸದಸ್ಯರು, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು.
Published by:vanithasanjevani vanithasanjevani
First published: