ಭೂಮಿಯ ಮೇಲಿನ ಸಕಲ ಜೀವರಾಶಿಗಳಿಗೂ ಅಗತ್ಯವಾಗಿ ಬೇಕಾಗಿರುವಂತಹ ಸೂರ್ಯನ ಶಕ್ತಿ (Sun Power) ಅಪಾರ. ಅಂತೆಯೇ ಸೂರ್ಯನ ಕುರಿತು ಹೆಚ್ಚು ಹೆಚ್ಚು ತಿಳಿಯಬೇಕೆಂಬ ಕುತೂಹಲವೂ ಖಗೋಳ ಶಾಸ್ತ್ರಜ್ಞರಿಗೆ (Astronomer) ಇದ್ದೇ ಇರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇತ್ತೀಚಿಗಷ್ಟೇ ಜಗತ್ತಿನ ಪ್ರತಿಷ್ಠಿತ ಹಾಗೂ ದೊಡ್ಡದಾದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಸೂರ್ಯ ನಕ್ಷತ್ರದ ಒಂದು ಅದ್ಭುತವಾದ ಚಿತ್ರವನ್ನು ಪ್ರಕಟಿಸಿದೆ. ನಾವು ಹೊಸ ವರ್ಷಕ್ಕೆ(New Year) ಕಾಲಿಡುತ್ತಿರುವಂತೆಯೇ ಬಾಹ್ಯಾಕಾಶದಲ್ಲಿ ಪ್ರಜ್ವಲವಾಗಿ ಬೆಳಗುತ್ತಿರುವ ಸೂರ್ಯನ ಆ ರುದ್ರ ರಮಣೀಯ ನೋಟ ಹೊಸ ವರ್ಷದ ಹೊಸತನಕ್ಕೆ ದ್ಯೋತಕವಾಗಿದೆ ಎಂಬಂತೆ ಸಂಕೇತಿಸುವಂತಿದೆ. ಚಿತ್ರದಲ್ಲಿ ಸೂರ್ಯನ ಪ್ರಬಲವಾದ ಜ್ವಾಲೆಗಳ ಆ ನೋಟ ಎಂತಹವರನ್ನೂ ಸೆಳೆಯದೆ ಇರಲಾರದು.
ಈ ಪ್ರಬಲವಾದ ಸೌರ ಜಾಲೆಗಳಲ್ಲಿ ಲುಪ್ತವಾಗಿರುವ ಸೂರ್ಯನನ್ನು ನೋಡಿದಾಗ ಒಂದು ಕ್ಷಣ ರೋಮಾಂಚನವಾಗುತ್ತದಾದರೂ ನಾಸಾದ ಪ್ರಕಾರ, ಸೂರ್ಯನ ಈ ಪ್ರಖರ ಸೌರ ಜ್ವಾಲೆಗಳು ರೆಡಿಯೋ ತರಂಗಗಳಿಗೆ ಹಾನಿ ಮಾಡಬಹುದು, ವಿದ್ಯುತ್ ಪ್ರವಹಿಸುವ ಗ್ರಿಡ್ ಗಳಿಗೆ ಹಾನಿ ಉಂಟು ಮಾಡಬಹುದು ಹಾಗೂ ಸಿಗ್ನಲ್ ಗಳಿಗೆ ತೊಂದರೆ ಕೊಡಬಹುದಲ್ಲದೆ, ಗಗನನೌಕೆ, ಗಗನಯಾತ್ರಿಗಳಿಗೂ ಸವಾಲೊಡ್ಡಬಹುದಾದ ಸಾಮರ್ಥ್ಯ ಹೊಂದಿವೆ.
ಸೌರ ಜ್ವಾಲೆಗಳಿಂದ ಅವೃತವಾಗಿರುವ ಸೂರ್ಯನ ಅದ್ಭುತವಾದ ಚಿತ್ರವನ್ನು ಹಂಚಿಕೊಂಡಿರುವ ನಾಸಾ, ಸೂರ್ಯನ ವಯಸ್ಸು ಸುಮಾರು 4.5 ಬಿಲಿಯನ್ ವರ್ಷಗಳಾಗಿದೆ ಎಂಬ ಅಚ್ಚರಿಯ ಸತ್ಯಾಂಶವನ್ನೂ ಹಂಚಿಕೊಂಡಿದೆ.
ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯ ಮೂಲಕ ತನ್ನ ಅನುಯಾಯಿಗಳಿಗೆ ಹೊಸ ವರ್ಷದ ಶುಭಕಾಮನೆಗಳನ್ನು ತಿಳಿಸುತ್ತ ನಾಸಾ, "ನಾವು ಈಗ ಹೊಸ ಪಥದಲ್ಲಿ ಮತ್ತೆ ಚಲಿಸಲು ಪ್ರಾರಂಭಿಸಿದ ಹಾಗೂ ಇದೆಲ್ಲವನ್ನು ಸಾಧ್ಯವಾಗಿರಿಸಿರುವ ಈ ಪ್ರಕ್ರಿಯೆಯ ಮತ್ತು ನಮ್ಮ ಭೂಮಿಯಿಂದ 93 ಮಿಲಿಯನ್ ಮೈಲ್ (150 ಮಿಲಿಯನ್ ಕಿ.ಮೀ) ಗಳಷ್ಟು ದೂರದಲ್ಲಿರುವ ನೈಜವಾದ ಸ್ಟಾರ್ ವತಿಯಿಂದ ಹೊಸ ವರ್ಷದ ಶುಭಕಾಮನೆಗಳು" ಎಂದು ಬರೆದುಕೊಂಡಿದೆ.
ಇದನ್ನೂ ಓದಿ: ಕಡಿಮೆ ಖರ್ಚಿನಲ್ಲಿ ನೀವೂ ಕೂಡ ಯೂರೋಪ್ ರೌಂಡ್ ಹಾಕಬಹುದು, ಬಜೆಟ್ ಫ್ರೆಂಡ್ಲಿ ಪ್ಲ್ಯಾನ್ಸ್ ಇಲ್ಲಿದೆ ನೋಡಿ
ಮುಂದುವರೆಯುತ್ತ ನಾಸಾ ಸೂರ್ಯನ ಕುರಿತಂತೆ, "ನಭೋಶಾಸ್ತ್ರಕ್ಕನುಸಾರವಾಗಿ ಮಧ್ಯ ವಯಸ್ಸಿನಲ್ಲಿರುವ ಈ ಕುಬ್ಜ ಹಳದಿ ನಕ್ಷತ್ರದ ಸಕ್ರಿಯ ಹಾಗೂ ನಿರಂತರವಾದ ಶಕ್ತಿಯುಕ್ತ ಪ್ರಕೃತಿಯಿಂದಾಗಿ ಸೌರ ವ್ಯವಸ್ಥೆಯು ಶಕ್ತಿ ಪಡೆಯುತ್ತದೆ.
ವಿಜ್ಞಾನಿಗಳು ಸೌರ ವ್ಯವಸ್ಥೆಯಲ್ಲಿ ಉಪಸ್ಥಿತವಿರುವ ಅತಿ ಪ್ರಾಚೀನ ವಿವಿಧ ವಸ್ತುಗಳ ಸಹಾಯದಿಂದ ಸೂರ್ಯನ ವಯಸ್ಸನ್ನು ಅಂದಾಜಿಸಲು ಸಶಕ್ತರಾಗಿದ್ದಾರೆ. ಇವೆಲ್ಲವೂ ಹೆಚ್ಚು ಕಡಿಮೆ ಅದೇ ಸಮಯದಲ್ಲೇ ರೂಪಗೊಂಡ ವಸ್ತುಗಳಾಗಿವೆ" ಎಂದು ನಾಸಾ ವಿವರ ಹಂಚಿಕೊಂಡಿದೆ.
View this post on Instagram
ನಮ್ಮ ಸೂರ್ಯನ ಗುರುತ್ವಾಕರ್ಷಣ ಶಕ್ತಿಯು ನಮ್ಮ ಒಟ್ಟಾರೆ ಸೌರ ಮಂಡಲವನ್ನು ಅದಿರುವ ಈ ಸ್ಥಿತಿಯಲ್ಲಿ ಎಲ್ಲವನ್ನು ಒಟ್ಟಾಗಿ ಹಿಡಿದುಕೊಂಡು ಹಾಗೆ ಇರುವಂತೆ ನೆರವಾಗಿದೆ. ಈ ಒಗ್ಗಟ್ಟಿನಲ್ಲಿ ದೊಡ್ಡ ಗೃಹಗಳಿಂದ ಹಿಡಿದು ಚಿಕ್ಕ ಚಿಕ್ಕ ನಭೋ ತ್ಯಾಜ್ಯವೂ ಸೇರಿದೆ" ಎಂದು ನಾಸಾ ಉಲ್ಲೇಖಿಸಿದೆ.
ಗಗನ ನೌಕೆಗಳ ನಮ್ಮ ಒಂದು ಸರಣಿಯೇ ಪ್ರಸ್ತುತ ನಮ್ಮ ಸೂರ್ಯನನ್ನು 24 ಗಂಟೆಗಳ ಕಾಲ ಮಾನಿಟರ್ ಮಾಡುತ್ತಿದ್ದು ಆ ಮೂಲಕ ಸೂರ್ಯನ ಕುರಿತಾದ ಹೀಲಿಯೋಫಿಸಿಕ್ಸ್ ವಿಷಯದಡಿಯಲ್ಲಿ ನಾವು ಹೆಚ್ಚಿನ ಜ್ಞಾನವನ್ನು ಪಡೆಯುತ್ತಿದ್ದೇವೆ. ಈ ಸರಣಿ ನೌಕೆಗಳಲ್ಲಿ ಪ್ರಸ್ತುತ ಸೂರ್ಯನ ಈ ಚಿತ್ರವನ್ನು ಕ್ಲಿಕ್ಕಿಸಿದ ಸೋಲಾರ್ ಡೈನಮಿಕ್ ಆಬ್ಸರ್ವೆಟರಿ ಸಹ ಸೇರಿದೆ ಎಂದು ನಾಸಾ ತಿಳಿಸಿದೆ.
ಒಟ್ಟಿನಲ್ಲಿ, ಭೂಮಿಯಲ್ಲಿ ಜೀವನಕ್ಕೆ ಅವಶ್ಯಕವಾಗಿರುವಂತಹ ಸೂರ್ಯ ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದ್ದು ಸಕಲ ಜೀವರಾಶಿಗಳಿಗೆ ಬದುಕಲು ಅವಶ್ಯಕವಾಗಿದ್ದಾನೆ ಹಾಗೂ ಮನುಕುಲಕ್ಕೆ ಎಂದಿನಂತೆ ಸದಾ ಕೌತುಕದ ವಿಷಯವಾಗಿ ಇನ್ನಷ್ಟು ತಿಳಿಯಬೇಕೆನ್ನುವ ಜಿಜ್ಞಾಸೆಯನ್ನು ಮೂಡಿಸುತ್ತಲೇ ಇರುತ್ತಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ