• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Trip: ಫೆಬ್ರವರಿಯಲ್ಲಿ ಟ್ರಿಪ್‌ ಹೋಗ್ಬೇಕು ಅಂತ ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ಈ ಸ್ಥಳಗಳು ನಿಮಗೆ ಒಳ್ಳೆ ಆಯ್ಕೆ

Trip: ಫೆಬ್ರವರಿಯಲ್ಲಿ ಟ್ರಿಪ್‌ ಹೋಗ್ಬೇಕು ಅಂತ ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ಈ ಸ್ಥಳಗಳು ನಿಮಗೆ ಒಳ್ಳೆ ಆಯ್ಕೆ

ಪ್ರೇಕ್ಷಣೀಯ ಸ್ಥಳಗಳು

ಪ್ರೇಕ್ಷಣೀಯ ಸ್ಥಳಗಳು

ಚಳಿಗಾಲದಲ್ಲಿ ಪ್ರವಾಸ ಮಾಡುವುದರ ಮಜವೇ ಬೇರೆ. ಚುಮು ಚುಮು ಚಳಿಯಲ್ಲಿ ಹೊರಗೆ ಓಡಾವುದು, ಹೊಸ ಸ್ಥಳಗಳಿಗೆ ಹೋಗುವುದು, ಪ್ರಯಾಣ ಮಾಡುವುದು, ನಿಜಕ್ಕೂ ಖುಷಿ ನೀಡುತ್ತೆ ಹಾಗದ್ರೆ ಫೆಬ್ರವರಿಯಲ್ಲಿ ಯಾವ ಕಡೆ ಟ್ರಿಪ್‌ ಹೋಗಬಹುದು ಅಂತ ಇಲ್ಲಿ ನೀವಿಲ್ಲಿ ತಿಳಿದುಕೊಳ್ಳಬಹುದು.

  • Share this:

    ಚಳಿಗಾಲದಲ್ಲಿ (Summer) ಪ್ರವಾಸ (Trip) ಮಾಡುವುದರ ಮಜವೇ ಬೇರೆ. ಚುಮು ಚುಮು ಚಳಿಯಲ್ಲಿ ಹೊರಗೆ ಓಡಾವುದು, ಹೊಸ ಸ್ಥಳಗಳಿಗೆ (Places) ಹೋಗುವುದು, ಪ್ರಯಾಣ ಮಾಡುವುದು, ವಿಭಿನ್ನ ಆಹಾರಗಳನ್ನು(Food) ಟೇಸ್ಟ್‌ (Taste) ಮಾಡುವುದು ಹೀಗೆ ಚಳಿಗಾಲದ ಪ್ರವಾಸ ಹೆಚ್ಚು ಆಹ್ಲಾದಕರವಾಗಿರುತ್ತದೆ. ಮಳೆಗಾಲದಲ್ಲಿ ಮಳೆಯಿಂದಾಗಿ (Rain) ಹೊರಗೆ ಹೆಚ್ಚು ಓಡಾಡುವುದು ಕಷ್ಟ. ಇನ್ನು ಸೆಖೆಯಲ್ಲಿ ಸುಡುವ ಬಿಸಿಲಿನಿಂದ ಪ್ರವಾಸ ಇನ್ನಷ್ಟು ಕಷ್ಟ. ಹಾಗಾಗಿ ಚಳಿಗಾಲ ಪ್ರವಾಸಕ್ಕೆ ಹೆಚ್ಚು ಸೂಕ್ತ ಎಂದೇ ಹೇಳಬಹುದು.


    ಪರಿಪೂರ್ಣವಾದ ಫೆಬ್ರವರಿ ಹವಾಮಾನ ಹೊಂದಿರುವ ಸ್ಥಳಗಳು


    ಡಿಸೆಂಬರ್‌ ತಿಂಗಳಲ್ಲಿ ಬಹಳಷ್ಟು ಪ್ರವಾಸಿ ತಾಣಗಳಲ್ಲಿ ಗಢಗಢ ನಡುಗುವ ಪರಿಸ್ಥಿತಿ ಇರುತ್ತದೆ. ಆದರೆ ಫೆಬ್ರುವರಿ ತಿಂಗಳೆಂದರೆ ಅತ್ತ ಘನೀಕರಿಸುವ ಶೀತ ಚಳಿಗಾಲವೂ ಆಗಿರುವುದಿಲ್ಲ. ಸೆಖೆಯೂ ಆರಂಭವಾಗಿರುವುದಿಲ್ಲ. ಹಾಗಾಗಿ ಆಹ್ಲಾದಕರ ವಾತಾವರಣವಿರುವ ಸ್ಥಳಗಳಿಗೆ ಹೋಗಲು ಇದು ಸರಿಯಾದ ಸಮಯ. ಪರ್ವತಗಳ ಚಳಿ ಮತ್ತು ಬಯಲು ಸೀಮೆಯ ಸುಡುವ ಶಾಖದಿಂದ ದೂರವಾಗಿ ಫೆಬ್ರುವರಿಯ ಆಹ್ಲಾದಕರ ಚಳಿ ಇರುವ ಸ್ಥಳಗಳಿಗೆ ಹೋದರೆ ನೀವು ಸುಂದರವಾದ ಸಮಯವನ್ನು ಕಳೆಯಬಹುದು.


    ದೆಹಲಿ: ದೇಶದ ರಾಜಧಾನಿ ದೆಹಲಿಗೆ ಭೇಟಿ ನೀಡಲು ಫೆಬ್ರವರಿ ಅತ್ಯುತ್ತಮ ಸಮಯ ಎಂದೇ ಹೇಳಬಹುದು. ವರ್ಷದ ಈ ಸಮಯದಲ್ಲಿ ದೆಹಲಿ ತುಂಬಾ ಆಹ್ಲಾದಕರವಾಗಿರುತ್ತದೆ. ಹೊರಗೆ ಹೋಗಲು, ಸ್ಥಳಗಳನ್ನು ಅನ್ವೇಷಿಸಲು ಇದು ಸೂಕ್ತ ಸಮಯವಾಗಿರುತ್ತದೆ. ನೀವು ದೆಹಲಿಯ ಐತಿಹಾಸಿಕ ಸ್ಮಾರಕಗಳನ್ನು ನೋಡಬಹುದು. ಇಂಡಿಯಾ ಗೇಟ್‌, ರೆಡ್‌ ಪೋರ್ಟ್‌ ಮುಂತಾದ ಪ್ರಸಿದ್ಧ ಸ್ಥಳಗಳನ್ನು ನೋಡಬಹುದು. ಅಲ್ದೇ ಇಲ್ಲಿನ ಪ್ರಸಿದ್ಧ ಖಾದ್ಯಗಳನ್ನು ಟ್ರೈ ಮಾಡಬಹುದು. ಅಲ್ಲದೇ ವಿಭಿನ್ನ ವಸ್ತುಗಳ, ಬಟ್ಟೆಗಳ ಶಾಪಿಂಗ್‌ ಕೂಡ ಭರ್ಜರಿಯಾಗಿ ಮಾಡಬಹುದು.


    ಬೆಂಗಳೂರು, ಕರ್ನಾಟಕ: ಬೆಂಗಳೂರು ವರ್ಷವಿಡೀ ಆಹ್ಲಾದಕರ ಹವಾಮಾನವನ್ನು ಹೊಂದಿರುತ್ತದೆ. ಅದರಲ್ಲೂ ಬೆಂಗಳೂರಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಫೆಬ್ರವರಿ ಬೆಸ್ಟ್‌ ಸಮಯ. ಇಲ್ಲಿನ ಬೆಂಗಳೂರು ಪ್ಯಾಲೇಸ್‌, ಲಾಲ್‌ಭಾಗ್‌, ನಂದಿ ಹಿಲ್ಸ್‌, ಕಬ್ಬನ್‌ ಪಾರ್ಕ್‌, ಇಸ್ಕಾನ್‌ ಟೆಂಪಲ್‌ ಹೀಗೆ ಬೇರೆ ಬೇರೆ ಸ್ಥಳಗಳನ್ನು ನೀವು ಅನ್ವೇಷಿಸಬಹುದು. ಅಲ್ಲದೇ ಇಲ್ಲಿ ವಿಭಿನ್ನ ಶೈಲಿಯ ಖಾದ್ಯಗಳನ್ನು ಕೂಡ ಸವಿಯಬಹುದು.


    Planning a trip in February? Then these places are good choice for you
    ಪ್ರೇಕ್ಷಣೀಯ ಸ್ಥಳಗಳು


    ಶಿಲ್ಲಾಂಗ್, ಮೇಘಾಲಯ: ಮೇಘಾಲಯದ ಶಿಲ್ಲಾಂಗ್‌ಗೆ ಭೇಟಿ ನೀಡಲು ಫೆಬ್ರುವರಿ ಒಳ್ಳೆಯ ಸಮಯ ಎಂದು ಹೇಳಲಾಗುತ್ತದೆ. ಇಲ್ಲಿನ ಸುಂದರವಾದ ಹಿಲ್ಸ್‌ ಸ್ಟೇಷನ್‌ಗಳಲ್ಲಿ ನೀವು ಹಿತಕರವಾದ ಸಮಯ ಕಳೆಯಬಹುದು. ಬೀಸುವ ಗಾಳಿ ಚಳಿಗಾಳಿಯಾದರೂ ಘನೀಕರಿಸುವಂತಿರುವುದಿಲ್ಲ. ಆದ್ದರಿಂದ ಈ ತಿಂಗಳಲ್ಲಿ ನೀವು ಶಿಲ್ಲಾಂಗ್‌ಗೆ ಹೋದರೆ ಸುಂದರವಾದ ಅನುಭವ ಪಡೆದುಕೊಳ್ಳಬಹುದು.


    ಕಸೌಲಿ, ಹಿಮಾಚಲ ಪ್ರದೇಶ: ಹಿಮಾಚಲದ ಕಸೌಲಿ ಗಿರಿಧಾಮವನ್ನು ಆನಂದಿಸಲು ಫೆಬ್ರವರಿ ಉತ್ತಮ ಸಮಯ. ಇಲ್ಲಿನ ಗಿರಿಧಾಮಗಳ ನಡುವೆ ಚಳಿಗಾಳಿ, ಮುಂಜಾನೆ ಹಾಗೂ ಬೆಳಗಿನ ಚಳಿಯ ಅನುಭವ, ಸ್ವಚ್ಛ ಆಕಾಶ, ಸುಂದರ ಸೂರ್ಯಾಸ್ತಗಳನ್ನು ನೀವು ಅನುಭವಿಸಬಹುದು. ಹಾಗಾಗಿ ಫೆಬ್ರುವರಿಯ ಕಸೌಲಿ ಒಂದು ಕನಸಿನ ತಾಣವಾಗಿದೆ.


    ಇದನ್ನೂ ಓದಿ:Paris Trip: ನೀವು ಪ್ಯಾರೀಸ್​ಗೆ ಪ್ರಯಾಣಿಸುತ್ತಿದ್ದೀರಾ? ಹಾಗಾದ್ರೆ ನಿಮ್ಮ ಬ್ಯಾಗ್​ಗಳಲ್ಲಿ ಈ ವಸ್ತುಗಳು ಇರಲೇ ಬೇಕು


    ಉದಯಪುರ, ರಾಜಸ್ಥಾನ: ರಾಜಸ್ಥಾನವು ಅದ್ಭುತವಾದ ಕೋಟೆಗಳು, ಅರಮನೆಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಉದಯಪುರದಲ್ಲಿ ಫೆಬ್ರುವರಿಯಲ್ಲಿರುವ ಸೌಮ್ಯವಾದ ತಾಪಮಾನವು ನಿಮಗೆ ಅತ್ಯಂತ ಆರಾಮದಾಯಕ ಅನುಭವವನ್ನು ನೀಡುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನವು 12 ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎನ್ನಬಹುದು. ಹಾಗಾಗಿ ಹಿತವಾದ ಚಳಿಯನ್ನು ಅನುಭವಿಸುತ್ತ ನೀವು ತಾಣಗಳನ್ನು ನೋಡಬಹುದು.




    ಡಿಯೋಮಾಲಿ, ಒಡಿಶಾ: ಒಡಿಶಾದ ಡಿಯೋಮಾಲಿ ಅಥವಾ ದೇವಮಾಲಿ ಒಂದು ಅದ್ಭುತ ಪ್ರವಾಸಿ ತಾಣ. ಪರಿಸರಸ್ನೇಹಿ ಪ್ರವಾಸೋದ್ಯಮ ಹಾಗೂ ಟ್ರೆಕ್ಕಿಂಗ್‌ಗೆ ಹೆಚ್ಚು ಪ್ರಸಿದ್ಧವಾಗಿರುವ ದೇವಮಾಲಿಯಲ್ಲಿ ಫೆಬ್ರುವರಿಯಲ್ಲಿ ಹವಾಮಾನವು ಸುಂದರವಾಗಿ, ಸೌಮ್ಯವಾಗಿರುತ್ತದೆ. ಫೆಬ್ರುವರಿ ತಿಂಗಳಲ್ಲಿ ಸುತ್ತಲೂ ಮಂಜು ಮುಸುಕಿದ ಮೋಡಗಳೊಂದಿಗೆ ತಣ್ಣನೆಯ ಗಾಳಿಯು ನಿಮ್ಮ ದೇಹವನ್ನು ತಾಕುವ ಅನುಭವ ವಿಶಿಷ್ಟವಾದದ್ದಾಗಿರುತ್ತದೆ. ಅಲ್ಲದೇ ಈ ಶಿಖರದಲ್ಲಿ ಟ್ರೆಕ್ಕಿಂಗ್ ಮಾಡುವ ಅನುಭವ ಬಹುಕಾಲ ನೆನಪಿನಲ್ಲಿರುವಂಥದ್ದು.

    Published by:Gowtham K
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು