• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Changes From September 1: ಸಿಲಿಂಡರ್ ಬೆಲೆಯಿಂದ PF ರೂಲ್ಸ್​​​ವರೆಗೆ ಸೆ.1ರಿಂದ ಏನೆಲ್ಲಾ ಬದಲಾಗುತ್ತಿದೆ ಗೊತ್ತಾ?

Changes From September 1: ಸಿಲಿಂಡರ್ ಬೆಲೆಯಿಂದ PF ರೂಲ್ಸ್​​​ವರೆಗೆ ಸೆ.1ರಿಂದ ಏನೆಲ್ಲಾ ಬದಲಾಗುತ್ತಿದೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Changes are Affect the Lives of People: ಈ ಬದಲಾವಣೆಗಳು ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದು ಖಚಿತ. ಆದ್ದರಿಂದ ಸೆಪ್ಟೆಂಬರ್ ನಿಂದ ಬದಲಾಗುವ ಎಲ್ಲಾ ನಿಯಮಗಳ ಬಗ್ಗೆ ನಾವು ಇಲ್ಲಿ ವಿವರವಾಗಿ ಹೇಳಿದ್ದೇವೆ ನೋಡಿ..

  • Share this:

ಆಗಸ್ಟ್ ತಿಂಗಳು ಮುಗಿಯರು ಇನ್ನೇನು ಮೂರು ದಿನಗಳು ಬಾಕಿ ಇವೆ. ತಿಂಗಳು ಬದಲಾಗುತ್ತಿದ್ದಂತೆ ಸೆಪ್ಟೆಂಬರ್ 1 ರಿಂದ ಕೆಲವು ನಿಯಮಗಳಲ್ಲಿ ಬದಲಾವಣೆಗಳು ಆಗಲಿವೆ. ಆಧಾರ್-ಪ್ಯಾನ್ ಲಿಂಕ್ ಮಾಡುವುದು, ಎಲ್​​ಪಿಜಿ ಅಡುಗೆ ಅನಿಲದ (LPG Cooking Gas) ಬೆಲೆಯಲ್ಲಿ ಬದಲಾವಣೆ ಸೇರಿದಂತೆ ಬದಲಾಗುತ್ತಿರುವ ಹಲವು ನಿಯಮಗಳ ನಿಮ್ಮ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ್ದವುಗಳಾಗಿವೆ. ಈ ಬದಲಾವಣೆಗಳು ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದು ಖಚಿತ. ಆದ್ದರಿಂದ ಸೆಪ್ಟೆಂಬರ್‌ನಿಂದ ಬದಲಾಗುವ ಎಲ್ಲಾ ನಿಯಮಗಳ ಬಗ್ಗೆ ನಾವು ಇಲ್ಲಿ ವಿವರವಾಗಿ ಹೇಳಿದ್ದೇವೆ ನೋಡಿ..


ಅಡುಗೆ ಗ್ಯಾಸ್​​​​ ಸಿಲಿಂಡರ್​​ ಬೆಲೆಯಲ್ಲಿ ಬದಲಾವಣೆ (LPG Cooking Gas Prices)


ಸೆಪ್ಟೆಂಬರ್‌ನಲ್ಲಿ ಎಲ್‌ಪಿಜಿ ಅಡುಗೆ ಅನಿಲದ ಬೆಲೆ ಏರಿಕೆಯಾಗಬಹುದು. ಈ ಮೊದಲು ಆಗಸ್ಟ್ 18 ರಂದು ಪ್ರತಿ ಸಿಲಿಂಡರ್‌ಗೆ 25 ರೂ. ಹಾಗೂ ಜುಲೈನಿಂದ ಪ್ರತಿ ತಿಂಗಳು ಬೆಲೆಗಳು ಬದಲಾಗುತ್ತಿರುವುದರಿಂದ, ಸೆಪ್ಟೆಂಬರ್ 2021 ರಲ್ಲಿ ಅವು ಮತ್ತೆ ಏರಿಕೆಯಾಗುವ ನಿರೀಕ್ಷೆಯಿದೆ. ಎಷ್ಟು ಬೆಲೆ ಏರಿಕೆ ಆಗಲಿದೆ ಎಂಬುದು ಅಧಿಕೃತ ಪ್ರಕಟಣೆಯಿಂದ ತಿಳಿಯಲಿದೆ.


ಪಿಎಫ್​​ ಖಾತೆಗೆ ಆಧಾರ್​ ನಂಬರ್​ ಲಿಂಕ್​​ (Aadhaar-PF linking)


ಸೆಪ್ಟೆಂಬರ್‌ನಿಂದ ನಿಮ್ಮ ಯುಎಎನ್ (ಯುನಿವರ್ಸಲ್ ಅಕೌಂಟ್ ಸಂಖ್ಯೆ) ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ಸೇರಿಸದಿದ್ದರೆ ನಿಮ್ಮ ಭವಿಷ್ಯ ನಿಧಿ (ಪಿಎಫ್) ಖಾತೆಗೆ ಯಾವುದೇ ಹಣ ಕ್ರೆಡಿಟ್ ಮಾಡಲು ಸಾಧ್ಯವಾಗುವುದಿಲ್ಲ. ಈ ಹೊಸ ನಿಯಮವನ್ನು ಜಾರಿಗೆ ತರಲು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಇತ್ತೀಚೆಗೆ ಸಾಮಾಜಿಕ ಭದ್ರತೆ ಕೋಡ್ನ ಸೆಕ್ಷನ್ 142 ಅನ್ನು ಪರಿಷ್ಕರಿಸಿದೆ. ನಿಮ್ಮ ನಿವೃತ್ತಿ ನಿಧಿಯ ಲಾಭವನ್ನು ಪಡೆಯಬೇಕಾದರೆ  ನಿಮ್ಮ PF ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ.


ಪ್ಯಾನ್-ಆಧಾರ್ ಲಿಂಕ್ (PAN-Aadhaar linking)


SBI ತನ್ನ ಗ್ರಾಹಕರಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಎಲ್ಲಾ ಖಾತೆದಾರರಿಗೆ ತಮ್ಮ ಪ್ಯಾನ್ ಕಾರ್ಡ್‌ಗಳನ್ನು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಸೆಪ್ಟೆಂಬರ್ 30 ರೊಳಗೆ ಲಿಂಕ್ ಮಾಡುವಂತೆ ಸೂಚಿಸಿದೆ. ಮುಂದಿನ ತಿಂಗಳ ಅಂತ್ಯದೊಳಗೆ ಗಡುವು ಪೂರೈಸದಿದ್ದರೆ, ಈಗ ನೀವು ಹೊಂದಿರುವ ಎಲ್ಲಾ ಸೌಲಭ್ಯಗಳು ನಿಷ್ಕ್ರಿಯಗೊಳ್ಳುತ್ತವೆ.


ಇದನ್ನೂ ಓದಿ: Post Office Scheme: ಈ ಯೋಜನೆಯಲ್ಲಿ ಕೇವಲ 1,411 ರೂ. ಹೂಡಿಕೆ ಮಾಡಿ ₹35 ಲಕ್ಷದವರೆಗೆ ಗಳಿಸಬಹುದು


ಜಿಎಸ್‌ಟಿಆರ್ -1 ಫೈಲಿಂಗ್ ಮಾರ್ಗಸೂಚಿಗಳು (GSTR-1 Filing Guidelines)


ಸರಕು ಮತ್ತು ಸೇವಾ ತೆರಿಗೆ ನೆಟ್‌ವರ್ಕ್ (ಜಿಎಸ್‌ಟಿಎನ್) ಸೆಪ್ಟೆಂಬರ್‌ನಿಂದ ಆರಂಭಗೊಂಡು, ಜಿಎಸ್‌ಟಿಆರ್ -1 ಸಲ್ಲಿಸಲು ಕೇಂದ್ರ ಜಿಎಸ್‌ಟಿ ನಿಯಮಗಳ ನಿಯಮ -59 (6) ಜಾರಿಗೆ ಬರಲಿದೆ ಎಂದು ಹೇಳಿದೆ. ನಮೂನೆ GSTR-3B ಯಲ್ಲಿ ರಿಟರ್ನ್ಸ್ ಸಲ್ಲಿಸದ ಯಾವುದೇ ನೋಂದಾಯಿತ ವ್ಯಕ್ತಿಗೆ GSTR-1 ಫಾರ್ಮ್ ಅನ್ನು ಸಲ್ಲಿಸಲು ಅನುಮತಿಸಲಾಗುವುದಿಲ್ಲ.


ಚೆಕ್​​​ ಪರಿಶೀಲಿಸಿ  (Cheque Clearance)


ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಹೊಸ ಮಾರ್ಗಸೂಚಿಗಳ ಪ್ರಕಾರ ಯಾರಾದರೂ 50,000 ಮತ್ತು ಅದಕ್ಕಿಂತ ಹೆಚ್ಚಿನ ಅಥವಾ 5 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಚೆಕ್ ಅನ್ನು ನೀಡುತ್ತಿದ್ದರೆ ಅವರು ಬ್ಯಾಂಕ್‌ಗೆ ಮುಂಚಿತವಾಗಿ ತಿಳಿಸಬೇಕು. ಇಲ್ಲದಿದ್ದರೆ ಚೆಕ್ ಬೌನ್ಸ್ ಆಗುತ್ತದೆ. ಈ ನಿಯಮವನ್ನು ಆರ್‌ಬಿಐನ ಧನಾತ್ಮಕ ವೇತನ ವ್ಯವಸ್ಥೆಯ ಅಡಿಯಲ್ಲಿ ಪರಿಚಯಿಸಲಾಗಿದ್ದು ಜನವರಿ 1, 2021 ರಿಂದ ಜಾರಿಗೆ ಬಂದಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: