ಪೈನಾಪಲ್​ನಲ್ಲಿ 67 ಕೆ.ಜಿ ತೂಕದ ಅಕ್ರಮ ಕೊಕೇನ್ ಸಾಗಾಣೆ

news18
Updated:August 29, 2018, 7:54 AM IST
ಪೈನಾಪಲ್​ನಲ್ಲಿ 67 ಕೆ.ಜಿ ತೂಕದ ಅಕ್ರಮ ಕೊಕೇನ್ ಸಾಗಾಣೆ
Pic: Policia Nacional
news18
Updated: August 29, 2018, 7:54 AM IST
-ನ್ಯೂಸ್ 18 ಕನ್ನಡ

ಮಾದಕ ವಸ್ತುಗಳ ಸಾಗಾಟಕ್ಕಾಗಿ ಒಂದಲ್ಲಾ ಒಂದು ಮಾರ್ಗದ ಅನ್ವೇಷನೆಯಲ್ಲಿರುತ್ತಾರೆ ಡ್ರಗ್ಸ್​ ವ್ಯಾಪಾರಿಗಳು. ಸ್ಪೇನ್​ನ ಗ್ಯಾಂಗ್​ವೊಂದು ಅತ್ಯದ್ಭುತ ಉಪಾಯ ಮಾಡಿ ಪೊಲೀಸರ ಅತಿಥಿಗಳಾಗಿದ್ದಾರೆ. ತಮ್ಮಲ್ಲಿರುವ ಮಾದಕ ವಸ್ತುಗಳನ್ನು ಸಾಗಿಸಲು ಈ ಕಳ್ಳರ ತಂಡ ಅನಾನಸ್(ಪೈನಾಪಲ್) ಮೊರೆ ಹೋಗಿದ್ದರು. ಕಳ್ಳರು ಚಾಪೆ ಕೆಳಗೆ ತೂರಿದ್ರೆ, ಮ್ಯಾಡ್ರಿಡ್ ಪೊಲೀಸರು ರಂಗೋಲಿ ಕೆಳಗೆ ನುಗ್ಗಿದ್ದರು. ಇದರ ಫಲವಾಗಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಲಕ್ಷ 35 ಸಾವಿರ ಪೌಂಡ್ (2 ಕೋಟಿ ರೂ.)​ ಮೊತ್ತದ ಕೊಕೇನ್​ನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಆಧಾರದ ಮೇಲೆ ಮ್ಯಾಡ್ರಿಡ್​ ನಗರದ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಅನಾನಸ್​ ಒಳಗಿರುವ 67 ಕೆ.ಜಿ ತೂಕದ ಕೊಕೇನ್​ನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.

ಡ್ರಗ್ ಮಾಫಿಯಾ ತಂಡದವರು ಕೊಕೇನ್​ ಸಾಗಿಸಲು ಪೈನಾಪಲ್​ನ ಒಳಭಾಗವನ್ನು ಟೊಳ್ಳನ್ನಾಗಿಸಿದ್ದರು. ಅದರೊಳಗೆ ಹಳದಿ ಬಣ್ಣದ ಮೇಣದಿಂದ ಕೊಕೇನ್​ನನ್ನು ಪ್ಯಾಕ್ ಮಾಡಿ ಇರಿಸಲಾಗಿತ್ತು. ಹೊರಭಾಗದಿಂದ ನೋಡಿದರೆ ಥೇಟ್ ಅನಾನಸ್​ನಂತೆ ಕಾಣಿಸುವ ಇದನ್ನು ಹಣ್ಣುಗಳ ಲೋಡ್​ನಲ್ಲಿರಿಸಿ ಸಾಗಿಸುವ ಯೋಜನೆ ಹಾಕಿಕೊಂಡಿದ್ದರು.

ಈ ಕೊಕೇನ್​ ಹಣ್ಣುಗಳ ಬಗ್ಗೆ ಪೊಲೀಸರಿಗೆ ಸಂದೇಹ ಬರದಂತೆ ರಾಸಾಯನಿಕ ಔಷಧಗಳನ್ನು ಬಳಸಲಾಗಿತ್ತು. ಹಾಗೆಯೇ ಮೇಣವನ್ನು ಬಳಸಿ ಅನಾನಸ್​ನ ಎರಡು ಭಾಗಗಳನ್ನು ಮುಚ್ಚಲಾಗಿತ್ತು. ಪ್ರತಿಯೊಂದು ಹಣ್ಣಿನಲ್ಲೂ 800 ಗ್ರಾಂ.ನಿಂದ 1 ಕೆ.ಜಿ ಕೊಕೇನ್​ನನ್ನು ಇರಿಸಿ ಸಾಗಿಸುವ ವಿವಿಧ ಭಾಗಗಳಿಗೆ ಸಾಗಿಸುವ ಯೋಜನೆ ಹಾಕಿಕೊಂಡಿದ್ದರು ಎಂದು ಮ್ಯಾಡ್ರಿಡ್ ಪೊಲೀಸರು ಎಂದು ತಿಳಿಸಿದ್ದಾರೆ.

ಈ ಮಾದಕವಸ್ತುಗಳು ಕೊಸ್ಟಾರಿಕಾದಿಂದ ಪೋರ್ಚುಗಲ್ ಬಂದರಿನ ಮೂಲಕ ಸ್ಪೇನ್​ಗೆ ತರಲಾಗಿತ್ತು. ಇದರಲ್ಲಿದ್ದ ಅನೇಕ ಹಣ್ಣುಗಳಲ್ಲಿ ಕೊಕೇನ್​ ಇರಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಪ್ರಯತ್ನ ಮಾಡಿದ್ದರು ಡ್ರಗ್ ಮಾಫಿಯಾ ತಂಡದವರು.

ಆದರೆ ಇಂತಹದೊಂದು ಕಳ್ಳಸಾಗಣೆಯ ಮಾಹಿತಿ ಪಡೆದಿದ್ದ ಸ್ಪೇನ್ ಮತ್ತು ಪೋರ್ಚುಗಲ್ ಪೊಲೀಸರು ಎಚ್ಚರಿಕೆಯಿಂದ ಕಾರ್ಯಾಚರಣೆಗೆ ಇಳಿದಿದ್ದರು. ಪೋರ್ಚುಗಲ್​ ಪೊಲೀಸರನ್ನು ಯಾಮಾರಿಸಿದ್ದ ಸಾಗಣೆದಾರರು ಸ್ಪ್ಯಾನಿಷ್ ತನಿಖಾ ತಂಡಕ್ಕೆ ಸಿಕ್ಕಿ ಬಿದ್ದಿದ್ದಾರೆ. ಸಂಶಯ ಮೂಡಿದ ಪೈನಾಪಲ್​ಗಳ​ನ್ನು ಒಡೆದು ಪರೀಕ್ಷಿಸಿದಾಗ ಡ್ರಗ್ ಮಾಫಿಯಾ ತಂಡದ ಕೈ ಚಳಕ ತಿಳಿದಿದೆ. ಈ ಅಕ್ರಮ ಸಾಗಾಟಕ್ಕೆ ನೆರವಾಗಿದ್ದ ಆರೋಪಿಗಳ ಮಾಹಿತಿಯನುಸಾರ ಮ್ಯಾಡ್ರಿಡ್​ನಲ್ಲಿ ಏಳು ಜನರನ್ನು ಮತ್ತು ಬಾರ್ಸಿಲೋನಾದಲ್ಲಿ ನಾಲ್ವರನ್ನು ಬಂಧಿಸುವಲ್ಲಿ ಸ್ಪೇನ್ ಪೊಲೀಸರು ಯಶಸ್ವಿಯಾಗಿದ್ದಾರೆ.
Loading...

First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ