Viral Video: ಪಾರಿವಾಳದ ಬ್ಯಾಕ್ ಫ್ಲಿಪ್ ವೀಡಿಯೋ ಸಖತ್ ವೈರಲ್; ನೋಡಿ ಬೆರಗಾದ ನೆಟ್ಟಿಗರು

ಪಾರಿವಾಳವೊಂದು ಬ್ಯಾಕ್ ಫ್ಲಿಪ್ ಮಾಡುವ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿ ವೈರಲ್ ಆಗುತ್ತಿದೆ. ವೀಡಿಯೋ ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ

ಪಾರಿವಾಳ

ಪಾರಿವಾಳ

  • Share this:
ಪ್ರಕೃತಿಯಲ್ಲಿನ ಸೌಂದರ್ಯಕ್ಕೆ ಇಲ್ಲಿರುವ ವಿಭಿನ್ನವಾದ ಪ್ರಾಣಿಗಳು (Animals), ಸಸ್ಯಗಳು (Plants), ಜಲ ರಾಶಿಗಳು, ಚಿಲಿಪಿಲಿ ಗುಟ್ಟುವ ಹಕ್ಕಿಗಳು, ಪಕ್ಷಿಗಳು ಹೀಗೆ ವೈವಿಧ್ಯಮಯವಾದ ಸಕಲ ಜೀವರಾಶಿಗಳೇ ಪ್ರಮುಖವಾದ ಕಾರಣ. ಅದರಲ್ಲೂ ಪಕ್ಷಿಗಳ (Birds) ಬಣ್ಣ, ನಡಿಗೆ, ಅವುಗಳ ಕುಣಿತ (Bird Dance) ನೋಡುವುದೇ ಚೆಂದ. ಇದೀಗ ಪಾರಿವಾಳ ಬ್ಯಾಕ್ ಫ್ಲಿಪ್ (Backflips) ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದದಲ್ಲಿ (Social Media) ಸಖತ್ತಾಗಿ ವೈರಲ್ (Viral) ಆಗುತ್ತಿದೆ ಮತ್ತು ಇದನ್ನು ನೋಡಿದ ನೆಟ್ಟಿಗರು (Netizens)  ಪಾರಿವಾಳದ (Pigeon) ಸೌಂದರ್ಯಕ್ಕೆ ಬೆರಗಾಗಿದ್ದಾರೆ.

ಸ್ಥಿರವಾಗಿ ನಿಂತು ಪಾರಿವಾಳದ ಬ್ಯಾಕ್ ಫ್ಲಿಪ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಸುಂದರವಾದ ಪಾರಿವಾಳವೊಂದು ಸ್ಥಿರವಾಗಿ ನಿಂತು ಬ್ಯಾಕ್ ಫ್ಲಿಪ್ ಮಾಡುತ್ತಿರುವುದನ್ನು ಗಮನಿಸಬಹುದು. ಈ ರೀತಿಯಾಗಿ ಪಾರಿವಾಳ ಸಲೀಸಲಾಗಿ ಬ್ಯಾಕ್ ಫ್ಲಿಪ್ ಮಾಡುತ್ತಿರುವ ದೃಶ್ಯ ನೋಡುಗರ ಮನ ಸೆಳೆದಿದೆ.

ಇದನ್ನೂ ಓದಿ: International Tiger Day: ಘರ್ಜಿಸುವ ಹುಲಿಗೂ ಒಂದು ದಿನ! ಈ ದಿನದ ವಿಶೇಷತೆಯೇನು ಗೊತ್ತೇ?

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

ಪಾರಿವಾಳ ಬ್ಯಾಕ್ ಫ್ಲಿಪ್ ಮಾಡುತ್ತಿರುವ ವೀಡಿಯೋವನ್ನು ಫಿಗೆನ್ ಎನ್ನುವ ಟ್ವಿಟ್ಟರ್ ಬಳಕೆದಾರರೊಬ್ಬರು ಜುಲೈ 28ರಂದು ಸುಮಾರು 11 ಸೆಕೆಂಡುಗಳ ಈ ವೀಡಿಯೋವನ್ನು ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಹಂಚಿಕೊಂಡ ಕೂಡಲೇ ಸಖತ್ ವೈರಲ್ ಆಗಿದೆ. ಐದು ಮಿಲಿಯನ್ ಗಿಂತಲೂ ಅಧಿಕ ವೀಕ್ಷಣೆಯನ್ನು ವೀಡಿಯೋ ಪಡೆದಿದೆ. ಅಲ್ಲದೆ ಸುಮಾರು 177 ಕ್ಕೂ ಅಧಿಕ ಮಂದಿ ಇದನ್ನು ರೀ ಟ್ವೀಟ್ ಮಾಡಿದ್ದಾರೆ.

ವೀಡಿಯೋ ಇಲ್ಲಿದೆ ನೋಡಿ





ಇದು ದಿ ಬೆಸ್ಟ್ ಬ್ಯಾಕ್ ಫ್ಲಿಪ್

ಇದನ್ನು ಟ್ವೀಟ್ ಮಾಡಿದ ಫಿಗೆನ್ ವೀಡಿಯೋದ ಶೀರ್ಷಿಕೆಯಾಗಿ " ದಿ ಬೆಸ್ಟ್ ಬ್ಯಾಕ್ ಫ್ಲಿಪ್ ಎವರ್" ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಇದನ್ನು ರೀ ಟ್ವೀಟ್ ಮಾಡಿದವರು ಸಹ "ವಾವ್ ಆ್ವಸಮ್ ಫ್ಲಿಪ್" ಪ್ರೇರಣಾದಾಯಕವಾಗಿದೆ "ವಾವ್ ದಾಟ್ ಈಸ್ ಆಮೇಜಿಂಗ್" ಎಂದೆಲ್ಲಾ ಸುಂದರವಾದ ಶೀರ್ಷಿಕೆಯನ್ನು ನೀಡಿದ್ದಾರೆ. ವೀಡಿಯೋದಲ್ಲಿ

ವೀಡಿಯೋ ನೋಡಿ ಆಶ್ಚರ್ಯಚಕಿತರಾದ ನೆಟ್ಟಿಗರು

ಸಖತ್ತಾಗಿ ವೈರಲ್ ಆಗುತ್ತಿರುವ ವೀಡಿಯೋವನ್ನು ಕಂಡ ನೆಟ್ಟಿಗರು ಪಾರಿವಾಳ ಸ್ಥಿರವಾಗಿ ನಿಂತು ಬ್ಯಾಕ್ ಫ್ಲಿಪ್ ಅನ್ನು ಗಮನಿಸಿ ಆಶ್ಚರ್ಯಚಕಿತರಾಗಿದ್ದಾರೆ. ಅಲ್ಲದೆ ಪಾರಿವಾಳದ ಈ ಸೌಂದರ್ಯ ನೋಟ ಎಂತಹವರನ್ನೂ ಒಮ್ಮಗೆ ಮನಸೋಲಿಸಿಯೇ ಸೋಲಿಸುತ್ತದೆ ಎಂದಿದ್ದಾರೆ.

ಮನುಷ್ಯರಲ್ಲಿಯೇ ಕೆಲವರು ಬ್ಯಾಕ್ ಫ್ಲಿಪ್ ಮಾಡವಾಗ ಒದ್ದಾಡುತ್ತಾರೆ, ಕಷ್ಟಪಡುತ್ತಾರೆ ಅಲ್ಲದೆ ಕೆಲವೊಮ್ಮೆ ಬ್ಯಾಕ್ ಫ್ಲಿಪ್ ಮಾಡಲು ಸಾಧ್ಯವಾಗದೆ ಬಿದ್ದು ಬಿಡುತ್ತಾರೆ. ಅಂತಹದರಲ್ಲಿ ಪಾರಿವಾಳ ಬ್ಯಾಕ್ ಟು ಬ್ಯಾಕ್ ಬ್ಯಾಕ್ ಫ್ಲಿಪ್ ಮಾಡುವ ದೃಶ್ಯವನ್ನು ವೀಡಿಯೋದಲ್ಲಿ ಗಮನಿಸಬಹುದು. ಪಾರಿವಾಳ ಈ ರೀತಿಯಾಗಿ ಬ್ಯಾಕ್ ಫ್ಲಿಪ್ ನಿಜವಾಗಿಯೂ ಅಚ್ಚರಿಹ ಸಂಗತಿಯೇ ಆಗಿದೆ.

ಇದನ್ನೂ ಓದಿ: Snake Eats Golf Balls: ಕೋಳಿ ಮೊಟ್ಟೆಯೆಂದು ಗಾಲ್ಫ್ ಬಾಲ್ ನುಂಗಿದ ಹಾವು! ಮತ್ತೇನಾಯ್ತು?

ಈ ವಿಡಿಯೋ ಸಾಮಾಜಿಕ ಬಳಕೆದಾರರನ್ನು ಅಚ್ಚರಿಗೊಳಿಸಿದಲ್ಲದೆ ಪಾರಿವಾಳದ ಸೌಂದರ್ಯವನ್ನು ಅವರ ಕಣ್ಣಿಗೆ ಕಟ್ಟಿಕೊಂಡಿದೆ. ಈ ರೀತಿಯಾದ ಮನಮೋಹಕ ಸನ್ನಿವೇಶಗಳೇ ಪ್ರಕೃತಿಯ ಮೇಲೆ ಪ್ರಾಣಿಗಳ ಮೇಲೆ ಪಕ್ಷಿಗಳ ಮೇಲೆ ಹೆಚ್ಚಿನ ಒಲವು ತೋರುವಂತೆ ಮಾಡುತ್ತದೆ.

ಅಲ್ಲದೆ ಇಂತಹ ಮುಗ್ಧ ಘಟನೆಗಳು ಪಕ್ಷಿಗಳ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆ ಮೂಲಕ ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ.
Published by:Nalini Suvarna
First published: