• Home
  • »
  • News
  • »
  • trend
  • »
  • Viral News: ಸಸ್ಯಗಳ ಉಸಿರಾಟ ಕ್ರಿಯೆಯನ್ನು ಹತ್ತಿರದಿಂದ ಸೆರೆಹಿಡಿದು ವಿಜ್ಞಾನಿಗಳು, ಇಲ್ಲಿದೆ ವೈರಲ್ ವಿಡಿಯೋ

Viral News: ಸಸ್ಯಗಳ ಉಸಿರಾಟ ಕ್ರಿಯೆಯನ್ನು ಹತ್ತಿರದಿಂದ ಸೆರೆಹಿಡಿದು ವಿಜ್ಞಾನಿಗಳು, ಇಲ್ಲಿದೆ ವೈರಲ್ ವಿಡಿಯೋ

ಗಿಡ ಉಸಿರಾಟ ನಡೆಸುವ ಚಿತ್ರ

ಗಿಡ ಉಸಿರಾಟ ನಡೆಸುವ ಚಿತ್ರ

Viral News: ಸಾಮಾನ್ಯವಾಗಿ ಇತರೆ ಪ್ರಾಣಿಗಳು ಉಸಿರಾಡುವ ಕ್ರಿಯೆ ನಮಗೆ ಅರಿವಿಗೆ ಬರುತ್ತದೆ, ಆದರೆ ಸಸ್ಯಗಳಲ್ಲಿ ಇದು ಗೊತ್ತಾಗುವುದಿಲ್ಲ. ಸಸ್ಯಗಳು ಉಸಿರಾಡುವ ಕ್ರಿಯೆಯನ್ನು ತುಂಬಾ ಹತ್ತಿರದಿಂದ ಸಂಶೋಧನಾ ತಂಡ ಸೆರೆಹಿಡಿದಿದೆ ನೋಡಿ.

  • Share this:

ಉಸಿರಾಟ ಕ್ರಿಯೆ ಪ್ರತಿ ಜೀವಿಗೂ ತುಂಬಾ ಮುಖ್ಯವಾದದ್ದು. ಪ್ರಾಣಿ, ಪಕ್ಷಿ, ಮನುಷ್ಯರಿಂದ ಹಿಡಿದು ಗಾಳಿ (Air) ನೀಡುವ ಮರಗಿಡಗಳು ಸಹ ಉಸಿರಾಡುತ್ತವೆ. ಹೌದು, ಸಸ್ಯಗಳಲ್ಲಿನ ಉಸಿರಾಟವು ರಾಸಾಯನಿಕ ಕ್ರಿಯೆಗಳ ಸರಪಳಿಯಾಗಿದ್ದು ಅದು ಶಕ್ತಿಯನ್ನು ಸಂಶ್ಲೇಷಿಸುವ ಮೂಲಕ ಎಲ್ಲಾ ಜೀವಿಗಳನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಸಸ್ಯ (Tree) ಕೋಶಗಳು ಪ್ರಾಣಿ ಕೋಶಗಳಿಗಿಂತಲೂ ರಚನೆಯಲ್ಲಿ ಭಿನ್ನವಾಗಿರುತ್ತವೆ, ಆದರೆ ಉಸಿರಾಟ ಎಂಬ ಕಾರ್ಯವು ಪ್ರಾಣಿ ಕೋಶಗಳಲ್ಲಿ ನಡೆದಂತೆಯೇ ಸಸ್ಯಕೋಶ ಗಳಲ್ಲಿಯೂ ನಡೆಯುತ್ತದೆ. ಉಸಿರಾಟ (Breathing) ಎಂದರೆ ಆಹಾರದಲ್ಲಿರುವ ರಾಸಾಯನಿಕ ಶಕ್ತಿಯನ್ನು ಉತ್ಕರ್ಷಿಸಿ ಬಿಡುಗಡೆ ಮಾಡುವ ಕ್ರಿಯೆ.


ಸಾಮಾನ್ಯವಾಗಿ ಇತರೆ ಪ್ರಾಣಿಗಳು ಉಸಿರಾಡುವ ಕ್ರಿಯೆ ನಮಗೆ ಅರಿವಿಗೆ ಬರುತ್ತದೆ, ಆದರೆ ಸಸ್ಯಗಳಲ್ಲಿ ಇದು ಗೊತ್ತಾಗುವುದಿಲ್ಲ. ಸಸ್ಯಗಳು ಉಸಿರಾಡುವ ಕ್ರಿಯೆಯನ್ನು ತುಂಬಾ ಹತ್ತಿರದಿಂದ ಸಂಶೋಧನಾ ತಂಡ ಸೆರೆಹಿಡಿದಿದೆ ನೋಡಿ.


ಸಸ್ಯಗಳ ಉಸಿರಾಟ ಪ್ರಕ್ರಿಯೆಯನ್ನು ಹತ್ತಿರದಿಂದ ಸೆರೆಹಿಡಿದ ಸಂಶೋಧಕರು:


ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ಜೀವಶಾಸ್ತ್ರಜ್ಞರು ತಮ್ಮ ಸಂಶೋಧನೆಯಲ್ಲಿ ಸಸ್ಯಗಳ ಉಸಿರಾಟ ಪ್ರಕ್ರಿಯೆಯನ್ನು ತುಂಬಾ ಹತ್ತಿರದಿಂದ ಸೆರೆ ಹಿಡಿದಿದ್ದಾರೆ. ಈ ಮೂಲಕ ಇಂಗಾಲದ ಡೈಆಕ್ಸೈಡ್ ಮತ್ತು ನೀರನ್ನು ಗಾಳಿಯೊಂದಿಗೆ ವಿನಿಮಯ ಮಾಡಿಕೊಳ್ಳಲು ಸಸ್ಯಗಳು ತಮ್ಮ ಸ್ಟೊಮಾಟಾ ಅಥವಾ ಪತ್ರಹರಿತ್ತು (ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳಲು ಅನುವು ಮಾಡುವ ಅಂಗ) ಅನ್ನು ಹೇಗೆ ಬಳಸುತ್ತವೆ ಎಂಬುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಈ ಸಂಶೋಧನೆಗೆ ನ್ಯಾಷನಲ್ ಸೈನ್ಸ್ ಫೌಂಡೇಶನ್ ಧನಸಹಾಯ ನೀಡಿದ್ದು, ವಿಡಿಯೋ ಬಿಡುಗಡೆ ಮಾಡಿದೆ.
ಪ್ರಮುಖ ಸಂಶೋಧಕರಾದ ಜೂಲಿಯನ್ ಶ್ರೋಡರ್ ಅವರು ಮಾತಾಡಿ "ಈ ಕಾರ್ಯವಿಧಾನವನ್ನು ಬಳಸುವುದರಿಂದ ಸಸ್ಯದ ನೀರಿನ ಬಳಕೆಯ ದಕ್ಷತೆ ಮತ್ತು ಇಂಗಾಲದ ಸೇವನೆಯ ಬಗ್ಗೆ ತಿಳಿಯಬಹುದು" ಎಂದು ಹೇಳಿದ್ದಾರೆ. ಇದೊಂದು ಮಹತ್ವದ ಆವಿಷ್ಕಾರವಾಗಿದ್ದು ಈ ಸಂಶೋಧನೆಗಾಗಿ ಈಗಾಗ್ಲೇ ಸಂಶೋಧನಾ ತಂಡ ಪೇಟೆಂಟ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. "ತಮ್ಮ ಸಂಶೋಧನೆಗಳನ್ನು ಬೆಳೆ ತಳಿಗಾರರು ಮತ್ತು ರೈತರಿಗೆ ಸಾಧನಗಳಾಗಿ ಭಾಷಾಂತರಿಸಲು ಮಾರ್ಗಗಳನ್ನು ಪರಿಶೀಲಿಸುತ್ತಿದ್ದಾರೆ," ಎಂದು ವರದಿ ಹೇಳಿದೆ. ವಿಜ್ಞಾನಿಗಳ ಸಂಶೋಧನೆಯನ್ನು ವಿವರಿಸುವ ಅಧ್ಯಯನವನ್ನು ಪೀರ್-ರಿವ್ಯೂಡ್ ಜರ್ನಲ್ ಸೈನ್ಸ್ ಅಡ್ವಾನ್ಸ್‌ನಲ್ಲಿ ಪ್ರಕಟಿಸಲಾಗಿದೆ.


ಸಂಶೋಧನೆ ಏಕೆ ಮಹತ್ವದ್ದಾಗಿದೆ?:


ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಅಂಗಗಳು ಪತ್ರಹರಿತ್ತು. ಈ ಪತ್ರಹರಿತ್ತು ಅಥವಾ ಸ್ಟೊಮಾಟಾ ತೆರೆದಾಗ, ಸಸ್ಯದ ಒಳಭಾಗವು ಅಂಶಗಳಿಗೆ ಒಡ್ಡಿಕೊಳ್ಳುತ್ತದೆ, ಮತ್ತು ಸಸ್ಯದಿಂದ ನೀರು ಸುತ್ತಮುತ್ತಲಿನ ಗಾಳಿಗೆ ಒಣಗಿ ಹೋಗಬಹುದು. ಹವಾಮಾನ ಬದಲಾವಣೆಯಿಂದಾಗಿ ವಾತಾವರಣದ ಇಂಗಾಲದ ಡೈಆಕ್ಸೈಡ್ ಸಾಂದ್ರತೆ ಮತ್ತು ತಾಪಮಾನವು ಹೆಚ್ಚಿದೆ ಎಂಬ ಅಂಶವನ್ನು ಪರಿಗಣಿಸಿ, ಇಂಗಾಲದ ಡೈಆಕ್ಸೈಡ್ ಪ್ರವೇಶ ಮತ್ತು ಸ್ಟೊಮಾಟಾ ಮೂಲಕ ನೀರಿನ ಆವಿ ನಷ್ಟದ ನಡುವಿನ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಈ ಆವಿಷ್ಕಾರ ಕಂಡುಕೊಂಡಿದೆ.


ಇದನ್ನೂ ಓದಿ: Chicken Tikka Masala: ನಾನ್‌ ವೆಜ್‌ ಪ್ರಿಯರ ಬಾಯಿ ರುಚಿ ತಣಿಸಿದ್ದ ಖ್ಯಾತ ಉದ್ಯಮಿ ಇನ್ನಿಲ್ಲ, 77ನೇ ವಯಸ್ಸಲ್ಲಿ ನಿಧನರಾದ 'ಚಿಕನ್ ಟಿಕ್ಕಾ ಮಸಾಲ' ದೊರೆ ಅಲಿ ಅಹ್ಮದ್ ಅಸ್ಲಂ


ಸಸ್ಯಗಳು, ವಿಶೇಷವಾಗಿ ಗೋಧಿ, ಅಕ್ಕಿ ಮತ್ತು ಜೋಳದಂತಹ ಬೆಳೆಗಳು ಹೊಸ ಸಮತೋಲನವನ್ನು ಸಾಧಿಸಲು ಸಾಧ್ಯವಾಗದಿದ್ದರೆ, ಅವು ಒಣಗಿ ಹೋಗುವ ಅಪಾಯವಿದೆ. ಈ ಸಂಶೋಧನೆಯು ಪತ್ರಹರಿತ್ತನ್ನು ತೆರೆಯುವ ಸಂಕೇತಗಳನ್ನು ಕಂಡುಹಿಡಿಯಲು ಸಂಶೋಧಕರಿಗೆ ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಸಸ್ಯಗಳು ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಕೊಳ್ಳುವ ಮತ್ತು ನೀರನ್ನು ಕಳೆದುಕೊಳ್ಳುವ ನಡುವಿನ ಸರಿಯಾದ ಸಮತೋಲನವನ್ನು ಪರಿಶೀಲಿಸಬಹುದಾಗಿದೆ.


ಸಸ್ಯಗಳಲ್ಲಿ ಉಸಿರಾಟ ಕ್ರಿಯೆ ಹೇಗಿದೆ?


ಆಮ್ಲಜನಕ ಸಹಿತ ಉಸಿರಾಟ ನಡೆಸುವ ಸಸ್ಯಗಳು ಉಸಿರಾಟ ಕ್ರಿಯೆಗಾಗಿ ವಾತಾವರಣದಲ್ಲಿರುವ ಆಮ್ಲಜನಕವನ್ನು ಪಡೆಯುತ್ತವೆ, ಇಲ್ಲವೇ ತಮ್ಮದೇ ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಬಿಡುಗಡೆಯಾದ ಆಮ್ಲಜನಕವು ಉಸಿರಾಟಕ್ಕೆ ಬಳಕೆಯಾಗುತ್ತದೆ.


ವಾತಾವರಣದೊಂದಿಗೆ ಉಸಿರಾಟದ ಅನಿಲಗಳನ್ನು ವಿನಿಮಯ ಮಾಡಿಕೊಳ್ಳಲು ಎಲೆಗಳಲ್ಲಿ ಪತ್ರರಂಧ್ರಗಳು ಎಂಬ ರಂಧ್ರ ರಚನೆಗಳು ಇರುತ್ತವೆ. ಕಾಂಡಗಳಲ್ಲಿ ಲೆಂತೀಸಲ್ ಎಂಬ ಬಿರುಕಾದ ರಚನೆಗಳು ಇರುತ್ತವೆ, ದೊಡ್ಡ ದೊಡ್ಡ ಮರಗಳಲ್ಲಿ ಕಾಂಡದ ಹೊರಭಾಗದಲ್ಲಿರುವ ಸಿಪ್ಪೆ ಗಳು ಮಾತ್ರ ಜೀವಂತವಾಗಿದ್ದು ಉಸಿರಾಡುತ್ತವೆ, ನಡುವೆ ಇರುವ ಗಟ್ಟಿಯಾದ ಕಟ್ಟಿಗೆ ಭಾಗವು ಜೀವಕೋಶಗಳು ಜೀವದ್ರವ್ಯ ಗಳನ್ನು ಕಳೆದುಕೊಂಡು ಸತ್ತುಹೋಗಿರುತ್ತವೆ.


ಬೇರುಗಳು ಸಹ ಮಣ್ಣಿನಲ್ಲಿರುವ ಗಾಳಿಯಲ್ಲಿ ಮತ್ತು ನೀರಿನಲ್ಲಿ ಅನಿಲ ವಿನಿಮಯ ಮಾಡಿಕೊಳ್ಳುತ್ತವೆ. ಇನ್ನೂ ಸಮುದ್ರದ ದಂಡೆಯ ಕೆಸರಿನಲ್ಲಿ ಗಾಳಿಯಾಡಲು ಸಾಧ್ಯವಾಗದ ಕಾರಣ ಕಾಂಡ ಸಸ್ಯಗಳು ಮೇಲ್ಮುಖವಾದ ಕೆಸರಿನಿಂದ ಹೊರಬಂದ ಉಸಿರಾಟದ ಬೇರುಗಳನ್ನು ಹೊಂದಿರುತ್ತದೆ.

Published by:shrikrishna bhat
First published: