ಮನುಷ್ಯ ಬಾಲಕನಿಗೆ ಜನ್ಮ ನೀಡಿದ ಹಂದಿ! ಇಲ್ಲಿದೆ ಸತ್ಯಾಂಶ


Updated:August 2, 2018, 9:17 PM IST
ಮನುಷ್ಯ ಬಾಲಕನಿಗೆ ಜನ್ಮ ನೀಡಿದ ಹಂದಿ! ಇಲ್ಲಿದೆ ಸತ್ಯಾಂಶ

Updated: August 2, 2018, 9:17 PM IST
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಉಪಯುಕ್ತ ಮಾಹಿತಿಗಳಿಗಿಂತ ಅಧಿಕವಾಗಿ ಸುಳ್ಳು ಮಾಹಿತಿಗಳೇ ಶೇರ್​ ಆಗುತ್ತಿವೆ. ಇದಕ್ಕೆ ಪೂರಕ ಎಂಬಂತೆ ಕೆಲ ದಿನಗಳಿಂದ  ಹಂದಿ ಮುಖದ ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿ ವ್ಯಾಪಕವಾಗಿ ಹಬ್ಬಿದ್ದು ಅಂತಿಮವಾಗಿ ಇದೊಂದು ಸುಳ್ಳು ಮಾಹಿತಿ ಎಂಬುದು ಬಹಿರಂಗವಾಗಿದೆ.

ಸಾಮಾಜಿಕ ಜಾಲತಾಣಗಳನ್ನು ನಾವು ಯತೇಚ್ಚವಾಗಿ ಬಳಕೆ ಮಾಡಿದಾಗಿನಿಂದ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡಿವೆ. ಇಂತಹದೇ ಘಟನೆ ಫೇಸ್​ಬುಕ್​ ಬಳಕೇದಾರ ಲೈರಾ ಮಗಾನುಕೋ ವ್ಯಕ್ತಿ ಶೇರ್​ ಮಾಡಿರುವ, ಹಂದಿಯೊಂದಿಗೆ ಮನುಷ್ಯರಂತೆ ಹೋಲುವ ಹಂದಿ ಮುಖದ ಮಗುವಿನ ಚಿತ್ರ ಪ್ರಪಂಚದ ಮೂಲೆ ಮೂಲೆಗೂ ತಲುಪಿದೆ.ಹಂದಿಯಂತೆ ಮುಖವಿರುವ ಮಗುವನ್ನು ನೋಡಿದ್ದೀರ..., ಅಪರೂಪದ ಘಟನೆ ಸಿದ್ದಿಪೇಟೆ ಜಿಲ್ಲೆಯಲ್ಲಿ ಮನುಷ್ಯ ರೂಪದ ಮಗುವಿಗೆ ಜನ್ಮ ನೀಡಿದ ಹಂದಿ..., ಗಂಡು ಮಗುವಿಗೆ ಜನ್ಮ ನೀಡಿದ ಹಂದಿ.. ಹೀಗೆ ಮುಂತಾದ ಅಡಿ ಬರಹದಲ್ಲಿ ಫೇಸ್​ಬುಕ್​, ವಾಟ್ಸಪ್​ಗಳಲ್ಲಿ ಈ ಚಿತ್ರ ಹಾಗು ವಿಡಿಯೋ ಶೇರ್​ ಆಗಿತ್ತು.

ಆದರೆ ನಿಜಾಂಶ ಏನೆಂದರೆ ಇದು ಹಂದಿಯ ಮರಿಯಲ್ಲ, ಬದಲಾಗಿ ಸ್ವತಃ ಲೈರಾ ಮಗಾನುಕೋ ಕೆಲವು ಸಿಲಿಕಾನ್​ಗಳನ್ನು ಬಳಸಿ ತಯಾರಿಸಿದ ಒಂದು ಗೊಂಬೆಯಷ್ಟೇ. ಇನ್ನು ಈ ಚಿತ್ರಗಳನ್ನು ಲೈರಾ ಅವರ ಎಟ್ಸಿ ಸ್ಟೋರ್​ನಲ್ಲಿ ಎಲ್ಲರಿಗೂ ಲಭ್ಯವಿರುವಂತೆ ಇಟ್ಟಿದ್ದಾರೆ. ಇಲ್ಲಿದೆ ನೋಡಿ ಸತ್ಯಾಂಶದ ವಿಡಿಯೋ
ಹೀಗಾಗಿ ಇಂತಹ ಸುಳ್ಳು ಸುದ್ದಿಗಳಿಗೆ ಅಡಿಬರಹ ಬದಲಾಯೊಸಿ ಶೇರ್​ ಮಾಡುವ ಮುನ್ನ ಒಂದು ಬಾರಿ ಯೋಚಿಸಿ. ಅಥವಾ ಗೂಗಲ್​ನಲ್ಲೂ ಮತ್ತೋಮ್ಮೆ ಪರೀಕ್ಷಿಸಿ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ