• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಗಾಳಿ ತುಂಬಿರುವ ಪ್ಲಾಸ್ಟಿಕ್ ಬ್ಯಾಗ್‌ ದುಬಾರಿ ಬೆಲೆಗೆ ಮಾರಾಟ..! ಏನಿತ್ತು ಇದರೊಳಗೆ?

ಗಾಳಿ ತುಂಬಿರುವ ಪ್ಲಾಸ್ಟಿಕ್ ಬ್ಯಾಗ್‌ ದುಬಾರಿ ಬೆಲೆಗೆ ಮಾರಾಟ..! ಏನಿತ್ತು ಇದರೊಳಗೆ?

ಜನಪ್ರಿಯ ಕಲಾವಿದ ಕಾನ್ಯೆ ವೆಸ್ಟ್‌

ಜನಪ್ರಿಯ ಕಲಾವಿದ ಕಾನ್ಯೆ ವೆಸ್ಟ್‌

ಇಷ್ಟು ದುಬಾರಿ ಮೊತ್ತಕ್ಕೆ ಈ ಬ್ಯಾಗ್ ಖರೀದಿಸುವ ವ್ಯಾಮೋಹವಾದರೂ ಅಭಿಮಾನಿಗಳಿಗೆ ಏಕಿದೆ ಎಂಬುದು ಇಲ್ಲಿ ಯೋಚಿಸಬೇಕಾದ ವಿಷಯವೇ ಆಗಿದೆ. ಕಾನ್ಯೆ ವೆಸ್ಟ್‌ ಕಾನ್ಸರ್ಟ್‌ಗಳು ಮತ್ತು ಈವೆಂಟ್‌ಗಳ ಗಾಳಿ ಸಂಗ್ರಹಿಸಿರುವ ಪ್ಲಾಸ್ಟಿಕ್ ಬ್ಯಾಗ್‌ಗಳ ಆನ್‌ಲೈನ್ ಮಾರಾಟವು ಕಳೆದ ಐದು ವರ್ಷಗಳಿಂದ ನಡೆಯುತ್ತಿದೆ.

ಮುಂದೆ ಓದಿ ...
  • Share this:

    ಜನಪ್ರಿಯ ಕಲಾವಿದ ಕಾನ್ಯೆ ವೆಸ್ಟ್‌ ಕಾನ್ಸರ್ಟ್ ಹಾಗೂ ಶೋ ಅಂದರೆ ಆತನ ಅಭಿಮಾನಿಗಳು ಹುಚ್ಚೆದ್ದು ಸಂಭ್ರಮಿಸುತ್ತಾರೆ. ಎಷ್ಟೇ ದುಬಾರಿ ಮೊತ್ತದ ಟಿಕೆಟ್ ಅನ್ನು ಕಾನ್ಸರ್ಟ್ ಹೊಂದಿದ್ದರೂ ಅದನ್ನು ಖರೀದಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕಾನ್ಸರ್ಟ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ಅಭಿಮಾನಿಗಳಿಗೆ ಚಳ್ಳೆ ಹಣ್ಣು ತಿನ್ನಿಸುವವರೂ ಕಮ್ಮಿ ಇಲ್ಲ ಎಂಬುದಕ್ಕೆ ಈ ಲೇಖನ ಸಾಕ್ಷಿಯಾಗಿದೆ.


    ಕಾನ್ಯೆ ವೆಸ್ಟ್‌ ಲಿಸನಿಂಗ್ ಈವೆಂಟ್‌ನಿಂದ ಸಂಗ್ರಹಿಸಲಾದ ಗಾಳಿಯಿರುವ ಪ್ಲಾಸ್ಟಿಕ್ ಬ್ಯಾಗ್ ಒಂದನ್ನು ಯಾರೋ ಒಬ್ಬರು $7600 (ರೂ 5,64,691.40) ಗೆ ಇಬೇನಲ್ಲಿ ಮಾರಿದ್ದಾರೆ. ಕಾನ್ಯೆ ವೆಸ್ಟ್‌ನ ಪ್ರತಿಯೊಂದು ಪ್ರದರ್ಶನ ಕೂಡ ವಾಣಿಜ್ಯಿಕವಾಗಿ ಹಿಟ್ ಆಗಿದ್ದರೂ ಜನಪ್ರಿಯ ಅಮೆರಿಕದ ಕಲಾವಿದನಿಗೆ ಸಂಬಂಧಿಸಿದಂತೆ ಖಾಲಿ ಪ್ಲಾಸ್ಟಿಕ್ ಬ್ಯಾಗ್ ಒಂದನ್ನು ಇಷ್ಟು ದೊಡ್ಡ ಮೊತ್ತಕ್ಕೆ ಹೇಗೆ ಮಾರಾಟ ಮಾಡಿದರು ಹಾಗೂ ಯಾರು ಖರೀದಿಸಿದರು ಎಂಬುದು ಸೋಜಿಗದ ವಿಷಯವಾಗಿದೆ.


    ಅಟ್ಲಾಂಟಾದ ಮರ್ಸಿಡಿಸ್ ಬೆಂಜ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ತಾನೇ ವೆಸ್ಟ್ ಹೆಚ್ಚು ನಿರೀಕ್ಷಿತ ಅಟ್ಲಾಂಟ ಡೋಂಡಾ ಲಿಸನಿಂಗ್ ಈವೆಂಟ್ ಒಂದನ್ನು ಹೋಸ್ಟ್ ಮಾಡಿದ್ದರು. ಈ ಶೋನಲ್ಲಿದ್ದ ಒಬ್ಬ ಅಭಿಮಾನಿ ಈವೆಂಟ್‌ನಿಂದ ಕೊಂಚ ದುಡ್ಡು ಮಾಡುವ ಆಲೋಚನೆ ಮಾಡಿದ್ದು ಪ್ಲಾಸ್ಟಿಕ್ ಜಿಪ್ ಲಾಕ್ ಬ್ಯಾಗ್ ತೆಗೆದುಕೊಂಡು ‘ಡೋಂಡಾ ಡ್ರಾಪ್‌ನ ಗಾಳಿ’ ಎಂದು ಲೇಬಲ್ ಲಗತ್ತಿಸಿ ಇಬೇನಲ್ಲಿ $3,330 ಕ್ಕೆ (ರೂ 2,47,404.02) ಹರಾಜಿಗೆ ಹಾಕಿದ್ದಾನೆ. ಹಾಗೂ ಈ ಪ್ಲಾಸ್ಟಿಕ್ ಬ್ಯಾಗ್ 7600 ಡಾಲರ್‌ಗೆ ಮಾರಾಟವಾಯಿತು.


    ಇಬೇನಲ್ಲಿ ಈ ಬ್ಯಾಗ್ ಹರಾಜಿಗೆ ಹಾಕುವಾಗ ಒಂದು ಫೋಟೋವನ್ನೂ ದಾಖಲೆಯ ರೂಪದಲ್ಲಿ ಲಗತ್ತಿಸಲಾಗಿದೆ. ಫೋಟೋ ಕೊಂಚ ಮಸುಕಾಗಿದ್ದು ಇದು ಶೋನಿಂದ ತಂದಂತಹ ಗಾಳಿಯಾಗಿದೆ ಎಂಬುದಂತೂ ನಿಜವಾಗಿದೆ. ಆದರೆ ಸಾಮಾಜಿಕ ತಾಣದಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿದ್ದು ಖಾಲಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕಾನ್ಯೆ ವೆಸ್ಟ್‌ ಶೋನ ಗಾಳಿ ತುಂಬಲಾಗಿದೆ ಎಂಬುದಾಗಿ ಹೇಗೆ ಹೇಳಬಹುದು ಎಂಬ ಮಾತುಗಳು ಕೇಳಿಬಂದಿದೆ.


    ಆದರೆ ಅಭಿಮಾನಕ್ಕೆ ಕಣ್ಣಿಲ್ಲ ಎಂಬ ಮಾತಿನಂತೆ ಅವರ ಅಭಿಮಾನಿಗಳು ಈ ಬ್ಯಾಗ್‌ನಲ್ಲಿರುವ ಗಾಳಿಯನ್ನು ಅತ್ಯಮೂಲ್ಯ ವಸ್ತುವಾಗಿ ಕಾಣುತ್ತಿದ್ದು ಬಿಡ್‌ನಲ್ಲಿ ತೊಡಗಿಸಿಕೊಂಡು ಉತ್ತಮ ಮೊತ್ತಕ್ಕೆ ಈ ಪ್ಲಾಸ್ಟಿಕ್ ಬ್ಯಾಗ್ ಅನ್ನು ಕೊಂಡುಕೊಂಡಿದ್ದಾರೆ.


    ಇದನ್ನೂ ಓದಿ:  ಗೋಡಂಬಿ ಹಾಲಿನಿಂದ ಕೂದಲು, ಚರ್ಮ ಎರಡೂ ಫಳ ಫಳ..!

    ಇಷ್ಟು ದುಬಾರಿ ಮೊತ್ತಕ್ಕೆ ಈ ಬ್ಯಾಗ್ ಖರೀದಿಸುವ ವ್ಯಾಮೋಹವಾದರೂ ಅಭಿಮಾನಿಗಳಿಗೆ ಏಕಿದೆ ಎಂಬುದು ಇಲ್ಲಿ ಯೋಚಿಸಬೇಕಾದ ವಿಷಯವೇ ಆಗಿದೆ. ಕಾನ್ಯೆ ವೆಸ್ಟ್‌ ಕಾನ್ಸರ್ಟ್‌ಗಳು ಮತ್ತು ಈವೆಂಟ್‌ಗಳ ಗಾಳಿ ಸಂಗ್ರಹಿಸಿರುವ ಪ್ಲಾಸ್ಟಿಕ್ ಬ್ಯಾಗ್‌ಗಳ ಆನ್‌ಲೈನ್ ಮಾರಾಟವು ಕಳೆದ ಐದು ವರ್ಷಗಳಿಂದ ನಡೆಯುತ್ತಿದೆ. 2015ರ ಇಬೇ ಲಿಸ್ಟಿಂಗ್‌ನಲ್ಲಿ ಇದೇ ರೀತಿಯ ಬ್ಯಾಗ್ ಒಂದು 65,000 ಡಾಲರ್‌ಗೆ ಮಾರಾಟವಾಯಿತು. ಇನ್ನು ಈ ಬ್ಯಾಗ್ ಖರೀದಿಸಿದ ನಂತರ ಇದು ಉಚಿತ ಶಿಪ್ಪಿಂಗ್ ಅನ್ನೂ ಹೊಂದಿಲ್ಲ. ಬ್ಯಾಗ್ ಖರೀದಿಸುವವರು $4 ಅನ್ನು ಬ್ಯಾಗ್‌ನ ಶಿಪ್ಪಿಂಗ್ ಶುಲ್ಕವಾಗಿ ನೀಡಬೇಕಾಗುತ್ತದೆ.




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published: