HOME » NEWS » Trend » PETROL PRICE TODAY PETROL RATE RISES IN INDIA ON MAY 14 DIESEL PRICE IN BENGALURU FUEL PRICE TODAY DBDEL SCT

Petrol Price Today: ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ; ಭೂಪಾಲ್​ನಲ್ಲಿ 100 ರೂ. ದಾಟಿದ ಪೆಟ್ರೋಲ್ ದರ

Fuel Price Today: ಇಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 22 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 37 ಪೈಸೆ ಏರಿಕೆ ಮಾಡಿದೆ.  ಭೂಪಾಲ್​ನಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ. ಬೆಂಗಳೂರಿನಲ್ಲೂ 95 ರೂ. ದಾಟಿದೆ. 

news18-kannada
Updated:May 14, 2021, 8:25 AM IST
Petrol Price Today: ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ; ಭೂಪಾಲ್​ನಲ್ಲಿ 100 ರೂ. ದಾಟಿದ ಪೆಟ್ರೋಲ್ ದರ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ, ಮೇ 14: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರ ಕೊರೊನಾ ಮೊದಲ ಅಲೆ ಇದ್ದಾಗಲೂ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿತ್ತು. ಈಗ ಕೊರೊನಾ ಎರಡನೇ ಅಲೆ ತಾರಕ್ಕೇರಿರುವ ಸಂದರ್ಭದಲ್ಲೂ ಮೇ 4ರಿಂದ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಮೇ 14ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 22 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 37 ಪೈಸೆ ಏರಿಕೆ ಮಾಡಿದೆ.  ಭೂಪಾಲ್​ನಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ. ಬೆಂಗಳೂರಿನಲ್ಲೂ 95 ರೂ. ದಾಟಿದೆ. 

ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ:

ಬೆಂಗಳೂರು- ಪೆಟ್ರೋಲ್ 95.41 ರೂ., ಡೀಸೆಲ್ 87.94 ರೂ.
ಭೂಪಾಲ್- ಪೆಟ್ರೋಲ್ 100.38 ರೂ., ಡೀಸೆಲ್ 91.31 ರೂ.
ಮುಂಬೈ- ಪೆಟ್ರೋಲ್ 98.82 ರೂ., ಡೀಸೆಲ್ 90.19 ರೂ.
ಜೈಪುರ - ಪೆಟ್ರೋಲ್ 98.77 ರೂ., ಡೀಸೆಲ್ 91.57 ರೂ.
ಪಾಟ್ನಾ- ಪೆಟ್ರೋಲ್ 94.56 ರೂ., ಡೀಸೆಲ್ 88.18 ರೂ.ಚೆನ್ನೈ- ಪೆಟ್ರೋಲ್ 94.09 ರೂ., ಡೀಸೆಲ್ 87.81 ರೂ.
ಕೋಲ್ಕತ್ತಾ- ಪೆಟ್ರೋಲ್ 92.44 ರೂ., ಡೀಸೆಲ್ 85.79 ರೂ.
ದೆಹಲಿ- ಪೆಟ್ರೋಲ್ 92.34 ರೂ., ಡೀಸೆಲ್ 82.95 ರೂ.
ಲಕ್ನೋ- ಪೆಟ್ರೋಲ್ 90.18 ರೂ., ಡೀಸೆಲ್ 83.33 ರೂ.
ರಾಂಚಿ- ಪೆಟ್ರೋಲ್ 89.39 ರೂ., ಡೀಸೆಲ್ 87.62 ರೂ.

ಮೇ ತಿಂಗಳಲ್ಲಿ ಒಟ್ಟು ಎಂಟು ಭಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಪ್ರತಿ ಪೆಟ್ರೋಲ್ ಮೇಲೆ 1.94 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 2.22 ರೂಪಾಯಿ ಹೆಚ್ಚಳ ಮಾಡಲಾಗಿದೆ. ಮೇ 5ರಂದು ಪ್ರತಿ ಪೆಟ್ರೋಲ್ ಮೇಲೆ 13 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 21 ಪೈಸೆ, ಮೇ 6ರಂದು ಪ್ರತಿ ಪೆಟ್ರೋಲ್ ಮೇಲೆ 18 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 31 ಪೈಸೆ ಹಾಗೂ ಮೇ 7ರಂದು ಪ್ರತಿ ಪೆಟ್ರೋಲ್ ಮೇಲೆ 25 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 33 ಪೈಸೆ ಬೆಲೆ ಹೆಚ್ಚಿಸಿತ್ತು.
Youtube Video

ಎರಡು ದಿನ ಮಾತ್ರ ವಿರಮಿಸಿದ್ದ ಕೇಂದ್ರ ಸರ್ಕಾರ ಬಳಿಕ ಮೇ 10ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 23 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 35 ಪೈಸೆ, ಮೇ 11ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 24 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 32 ಪೈಸೆ, ಮೇ 12ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 20 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 27 ಪೈಸೆ ಏರಿಕೆ ಮಾಡಿತ್ತು. ಈಗ ಮೇ 14ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 22 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 37 ಪೈಸೆ ಹೆಚ್ಚಳ ಮಾಡಿದೆ.
Published by: Sushma Chakre
First published: May 14, 2021, 8:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories