• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಪೈಲಟ್ ಇನ್‌ಸ್ಟ್ರಕ್ಟರ್ ಸತ್ತಿದ್ದು ಪಕ್ಕದಲ್ಲಿದ್ದವರಿಗೇ ಗೊತ್ತಾಗಿಲ್ವಂತೆ

Viral News: ಪೈಲಟ್ ಇನ್‌ಸ್ಟ್ರಕ್ಟರ್ ಸತ್ತಿದ್ದು ಪಕ್ಕದಲ್ಲಿದ್ದವರಿಗೇ ಗೊತ್ತಾಗಿಲ್ವಂತೆ

ಗೂಗಲ್ ಫೋಟೋ

ಗೂಗಲ್ ಫೋಟೋ

Viral News: ಅವರ ಜೊತೆಗಿದ್ದ ಸಹ ಪೈಲೆಟ್‌ ಕೂಡ ಆ ವ್ಯಕ್ತಿಯ ಸಾವನ್ನು ಗಮನಿಸಲಿಲ್ಲ ಹಾಗೂ ತಮ್ಮ ಶಿಕ್ಷಕರು ತಮಾಷೆ ಮಾಡುತ್ತಿದ್ದಾರೆ ಎಂದೇ ಇವರು ಭಾವಿಸಿದ್ದರು.ಈ ಘಟನೆ 29, 2022 ರಂದು ಸಂಭವಿಸಿದೆ. ಪೈಲಟ್‌ನೊಂದಿಗೆ ಶಿಕ್ಷಕ ಕೂಡ ಜೊತೆಯಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ವರದಿ ತಿಳಿಸಿದೆ.

ಮುಂದೆ ಓದಿ ...
  • Trending Desk
  • 5-MIN READ
  • Last Updated :
  • Share this:

ಸಾವು ಎಂಬುದು ಅನಿರೀಕ್ಷಿತ, (Sudden)  ಯಾವಾಗ ಹೇಗೆ ಯಾವ ಸಮಯದಲ್ಲಿ (Time)  ಬರುತ್ತದೆ ಎಂಬುದನ್ನು ಯಾರಿಗೂ ಊಹಿಸಲಾಗುವುದಿಲ್ಲ. ಸದ್ದಿಲ್ಲದೆ ಬರುವ ಮರಣ (Death) ಬಂದು ಹೋಗುವುದರ ಬಗ್ಗೆ ಯಾವುದೇ ಕುರುಹನ್ನೂ ಒದಗಿಸುವುದಿಲ್ಲ. ಇಂತಹುದೇ ಘಟನೆಯೊಂದು ಬ್ಲ್ಯಾಕ್‌ಪೂಲ್ ವಿಮಾನ (Flight)  ನಿಲ್ದಾಣದ ಸರ್ಕ್ಯೂಟ್ ವಿಮಾನ ಹಾರಾಟ ಸಮಯದಲ್ಲಿ ಸಂಭವಿಸಿದೆ. 57 ರ ಹರೆಯದ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್  ಹೃದಯ ಸ್ತಂಭನಕ್ಕೆ (Heart Attack) ಒಳಗಾಗಿ ಸಾವನ್ನಪ್ಪಿದ್ದಾರೆ.


ಅವರ ಜೊತೆಗಿದ್ದ ಸಹ ಪೈಲೆಟ್‌ ಕೂಡ ಆ ವ್ಯಕ್ತಿಯ ಸಾವನ್ನು ಗಮನಿಸಲಿಲ್ಲ ಹಾಗೂ ತಮ್ಮ ಶಿಕ್ಷಕರು ತಮಾಷೆ ಮಾಡುತ್ತಿದ್ದಾರೆ ಎಂದೇ ಇವರು ಭಾವಿಸಿದ್ದರು.


ಈ ಘಟನೆ 29, 2022 ರಂದು ಸಂಭವಿಸಿದೆ. ಪೈಲಟ್‌ನೊಂದಿಗೆ ಶಿಕ್ಷಕ ಕೂಡ ಜೊತೆಯಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ವರದಿ ತಿಳಿಸಿದೆ.


ನಿಯಂತ್ರಣ ತಪ್ಪಿ ಹಾರುತ್ತಿದ್ದ ವಿಮಾನ


ಆ ದಿನ ಹವಾಮಾನ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ ಹಾಗೂ ಬಿರುಗಾಳಿ ಕೂಡ ಇದ್ದಿತು ಎಂದು ಪೈಲಟ್ ಆ ದಿನದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.


ಪೈಲಟ್‌ನ ನಿಯಂತ್ರಣ ಮಿತಿಗಿಂತಲೂ ತನ್ನಷ್ಟಕ್ಕೆ ವಿಮಾನ ಹಾರಾಟ ನಡೆಸುತ್ತಿತ್ತು, ಅದಾಗ್ಯೂ ತಮ್ಮ ಹಾರಾಟ ಮಿತಿಯೊಳಗೆ ವಿಮಾನವನ್ನು ನಿಯಂತ್ರಣಕ್ಕೆ ತರಲು ಪೈಲಟ್ ಬಯಸಿದ್ದರು ಎಂದು ಯು.ಕೆ ಯ ವಾಯು ಅಪಘಾತಗಳ ತನಿಖಾ ಶಾಖೆಯ ವರದಿ ತಿಳಿಸಿದೆ.


ಹೃದಯ ಸ್ತಂಭನಕ್ಕೂ ಮುಂಚೆ ನಿರ್ದೇಶನಗಳನ್ನು ನೀಡುತ್ತಿದ್ದ ಶಿಕ್ಷಕರು


ಪಾಠ ಮುಗಿಸಿದ ನಂತರ ವಿಮಾನ ಬೋಧಕರು ಸಣ್ಣ ವಿಮಾನದಲ್ಲಿ ಬರಲು ಒಪ್ಪಿಕೊಂಡರು ಹಾಗೂ ನಾಲ್ವರಿಗೆ ಪ್ರಯಾಣಿಸಬಹುದಾದ ಪೈಪರ್ PA-28 ವಿಮಾನದಲ್ಲಿ ಪೈಲಟ್‌ನೊಂದಿಗೆ ಕುಳಿತರು.


ಪೈಲಟ್ ರನ್‌ವೇಗೆ ವಿಮಾನವನ್ನು ಕೊಂಡೊಯ್ಯುತ್ತಿದ್ದಂತೆಯೇ ಬೋಧಕರು ಸೂಚನೆಗಳನ್ನು ನೀಡಿದ್ದು, ಪೈಲಟ್‌ ಟೇಕ್ ಆಫ್ ಮಾಡಬಹುದು ಎಂಬುದಾಗಿ ಸೂಚನೆ ನೀಡಿದ್ದಾರೆ ಹಾಗೂ ಈ ಸೂಚನೆಯೇ ಅವರ ಕೊನೆಯ ಮಾತುಗಳಾಗಿತ್ತು ಎಂದು ಪೈಲಟ್ ನೆನಪಿಸಿಕೊಂಡಿದ್ದಾರೆ.




ವಿಮಾನವು ರನ್‌ವೇಯಿಂದ ಹೊರಬಂದ ಸ್ವಲ್ಪ ಸಮಯದ ನಂತರ ಶಿಕ್ಷಕರ ತಲೆ ಹಿಂದಕ್ಕೆ ವಾಲಿತು ಎಂಬುದಾಗಿ ಪೈಲಟ್ ತಿಳಿಸಿದ್ದಾರೆ.


ಇಷ್ಟಾದರೂ ಶಿಕ್ಷಕ ತಮಾಷೆ ಮಾಡುತ್ತಿದ್ದಾನೆ ಎಂದೇ ಭಾವಿಸಿದ್ದ ಪೈಲಟ್


ವಿಮಾನ ಶಿಕ್ಷಕರಿಗೆ ಹೃದಯ ಸ್ತಂಭನವಾಗಿದೆ ಎಂಬ ಅರಿವು ಪೈಲಟ್‌ಗೆ ತಿಳಿದೇ ಇರಲಿಲ್ಲ ಬಹುಶಃ ಅವರು ವಾಡಿಕೆಯಂತೆ ನಿದ್ರಿಸುವ ನಟನೆಯನ್ನು ಮಾಡುತ್ತಿದ್ದಾರೆ ಎಂದೇ ಪೈಲಟ್ ಭಾವಿಸಿದ್ದರು.


ಇದನ್ನೂ ಓದಿ: ಹೈದರಾಬಾದಿನ ಕೊನೆಯ ನಿಜಾಮ್ ಮುಕರಮ್ ಜಾಹ್ ಎಷ್ಟು ಶ್ರೀಮಂತ ನೋಡಿ


ಪೈಲಟ್ ವಿಮಾನವನ್ನು ಸಾಮಾನ್ಯವಾಗಿ ಹಾರಿಸುತ್ತಿದ್ದಂತೆಯೇ ಬೋಧಕ ಕುಸಿದುಹೋದರು ಹಾಗೂ ಪೈಲಟ್‌ನ ಭುಜಕ್ಕೆರಗಿದರು. ಆದರೆ ಅವರು ತಮ್ಮೊಂದಿಗೆ ಇನ್ನೂ ತಮಾಷೆ ಮಾಡುತ್ತಿದ್ದಾರೆ ಎಂದೇ ಪೈಲಟ್ ಭಾವಿಸಿದ್ದರು ಹಾಗೂ ವಿಮಾನ ಹಾರಾಟದಲ್ಲಿ ಪೈಲಟ್ ಮಗ್ನರಾದರು ಎಂದು ತಿಳಿಸಿದ್ದಾರೆ.


ವಿಮಾನವು ಸುರಕ್ಷಿತವಾಗಿ ಧರೆಗಿಳಿಯಿತು ಹಾಗೂ ಪೈಲಟ್ ವಿಮಾನವನ್ನು ಮರಳಿ ಸ್ಥಾನಕ್ಕೆ ಕೊಂಡೊಯ್ಯುತ್ತಿದ್ದ ಸಮಯದಲ್ಲಿ ಕೂಡ ಬೋಧಕರು ಎಚ್ಚರಗೊಳ್ಳಲಿಲ್ಲ.


ಇದರಿಂದ ಏನೋ ತಪ್ಪಾಗಿದೆ ಎಂಬುದು ಪೈಲಟ್ ಗಮನಕ್ಕೆ ಬಂದಿದೆ. ಅವರು ರನ್‌ವೇಯಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು ಮತ್ತು ವಿಮಾನ ನಿಲ್ದಾಣದಲ್ಲಿ ತುರ್ತು ಕಾರ್ಯಕರ್ತರು ಶಿಕ್ಷಕರಿಗೆ ಪ್ರಥಮ ಚಿಕಿತ್ಸೆ ನೀಡಿದರು. ಆದರೆ ಅವರ ಪ್ರಯತ್ನಗಳು ಫಲಗೊಡಲಿಲ್ಲ.


ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದ ಶಿಕ್ಷಕರು


ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶಿಕ್ಷಕರಿಗೆ ಹೃದಯ ವೈಫಲ್ಯವಾಗಿರುವುದು ತಿಳಿದುಬಂದಿದ್ದು ಇದುವೇ ಅವರ ಸಾವಿಗೆ ಕಾರಣವಾಯಿತು ಎಂಬುದು ತಿಳಿದು ಬಂದಿದೆ.


ಅದಲ್ಲದೆ ಅವರಿಗೆ ಅಥೆರೋಮ್ಯಾಟಸ್ ಕಾಯಿಲೆ ಇರುವುದನ್ನು ಪತ್ತೆಹಚ್ಚಲಾಯಿತು. ಇದು ಜೀವಕೋಶಗಳು ಮತ್ತು ಲಿಪಿಡ್‌ಗಳ ಪ್ಲೇಕ್‌ಗಳಿಂದ ಅಪಧಮನಿಗಳನ್ನು ನಿರ್ಬಂಧಿಸುತ್ತದೆ.


ಅದಲ್ಲದೆ ಶಿಕ್ಷಕರು ಅಧಿಕ ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿದ್ದರು ಹಾಗೂ 2002 ರಿಂದ ಬಿಪಿ ಟ್ಯಾಬ್ಲೆಟ್‌ಗಳನ್ನು ಸೇವಿಸುತ್ತಿದ್ದರು ಎಂದು ವೈದ್ಯರ ವರದಿ ತಿಳಿಸಿದೆ


ಇದನ್ನೂ ಓದಿ: ಹೊಸದಾಗಿ ಮದುವೆ ಆದ ಹುಡುಗೀರು ಗೂಗಲ್​ನಲ್ಲಿ ಹೀಗೆಲ್ಲಾ ಸರ್ಚ್​ ಮಾಡ್ತಾರಂತೆ!


ಪೈಲಟ್‌ನ ಸಮಯಪ್ರಜ್ಞೆ


ವಾಯು ಅಪಘಾತಗಳ ತನಿಖಾ ಶಾಖೆ ತಿಳಿಸಿರುವಂತೆ ಬೋಧಕರು ಅಸಮರ್ಥರಾದ ಕಾರಣ ವಿಮಾನವನ್ನು ಕಾಕ್‌ಪಿಟ್‌ನಲ್ಲಿದ್ದ ನುರಿತ ಪೈಲಟ್ ವಿಮಾನವನ್ನು ಯಶಸ್ವಿಯಾಗಿ ಕೆಳಗಿಳಿಸಿದರು. ಆದರೆ ಬೇರಾವುದಾದರೂ ವಿಮಾನದಲ್ಲಿ ಈ ರೀತಿ ಸಂಭವಿಸುತ್ತಿದ್ದರೆ ಬೇರೆ ಏನಾದರೂ ಅವಘಡ ಸಂಭವಿಸುತ್ತಿತ್ತು ಎಂದು ತನಿಖಾ ಶಾಖೆ ತಿಳಿಸಿದೆ.

Published by:Sandhya M
First published: