HOME » NEWS » Trend » PHYSICS STUDENT MAKES 45 THOUSAND A MONTH SELLING HER WORN PANTS INNERWEAR AND TIGHTS TO SUGAR DADDIES HG

ಒಳ ಉಡುಪು ಮಾರಿ ತಿಂಗಳಿಗೆ ಭಾರೀ ಮೊತ್ತ ಸಂಪಾದಿಸುತ್ತಿದ್ದಾಳೆ ಈ ವಿದ್ಯಾರ್ಥಿನಿ!

ಸದ್ಯ ಸುದ್ದಿಯಲ್ಲಿರುವ ಮೆಲ್​ ಬ್ರೌನ್​ ವಯಸ್ಸು 30. ಸದ್ಯ ವಿದ್ಯಾಭ್ಯಾಸ ಮಾಡುತ್ತಿರುವ ಈಕೆಗೆ ಓದಲು ಹಣ ಸಾಕಾಗದೆ ಇದ್ದ ಕಾರಣ ತನ್ನ ಒಳ ಉಡುಪನ್ನು ಮಾರಾಟ ಮಾಡುತ್ತಿದ್ದಾಳೆ.

news18-kannada
Updated:December 16, 2020, 5:55 PM IST
ಒಳ ಉಡುಪು ಮಾರಿ ತಿಂಗಳಿಗೆ ಭಾರೀ ಮೊತ್ತ ಸಂಪಾದಿಸುತ್ತಿದ್ದಾಳೆ ಈ ವಿದ್ಯಾರ್ಥಿನಿ!
ಮೆಲ್​ ಬ್ರೌನ್
  • Share this:
ಪಾದಗಳ ಫೋಟೋ ಮಾರಿ ವರ್ಷಕ್ಕೆ ಲಕ್ಷಾಂತರ ಹಣ ದುಡಿಯುವ ಸಂಗತಿಯನ್ನು ಕೇಳಿದ್ದೇವೆ. ಎದೆಹಾಲು ಮಾರಿ ಹಣಗಳಿಸುವ ಮಹಿಳೆಯರ ಸುದ್ದಿಯೂ ವೈರಲ್​ ಆಗಿತ್ತು. ಆದರೆ ಒಳ ಉಡುಪನ್ನು ಮಾರಿ ಹಣ ಸಂಪಾದಿಸುತ್ತಿರುವ ವಿದ್ಯಾರ್ಥಿಯ ಬಗ್ಗೆ ಕೇಳಿದ್ದೀರಾ?. ಅಚ್ಚರಿ ಆದರೂ ನಿಜ. ಆಕೆ ತನ್ನ ಉಳ ಉಡುಪುಗಳನ್ನು ಆನ್​ಲೈನ್​ನಲ್ಲಿ ಮಾರಿ ಹಣ ಗಳಿಸುತ್ತಿದ್ದಾಳೆ. ಅಷ್ಟಕ್ಕೂ ಆಕೆ ಯಾರು? ಎಲ್ಲಿಯವಳು? ಇಲ್ಲಿದೆ ಮಾಹಿತಿ.

ಹಣ ಗಳಿಸಲು ನೂರು ದಾರಿ ಇದೆ. ಹಾಗಂತ ಕೆಲವರು ಬೇಗನೆ ಹಣ ಸಂಪಾದಿಸಿಬೇಕು, ಲಕ್ಷ ಲಕ್ಷ ಎಣಿಸಬೇಕು ಎಂದು ಅಡ್ಡದಾರಿ ಹಿಡಿಯುತ್ತಾರೆ. ಅದರೆ ಈಕೆ ಮಾತ್ರ ಹಣ ಸಂಪಾದಿಸಲು ಒಳ ಉಡುಪವನ್ನು ಮಾರುತ್ತಿದ್ದಾಳೆ. ಲಂಡನ್​ ನ್ಯೂಕ್ಯಾಸ್ಲೆಯ ಭೌತಶಾಸ್ತ್ರದ ವಿದ್ಯಾರ್ಥಿನಿಯಾಗಿರುವ ಮೆಲ್​ ಬ್ರೌನ್​ ಆನ್​ಲೈನ್​ ಮೂಲಕ ಈ ವ್ಯಾಪಾರ ಮಾಡುತ್ತಿದ್ದಾಳೆ.

ಸದ್ಯ ಸುದ್ದಿಯಲ್ಲಿರುವ ಮೆಲ್​ ಬ್ರೌನ್​ ವಯಸ್ಸು 30. ಸದ್ಯ ವಿದ್ಯಾಭ್ಯಾಸ ಮಾಡುತ್ತಿರುವ ಈಕೆಗೆ ಓದಲು ಹಣ ಸಾಕಾಗದೆ ಇದ್ದ ಕಾರಣ ತನ್ನ ಒಳ ಉಡುಪನ್ನು ಮಾರಾಟ ಮಾಡುತ್ತಿದ್ದಾಳೆ. ಹಾಗಂತ ಆಕೆಯ ಉಳ ಉಡುಪವನ್ನು ಯಾರು ಕೊಂಡುಕೊಳ್ಳುವವರಿದ್ದಾರೆ? ಎಂದು ಕೊಂಡರೆ ತಪ್ಪು!. ಅನೇಕರು ಈಗಾಗಲೇ ಖರೀದಿಸಿದ್ದಾರೆ. ಅಷ್ಟು ಮಾತ್ರವಲ್ಲ, ದಿನ ನಿತ್ಯವೂ ಆಕೆಯ ಬಟ್ಟೆಗೆ ಕಾಯುವವರ ಸಂಖ್ಯೆ 20 ಸಾವಿರಕ್ಕೂ ಅಧಿಕವಿದೆಯಂತೆ.ಮತ್ತೊಂದು ಅಚ್ಚರಿಯ ವಿಚಾರವೆಂದರೆ ಪ್ರಪಂಚದಾದ್ಯಂತ ಈಕೆ 20 ಸಾವಿರ ಮಂದಿ ಕಾಯಂ ಗಿರಾಕಿಗಳು ಇದ್ದಾರಂತೆ. ಇನ್ನು ಆನ್​ಲೈನ್​ ಮೂಲಕ ಹೆಚ್ಚು ಪ್ರಚಾರ ಮಾಡಿದೆ ಗ್ರಾಹಕರ ಸಂಖ್ಯೆ ಹೆಚ್ಚಾಗಬಹದು ಎಂಬುದು ಆಕೆಯ ಮಾತು.ಇನ್ನು ಈಕೆ ಮಾರುತ್ತಿರುವ ಒಳ ಉಡುವಿನ ಗ್ರಾಹಕರು ಶುಗರ್​ಡ್ಯಾಡಿಗಳಂತೆ. ಶ್ರೀಮಂತ ಪುರುಷರು ಆಕೆಯ ಬಟ್ಟೆಗಳನ್ನು ಕೊಂಡುಕೊಳ್ಳುತ್ತಾರೆ. ಪ್ರಾರಂಭದಲ್ಲಿ ಮೆಲ್​ ಬ್ರೌನ್​ ಮಾಸ್ಕ್​ ಮಾರುತ್ತಿದ್ದಳು. ಆನಂತರ ಶ್ರೀಮಂತ ಪುರುಷರು ಆಕೆಯ ಒಳ ಉಡುಪಿಗೆ ಬೇಡಿಕೆ ಇಟ್ಟರು. ನಂತರ ಆಕೆ ಒಳ ಉಡುಪನ್ನು ಮಾರಾಟ ಮಾಡಲು ಮುಂದಾಗುತ್ತಾಳೆ. ಹೀಗೆ ಆನ್​ಲೈನ್​ ಮೂಲಕ ಮಾರಾಟ ಮಾಡಲು ಮುಂದಾದ ಮೆಲ್​ ಬ್ರೌನ್​ ತಿಂಗಳಿಗೆ ಸುಮಾರು 45 ಸಾವಿರ ರೂಪಾಯಿ ಸಂಪಾದಿಸುತ್ತಿದ್ದಾಳಂತೆ.
First published: December 16, 2020, 5:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories