• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಕುಖ್ಯಾತ ಬಿಲ್ಲಿ ಕಿಡ್​ ಸಾಯಿಸಿದ ಪಿಸ್ತೂಲ್​ 6 ಮಿಲಿಯನ್​ ಡಾಲರ್​ಗೆ ಹರಾಜು; ದಾಖಲೆ ಬರೆದ ಭಾರೀ ಮೊತ್ತ

ಕುಖ್ಯಾತ ಬಿಲ್ಲಿ ಕಿಡ್​ ಸಾಯಿಸಿದ ಪಿಸ್ತೂಲ್​ 6 ಮಿಲಿಯನ್​ ಡಾಲರ್​ಗೆ ಹರಾಜು; ದಾಖಲೆ ಬರೆದ ಭಾರೀ ಮೊತ್ತ

ಬಿಲ್ಲಿ ಕಿಡ್​ ಕೊಲ್ಲಲು ಬಳಸಿದ ಪಿಸ್ತೂಲ್​: ಚಿತ್ರ- ಡೈಲಿ ಮೇಲ್​

ಬಿಲ್ಲಿ ಕಿಡ್​ ಕೊಲ್ಲಲು ಬಳಸಿದ ಪಿಸ್ತೂಲ್​: ಚಿತ್ರ- ಡೈಲಿ ಮೇಲ್​

ಪೊಲೀಸ್​ ಅಧಿಕಾರಿ ಪ್ಯಾಟ್ ಗ್ಯಾರೆಟ್ ಈ  44-ಕ್ಯಾಲಿಬರ್ ಗನ್ ಅನ್ನು ಬಿಲ್ಲಿ ದಿ ಕಿಡ್ ಅನ್ನು ಗುಂಡು ಹಾರಿಸಿ ಕೊಲ್ಲಲು ಬಳಸಿದರು. ಬಿಲ್ಲಿ ದಿ ಕಿಡ್ - ನಿಜವಾದ ಹೆಸರು ಹೆನ್ರಿ ಮೆಕ್ಕಾರ್ಟಿ - ಈತ ಆ ಯುಗದ ಅತ್ಯಂತ ಕುಖ್ಯಾತ ವ್ಯಕ್ತಿಗಳಲ್ಲಿ ಒಬ್ಬ ಮತ್ತು ಶೆರಿಫ್ ವಿಲಿಯಂ ಬ್ರಾಡಿ ಸೇರಿದಂತೆ ಎಂಟು ಜನರನ್ನು ಕೊಂದಿದ್ದ ಎಂದು ಹೇಳಲಾಗಿತ್ತು. ಜುಲೈ 14, 1881 ರಂದು ನ್ಯೂ ಮೆಕ್ಸಿಕೋದಲ್ಲಿ ಈತನ 21 ನೇ ವಯಸ್ಸಿನಲ್ಲಿದ್ದಾಗ ನೇರವಾಗಿ ಈತನ ಎದೆಗೆ ಗುಂಡು ಹಾರಿಸಿ ಕೊಲ್ಲಲಾಯಿತು.

ಮುಂದೆ ಓದಿ ...
  • Share this:

ಅಮೇರಿಕಾದ ವೈಲ್ಡ್ ವೆಸ್ಟ್ ದಿನಗಳ ಕುಖ್ಯಾತ ಬಿಲ್ಲಿ ಕಿಡ್ ಅನ್ನು ಕೊಲ್ಲಲು ಬಳಸಿದ ಪಿಸ್ತೂಲ್ ಅನ್ನು 6.03 ಮಿಲಿಯನ್ ಡಾಲರ್‌ಗೆ ಹರಾಜು ಮಾಡಲಾಗಿದೆ, ಒಂದು ಸಣ್ಣ ಪಿಸ್ತೂಲ್​ ಇಷ್ಟು ದೊಡ್ಡ ಮಟ್ಟಕ್ಕೆ ಹರಾಜಾಗಿರುವುದು ವಿಶ್ವ ದಾಖಲೆಯಾಗಿ ಮಾರ್ಪಟ್ಟಿದೆ ಎಂದು ವರದಿಯಾಗಿದೆ.


ಮಾಜಿ ಪೊಲೀಸ್​ ಅಧಿಕಾರಿ ಪ್ಯಾಟ್ ಗ್ಯಾರೆಟ್ ಒಡೆತನದಲ್ಲಿ ಇದ್ದ ಕೋಲ್ಟ್ ಸಿಂಗಲ್-ಆಕ್ಷನ್ ರಿವಾಲ್ವರ್ ಅನ್ನು $ 2-3 ಮಿಲಿಯನ್ ಬೆಲೆಬಾಳಬಹುದು ಎಂದು ಅಂದಾಜಿಸಲಾಗಿತ್ತು. ನಂತರ ಫೋನ್‌ ಮತ್ತು ಆನ್‌ಲೈನ್ ಮೂಲಕ ’’ಶುಕ್ರವಾರದ ಮಾರಾಟ’’ ಭರ್ಜರಿ ಸೇಲ್​ನಲ್ಲಿ "ಉತ್ಸಾಹಭರಿತ ಬಿಡ್ಡಿಂಗ್" ಕಂಡುಬಂದಿತು ಎಂದು ಪಿಸ್ತೂಲ್​ ಹರಾಜು ಹೊಣೆ ಹೊತ್ತಿದ್ದ ಬೋನ್ಹಾಮ್ಸ್ ಹೇಳಿದರು.


"ಇದು ಪ್ರಮುಖ ಮತ್ತು ಪ್ರಸಿದ್ಧ ಘಟನೆಯಾದ ವೈಲ್ಡ್ ವೆಸ್ಟ್‌ನ ಒಂದು ಅವಶೇಷವಾಗಿ ನಮ್ಮೆದುರಿಗೆ ನಿಂತಿದೆ" ಎಂದು ಬೋನ್ಹಾಮ್ಸ್ ಹೇಳಿದರು.

"ಚೆನ್ನಾಗಿ ಮಾಡಿರುವ ಹಿಡಿತಗಳಿಂದ" ಗನ್ "ಉತ್ತಮ" ಸ್ಥಿತಿಯಲ್ಲಿದೆ ಹಾಗೂ ಹಿಡಿದುಕೊಳ್ಳಲು ಕೂಡ ತುಂಬಾ ಆರಾಮಾಗಿದೆ ಎಂದು ಅವರು ಮಾಹಿತಿ ನೀಡಿದರು.



 ಪೊಲೀಸ್​ ಅಧಿಕಾರಿ ಪ್ಯಾಟ್ ಗ್ಯಾರೆಟ್ ಈ  44-ಕ್ಯಾಲಿಬರ್ ಗನ್ ಅನ್ನು ಬಿಲ್ಲಿ ದಿ ಕಿಡ್ ಅನ್ನು ಗುಂಡು ಹಾರಿಸಿ ಕೊಲ್ಲಲು ಬಳಸಿದರು. ಬಿಲ್ಲಿ ದಿ ಕಿಡ್ - ನಿಜವಾದ ಹೆಸರು ಹೆನ್ರಿ ಮೆಕ್ಕಾರ್ಟಿ - ಈತ ಆ ಯುಗದ ಅತ್ಯಂತ ಕುಖ್ಯಾತ ವ್ಯಕ್ತಿಗಳಲ್ಲಿ ಒಬ್ಬ ಮತ್ತು ಶೆರಿಫ್ ವಿಲಿಯಂ ಬ್ರಾಡಿ ಸೇರಿದಂತೆ ಎಂಟು ಜನರನ್ನು ಕೊಂದಿದ್ದ ಎಂದು ಹೇಳಲಾಗಿತ್ತು.

ಜುಲೈ 14, 1881 ರಂದು ನ್ಯೂ ಮೆಕ್ಸಿಕೋದಲ್ಲಿ ಈತನ 21 ನೇ ವಯಸ್ಸಿನಲ್ಲಿದ್ದಾಗ ನೇರವಾಗಿ ಈತನ ಎದೆಗೆ ಗುಂಡು ಹಾರಿಸಿ ಕೊಲ್ಲಲಾಯಿತು.

ಏಪ್ರಿಲ್ 1881 ರಲ್ಲಿ, ತನ್ನ 21 ನೇ ವಯಸ್ಸಿನಲ್ಲಿ, ಈತನ ಮೇಲೆ ಕೊಲೆ ಆರೋಪದಲ್ಲಿ  ಶಿಕ್ಷೆಗೆ ಗುರಿಯಾದನು.


ಆದರೆ ಈ ಬಿಲ್ಲಿ ಕಿಡ್​ ಜೈಲಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಮತ್ತು ನ್ಯೂ ಮೆಕ್ಸಿಕೋದ ಪೀಟ್ ಮ್ಯಾಕ್ಸ್‌ವೆಲ್ ರಾಂಚ್‌ನಲ್ಲಿ ಪೊಲೀಸ್​ ಅಧಿಕಾರಿ ಗ್ಯಾರೆಟ್ ಆತನ ಎದೆಗೆ ಗುಂಡು ಹಾರಿಸುವ ಮೊದಲ ಮೂರು ತಿಂಗಳ ಕಾಲ ಪೊಲೀಸರಿಗೆ ಸಾಕಷ್ಟು ಚಳ್ಳೆ ಹಣ್ಣು ತಿನ್ನಿಸಿ ಸಾಕಷ್ಟು ಕಾಡಿಸಿದ್ದನು.

ಇದಕ್ಕಿಂತ ಮೊದಲು ಒಂದು ಬಂದೂಕು ದಾಖಲೆಯುತ $ 1.98 ಮಿಲಿಯನ್‌ಗೆ ಮಾರಾಟವಾಗಿತ್ತು. ಅಮೇರಿಕಾದ ಕ್ರಾಂತಿಕಾರಿ ಯುದ್ಧದ ಸಮಯದಲ್ಲಿ ಜಾರ್ಜ್ ವಾಷಿಂಗ್ಟನ್‌ನಿಂದ ಬಳಸಲ್ಪಟ್ಟ ಜೋಡಿ ಫ್ಲಿಂಟ್‌ಲಾಕ್ ಪಿಸ್ತೂಲ್‌ ಈ ದಾಖಲೆಯುತ ಬೆಲೆಗೆ ಮಾರಾಟವಾಗಿತ್ತು ಎಂದು ಬೋನ್‌ಹ್ಯಾಮ್ಸ್ ಹೇಳಿದರು. ಈ ಗನ್​ ಅನ್ನು ಅವನ ಸ್ನೇಹಿತ ಮಾರ್ಕ್ವಿಸ್ ಡಿ ಲಾಫಾಯೆಟ್ ಉಡುಗೊರೆಯಾಗಿ ನೀಡಿದ್ದರು ಎಂದು ಮಾಹಿತಿ ನೀಡಿದ್ದರು.


ಈ ಶುಕ್ರವಾರದ ಭರ್ಜರಿ ಮಾರಾಟದಲ್ಲಿ ಓಲ್ಡ್ ವೆಸ್ಟ್ ಬಂದೂಕುಗಳು, ಹಸ್ತಪ್ರತಿಗಳು, ಫೋಟೋಗಳನ್ನು ಹರಾಜು ಹಾಕಲಾಯಿತು. ಈ ವಸ್ತುಗಳನ್ನು ಟೆಕ್ಸಾಸ್ ಮೂಲದ ಸಂಗ್ರಾಹಕರು ಮತ್ತು ಕಾಲೇಜು ಪ್ರಾಧ್ಯಾಪಕರಾದ ಜಿಮ್ ಮತ್ತು ಥೆರೆಸಾ ಅರ್ಲೆ ಸಂಗ್ರಹಿಸಿದ ಇತರ ಸ್ಮರಣಿಕೆಗಳ ಹರಾಜಿನಲ್ಲಿ ಪ್ರಮುಖ ವಸ್ತುಗಳಾಗಿ ಗಮನ ಸೆಳೆದವು.


ಇದನ್ನೂ ಓದಿ: ಆಮ್​ ಆದ್ಮಿ ಪಕ್ಷದಿಂದ ಹಿಂದುತ್ವದ ರಾಜಕಾರಣ..? ಆಯೋಧ್ಯೆಯಲ್ಲಿ ತಿರಂಗಾ ಯಾತ್ರೆಗೆ ಸಿದ್ದತೆ

ಡಬಲ್-ಬ್ಯಾರೆಲ್ ಹ್ಯಾಮರ್ ಶಾಟ್ ಗನ್ ಅನ್ನು ಇಷ್ಟೊಂದು ದಾಖಲೆಯುತ ಬೆಲೆಗೆ ಮಾರಾಟ ಮಾಡಲಾಯಿತು, ಇದನ್ನು ಬಿಲ್ಲಿ ದಿ ಕಿಡ್ಅನ್ನು ಕೊಲ್ಲಲು ಡೆಪ್ಯೂಟಿ ಪೊಲೀಸ್​ ಅಧಿಕಾರಿಯಿಂದ ತೆಗೆದುಕೊಂಡು ಬಳಸಲಾಯಿತು.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


First published: