Singham-2: ಇವರು ಒಬ್ಬರಲ್ಲ, ಇಬ್ಬರು! ತಮಿಳುನಾಡಲ್ಲಿ ಅವಳಿ 'ಸಿಂಗಂ'ಗಳ ಹವಾ!

'ಸಿಂಗಂ' ಸಿನಿಮಾ ಬಳಿಕ ಯಾರಾದ್ರೂ ಖಡಕ್ ಪೊಲೀಸ್ ಅಧಿಕಾರಿಗಳು ಬಂದರೆ ಅವರನ್ನು ‘ಸಿಂಗಂ’ ಅಂತ ಕರೆಯುವುದು ಟ್ರೆಂಡ್ ಆಯ್ತು. ಇದೀಗ ತಮಿಳುನಾಡಿನಲ್ಲಿ ಹೊಸ 'ಸಿಂಗಂ' ಉದಯವಾಗಿದೆ. ಇವರು 'ಸಿಂಗಂ' ಅಲ್ಲ, 'ಸಿಂಗಂ-2' ಅಂತಿದ್ದಾರೆ ಅಲ್ಲಿನ ಜನ. ಯಾಕೆಂದ್ರೆ ಅವರು ಒಬ್ಬರಲ್ಲ, ಇಬ್ಬರು. ಅಂದರೆ ಅವಳಿ ಸಹೋದರರು!

 ಪೊಲೀಸ್ ಅಧಿಕಾರಿಗಳಾದ ಅವಳಿ ಸಹೋದರರು

ಪೊಲೀಸ್ ಅಧಿಕಾರಿಗಳಾದ ಅವಳಿ ಸಹೋದರರು

  • Share this:
ಚೆನ್ನೈ: ದಕ್ಷಿಣ ಭಾರತದ (South India) ಖ್ಯಾತ ನಟ (Hero), ತಮಿಳು (Tamil) ಸಿನಿಮಾ ಸೂಪರ್ ಸ್ಟಾರ್‌ (Super Star) ಸೂರ್ಯ (Suriya) ಅಭಿನಯದ ಸಿಂಗಂ (Singham) ಹಾಗೂ ಸಿಂಗಂ-2 (Singham-2) ಸಿನಿಮಾಗಳನ್ನು ನೀವೆಲ್ಲ ನೋಡಿಯೇ ಇರುತ್ತೀರಿ. ಬಾಕ್ಸ್ ಆಫೀಸ್‌ನಲ್ಲಿ (Box Office) ಧೂಳೆಬ್ಬಿಸಿದ ಈ ಸಿನಿಮಾ ಕನ್ನಡ, ಹಿಂದಿ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ರಿಮೇಕ್ (Remake) ಆಗಿ, ಸೂಪರ್ ಹಿಟ್ (Super Hit) ಆಗಿತ್ತು. ಅದಾದ ಬಳಿಕ ಯಾರಾದ್ರೂ ಖಡಕ್ ಪೊಲೀಸ್ ಅಧಿಕಾರಿಗಳು (Police officers) ಬಂದರೆ ಅವರನ್ನು ‘ಸಿಂಗಂ’ ಅಂತ ಕರೆಯುವುದು ಟ್ರೆಂಡ್ (Trend) ಆಯ್ತು. ಇದೀಗ ತಮಿಳುನಾಡಿನಲ್ಲಿ ಹೊಸ ಸಿಂಗಂ ಉದಯವಾಗಿದೆ. ಇವರು ಸಿಂಗಂ ಅಲ್ಲ, ಸಿಂಗಂ 2 ಅಂತಿದ್ದಾರೆ ಅಲ್ಲಿನ ಜನ. ಯಾಕೆಂದ್ರೆ ಅವರು ಒಬ್ಬರಲ್ಲ, ಇಬ್ಬರು. ಅಂದರೆ ಅವಳಿ ಸಹೋದರರು (Twin Brothers). ಇದೀಗ ಈ ಐಪಿಎಸ್‌ (IPS) ಸಹೋದರರಿಬ್ಬರು ಒಟ್ಟಿಗೆ ಕಾಣಿಸಿಕೊಂಡ ಫೋಟೋ (Photo) ವೈರಲ್ (Viral) ಆಗಿದೆ. 

ಅರವಿಂದನ್, ಅಭಿನಂದನ್ ಸಹೋದರರು

ತಮಿಳುನಾಡಿನ ಚೆಂಗಲ್‌ಪೇಟೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪಿ.ಅರವಿಂದನ್ ಅವರು ತಮ್ಮ ಅವಳಿ ಸಹೋದರನೊಂದಿಗೆ ಕಾಣಿಸಿಕೊಂಡಿರುವ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, 11 ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.

‘ಸಿಂಗಂ’ ಎಂದ ಅಭಿಮಾನಿಗಳು

‘ನನ್ನ ಸಹೋದರ ಎಸಿಪಿ ಅಭಿನಂದನ್‌ ಜೊತೆ ನಾನು ತಮಿಳುನಾಡು ಪೊಲೀಸ್ ದೆಹಲಿ ಪೊಲೀಸರನ್ನು ಭೇಟಿಯಾದ ಸಮಯ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೊ ನೋಡಿರುವ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ನಟ ಸೂರ್ಯ ಅಭಿನಯದ ‘ಸಿಂಗಂ’ ಸಿನಿಮಾ ನೆನಪಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.ಇದನ್ನೂ ಓದಿ: Viral Video: "ಯುದ್ಧ ಬೇಡ ಶಾಂತಿ ಬೇಕು" ಅಂತಿದ್ದಾಳೆ ಪುಟ್ಟ ಬಾಲಕಿ, ಯುದ್ಧ ನಿಲ್ಲಿಸುವಂತೆ ಸಂದೇಶ

ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ

ಅವಳಿ ಸಹೋದರರ  ಫೋಟೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇಬ್ಬರಲ್ಲಿ ಯಾರು ದೊಡ್ಡವರು, ಯಾರು ಚಿಕ್ಕವರು, ಇಬ್ಬರ ನಡುವಿನ ವ್ಯತ್ಯಾಸ ಕಂಡು ಹಿಡಿಯುವ ಕುರಿತು ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.

ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆ

ಐಪಿಎಸ್ ಅಧಿಕಾರಿ ಸೆಲ್ವನ್ ನಾಗರತಿನಂ ಫೇಸ್‌ಬುಕ್‌ನಲ್ಲಿ ‘ಇಬ್ಬರ ಅಭಿವ್ಯಕ್ತಿಯೂ ಒಂದೇ. ಅದ್ಭುತ ಕ್ಲಿಕ್!’ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು  ‘ಇದು ತುಂಬಾ ಅತಿವಾಸ್ತವಿಕವಾಗಿದೆ’ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಸಹೋದರರಿಬ್ಬರು ‘ಪರಸ್ಪರ ತದ್ರೂಪಿಗಳು’ ಎಂದು ಕೆಲವರು ಕಾಮೆಂಟಿಸಿದ್ದಾರೆ.ಈ ಅವಳಿ ಸಹೋದರರು ಯಾರು?

ಅರವಿಂದನ್ ಅವರು ಕಂಪ್ಯೂಟರ್ ಸೈನ್ಸ್ ಪದವೀಧರರಾಗಿದ್ದಾರೆ. 2010 ರಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಪಿಎಸ್‌ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಆರಂಭದಲ್ಲಿ ಅವರು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರು.

ಇವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅಪರಾಧವನ್ನು ನಿಲ್ಲಿಸಲು ಮತ್ತು ಜನರ ಜೀವನವನ್ನು ಸುಲಭಗೊಳಿಸಲು ತಂತ್ರಜ್ಞಾನವನ್ನು ಬಳಸುವುದಲ್ಲೂ ನಿಷ್ಣಾತರಾಗಿದ್ದಾರೆ.

ಅಪರಾಧಿಗಳಿಗೆ ಸಿಂಹಸ್ವಪ್ನರಾಗಿದ್ದ ಅರವಿಂದನ್

ಅರವಿಂದನ್ ಅವರು ಹಿಂದೆ ತೆಂಕಶಿಯ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ತಮ್ಮ ಮೊದಲ ಪೋಸ್ಟಿಂಗ್ ಸಮಯದಲ್ಲಿ ತುಂಬಾ ಹೆಸರು ಮಾಡಿದ್ದರು. ಅವರು ಪಾಸ್‌ಪೋರ್ಟ್ ಪರಿಶೀಲನೆಗೆ ಅಧಿಕಾರಿಯ ಭೇಟಿಯ ದಿನಾಂಕ ಮತ್ತು ಸಮಯದ ಬಗ್ಗೆ ಅರ್ಜಿದಾರರನ್ನು ಎಚ್ಚರಿಸಲು SMS ವ್ಯವಸ್ಥೆಯನ್ನು ಪ್ರಾರಂಭಿಸಿದ್ದರು.

ಇದನ್ನೂ ಓದಿ: Russia-Ukraine: ಯುದ್ಧ ಸಂಕಷ್ಟದಲ್ಲಿ ಪತಿಯನ್ನು ಬಿಟ್ಟು ಭಾರತಕ್ಕೆ ಬರುವುದಿಲ್ಲ ಎಂದ ಪತ್ನಿ!

ತರಬೇತಿಯಲ್ಲಿ ಇರುವ ಸಹೋದರ

ಇನ್ನು ಅವರ ಸಹೋದರ ಅಭಿನಂದನ್ ದೆಹಲಿ ಪೊಲೀಸ್ ಇಲಾಖೆಯಲ್ಲಿ ಟ್ರೈನಿ ಎಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಫೇಸ್ಬುಕ್ ಪ್ರೊಫೈಲ್ ಪ್ರಕಾರ, ಅವರು ಗ್ರೇಡ್-ಎ ಅಧಿಕಾರಿಯಾಗಿ ಹಣಕಾಸು ಸಚಿವಾಲಯದಲ್ಲಿ ಕೆಲಸ ಮಾಡುತ್ತಿರೋದಾಗಿ ಬರೆದುಕೊಂಡಿದ್ದಾರೆ.
Published by:Annappa Achari
First published: