• Home
  • »
  • News
  • »
  • trend
  • »
  • Viral Video: ಪಾರಿವಾಳನೂ ವಿಮಾನದಲ್ಲಿ ಕೂರುತ್ತೆ ಕಂಡ್ರೀ, ವಿಡಿಯೋ ನೋಡಿ ಸಖತ್​ ಆಗಿದೆ

Viral Video: ಪಾರಿವಾಳನೂ ವಿಮಾನದಲ್ಲಿ ಕೂರುತ್ತೆ ಕಂಡ್ರೀ, ವಿಡಿಯೋ ನೋಡಿ ಸಖತ್​ ಆಗಿದೆ

ಪಾರಿವಾಳ ವಿಮಾನದ ರೆಕ್ಕೆಯ ಮೇಲೆ ಕುಳಿತಿರುವ ದೃಶ್ಯ

ಪಾರಿವಾಳ ವಿಮಾನದ ರೆಕ್ಕೆಯ ಮೇಲೆ ಕುಳಿತಿರುವ ದೃಶ್ಯ

Trending Video: ದಿನಕ್ಕೆ ಸಾವಿರಾರು ಪ್ರಾಣಿ ಮತ್ತು ಪಕ್ಷಿಗಳ ಮೋಜಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬರ್ತಾನೆ ಇರ್ತಾವೆ. ಇದೀಗ ಪಾರಿವಾಳದ ವಿಡಿಯೋ ವೈರಲ್​ ಆಗಿದೆ.

  • Share this:

ಸಾಮಾಜಿಕ ಮಾಧ್ಯಮಗಳಲ್ಲಿ ( Social Media)  ಮನರಂಜನೆಗೇನೂ ಕೊರತೆ ಇಲ್ಲ ಬಿಡಿ. ಯಾಕೆಂದರೆ ಪ್ರತಿನಿತ್ಯವೂ ಸಾವಿರಾರು ವಿಡಿಯೋಗಳು ವೈರಲ್​ ಆಗ್ತಾನೇ ಇರುತ್ತೆ. ಕೆಲವೊಂದಷ್ಟು ಭಾವನಾತ್ಮಕವಾಗಿರುತ್ತದೆ, ಇನ್ನು ಕೆಲವು ಮಜವಾಗಿರುತ್ತದೆ. ಅದರಲ್ಲಿಯು ಪ್ರಾಣಿಗಳ ವಿಡಿಯೋ ನೋಡಲು ಬಹಳ ಖುಷಿ ಎನಿಸುತ್ತದೆ. ಈ ಹಿಂದೆ ಸಿಂಹ ತನ್ನ ಮರಿಗಳೊಂದಿಗೆ ಯಾವ ರೀತಿಯಾಗಿ ಆಟ ಆಡುತ್ತವೆ ಮತ್ತು ತಂದೆಯನ್ನೇ ಹಿಂಬಾಲಿಸಿ ಹೇಗೆ ಮರಿಗಳು ಹೋಗುತ್ತವೆ ಎಂಬುದು ನೋಡಿದ್ದೆವು. ತದನಂತರ ಝೂ ಗೆ ಬಂದ ಜನರನ್ನು ಒಂದು ಚಿಂಪಾಂಜಿ ಯಾವ ರೀತಿಯಾಗಿ ಜನರೊಂದಿಗೆ ಸಂವಹನ ಮಾಡುತ್ತಿತ್ತು ಎಂಬ ವಿಡಿಯೋ ಕೂಡ ವೈರಲ್​ ಬ(Viral) ಆಗಿತ್ತು.


ಒಟ್ಟಿನಲ್ಲಿ ಚಿತ್ರ ವಿಚಿತ್ರವಾದ ವಿಡಿಯೋಗಳು ಅದರಲ್ಲೂ ಪ್ರಾಣಿಗಳ ವಿಡಿಯೋ ನೋಡಲು ಮಜವಾಗಿರುತ್ತದೆ. ಜನರಲ್ಲಿ ನೀವು ಜಾಸ್ತಿಯಾಗಿ ಯಾವ ವಿಡಿಯೋಗಳನ್ನು ಡಿಜಿಟಲ್​ ಮಿಡಿಯಾದಲ್ಲಿ ನೋಡುತ್ತೀರಾ ಎಂದು ಕೇಳಿದಾಗ ಹೆಚ್ಚಾಗಿ ಟ್ರೆಂಡಿಂಗ್​ ವಿಡಿಯೋ ಅಂತ ವಿಮರ್ಶೆಗಳನ್ನು ನೀಡಿದ್ದಾರೆ.


ಇದನ್ನೂ ಓದಿ: ಚೀನಾದ ಫ್ಯಾಕ್ಟರಿಯಲ್ಲಿ ತಯಾರಾಗುತ್ತೆ ಸೊಳ್ಳೆಗಳು! ಇವು ಕಚ್ಚಲ್ಲ, ರೋಗ ವಾಸಿ ಮಾಡುತ್ತವೆಯಂತೆ!


ಕ್ಯೂಟ್​ ಆಗಿರುವ ವಿಡಿಯೋ ನೋಡೋಕಂತು ಜನರು ಕಾಯುತ್ತಾ ಇರುತ್ತಾರೆ. ಇದೀಗ ಒಂದು ವಿಡಿಯೋ ವೈರಲ್​ ಆಗಿದೆ. ಪಾರಿವಾಳದ ​ ವಿಡಿಯೋ ನೋಡ್ತಾ ಇದ್ರೆ ಎಂಥವರಿಗಾದರೂ ಹಾಸ್ಯ ಅಂಥ ಅನಿಸುತ್ತೆ. ಯಾಕೆಂದ್ರೆ ಇದು ಚಳಿ ಕಾಯಿಸಲೆಂದು ವಿಮಾನದ ರೆಕ್ಕೆಯ ಮೇಲೆ ಕುಳಿತುಕೊಂಡಿರುತ್ತದೆ. ಹಾಯಾಗಿ ಎಳೆ ಬಿಸಿಲನ್ನು ಕಾಯಿಸುತ್ತಾ ಕೂತಿರುತ್ತದೆ. ಅದಾಗ ವಿಮಾನ ಟೇಕ್​ ಆಫ್​ ಆಗುತ್ತೆ. ಪಾರಿವಾಳಕ್ಕೆ ಏನು ಮಾಡಬೇಕು ಅಂತ ತಿಳಿಯದೇ ಅಲ್ಲಿಯೇ ಇರುತ್ತೆ. ವಿಮಾನ ಎತ್ತರಕ್ಕೆ ಹಾರುತ್ತಾ ಹಾರುತ್ತಾ ಪಾರಿವಾಳ ಆಚೆ ಈಚೆ ಅಲಗಾಡುತ್ತೆ. ಧೈರ್ಯದಲ್ಲಿಯೇ ಸಾಕಷ್ಟು ಹೊತ್ತು ವಿಮಾನದ ರೆಕ್ಕೆಯ ಮೇಲೆ ಕುಳಿತಿರುತ್ತದೆ. ಒಮ್ಮೆಲೇ ಜಾರಿ ಪುದುಕ್​ ಅಂತ ಜಾರಿ ಹೋಗುತ್ತೆ.
ಪಾಪ ಆ ಪಾರಿವಾಳಕ್ಕೆ  ತಾನು ಒಂದು ತಂತ್ರಜ್ಞಾನದ ಮೇಲೆ ಕುಳಿತಿದ್ದೀನಿ ಎಂದು ಗೊತ್ತೇ ಇಲ್ಲ. ಯಾವಾಗಲೂ ಹಾರಾಡುತ್ತಾ ಇರುವ ಈ ಪಾರಿವಾಳಕ್ಕೆ ತಾನು ಎಲ್ಲೋ ಬೇರೆ ಕಡೆ ಕುಳಿತಿರುವ ಭಾಸದಲ್ಲಿದೆ. ಇಷ್ಟು ದಿನ ನಾನು ಹಾರಾಡ್ತಾ ಇದ್ದೆ, ಇದೀಗ ನನ್ನನ್ನೇ ಹಾರಾಡಿಸುವ ಏನೋ ಬಂದಿದೆಯಲ್ಲಾ ಅಂತ ಹಾಯಾಗಿ ಕುಳಿತುಕೊಂಡಿದೆ. ನೋಡಿ, ಇಂಥಾ ಪಕ್ಷಿಗಳು ನೀವು ಎಲ್ಲಾದ್ರೂ ಕಂಡಿದ್ರಾ? ಅಥವಾ ಪ್ರಾಣಿಗಳನ್ನು ಕಂಡಿದ್ದೀರಾ?


ಪಾರಿವಾಳ ಜಾರಿದರೂ ಕೂಡ ಅದೇನು ಕೆಳಗೆ ಬೀಳುವುದಿಲ್ಲ. ಅದೇ ಧೈರ್ಯದಲ್ಲಿ ಸಾಕಷ್ಟು ಹೊತ್ತು ವಿಮಾನದ ರೆಕ್ಕೆಯ ಮೇಲೆಯೇ ಕುಳಿತಿರುತ್ತದೆ. ಇದನ್ನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಇವರು ಮಾತ್ರ ಮೋಜನ್ನು ಮಾಡದೇ ನೋಡುಗರಿಗೂ ಗಮ್ಮತ್ತಾಗುವ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ.


ಇದನ್ನೂ ಓದಿ: ಭಾರತೀಯರಿಗೆ ಬಿರಿಯಾನಿ ಪಾರ್ಟಿ ನೀಡಿದ ಪಾಕ್​ ವ್ಯಕ್ತಿ, ನೆಟ್ಟಿಗರು ಫುಲ್ ಫಿದಾ!

Trending Video, viral video, pigeon video, pigeon Flying Video, Pigeon Flying in India, kannada news, karnataka news, ಪಾರಿವಾಳನೂ ವಿಮಾನದಲ್ಲಿ ಕೂರುತ್ತೆ ಕಂಡ್ರೀ, ವಿಡಿಯೋ ನೋಡಿ ಸಖತ್​ ಆಗಿದೆ, ವಿಡಿಯೋ ವೈರಲ್​, ಟ್ರೆಂಡಿಂಗ್​ ವಿಡಿಯೋ, ಪಾರವಾಳ ಹಾರಾಡುವ ವಿಡಿಯೋ, ವಿಮಾನದಲ್ಲಿ ಕುಳಿತುಕೊಂಡ ಪಾರಿವಾಳ

ಈ ಕಮೆಂಟ್​ಗಳಲ್ಲಿಯೇ ಕಾಣಬಹುದು, ಯಾವ ರೀತಿಯಾಗಿ ನೆಟ್ಟಿಗರು ವಿಡಿಯೋಗಳನ್ನು ನೋಡಿ ಖುಷಿ ಪಟ್ಟಿದ್ದಾರೆ ಅಂತ.  ದಿನನಿತ್ಯ  ಈ ರೀತಿಯಾದ ಸಾಕಷ್ಟು ವಿಷಯಗಳನ್ನು ನಮ್ಮ ಸುತ್ತ ಮುತ್ತ ನಡೆಯುತ್ತಲೇ ಇರುತ್ತವೆ. ಆದರೆ ಗಮನಿಸುವುದು ವಿರಳ.


ಕೆಲವೇ ಹೊತ್ತಿನಲ್ಲಿ 24ಸಾವಿರ ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಹಾಗೆಯೇ ಕಮೆಂಟ್ಸ್​ಗಳನ್ನು ನೋಡಬಹುದಾಗಿದೆ. ಈ ವಿಡಿಯೋ ಮನರಂಜನೆಗೆ ಪ್ರಮುಖವಾಗಿದೆ ಎಂಬುದು ಜನರ ಅಭಿಪ್ರಾಯ. ನೀವು ವಿಡಿಯೋ ನೋಡಿ ಜೊತೆಗೆ ನಿಮ್ಮ ಮನೆಯಲ್ಲಿ ಪುಟಾಣಿ ಮಕ್ಕಳು ಇದ್ದರೆ ಅವರಿಗೂ ಕೂಡ ತೋರಿಸಿ, ಖುಷಿ ಪಡುತ್ತಾರೆ.

First published: