Video: ಪರ್ಫೆಕ್ಟ್​ ಫೋಟೋಗಾಗಿ ಕೋತಿಯನ್ನೇ ಮೀರಿಸಿದ ಛಾಯಾಗ್ರಾಹಕ: ಮರಕ್ಕೆ ಜೋತು ಬಿದ್ದ ವಿಡಿಯೋ ವೈರಲ್​

news18
Updated:April 19, 2018, 12:57 PM IST
Video: ಪರ್ಫೆಕ್ಟ್​ ಫೋಟೋಗಾಗಿ ಕೋತಿಯನ್ನೇ ಮೀರಿಸಿದ ಛಾಯಾಗ್ರಾಹಕ: ಮರಕ್ಕೆ ಜೋತು ಬಿದ್ದ ವಿಡಿಯೋ ವೈರಲ್​
news18
Updated: April 19, 2018, 12:57 PM IST
ನ್ಯೂಸ್​ 18 ಕನ್ನಡ

ಫೋಟೋ ಹಾಗೂ ವಿಡಿಯೋಗಳು ಜೀವನದಲ್ಲಿನ ಅಮೂಲ್ಯ ಕ್ಷಣಗಳ ನೆನಪುಗಳ ಸಂಗ್ರಹ. ಅದಕ್ಕೆ ಎಲ್ಲರೂ ತಮ್ಮ ಜೀವನದಲ್ಲಿನ ಸುಮಧುರ ಕ್ಷಣಗಳನ್ನು ನೆನಪಿಸಿಕೊಳ್ಳಲು ಅದನ್ನು ಫ್ರೇಮ್​ನಲ್ಲಿ ಇಟ್ಟುಕೊಳ್ಳುತ್ತಾರೆ.

ಜನರ ಈ ಆಸೆಗಳಿಗೆ ನೀರೆರೆಯುವ ಕೆಲಸ ಮಾಡುವುದು ಛಾಯಾಗ್ರಾಹಕರು. ಅದಕ್ಕಾಗಿ ತಮ್ಮ ಗ್ರಾಹಕರಿಗೆ ಬೇಕಾದ ಫೋಟೋಗಳನ್ನು ತೆಗೆಯಲು ಅವರು ಪಡುವ ಪಾಡು ಅಷ್ಟಿಷ್ಟಲ್ಲ. ಅದರಲ್ಲೂ ಮದುವೆಗೆ ಮುಂಚೆ ಮಾಡುವ ಫೋಟೋ ಶೂಟ್ ಈಗ ಒಂದು ಟ್ರೆಂಡ್​ ಆಗಿದೆ. ಅದಕ್ಕಾಗಿಯೇ ಜನರು ತಮ್ಮ ವಿವಾಹಕ್ಕೆ ಮುನ್ನ ಹಾಗೂ ನಂತರ ಫೋಟೋಗಳನ್ನು ತಮಗೆ ಬೇಕಾದಂತೆ ತೆಗೆಸಿಕೊಳ್ಳುತ್ತಾರೆ. ​

 



ಕೇರಳದಲ್ಲಿ ನಡೆದ ವಿವಾಹವೊಂದರಲ್ಲಿ ವರ ಹಾಗೂ ವಧುವಿನ ಫೋಟೋ ತೆಗೆಯಲು ಛಾಯಾಗ್ರಾಹಕನೊಬ್ಬ ಪಟ್ಟ ಕಷ್ಟ ಅಷ್ಟಿಷ್ಟಿಲ್ಲ. ಏರಿಯಲ್​ ಶಾಟ್​ನಂತಹ ಚಿತ್ರ ತೆಗೆಯಲು ಹೋಗಿ ತಾನೇ ಮರಕ್ಕೆ ಜೋತು ಬಿದ್ದ ಛಾಯಾಗ್ರಾಹಕ ಕೊನೆಗೂ ವಧು-ವರರಿಗೆ ಬೇಕಾದಂತೆ ಚಿತ್ರ ತೆಗೆದಿದ್ದಾರೆ.

ಛಾಯಾಗ್ರಾಹ ಈ ಚಿತ್ರ ತೆಗೆಯಲು ಪಟ್ಟ ಪಾಡನ್ನು ಯಾರೋ ವಿಡಯೊ ಮಾಡಿದ್ದು, ಅದು ಈಗ ಇನ್​ಸ್ಟಾಗ್ರಾಮ್​, ಫೇಸ್​ಬುಕ್​, ವಾಟ್ಸ್​ಆ್ಯಪ್​ ಸೇರಿದಂತೆ ಇತರೆ ತಾಣಗಳಲ್ಲಿ ವೈರಲ್​ ಆಗಿದೆ. ಆದರೆ ಈ ಛಾಯಾಗ್ರಾಹಕನ ಹೆಸರು ಕೇರಳದ ಯಾವ ಭಾಗದಲ್ಲಿ ಈ ಘಟನೆ ನಡೆದಿದೆ ಎಂಬ ಮಾಹಿತಿಗಳು ಲಭ್ಯವಿಲ್ಲ.

 
First published:April 19, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ