ಬದುಕು(Life) ಮತ್ತು ಕಲೆಯ(Art) ಬಗ್ಗೆ ಡಿವಿಜಿಯವರು(DVG) ಬರೆದ ಅದ್ಭುತ ಸಾಲುಗಳು. ಜೀವನವೇ ಒಂದು ಕಲೆ. ಅದನ್ನು ಕೊಳೆಯ ಕಲೆಯಾಗಿಸಿಕೊಳ್ಳದೇ ಕಲೆಯ ಕಲೆಯಾಗಿಸಿಕೊಳ್ಳುವುದೂ ಸಹ ಒದು ಕಲೆಯೇ ಆಗಿದೆ. ಕಲೆ ಎಂದರೆ ಕೇವಲ ಲಲಿತ ಕಲೆಗಳು ಮಾತ್ರವಲ್ಲ. ಬದುಕೇ ಒಂದು ಕಲೆಯಾದರೆ…? ಅದಕ್ಕಿಂತ ದೊಡ್ಡ ಸಾರ್ಥಕತೆ ಬೇರೊಂದಿರದು. ಕಲೆ ಮತ್ತು ಬದುಕು ಇವರಡೂ ಸಹ ಒಂದಕ್ಕೊಂದು ಹೊಂದಿಕೊಳ್ಳೂವಂತಹದ್ದಾಗಿವೆ. ಮನಸ್ಸಿನೊಳಗಿನ ನೋವ(Pain) ಮರೆಸುವ ಶಕ್ತಿ ಬಣ್ಣಕ್ಕಿದೆ(Color). ಕುಂಚದಲ್ಲಿ ಸೆರೆ ಹಿಡಿದ ಸುಂದರ ಚಿತ್ರಗಳು(Picture) ಮನುಷ್ಯನ(Human) ಮನಸ್ಸು ಖಿನ್ನತೆಯತ್ತ ಜಾರದಂತೆ ಜಾಗೃತಿ ವಹಿಸುತ್ತದೆ. ಅಷ್ಟೇ ಅಲ್ಲದೆ ಏನನ್ನೇ ನೋಡಿದರೂ ಅದರ ಮೇಲೆ ಆಸಕ್ತಿ ಬೆಳೆಸಿಕೊಂಡು ಅದೇ ರೀತಿ ಚಿತ್ರವನ್ನು ರಚರಿಸಬೇಕೆಂಬ ಹಂಬಲ ಕಲಾವಿದನಲ್ಲಿ ಉಂಟಾಗುತ್ತದೆ. ಹೀಗಾಗಿಯೇ ರವಿ ಕಾಣದ್ದನ್ನು ಒಬ್ಬ ಕಲಾವಿದ ಕಂಡಂತೆ ಒಬ್ಬ ಕಲಾವಿದನ ಸಾಕಷ್ಟು ರೀತಿಯ ಭಾವನೆಗಳು ವ್ಯಕ್ತವಾಗುತ್ತವೆ.. ಒಂದು ಚಿಕ್ಕ ಅಕ್ಕಿ ಕಾಳಿನ ಮೇಲೆ ತನ್ನ ಪ್ರತಿಭೆಯನ್ನು ತೋರುವಷ್ಟು ಕಲಾವಿದ ಇಂದು ಶಕ್ತನಾಗಿದ್ದಾನೆ.. ಅದೇ ರೀತಿ ಇಲ್ಲಿ ಕಲಾವಿದೆಯೊಬ್ಬಳ ಜಿರಳೆ ಗಳನ್ನು ಬಳಸಿಕೊಂಡು ಅದ್ಭುತವಾದ ಕಲಾಕೃತಿಗಳನ್ನು ರಚಿಸಿದ್ದಾರೆ.
ಪ್ರಸಿದ್ಧ ಕಲಾವಿದ ಲಿಯೊನಾರ್ಡೊ ಡಾ ವಿನ್ಸಿ ಹೇಳಿದಂತೆ , ಕಲಾವಿದನ ಕಣ್ಣಿಗೆ ಯಾವಾಗಲೂ ಇತರರ ಕಣ್ಣಿಗೆ ಕಾಣದ ಸೂಕ್ಷ್ಮವೂ ಕಾಣುತ್ತದೆ. ಹೀಗಾಗಿಯೇ ಅಕ್ಕಿ ಕಾಳಿನ ಮೇಲೆ ಮರದ ಎಲೆಗಳ ಮೇಲೆ ಕಲಾವಿದ ತನ್ನ ಕಲೆಯ ಕೈಚಳಕ ತೋರುವುದನ್ನು ನಾವು ಕಂಡಿದ್ದೇವೆ. ಅದನ್ನು ಮೆಚ್ಚಿ ಕಲಾವಿದನನ್ನು ಹೊಗಳಿದ್ದೇವೆ
ಫಿಲಿಫೈನ್ಸ್ ನ ಕಲಾವಿದರೊಬ್ಬರ ಜಿರಳೆಗಳ ರೇಖೆಗಳನ್ನು ಬಳಸಿಕೊಂಡು ಅದರ ಮೇಲೆ ಅದ್ಬುತವಾದ ಕಲಾಕೃತಿ ರಚನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.. ಹೌದು..ಬ್ರೆಂಡಾ ಡೆಲ್ಗಾಡೊ ಎಂಬ ಫಿಲಿಫೈನ್ಸ್ ಕಲಾವಿದೆ ಸತ್ತ ಜಿರಳೆಗಳ ಮೇಲ್ಭಾಗವನ್ನು ಬಳಸಿಕೊಂಡು ತನ್ನ ಕಲಾತ್ಮಕ ಕೌಶಲ್ಯವನ್ನು ತೋರ್ಪಡಿಸಿದ್ದಾರೆ..
ಇದನ್ನೂ ಓದಿ: ಇದಪ್ಪಾ ಮಾನವೀಯತೆ ಅಂದ್ರೆ.. ತಾನೇ ಕಷ್ಟದಲ್ಲಿ ಇದ್ರೂ ಮತ್ತೊಬ್ಬರಿಗೆ ಸಹಾಯ ಮಾಡಿ ಮಾದರಿಯಾದ ಬಾಲಕ
ಸತ್ತ ಜಿರಳೆಗಳ ಮೇಲೆ ಮೂಡಿತು ವಿವಿಧ ಚಿತ್ರ ಕಲಾಕೃತಿ
ಬ್ರೆಂಡಾ ಡೆಲ್ಗಾಡೊ ಸತ್ತ ಜಿರಳೆಗಳ ದೇಹದ ಮೇಲ್ಭಾಗ ಬಳಸಿಕೊಂಡು ಅದ್ಭುತವಾದ ಕಲಾಕೃತಿಗಳನ್ನು ರಚನೆ ಮಾಡಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಲಿಯೊನಾರ್ಡೊ ಡಾ ವಿನ್ಸಿಯ ಮೊನಾಲಿಸಾ ದಿಂದ ಹಿಡಿದು ವಿವಿಧ ಬಗೆಯ ವರ್ಣಚಿತ್ರಗಳನ್ನು ಮೃತ ಜಿರಳೆಗಳ ದೇಹದ ಮೇಲೆ ರಚನೆ ಮಾಡಿರುವ ಬ್ರೆಂಡಾ ಡೆಲ್ಗಾಡೊ ಅವುಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾವಿರಾರು ಜನರು ಇದನ್ನು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.
ಮನೆಯಲ್ಲಿ ಕೆಲಸ ಮಾಡುವ ವೇಳೆ ಸತ್ತ ಜಿರಳೆಗಳನ್ನು ಹೊರಹಾಕುತ್ತಿದ್ದಾಗ, ಜಿರಳೆಯ ಹೊಳೆಯುವ ನಯವಾದ ರೆಕ್ಕೆಗಳು ಆಕೆಯ ಗಮನ ಸೆಳೆದವು. ರೆಕ್ಕೆಗಳನ್ನು ಹತ್ತಿರದಿಂದ ನೋಡಿದಾಗ, ಅದರ ನಯವಾದ ಮೇಲ್ಮೈಯನ್ನು ಕ್ಯಾನ್ವಾಸ್ನಂತೆ ಬಳಸಬಹುದೇ ಎಂಬ ಆಲೋಚನೆಯೊಂದು ಆಕೆಯ ತಲೆಯಲ್ಲಿ ಆಕಸ್ಮತ್ತಾಗಿ ಹುಟ್ಟಿಕೊಂಡಿತು.
ತಕ್ಷಣವೇ ಮರು ಯೋಚಿಸದೆ ಬ್ರೆಂಡಾ ಡೆಲ್ಗಾಡೊ ಜಿರಳೆಗಳ ಸತ್ತಾ ದೇಹದ ಮೇಲೆ ತನ್ನ ಕುಂಚಗಳನ್ನು ಬಳಸಿ ವಿವಿಧ ಚಿತ್ರಗಳನ್ನು ಬಿಡಿಸಿದ್ದಾರೆ. ಬರೋಬ್ಬರಿ ಒಂಬತ್ತು ಜಿರಳೆಗಳ ಮೇಲೆ ವಿಭಿನ್ನ ಚಿತ್ರಗಳನ್ನು ಬಿಡಿಸಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬ್ರೆಂಡಾ ಡೆಲ್ಗಾಡೊ ಫೋಟೋ ಹಂಚಿಕೊಂಡಿದ್ದಾರೆ.
ಪ್ರಸಿದ್ಧವಾದ 'ಸ್ಟೇರಿ ನೈಟ್' ಅನ್ನು ಈ ಹಿಂದೆ ಅದೆಷ್ಟೋ ಕಲಾವಿದರು ಮರುಸೃಷ್ಟಿಸಿದ್ದಾರೆ. ಆದರೂ ಜಿರಳೆಗಳ ಮೇಲೆ ಈ ವಿಶಿಷ್ಟ ಕಲಾ ಪ್ರಕಾರವನ್ನು ಚಿತ್ರಿಸಲು ಯಾರೂ ಇದುವರೆಗೆ ಆಯ್ಕೆ ಮಾಡಿ ಕೊಂಡಿರಲಿಲ್ಲ .
ಡೆಲ್ಗಾಡೊ ಪ್ರಸ್ತುತಪಡಿಸಿದ ವರ್ಣಚಿತ್ರಗಳು ಮೊನಾಲಿಸಾದಿಂದ ಹಿಡಿದು ವಿನ್ಸೆಂಟ್ ವ್ಯಾನ್ ಗಾಗ್ ಅವರ ಸ್ಟೇರಿ ನೈಟ್ ವರೆಗೆ ವರ್ಣಚಿತ್ರಗಳ ವೈವಿಧ್ಯಮಯ ಆಯ್ಕೆಗಳಿಂದ ಕೂಡಿದ್ದವು . ಕಲೆಯ ರೂಪದಲ್ಲಿ, ತೈಲವರ್ಣಗಳ ಅದ್ಭುತ ಸಂಯೋಜನೆಯಿಂದ ಸತ್ತ ಜಿರಳೆಗಳು ಮರುಜನ್ಮ ಪಡೆದಂತಿದ್ದವು.
ಇದನ್ನೂ ಓದಿ: ಅಮ್ಮನ ಅಡುಗೆ ಮನೆ ಕಷ್ಟ ನೋಡಿ ಅತಿಥಿಗಳಿಗೆ ಮನೆ ದಾರಿ ತೋರಿಸಿದ ಪೋರ..!
ಜಿರಳೆಗಳ ಮೇಲೆ ಚಿತ್ರ ಬಿಡಿಸಿದಕ್ಕೆ ಅಸಮಾಧಾನ
ಬ್ರೆಂಡಾ ಡೆಲ್ಗಾಡೊ ಜಿರಳೆಗಳ ಮೇಲೆ ಚಿತ್ರ ಬಿಡಿಸುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. , 'ಇದು ಕ್ರೂರವಾಗಿದೆ ' ನಾನು ಆಸ್ಪತ್ರೆಯ ಹಾಸಿಗೆಯಲ್ಲಿ ಕೊನೆಯುಸಿರೆಳೆಯುತ್ತಿರುವಾಗ , ಯಾರಾದರೂ ಬಂದು ನನ್ನ ದೇಹದ ಅರ್ಧಭಾಗ ಚಿತ್ರಿಸುವುದನ್ನು ನಾನು ಪ್ರಶಂಸಿಸಲಾರೆ. ಜಿರಳೆ ಮೊದಲೇ ಸತ್ತಿದ್ದರೆ ಪರವಾಗಿಲ್ಲ, ಆದರೆ ಇದು ಅಮಾನವೀಯತೆ ಮತ್ತು ಕ್ರೂರತನದ ಪ್ರತೀಕವಾಗಿದೆ.
ಇದು ಕೇವಲ ಕಲಾವಿದೆಯಲ್ಲಿ ಅಡಕವಾಗಿರುವ ಸಹಾನುಭೂತಿಯ ಕೊರತೆಯನ್ನು ಬಿಂಬಿಸುತ್ತದೆ..' ಎಂದು ಪ್ರತಿಕ್ರಿಯಿಸಿದ್ದಾರೆ.. ಇನ್ನೂ ಕೆಲವರು ಮಾತ್ರ ಕಲಾಕೃತಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ