Heart Warming: ವಿಮಾನ ಹತ್ತಿದ ಪೋಷಕರು ಪೈಲಟ್ ಮಗನ ನೋಡಿ ಭಾವುಕ! ಚಂದದ ವಿಡಿಯೋ ಈಗ ವೈರಲ್

ತಂದೆ ತಾಯಿಯ ಜೊತೆ ಪೈಲೆಟ್

ತಂದೆ ತಾಯಿಯ ಜೊತೆ ಪೈಲೆಟ್

ಪೈಲೆಟ್ ಮಗನೊಬ್ಬ ತನ್ನ ತಂದೆ ತಾಯಿಯನ್ನು ಜೈಪುರಕ್ಕೆ ವಿಮಾನದಲ್ಲಿ ಕರೆದುಕೊಂಡು ಹೋದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ.

  • Share this:

ತಂದೆ ತಾಯಿ ಹೇಗೆ ತಮ್ಮೆಲ್ಲಾ ಕನಸುಗಳನ್ನು, ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ (Bright Future) ಜೀವನವನ್ನೇ ಮುಡುಪಾಗಿಡುತ್ತಾರೆ. ಹಾಗೆಯೇ ಮಕ್ಕಳು ಸಹ ತಮ್ಮ ತಂದೆ ತಾಯಿಯ (Parents) ಮುಖದಲ್ಲಿ ಸಂತೋಷ (Happiness) ಕಾಣಲು ಬಯಸುತ್ತಾರೆ. ಆದರೆ ಎಲ್ಲಾ ಮಕ್ಕಳು (Children) ತಂದೆ ತಾಯಿಯನ್ನು ಚೆನ್ನಾಗಿ ನೋಡುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಇತ್ತೀಚಿನ ದಿನದಲ್ಲಿ ತಂದೆ ತಾಯಿಗೆ ವಯಸ್ಸಾದ ನಂತರ ಅವರನ್ನು ಕಡೆಗಣಿಸುವವರೆ ಹೆಚ್ಚಾಗಿದ್ದಾರೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಪೈಲೆಟ್ (Pilot) ಒಬ್ಬರು ತನ್ನ ತಂದೆ ತಾಯಿಯನ್ನು ವಿಮಾನದಲ್ಲಿ ಕೂರಿಸಿ ಕರೆಸಿಕೊಂಡು ಹೋದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸದ್ದು (Viral) ಮಾಡುತ್ತಿದೆ.


ಭಾರತೀಯ ಪೈಲಟ್ ಒಬ್ಬರು ತನ್ನ ಪೋಷಕರನ್ನು ವಿಮಾನದಲ್ಲಿ ಕೂರಿಸಿ ಜೈಪುರಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಮತ್ತು ಇದೀಗ ಈ ವೀಡಿಯೋ ದೇಶದಾದ್ಯಂತ ತುಂಬಾನೇ ವೈರಲ್ ಆಗುತ್ತಿದೆ.


ಇದನ್ನೂ ಓದಿ: Viral Video: ಅಮ್ಮನೊಂದಿಗೆ ಸಂಸ್ಕೃತ ಶ್ಲೋಕ ಹೇಳುವ ಕಂದಮ್ಮ! ಆಧುನಿಕ ಅಭಿಮನ್ಯುವಿನ ವಿಡಿಯೋ ನೀವೂ ನೋಡಿ


ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೈಲೆಟ್
ಪೈಲಟ್ ಕಮಲ್ ಕುಮಾರ್ ಇತ್ತೀಚೆಗೆ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದು ತಕ್ಷಣವೇ ವೈರಲ್ ಆಯಿತು ಮತ್ತು ನೆಟಿಜನ್‌ಗಳು ಅವರನ್ನು ಶ್ಲಾಘಿಸಿದರು. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಸ್ತುತ ಈ ವೀಡಿಯೊವನ್ನು 2.7 ಮಿಲಿಯನ್ಗಿಂತಲೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ.









View this post on Instagram






A post shared by Kamal Kumar (@desipilot11)





ವೀಡಿಯೋದಲ್ಲಿ ಕಮಲ್ ಕುಮಾರ್ "ನಾನು ವಿಮಾನದಲ್ಲಿ ಹಾರಲು ಆರಂಭಿಸಿದಾಗಿನಿಂದ ಈ ದಿನಕ್ಕಾಗಿ ಕಾಯುತ್ತಿದ್ದೆ. ಕೊನೆಗೂ ಆ ದಿನ ಬಂದೇ ಬಿಟ್ಟಿತು. ಇವತ್ತು ನಾನು ನನ್ನ ತಂದೆ ತಾಯಿಯನ್ನು ಮನೆಗೆ ಅಂದರೆ ಜೈಪುರಕ್ಕೆ ವಿಮಾನದಲ್ಲಿ ಕರೆದುಕೊಂಡು ಹೋಗಲು ಅವಕಾಶ ಸಿಕ್ಕಿತು" ಎಂದು ಬರೆದುಕೊಂಡಿದ್ದಾರೆ.


ಮಗನನ್ನು ನೋಡಿ ಆಶ್ಚರ್ಯಗೊಂಡ ಪೋಷಕರು
ವೀಡಿಯೋದಲ್ಲಿ ಗಮನಿಸಿರುವಂತೆ, ವಿಮಾನವನ್ನು ಹಾರಿಸುವುದು ತಮ್ಮ ಮಗ ಎಂದು ತಿಳಿದಿರದ ಪೈಲಟ್‌ನ ಪೋಷಕರು ವಿಮಾನದೊಳಗೆ ಪೈಲಟ್ ಸಮವಸ್ತ್ರದಲ್ಲಿ ತಮ್ಮ ಮಗ ಇರುವುದನ್ನು ಕಂಡು ಅಚ್ಚರಿಗೊಂಡರು ಮತ್ತು ಸಂತೋಷಪಟ್ಟರು. ಅವರ ಮುಖದಲ್ಲಿನ ನಗು ನೋಡುಗರ ಹೃದಯವನ್ನು ಮುಟ್ಟಿದೆ. ಮಕ್ಕಳಿಗೆ ತಂದೆ ತಾಯಿಯನ್ನು ಸಂತೋಷವಾಗಿ ನೊಡುಕೊಳ್ಳುವುದಕ್ಕಿಂತ ಬೇರೆ ಯಾವುದು ಮುಖ್ಯವಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.


ಪೈಲಟ್  ಅನ್ನು ಶ್ಲಾಘಿಸಿದ ನೆಟ್ಟಿಗರು
ಪೈಲೆಟ್ ಮಗ ತನ್ನ ತಂದೆ ತಾಯಿಗೆ ಈ ರೀತಿಯಾಗಿ ಸರ್ಪೈಸ್ ಕೊಟ್ಟ ವೀಡಿಯೋವನ್ನು ಕಂಡು ಅನೇಕ ನೆಟ್ಟಿಗರು ಶ್ಲಾಘಿಸಿದ್ದಾರೆ. ಮತ್ತು ಅವರು ಇದಕ್ಕೆ ಹೃದಯದ ಇಮೋಜಿಗಳ ಮೂಲಕ ಕಮೆಂಟ್ ಮಾಡಿದ್ದಾರೆ. ಒಬ್ಬರು, "ಇದು ಪ್ರತಿಯೊಬ್ಬ ಮಹತ್ವಾಂಕ್ಷಿ ಪೈಲಟ್ನ ಕನಸು" ಎಂದಿದ್ದಾರೆ ಮತ್ತು ಇನ್ನೊಬ್ಬರು "ಇದು ಅದ್ಭುತವಾದ ಕ್ಷಣ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು "ಇದು ನಾನು ಇವತ್ತು ವೀಕ್ಷಿಸಿದ ಅತ್ಯುತ್ತಮ ವಿಷಯ'' ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ತಮ್ಮ ತಂದೆ ತಾಯಿಯನ್ನು ವಿಮಾನದಲ್ಲಿ ಕರೆದುಕೊಂಡು ಹೋದ ನೆನಪುಗಳನ್ನು ಮರುಕಳಿಸಿದರು.


ಇದನ್ನೂ ಓದಿ: Chandrashekhar Azad: ಅವರ ಜೀವನವೇ ಸ್ಪೂರ್ತಿಚಿಲುಮೆ! ಚಂದ್ರಶೇಖರ್ ಆಜಾದ್ 116ನೇ ಜನ್ಮದಿನವಿದಂದು


ಜೀವನದಲ್ಲಿ ಯಾರು ಎಷ್ಟೇ ಸಾಧನೆ ಮಾಡಿದರೂ ಅವರು ತಮ್ಮ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅವರ ಸಾಧನೆಗೆ ಯಾವುದೇ ರೀತಿಯಾದ ಅರ್ಥವಿರುವುದಿಲ್ಲ. ಜೀವನ ರೂಪಣೆಗೆ ಕಾರಣವಾದ ತಂದೆ ತಾಯಿಯನ್ನ ಗೌರವದಿಂದ ಮತ್ತು ಸಂತೋಷದಿಂದ ನೋಡಿಕೊಳ್ಳುವುದು ಎಲ್ಲಾ ಮಕ್ಕಳ ಕರ್ತವ್ಯವಾಗಿದೆ. ಈ ಕರ್ತವ್ಯ ನಿಭಾಯಿಸುವಲ್ಲಿ ಸೋತು ಹೋದರೆ ಅವರು ಎಷ್ಟೇ ಸಾಧನೆ ಮಾಡಿದರೂ ಆ ಸಾಧನೆಗೆ ಯಾವುದೇ ರೀತಿಯಾದ ಗೌರವವಾಗಲಿ ಅರ್ಥವಾಗಲಿ ಇರುವುದಿಲ್ಲ.

Published by:Nalini Suvarna
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು