Parking: ಈ ಪ್ರೀಸ್ಕೂಲ್ ಪಾರ್ಕಿಂಗ್ ಒಮ್ಮೆ ನೋಡಿ! ಎಷ್ಟು ಚೆನ್ನಾಗಿದೆ ಅಲ್ವಾ?

ಕೊರೋನಾ ವೈರಸ್ ನಿರ್ಬಂಧಗಳನ್ನು ಇತ್ತೀಚೆಗೆ ತೆಗೆದು ಹಾಕಿದಾಗ, ಪೋಷಕರು ಅಂತಿಮವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗಿದೆ ಎಂದು ಹೇಳಬಹುದು. ಈಗ ಮತ್ತೆ ಮಕ್ಕಳು ಶಾಲೆ, ಕಾಲೇಜಿಗೆ ಹೋಗುತ್ತಿದ್ದಾರೆ. ಶಾಲಾ ಕಾಲೇಜುಗಳ ತರಗತಿಗಳು, ಆಟದ ಮೈದಾನಗಳು ಮಕ್ಕಳಿಂದ ತುಂಬಿ ತುಳುಕುತ್ತಿದೆ ಮತ್ತು ಪಾರ್ಕಿಂಗ್ ಮಾಡುವ ಸ್ಥಳ ಸಹ ಸೈಕಲ್ ಮತ್ತು ಬೈಕ್ ಗಳಿಂದ ತುಂಬಿರುವುದನ್ನು ನಾವು ನೋಡಬಹುದು.

ಪ್ರಿಸ್ಕೂಲ್ ಪಾರ್ಕಿಂಗ್, ವೆನಿಸ್

ಪ್ರಿಸ್ಕೂಲ್ ಪಾರ್ಕಿಂಗ್, ವೆನಿಸ್

  • Share this:
ಸಾಮಾನ್ಯವಾಗಿ ನಾವೆಲ್ಲಾ ಯಾವುದಾದರೂ ಶಾಲೆಯ (School) ಮುಂದೆ ಹೋದರೆ, ಅಲ್ಲಿ ನಾವು ಸಾಲು ಸಾಲಾಗಿ ನಿಂತಿರುವ ಸೈಕಲ್ ಗಳನ್ನು (Cycle) , ಬೈಕ್ ಗಳನ್ನು (Bike) ನೋಡುತ್ತೇವೆ. ಅದೇ ಕಾಲೇಜಿನ (College) ಮುಂದೆ ಹೋದರೆ ನಾವು ಅನೇಕ ರೀತಿಯ ಬಣ್ಣ (Color) ಬಣ್ಣದ ಬೈಕ್ ಗಳನ್ನು ಸಾಲಾಗಿ ನಿಂತಿರುವುದನ್ನು ಸಹ ನೋಡಬಹುದು. ಆದರೆ ಕಳೆದ ಎರಡು ವರ್ಷಗಳಲ್ಲಿ ಈ ದೃಶ್ಯ (Scene) ನೋಡಲು ಸಿಕ್ಕಿರಲಿಲ್ಲ. ಏಕೆಂದರೆ ಕೋವಿಡ್-19 (Covide-19) ಸಾಂಕ್ರಾಮಿಕ ರೋಗದ (Disease) ಹಾವಳಿಯಿಂದಾಗಿ ಜಗತ್ತಿನಾದ್ಯಂತ ಬಹುತೇಕ ಶಾಲೆ, ಕಾಲೇಜುಗಳಿಗೆ ಬೀಗ (Lock) ಹಾಕಲಾಗಿತ್ತು.

ಕೊರೋನಾ ವೈರಸ್ ನಿರ್ಬಂಧಗಳನ್ನು ಇತ್ತೀಚೆಗೆ ತೆಗೆದು ಹಾಕಿದಾಗ, ಪೋಷಕರು ಅಂತಿಮವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗಿದೆ ಎಂದು ಹೇಳಬಹುದು. ಈಗ ಮತ್ತೆ ಮಕ್ಕಳು ಶಾಲೆ, ಕಾಲೇಜಿಗೆ ಹೋಗುತ್ತಿದ್ದಾರೆ. ಶಾಲಾ ಕಾಲೇಜುಗಳ ತರಗತಿಗಳು, ಆಟದ ಮೈದಾನಗಳು ಮಕ್ಕಳಿಂದ ತುಂಬಿ ತುಳುಕುತ್ತಿದೆ ಮತ್ತು ಪಾರ್ಕಿಂಗ್ ಮಾಡುವ ಸ್ಥಳ ಸಹ ಸೈಕಲ್ ಮತ್ತು ಬೈಕ್ ಗಳಿಂದ ತುಂಬಿರುವುದನ್ನು ನಾವು ನೋಡಬಹುದು.

ಸೋಷಿಯಲ್ ಮೀಡಿಯಾದಲ್ಲಿ ಕಂಡು ಬಂದ ಫೋಟೋ
ಕೆಲವು ದೇಶಗಳಲ್ಲಿ, ಪೋಷಕರು ಮೊದಲ ದಿನವೇ ಶಾಲೆಗಳ ದ್ವಾರದಲ್ಲಿ ತಮ್ಮ ಮಕ್ಕಳ ಜೊತೆಯಲ್ಲಿ ಕಾಣಿಸಿಕೊಂಡರು. ಮಕ್ಕಳು ಸಹ ಎರಡು ವರ್ಷದ ಗೃಹ ಬಂಧನ ಎಂಬಂತಿದ್ದ ಮನೆಗಳಿಂದ ಹೊರಬಂದು ತಮ್ಮ ಸ್ನೇಹಿತರನ್ನು ಭೇಟಿಯಾಗಲು ಸಂತೋಷಪಟ್ಟರು. ಅಂತರ್ಜಾಲದಲ್ಲಿ ಇದೀಗ ಇಂತಹದೇ ಒಂದು ಮುದ್ದಾದ ಫೋಟೋ ಹರಿದಾಡುತ್ತಿದೆ ನೋಡಿ.

ಪ್ರಿಸ್ಕೂಲ್ ಪಾರ್ಕಿಂಗ್, ವೆನಿಸ್
ಈ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಸುಮಾರು ಒಂದೂವರೆ ಡಜನ್ ಮಕ್ಕಳು ಓಡಿಸುವ ಮೂರು ಚಿಕ್ಕ ಚಕ್ರಗಳ ಗಾಡಿಗಳನ್ನು ಕಿರಿದಾದ ಒಂದು ಓಣಿಯಲ್ಲಿ, ಬಹುಶಃ ಶಾಲೆಯ ಹೊರಗೆ ನಿಲ್ಲಿಸಿರುವುದನ್ನು ಇಲ್ಲಿ ನೋಡಬಹುದು. ಕಂಪ್ಯೂಟರ್ ವಿಜ್ಞಾನಿ ಪಾಲ್ ಗ್ರಹಾಂ ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. "ಪ್ರಿಸ್ಕೂಲ್ ಪಾರ್ಕಿಂಗ್, ವೆನಿಸ್" ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ.

ಇದನ್ನೂ ಓದಿ: Security Guard: ಈ ಕುರ್ಚಿ ಮೇಲೆ ಕೂತಿರುವ ಸೆಕ್ಯೂರಿಟಿ ಗಾರ್ಡ್​ನ ನೋಡಿ! ನೀವು ಭಯ ಬೀಳೋದು ಗ್ಯಾರೆಂಟಿ

ಸಾಲು ಸಾಲಾಗಿ ಅಚ್ಚುಕಟ್ಟಾಗಿ ನಿಲ್ಲಿಸಿರುವ ಆಡುವ ಗಾಡಿಗಳು
ಇಲ್ಲಿ ನಾವು ಚಿಕ್ಕ ಮಕ್ಕಳು ಬಣ್ಣಬಣ್ಣದ ಆಡುವ ಗಾಡಿಗಳನ್ನು ಸಾಲು ಸಾಲಾಗಿ ಅಚ್ಚುಕಟ್ಟಾಗಿ ನಿಲ್ಲಿಸಿರುವುದನ್ನು ಈ ಫೋಟೋದಲ್ಲಿ ನೋಡಬಹುದು. ಈ ಫೋಟೋಗೆ 16,000ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ ಮತ್ತು 1,000ಕ್ಕೂ ಹೆಚ್ಚು ಜನರು ಅದನ್ನು ಮರು ಟ್ವೀಟ್ ಮಾಡಿದ್ದಾರೆ. ಅಡ್ಡಾದಿಡ್ಡಿಯಾಗಿ ತಮ್ಮ ವಾಹನಗಳನ್ನು ನಿಲ್ಲಿಸಿ ಹೋಗುವಂತಹ ವಯಸ್ಕರಿಗೆ ತಮ್ಮ ವಾಹನಗಳನ್ನು ಹೇಗೆ ಒಂದೇ ಸಾಲಿನಲ್ಲಿ ಅಚ್ಚುಕಟ್ಟಾಗಿ ನಿಲ್ಲಿಸಬೇಕೆಂಬ ಬಹಳ ಮುಖ್ಯವಾದ ಪಾಠವನ್ನು ಇದು ಕಲಿಸುತ್ತದೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪೋಸ್ಟ್ ನೋಡಿ ಹೇಳಿದ್ದಾರೆ.

ಫೋಟೋ ನೋಡಿ ವೀಕ್ಷಕರ ಕಾಮೆಂಟ್ ಗಳು
"ನೆದರ್ಲ್ಯಾಂಡ್ ನಲ್ಲಿ ಬೈಸಿಕಲ್ ಗಳಿಗೆ ಮೀಸಲಾದ ಪಾರ್ಕಿಂಗ್ ಗ್ಯಾರೇಜ್ ಗಳನ್ನು ನನಗೆ ನೆನಪಿಸುತ್ತದೆ" ಎಂದು ಸಂಗೀತಗಾರ ಟಿಮ್ ವೈಟ್ ಸಹ ಟ್ವೀಟ್ ಮಾಡಿದ್ದಾರೆ. "ಇದು ನಾನು ಇಡೀ ದಿನ ಟ್ವಿಟ್ಟರ್ ನಲ್ಲಿ ನೋಡಿದ ಅತ್ಯಂತ ಒಳ್ಳೆಯ ವಿಷಯವಾಗಿದೆ" ಎಂದು ಇನ್ನೊಬ್ಬ ಬಳಕೆದಾರರು ಪೋಸ್ಟ್ ಗೆ ಉತ್ತರಿಸುತ್ತಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Viral Photo: ಆಗಷ್ಟೇ ಪದವಿ ಪಡೆದ ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ

ಕೆಲವು ಬಳಕೆದಾರರು ವಿಶ್ವದ ಇತರ ಭಾಗಗಳಲ್ಲಿ ಶಾಲೆಗಳು ತೆರೆದಾಗ ಇದೇ ರೀತಿಯ ಸ್ಕೂಟರ್ ಗಳ ಇತರ ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಇತರರು ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಅವ್ಯವಸ್ಥೆಯ ಪಾರ್ಕಿಂಗ್ ಅನ್ನು ತುಂಬಾನೇ ಅಣಕಿಸಿರುವ ಉದಾಹರಣೆಗಳೂ ಇರುವುದನ್ನು ಕಾಣಬಹುದು.ಕೋವಿಡ್ -19 ರ ಪರಿಣಾಮದಿಂದಾಗಿ, ಸಾಂಕ್ರಾಮಿಕ ರೋಗದ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಕಳೆದ ವರ್ಷ ಡಿಸೆಂಬರ್ ನಲ್ಲಿ ಮತ್ತೆ ಮುಚ್ಚುವ ಮೊದಲು ದೆಹಲಿಯಲ್ಲಿ ಶಾಲೆಗಳನ್ನು ಪೂರ್ತಿಯಾಗಿ ಮತ್ತೆ ತೆರೆಯಲಾಗಿತ್ತು. ಅಂತಿಮವಾಗಿ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಮತ್ತೆ ಪೂರ್ತಿಯಾಗಿ ಶಾಲೆಯನ್ನು ತೆರೆಯಲಾಯಿತು. ಮಕ್ಕಳು ಹಿಂತಿರುಗಲು ಸಂತೋಷಪಟ್ಟರು ಮತ್ತು ಅವರ ಶಿಕ್ಷಕರು ನೀಡುವ ಸೂಚನೆಗಳನ್ನು ಈಗ ಅವರು ಅನುಸರಿಸುತ್ತಿದ್ದಾರೆ.
Published by:Ashwini Prabhu
First published: