ಇಲ್ಲಿ ಕೇವಲ 30 ಲಕ್ಷ ರೂಪಾಯಿಗೆ ಸಿಗುತ್ತೆ ಲ್ಯಾಂಬೋರ್ಗಿನಿ, ಫೆರಾರಿ ಕಾರು!

ಇಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರಿನ ಮಾದರಿಯಲ್ಲೇ ನಕಲಿ ಕಾರುಗಳನ್ನು ಸಿದ್ಧಪಡಿಸುತ್ತಿದ್ದರು. 5-6 ಕೋಟಿ ಮೌಲ್ಯದ ಕಾರನ್ನು ಕೇವಲ 30-35 ಲಕ್ಷ ಕೋಟಿ ರೂ.ಗೆ ಮಾರಾಟ ಮಾಡಲಾಗುತ್ತಿತ್ತು.

Rajesh Duggumane | news18
Updated:July 17, 2019, 1:05 PM IST
ಇಲ್ಲಿ ಕೇವಲ 30 ಲಕ್ಷ ರೂಪಾಯಿಗೆ ಸಿಗುತ್ತೆ ಲ್ಯಾಂಬೋರ್ಗಿನಿ, ಫೆರಾರಿ ಕಾರು!
ನಕಲಿ ಕಾರು
  • News18
  • Last Updated: July 17, 2019, 1:05 PM IST
  • Share this:
ವಾಚ್​, ಮೊಬೈಲ್​, ಬಟ್ಟೆಗಳು ಹೀಗೆ ಎಲ್ಲ ಬ್ರ್ಯಾಂಡೆಡ್​ ವಸ್ತುಗಳನ್ನು ನಕಲು ಮಾಡಿ ಮಾರುವ ಅನೇಕ ನಕಲಿ ಸಂಸ್ಥೆಗಳಿವೆ. ಬ್ರ್ಯಾಂಡೆಡ್​ ವಸ್ತುಗಳ ತಲೆಯ ಮೇಲೆ ಹೊಡೆದಂತೆ ಸಿದ್ಧಗೊಳ್ಳುವ ಈ ನಕಲಿ ಬ್ರ್ಯಾಂಡ್​ಗಳು ಮಾರುಕಟ್ಟೆಯಲ್ಲಿ ಕಡಲೆಪುರಿ ಬಿಕರಿ ಆದಂತೆ ಮಾರಾಟವಾಗುತ್ತವೆ. ಬ್ರ್ಯಾಂಡೆಡ್​ ವಸ್ತುಗಳನ್ನು ಕೊಂಡುಕೊಳ್ಳಬೇಕು ಆದರೆ, ಹಣವಿಲ್ಲ ಎನ್ನುವ ಮಧ್ಯಮ ವರ್ಗದವರು ಈ ಡುಪ್ಲಿಕೇಟ್​ ಬ್ರ್ಯಾಂಡ್​ಗಳ ಮೊರೆ ಹೋಗುತ್ತಿದ್ದಾರೆ. ಅಚ್ಚರಿ ಎಂದರೆ ಐಶಾರಾಮಿಗೆ ಹೆಸರಾದ ಲ್ಯಾಂಬೋರ್ಗಿನಿ, ಫೆರಾರಿ ಕಾರನ್ನು ಸಹ ನಕಲು ಮಾಡಿ ಮಾರಾಟ ಮಾಡುವ ಜಾಲವೊಂದು ಈಗ ಚಾಲ್ತಿಯಲ್ಲಿದೆ.

ಹೌದು, ಹೀಗೊಂದು ನಕಲಿ ಜಾಲ ಪತ್ತೆಯಾಗಿದೆ. ಹಾಗಂತ ಇದು ನಮ್ಮ ದೇಶದ ಕಥೆ ಅಲ್ಲ, ಬದಲಿಗೆ ಬ್ರೇಜಿಲ್​ನದ್ದು. ಇಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರಿನ ಮಾದರಿಯಲ್ಲೇ ನಕಲಿ ಕಾರುಗಳನ್ನು ಸಿದ್ಧಪಡಿಸುತ್ತಿದ್ದರು. 5-6 ಕೋಟಿ ರೂಪಾಯಿ ಮೌಲ್ಯದ ಕಾರನ್ನು ಕೇವಲ 30-35 ಲಕ್ಷ ಕೋಟಿ ರೂ.ಗೆ ಮಾರಾಟ ಮಾಡಲಾಗುತ್ತಿತ್ತು.

ಈ ಬಗ್ಗೆ ಪೊಲೀಸರಿಗೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ನಕಲಿ ಕಾರನ್ನು ಸಿದ್ಧಪಡಿಸುವ ಅಡ್ಡೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಆಗ ತಾನೇ ನಿರ್ಮಾಣ ಮಾಡಲಾಗುತ್ತಿದ್ದ 8 ಐಷಾರಾಮಿ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂದಹಾಗೆ, ಈ ಕಾರುಗಳಿಗೆ ಯಾವ ಬಿಡಿ ಭಾಗಗಳನ್ನು ಬಳಕೆ ಮಾಡಲಾಗಿದೆ ಎಂಬ ಕುರಿತು ಮಾಹಿತಿ ದೊರೆತಿಲ್ಲ.

First published: July 17, 2019, 1:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading