ಮರಳಿನ ಬದಲು ಪ್ಲಾಸ್ಟಿಕ್ ತ್ಯಾಜ್ಯ ಬಳಕೆ; ಮನೆ ಕಟ್ಟುವವರಿಗೆ ಮರಳಿನ ಕೊರತೆಯೇ ಇಲ್ಲಿದೆ ಪರಿಹಾರ!

ಭಾರತದಲ್ಲಿ ಪ್ರತೀ ದಿನ 15,000 ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯಲಾಗುತ್ತಿದ್ದು ಮರಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಹಕಾರಿಯಾಗಲಿದೆ ಎಂದು ಜಾನ್ ತಿಳಿಸಿದ್ದಾರೆ

ಮರಳು ಗಣಿಗಾರಿಕೆ

ಮರಳು ಗಣಿಗಾರಿಕೆ

 • Share this:

  ನಮ್ಮ ಇಡೀ ಭೂಮಿಯಲ್ಲಿ ಹೆಚ್ಚು ಮರಳು ಎಲ್ಲಿ ಕಂಡು ಬರುತ್ತದೆ ಎಂದು ಪ್ರಶ್ನೆ ಕೇಳಿದರೆ ಮೊದಲು ಬರುವ ಉತ್ತರ ಸಮುದ್ರದ ತೀರ ಹಾಗೂ ಮರಭೂಮಿ. ಹೆಚ್ಚಿನ ಕಡಲ ತೀರಗಳು ಮತ್ತು ಮರುಭೂಮಿಗಳಲ್ಲಿ ಮರಳು ಇದ್ದೇ ಇರುತ್ತದೆ. ಕೈಗಾರಿಕೆಗಳಿಗೆ, ಕಟ್ಟಡ ನಿರ್ಮಾಣಗಳಿಗೆ ಮರಳು ಕಚ್ಚಾವಸ್ತುವಾಗಿದೆ.


  ಒಂದು ವಿಶ್ಲೇಷಣೆಯ ಪ್ರಕಾರ 40-50 ಬಿಲಿಯನ್​ ಟನ್‌ಗಳಷ್ಟು ಮರಳನ್ನು ವಿಶ್ವದಾದ್ಯಂತ ವಾರ್ಷಿಕವಾಗಿ ಬಳಸಲಾಗುತ್ತಿದೆ ಎನ್ನಲಾಗಿದೆ. ಆದರೆ ಕಟ್ಟಡ ನಿರ್ಮಾಣಗಳಿಗೆ ಪೂರೈಕೆಯಾಗುತ್ತಿರುವ ಮರಳುಗಳಲ್ಲಿ ಕಡಲ ತೀರದ ಮರಳು ಹಾಗೂ ಮರುಭೂಮಿಯ ಮರಳು ಅಷ್ಟೊಂದು ಪ್ರಯೋಜನಕಾರಿಯಲ್ಲ. ಕಡಲ ತೀರದ ಮರಳಿನಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾಗಿದ್ದರೆ ಮರುಭೂಮಿಯ ಮರಳು ತುಂಬಾ ಮೃದುವಾದ ರಚನೆಯನ್ನು ಹೊಂದಿದೆ. ಹಾಗಾಗಿ ಹೆಚ್ಚಿನ ಮರಳನ್ನು ನದಿ ತೀರಗಳಿಂದ, ಕೆರೆಗಳಿಂದ, ಹಳ್ಳಗಳಿಂದ ತೆಗೆದು ಬಳಸಲಾಗುತ್ತಿದೆ.  ಇದರಿಂದ ಪರಿಸರ ಹಾನಿಯಾಗುತ್ತಿದ್ದು ಭಾರತ, ಕಾಂಬೋಡಿಯಾ ಹಾಗೂ ವಿಯೇಟ್ನಾಮ್ ಸೇರಿದಂತೆ ನದಿಪಾತ್ರಗಳ ಮರಳನ್ನು ಬಳಸದಂತೆ ನಿಷೇಧವನ್ನು ಹೇರಿದೆ.


  ಭಾರತ ಹಾಗೂ ಚೀನಾ ದೇಶಗಳಲ್ಲಿ ಕಟ್ಟಡ ನಿರ್ಮಾಣ ಅತ್ಯಂತ ಹೇರಳವಾಗಿದ್ದು ಹೆಚ್ಚು ಪ್ರಮಾಣದ ಮರಳಿನ ಬಳಕೆ ಇಲ್ಲಾಗುತ್ತಿದೆ. ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿಯದೇ ಇರುವ ವಿಷಯವೆಂದರೆ ನಾವು ಬಳಸುವ ಸ್ಮಾರ್ಟ್‌ಫೋನ್, ಟಿವಿ ಸ್ಕ್ರೀನ್‌ಗಳು, ಸೋಲಾರ್ ಪ್ಯಾನಲ್‌ಗಳು ಹಾಗೂ ಇತರ ಇಲೆಕ್ಟ್ರಾನಿಕ್ ಐಟಂಗಳಲ್ಲಿ ಕೂಡ ಮರಳನ್ನು ಬಳಸಲಾಗುತ್ತದೆ ಎಂಬುದು. ಮರಳಿಗೆ ಪರ್ಯಾಯವಾಗಿ ಬೇರೆ ಸಂಪನ್ಮೂಲಗಳನ್ನು ಬಳಸಬಹುದೇ ಎಂಬುದಕ್ಕೆ ಹಲವಾರು ಅಧ್ಯಯನಗಳು ನಡೆಯುತ್ತಿವೆ. ಕೇಂಬ್ರಿಡ್ಡ್ ಯುನಿವರ್ಸಿಟಿಯ ಉಪನ್ಯಾಸಕರಾದ ಡಾ. ಜಾನ್ ಇತ್ತೀಚೆಗೆ ಹೊಸ ಅಧ್ಯಯನವೊಂದನ್ನು ನಡೆಸಿದ್ದು ಮರಳಿನ ಬದಲಿಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರ್ಯಾಯವಾಗಿ ಬಳಸಬಹುದು ಎಂಬುದನ್ನು ಕಂಡುಕೊಂಡಿದ್ದಾರೆ. ಭಾರತದಲ್ಲಿ ಪ್ರತೀ ದಿನ 15,000 ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯಲಾಗುತ್ತಿದ್ದು ಮರಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಹಕಾರಿಯಾಗಲಿದೆ ಎಂದು ಜಾನ್ ತಿಳಿಸಿದ್ದಾರೆ


  10% ಮರಳು ಬಳಸುವಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಾಂಕ್ರೀಟ್‌ನಲ್ಲಿ ಬಳಸಬಹುದಾಗಿದ್ದು ಮರಳು ನೀಡುವ ಅದೇ ಸಾಮರ್ಥ್ಯ ಹಾಗೂ ದೀರ್ಘ ಬಾಳಿಕೆಯನ್ನು ತ್ಯಾಜ್ಯ ನೀಡುತ್ತದೆ ಎಂದು ತಿಳಿಸಿದ್ದಾರೆ. ಅದೇ ರೀತಿ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುವ ಕಚ್ಚಾಸಾಮಾಗ್ರಿಗಳನ್ನು ಪ್ಲಾಸ್ಟಿಕ್ ತ್ಯಾಜ್ಯ ಇಳಿಮುಖಗೊಳಿಸುತ್ತದೆ ಎಂದು ತಿಳಿಸಿದ್ದಾರೆ.


  ಇನ್ನು ಪ್ಲಾಸ್ಟಿಕ್ ಕಡಿಮೆ ದರ ಹೊಂದಿದ್ದು ಮರಳಿಗೆ ಹೋಲಿಸಿದರೆ ಕಡಿಮೆ ವೆಚ್ಚದಾಯಕವಾಗಿದೆ. ಕಟ್ಟಡಗಳ ನಿರ್ಮಾಣವೇ ಜೀವಾಳವಾಗಿರುವ ಕೆಲವು ದೇಶಗಳಲ್ಲಿ ಮರಳಿನ ಬದಲಿಗೆ ಪ್ಲಾಸ್ಟಿಕ್ ತ್ಯಾಜ್ಯ ಬಳಸುವುದು ಮಿತವ್ಯಯಿ ಎಂದೆನಿಸಲಿದೆ ಎಂಬುದು ಜಾನ್ ಸಲಹೆಯಾಗಿದೆ. ಅದೇ ರೀತಿ ಮರಳಿನ ಬದಲಿಗೆ ಪರ್ಯಾಯವಾಗಿ ಇನ್ನಿತರ ಸಾಮಾಗ್ರಿಗಳಾದ ಚೂರಾದ ಹಳೆಯ ಟಯರ್‌ಗಳು, ಚೂರಾದ ಗಾಜಿನ ವಸ್ತುಗಳನ್ನು ಕಾಂಕ್ರೀಟ್‌ಗಳಲ್ಲಿ ಬಳಸಬಹುದು ಎಂದು ತಿಳಿಸಿದ್ದಾರೆ.


  ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳನ್ನು ಕಾಂಕ್ರೀಟ್‌ಗಳಲ್ಲಿ ಬಳಸುವ ಬಗ್ಗೆ ಜಾನ್ ಹಾಗೂ ಇತರ ಸಂಶೋಧಕರು ಎಚ್ಚರಿಸಿದ್ದು ಕಟ್ಟಡ ನಿರ್ಮಾಣಗಳ ರಚನೆಯಲ್ಲಿ ಮಾರ್ಪಾಡುಗಳನ್ನು ತರಲು ಅವರು ಸೂಚಿಸಿದ್ದಾರೆ. ನಿರ್ಮಾಣಗಳು ವಿನ್ಯಾಸವನ್ನು ಮೀರಿಸಿದಾಗ ಅವುಗಳು ಹೆಚ್ಚಿನ ಕಾಂಕ್ರೀಟ್ ಅನ್ನು ಬಳಸುತ್ತವೆ. ಇದು ದೊಡ್ಡ ಸಮಸ್ಯೆಯಾಗಲಿದೆ.


  ವಿಶ್ವದಲ್ಲಿ ತಲೆದೋರಿರುವ ಮರಳಿನ ಕೊರತೆಯನ್ನು ನೀಗಿಸಲು ಪ್ರತಿಯೊಬ್ಬರೂ ಜವಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ಲೇಖಕರಾದ ವಿನ್ಸ್ ಬೀಸರ್ ಹೇಳಿದ್ದಾರೆ. ರಸ್ತೆಯಲ್ಲಿ ಓಡಾಡುವ ಕಾರುಗಳ ಮೇಲೆ 10% ಇಳಿಕೆಯನ್ನು ಮಾಡಬೇಕು ಅಂತೆಯೇ ಕಾರುಗಳ ಮೇಲೆ ಹೆಚ್ಚು ಅವಲಂಬಿತರಾಗಿರುವವರು ಬಸ್ಸು ಹಾಗೂ ಇನ್ನಿತರ ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸಬೇಕು ಇದರಿಂದ ಕಾಂಕ್ರೀಟೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕಿಲ್ಲ ಎಂದವರು ತಿಳಿಸುತ್ತಾರೆ. ಇದರಿಂದ ಕಟ್ಟಡ ಹಾಗೂ ಮನೆಗಳಿಗೆ ಬಳಸುವ ಮರಳಿನ ಪ್ರಮಾಣದಲ್ಲಿ ಇಳಿಕೆಯುಂಟಾಗುತ್ತದೆ ಎಂಬುದು ಬೀಸರ್ ಅಭಿಪ್ರಾಯವಾಗಿದೆ.


  ಇದನ್ನೂ ಓದಿ: ಪ್ರಧಾನಿಗೆ ಮಾತನಾಡಲು ಬಿಡದ ಪ್ರತಿಪಕ್ಷಗಳು: ಗದ್ದಲದ ಗೂಡಾದ ಮೊದಲ ದಿನದ ಅಧಿವೇಶನ

  ಮರಳು ಮಾತ್ರವಲ್ಲದೆ ಪ್ರಕೃತಿ ನಮಗೆ ನೀಡಿರುವ ಪ್ರತಿಯೊಂದು ಸಂಪನ್ಮೂಗಳನ್ನು ನಾವು ಅಗತ್ಯಕ್ಕಿಂತ ಹೆಚ್ಚು ಬಳಸುತ್ತಿದ್ದೇವೆ ಎಂಬುದು ಬೀಸರ್ ವಾದವಾಗಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: