Petrol Price: 59ನೇ ದಿನಕ್ಕೆ ಕಾಲಿಟ್ಟ ಲಾಕ್​ಡೌನ್; ಪೆಟ್ರೋಲ್, ಡೀಸೆಲ್​ ದರ ಏರಿಳಿತ ಕಂಡಿದ್ದೆಷ್ಟು?

Petrol Price on 22 May 2020: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಆಗುತ್ತಲೇ ಇದೆ. ಅಮೆರಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೈಲ ಬೆಲೆ ಪಾತಾಳಕ್ಕೆ ಕುಸಿದಿದೆ. ಆದಾಗ್ಯೂ ಕೇಂದ್ರ ಸರ್ಕಾರ ಈ ಲಾಭವನ್ನು ಜನರಿಗೆ ವರ್ಗಾಣೆ ಮಾಡುತ್ತಿಲ್ಲ.

news18-kannada
Updated:May 22, 2020, 12:34 PM IST
Petrol Price: 59ನೇ ದಿನಕ್ಕೆ ಕಾಲಿಟ್ಟ ಲಾಕ್​ಡೌನ್; ಪೆಟ್ರೋಲ್, ಡೀಸೆಲ್​ ದರ ಏರಿಳಿತ ಕಂಡಿದ್ದೆಷ್ಟು?
ಪೆಟ್ರೋಲ್​​ ಬಂಕ್​​​
  • Share this:
ಬೆಂಗಳೂರು (ಮೇ 22): ಲಾಕ್‌ಡೌನ್ ನಡುವೆಯೇ ಕಚ್ಚಾತೈಲಗಳ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹಿಂದೆಂದೂ ಕಾಣದ ಮಟ್ಟಿಗೆ ಏರಿಸಿತ್ತು. ಪೆಟ್ರೋಲ್‌ಗೆ ಲೀಟರ್‌ ಒಂದಕ್ಕೆ 10 ರೂ ಹಾಗೂ ಡೀಸೆಲ್‌ಗೆ ಲೀಟರ್ ಒಂದಲ್ಕೆ 13 ರೂ ನಷ್ಟು ಅಬಕಾರಿ ಸುಂಕವನ್ನು ಏರಿಕೆ ಮಾಡುವ ನಿಯಮ ಜಾರಿಗೆ ತಂದಿತ್ತು ಕೇಂದ್ರ ಸರ್ಕಾರ. ಆದರೆ, ಇದರ ಪರಿಣಾಮ ಗ್ರಾಹಕರ ಮೇಲೆ ಉಂಟಾಗಿಲ್ಲ. ಇನ್ನು, ಕಳೆದ ಎರಡು ತಿಂಗಳಿಂದ ಪೆಟ್ರೋಲ್​ ದರದಲ್ಲಿ ಯಾವುದೇ ಏರಿಳಿತ ಕಂಡಿಲ್ಲ. 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಆಗುತ್ತಲೇ ಇದೆ. ಅಮೆರಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೈಲ ಬೆಲೆ ಪಾತಾಳಕ್ಕೆ ಕುಸಿದಿದೆ. ಆದಾಗ್ಯೂ ಕೇಂದ್ರ ಸರ್ಕಾರ ಈ ಲಾಭವನ್ನು ಜನರಿಗೆ ವರ್ಗಾಣೆ ಮಾಡುತ್ತಿಲ್ಲ. ಪರಿಣಾಮ ಪೆಟ್ರೋಲ್​ ದರದಲ್ಲಿ ಏರಿಕೆ ಕಂಡಿಲ್ಲ.

ಕಳೆದು ಎರಡು ತಿಂಗಳಿಂದ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಯಾವುದೇ ಏರಿಳಿತ ಕಂಡಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ಗೆ 73.55 ರೂಪಾಯಿ ಇದೆ. ಇನ್ನು ಡೀಸೆಲ್​ ದರ 65.96 ರೂಪಾಯಿ ಇದೆ.

ಇದನ್ನೂ ಓದಿ: ಪೆಟ್ರೋಲ್​-ಡೀಸೆಲ್​ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶ ಭಾರತ!; ಯಾವ ರಾಷ್ಟ್ರಗಳಲ್ಲಿ ಎಷ್ಟೆಷ್ಟು?

ರಾಜ್ಯ ಸರ್ಕಾರ ಬಜೆಟ್​ನಲ್ಲಿ ಪೆಟ್ರೋಲ್​-ಡೀಸೆಲ್​ ಮೇಲಿನ ಸುಂಕ ಹೆಚ್ಚಿಸಿತ್ತು. ಹೀಗಾಗಿ, ಏಪ್ರಿಲ್​ 1ರಂದು ಪೆಟ್ರೋಲ್​ ದರ ಒಂದುವರೆ ರೂಪಾಯಿ ಏರಿಕೆ ಕಂಡಿತ್ತು. ಉಳಿದಂತೆ ದರದಲ್ಲಿ ಮತ್ತಾವುದೇ ಬದಲಾವಣೆ ಕಂಡಿಲ್ಲ. ಲಾಕ್​ಡೌನ್​ ಪೂರ್ಣಗೊಂಡ ನಂತರ ಪೆಟ್ರೋಲ್​ದರ ಏರಿಕೆ ಕಾಣಲಿದೆಯೇ ಅಥವಾ ಇಳಿಕೆ ಕಾಣಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

 
First published:May 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading