Save Your Finances| ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಗೊಳ್ಳುವಾಗ ಖರ್ಚುವೆಚ್ಚಗಳನ್ನು ಹೇಗೆ ನಿಭಾಯಿಸಬಹುದು? ಇಲ್ಲಿದೆ ಕೆಲವೊಂದು ಟಿಪ್ಸ್

ನೀವು ಖರ್ಚು ಕಡಿಮೆ ಮಾಡಿದಂತೆ ಹೆಚ್ಚು ಹಣವನ್ನು ಉಳಿಸಿಕೊಳ್ಳಬಹುದು ಇದರಿಂದ ಮುಂಬರುವ ಖರ್ಚುಗಳಿಗೆ ಅವನ್ನು ವಿನಿಯೋಗಿಸಿಕೊಳ್ಳಬಹುದು. ಹೀಗೆ ಕಡಿಮೆ ಖರ್ಚಿನಲ್ಲೇ ವಾಸಸ್ಥಳವನ್ನು ಬದಲಾಯಿಸಿಕೊಳ್ಳಬಹುದು ಹಾಗೂ ಒಂದೆಡೆಯಿಂದ ಇನ್ನೊಂದೆಡೆಗೆ ಶಿಫ್ಟ್ ಆಗಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಾಸಸ್ಥಳವನ್ನು ಬದಲಾಯಿಸುವಾಗ ನಮಗೆ ಅರಿವಿಲ್ಲದಂತೆಯೇ ಹೆಚ್ಚಿನ ಖರ್ಚುವೆಚ್ಚಗಳು ಬಂದೆರಗುತ್ತವೆ. ಒಮ್ಮೊಮ್ಮೆ ರಾಜ್ಯದಿಂದ ರಾಜ್ಯಕ್ಕೆ ಇಲ್ಲದಿದ್ದರೆ ಅಂತರಾಷ್ಟ್ರೀಯ (International) ದೇಶಗಳಿಗೆ ವಾಸಸ್ಥಳವನ್ನು ಬದಲಾಯಿಸಬೇಕಾದ ಪ್ರಸಂಗಗಳು ಉಂಟಾಗುತ್ತವೆ. ಹಾಗಿದ್ದರೆ ಈ ಸಮಯದಲ್ಲಿ ಉಂಟಾಗುವ ಖರ್ಚುವೆಚ್ಚಗಳನ್ನು (Finances) ಸರಿದೂಗಿಸುವುದು ಹೇಗೆ ಎಂಬುದರ ಕುರಿತು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ.

    ನೀವು ವಾಸಿಸಲು ಹೊರಟಿರುವ ಪ್ರದೇಶದ ಕುರಿತು ಮಾಹಿತಿ ಪಡೆದುಕೊಳ್ಳಿ:

    ನೀವು ವಾಸಿಸಲು ಹೊರಟಿರುವ ಪ್ರದೇಶದೊಂದಿಗೆ ಮನೆಯ ಬಗ್ಗೆ ಕೂಡ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡಿರುವುದು ಉತ್ತಮವಾಗಿದೆ. ಇದರಿಂದ ತಿಂಗಳಿಗೆ ಪಾವತಿಸುವ ವೆಚ್ಚಗಳನ್ನು ಸರಿಯಾಗಿ ಲೆಕ್ಕಾಚಾರ ಮಾಡಬಹುದು. ಮಧ್ಯವರ್ತಿಗಳ ಸಹಾಯದಿಂದ ಕೂಡ ಉತ್ತಮ ನಿವೇಶವನ್ನು ಕಡಿಮೆ ಹಣದಲ್ಲಿ ಪಡೆದುಕೊಳ್ಳಬಹುದಾಗಿದೆ. ಅದಾಗ್ಯೂ ನೀವು ಕೂಡ ಈ ನಿಟ್ಟಿನಲ್ಲಿ ಕೆಲವೊಂದು ರೀಸರ್ಚ್‌ಗಳನ್ನು ನಡೆಸಬೇಕಾಗುತ್ತದೆ.

    ವೃತ್ತಿಪರ ಮೂವರ್‌ಗಳನ್ನು ಆಯ್ಕೆಮಾಡಿಕೊಳ್ಳುವುದು:

    ಕಡಿಮೆ ವಸ್ತುಗಳಿದ್ದರೆ ಒಮ್ಮೊಮ್ಮೆ ನಾವೇ ವಸ್ತುಗಳನ್ನು ಸ್ಥಳಾಂತರಿಸುತ್ತೇವೆ. ಆದರೆ ಒಮ್ಮೊಮ್ಮೆ ಮೂವರ್‌ಗಳ ಸಹಾಯವನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ಅವರ ವೃತ್ತಿನೈಪುಣ್ಯತೆ ವೆಚ್ಚಗಳು ಮೊದಲಾದ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ. ನೀವು ಆಯ್ಕೆಮಾಡುವ ಮೂವಿಂಗ್ ಕಂಪನಿಗಳು ನಿಮ್ಮ ವಸ್ತುಗಳನ್ನು ಜಾಗರೂಕವಾಗಿ ತಲುಪಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಉಂಟಾಗುವ ಹಾನಿಗಳನ್ನು ನೀವೇ ಸರಿದೂಗಿಸಿಕೊಳ್ಳಬೇಕಾಗುತ್ತದೆ.

    ಅಗತ್ಯವಿಲ್ಲದ ವಸ್ತುಗಳನ್ನು ವಿಂಗಡಿಸಿ:

    ನಿಜಕ್ಕೂ ಈ ಕ್ರಿಯೆ ಕೊಂಚ ಪ್ರಯಾಸಕರವಾಗಿರುತ್ತದೆ. ಹೆಚ್ಚಿನವರು ತಮಗೆ ಬೇಡದೇ ಇರುವ ವಸ್ತುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಾರೆ ಅಂದರೆ ಸರಿಯಾಗಿ ವಸ್ತುಗಳ ವಿಂಗಡಣೆಯನ್ನು ಅವರು ಮಾಡುವುದಿಲ್ಲ. ಇದರಿಂದ ನಿಮ್ಮ ಸಾಗಾಟ ಭಾರವೂ ಹೆಚ್ಚಾಗುತ್ತದೆ. ನಿಮಗೆ ಅಗತ್ಯವಿಲ್ಲದಿರುವ ವಸ್ತುಗಳನ್ನು ಪ್ರತ್ಯೇಕಿಸುವುದರಿಂದ ಹಣವನ್ನು ಉಳಿಸಬಹುದಾಗಿದೆ.

    ನಿಮಗೆ ಅಗತ್ಯವಿಲ್ಲದಿರುವ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿಬಿಡಿ ಇದರಿಂದ ಹಣವನ್ನು ಸಂಪಾದಿಸಬಹುದು. ಇಲ್ಲದಿದ್ದರೆ ಅನಾಥಾಶ್ರಮ ಅಥವಾ ಯಾವುದಾದರೂ ಸಂಸ್ಥೆಯಲ್ಲಿರುವವರಿಗೆ ನೀಡಿ ಇದರಿಂದ ಅವರಿಗೆ ಅನುಕೂಲವಾಗುತ್ತದೆ.

    ನಿಗದಿತ ಸಮಯದಲ್ಲಿ ಸ್ಥಳಾಂತರಗೊಳ್ಳಿ:

    ಡಿಸೆಂಬರ್ ಹಾಗೂ ಜನವರಿ ತಿಂಗಳು ಸ್ಥಳಾಂತರಗೊಳ್ಳಲು ಉತ್ತಮ ಸಮಯವಾಗಿದೆ. ಚಳಿಗಾಲದಲ್ಲಿ ಕೂಡ ಸ್ಥಳಾಂತರವನ್ನು ನೀವು ನಡೆಸಬಹುದಾಗಿದೆ. ಡಿಸ್ಕೌಂಟ್ ಹಾಗೂ ಡೀಲ್‌ಗಳ ಸಮಯದಲ್ಲಿ ಸ್ಥಳಾಂತರ ನಡೆಸುವುದರಿಂದ ದುಬಾರಿ ಖರ್ಚುವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

    ಇದನ್ನೂ ಓದಿ: Savings Tips: 10 ತಿಂಗಳಲ್ಲಿ 20 ಲಕ್ಷ ಕೂಡಿಟ್ಟ ದಂಪತಿ: ಹೇಗೆ ಎಂಬ ಗುಟ್ಟು ಅವರೇ ಹೇಳಿದ್ದಾರೆ ನೋಡಿ

    ಕಡಿಮೆ ದರದ ಬಾಕ್ಸ್‌ಗಳು ಹಾಗೂ ಕಂಟೇನರ್‌ಗಳನ್ನು ಬಳಸಿ:

    ಆದಷ್ಟು ನಿಮ್ಮ ಬಳಿ ಇರುವ ವಸ್ತುಗಳಿಂದಲೇ ಪ್ಯಾಕ್ ಮಾಡಿಕೊಳ್ಳಿ. ದುಬಾರಿ ಬೆಲೆಯ ಬಾಕ್ಸ್‌ಗಳನ್ನು ಖರೀದಿಸುವ ಬದಲಿಗೆ ಕಡಿಮೆ ಖರ್ಚಿನ ರಟ್ಟಿನ ಬಾಕ್ಸ್‌ಗಳನ್ನು ಆರಿಸಿಕೊಳ್ಳಿ. ಈ ಬಾಕ್ಸ್‌ಗಳನ್ನು ನಿಮ್ಮ ಸಮೀಪದ ಸ್ಟೋರ್‌ಗಳಿಂದ ನೀವು ಪಡೆದುಕೊಳ್ಳಬಹುದು. ನಿಮ್ಮ ಸ್ನೇಹಿತರು ಕುಟುಂಬ ಸದಸ್ಯರ ಬಳಿ ಕೂಡ ಖಾಲಿ ಬಾಕ್ಸ್‌ಗಳನ್ನು ಪಡೆದುಕೊಳ್ಳಬಹುದು. ಆದಷ್ಟು ಕಡಿಮೆ ಖರ್ಚಿನಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳ ಬದಲಾಯಿಸಿಕೊಳ್ಳಿ.

    ಇದನ್ನೂ ಓದಿ: BuzzCut: ಟಿಕ್‌ಟಾಕ್‌ನಲ್ಲಿ ಪ್ರಖ್ಯಾತಗೊಂಡ 'ಕೌಚ್ ಗೈ' ಅಸಲಿಗೆ ಯಾರು? ಇಂಟರ್ನೆಟ್‌ನಲ್ಲಿ ಏಕೆ ಇಷ್ಟೊಂದು ಟ್ರೆಂಡ್ ಆಗುತ್ತಿದೆ?

    ನೀವು ಖರ್ಚು ಕಡಿಮೆ ಮಾಡಿದಂತೆ ಹೆಚ್ಚು ಹಣವನ್ನು ಉಳಿಸಿಕೊಳ್ಳಬಹುದು ಇದರಿಂದ ಮುಂಬರುವ ಖರ್ಚುಗಳಿಗೆ ಅವನ್ನು ವಿನಿಯೋಗಿಸಿಕೊಳ್ಳಬಹುದು. ಹೀಗೆ ಕಡಿಮೆ ಖರ್ಚಿನಲ್ಲೇ ವಾಸಸ್ಥಳವನ್ನು ಬದಲಾಯಿಸಿಕೊಳ್ಳಬಹುದು ಹಾಗೂ ಒಂದೆಡೆಯಿಂದ ಇನ್ನೊಂದೆಡೆಗೆ ಶಿಫ್ಟ್ ಆಗಬಹುದು.
    Published by:MAshok Kumar
    First published: