ವಿಡಿಯೋ ಕಾನ್ಫರೆನ್ಸ್​ ವೇಳೆ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಸರ್ಕಾರಿ ಅಧಿಕಾರಿ; ವಿಡಿಯೋ ವೈರಲ್

ಆಗಸ್ಟ್​ 26 ರಂದು ಈ ಘಟನೆ ಬೆಳಕಿಗೆ ಬಂದಿದ್ದು, ಸಿಬ್ಬಂಧಿಯೊಬ್ಬರು ಜೀಸಸ್​ ಎಸ್ಟಿಲ್​​ ವಿಡಿಯೋ ಕಾನ್ಪರೆನ್ಸ್​ ವೇಳೆ ಸೆಕ್ಸ್​ ಮಾಡುತ್ತಿದ್ದ ​ ವಿಡಿಯೋವನ್ನು ರೆಕಾರ್ಡ್​ ಮಾಡಿದ್ದಾರೆ.

ಫೋಟೋ ಕೃಪೆ: ಟ್ವಿಟ್ಟರ್​​

ಫೋಟೋ ಕೃಪೆ: ಟ್ವಿಟ್ಟರ್​​

  • Share this:
    ಕೊರೋನಾದಿಂದಾಗಿ ಅನೇಕರು ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ಸೇರುತ್ತಿದ್ದಾರೆ. ಮನೆಯಿಂದಲೇ ಕುಳಿತು ಕೆಲಸದ ಕುರಿತಾಗಿ ಸಭೆ, ಮಾತುಕತೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭಲ್ಲಿ ಗೊತ್ತಿಲ್ಲದೆ ಪತ್ನಿ, ಮಕ್ಕಳು ವಿಡಿಯೋ ಕಾನ್ಫರೆನ್ಸ್​​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾಕಷ್ಟು ಬಾರಿ ಇಂತಹ ಘಟನೆಗಳು ಬೆಳಕಿಗೆ ಬಂದಿವೆ, ವೈರಲ್ ಕೂಡ ಆಗಿವೆ. ಆದರೀಗ ಇಲ್ಲೊಬ್ಬ ಸರ್ಕಾರಿ ಅಧಿಕಾರಿ ವಿಡಿಯೋ ಕಾನ್ಫರೆನ್ಸ್​ ವೇಳೆ ಸೆಕ್ಸ್​​ ಮಾಡಿ ಸಿಕ್ಕಿಬಿದ್ದಿದ್ದಾರೆ!

    ಫಿಲಿಫೈನ್​ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಫಿಲಿಫೈನ್​ನ ಸರ್ಕಾರ ಜೂಮ್​​ ಆ್ಯಪ್​ನಲ್ಲಿ ವಿಡಿಯೋ ಕಾನ್ಫರೆನ್ಸ್​ ಏರ್ಪಡಿಸಿತ್ತು. ಹಲವು ವಿಷಗಳ ಕುರಿತು ಚರ್ಚೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ವೇಳೆ ಕಾರ್ಯದರ್ಶಿಯೊಬ್ಬರು ವಿಡಿಯೋ ಕಾನ್ಫರೆನ್ಸ್​ ವೇಳೆ ಸೆಕ್ಸ್​​ ಮಾಡಿ ಸಿಕ್ಕಿಬಿದ್ದಿದ್ದಾರೆ.

    ಫಿಲಿಫೈನ್​ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿರುವ ಪ್ರಕಾರ, ‘ಕ್ಯಾವೈಟ್​​​ ಪ್ರಾಂತ್ಯದ ಫಾತಿಮಾ ಡಾಸ್​ ಗ್ರಾಮದ ಕೌನ್ಸಿಲರ್​​ ಜೀಸಸ್​​ ಎಸ್ಟಿಲ್​ ಕಾನ್ಫರೆನ್ಸ್​ ವೇಳೆ ಸೆಕ್ಸ್​ ಮಾಡಿ ಸಿಕ್ಕಿಬಿದ್ದಿದ್ದಾರೆ. ಜೂಮ್​ ಆ್ಯಪ್​ನಲ್ಲಿ ಸಭೆ ಸೇರಿರುವ ವೇಳೆ ಜೀಸಸ್​ ಎಸ್ಟಿಲ್​​ ಕ್ಯಾಮೆರಾ ಆಫ್​ ​ ಆಗಿದೆ ಎಂದು ತಿಳಿದು ಮಹಿಳೆಯೊಂದಿಗೆ ಸೆಕ್ಸ್​ ಮಾಡಿದ್ದಾರೆ. ಆದರೆ ಕ್ಯಾಮೆರಾ ಆನ್​ ಆಗಿತ್ತು. ಹಾಗಾಗಿ ಈ ಘಟನೆ ಬೆಳಕಿಗೆ ಬಂದಿದೆ ಎಂದಿದೆ.

    ಜೀಸಸ್​ ಎಸ್ಟಿಲ್​ ಸೆಕ್ಸ್​ ಮಾಡಿರುವ ವಿಚಾರ ಎಲ್ಲೆಡೆ ವೈರಲ್​ ಆಗಿದೆ. ಮಾತ್ರವಲ್ಲದೆ ಅಲ್ಲಿನ ಮಾದ್ಯಮಗಳು ಕೂಡ ಈ ವಿಚಾರವನ್ನು ಬಯಲು ಮಾಡಿದೆ.



    ಆಗಸ್ಟ್​ 26 ರಂದು ಈ ಘಟನೆ ಬೆಳಕಿಗೆ ಬಂದಿದ್ದು, ಸಿಬ್ಬಂಧಿಯೊಬ್ಬರು ಜೀಸಸ್​ ಎಸ್ಟಿಲ್​​ ವಿಡಿಯೋ ಕಾನ್ಪರೆನ್ಸ್​ ವೇಳೆ ಸೆಕ್ಸ್​ ಮಾಡುತ್ತಿದ್ದ ​ ವಿಡಿಯೋವನ್ನು ರೆಕಾರ್ಡ್​ ಮಾಡಿದ್ದಾರೆ. ನಂತರ ವಿಡಿಯೋ ಸಾರ್ವಜನಿಕವಾಗಿ ಶೇರ್​ ಆಗಿದೆ. ಅಲ್ಲಿನ ಸರ್ಕಾರ ಗಮನಕ್ಕೂ ಬಂದಿದೆ. ನಂತರ ಜೀಸಸ್​​ ಎಸ್ಟಿಲ್​ ಅವರನ್ನು ಕೆಲಸದಿಂದ ತೆಗೆದಚು ಹಾಕಿದೆ.
    Published by:Harshith AS
    First published: