HOME » NEWS » Trend » PETROL PRICE PETROL PRICE RISES IN BANGALORE TODAY DIESEL PRICE IN INDIA FUEL PRICE TODAY SCT

Petrol Price: ಭಾರತದ ಕೆಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಇಳಿಕೆ; ಇಂದಿನ ಡೀಸೆಲ್ ಬೆಲೆ ಎಷ್ಟು?

ಬೆಂಗಳೂರು, ದೆಹಲಿ, ಜೈಪುರ, ಚೆನ್ನೈ, ಕೊಲ್ಕತ್ತಾ, ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೆಷ್ಟು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

news18-kannada
Updated:May 2, 2021, 11:09 AM IST
Petrol Price: ಭಾರತದ ಕೆಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಇಳಿಕೆ; ಇಂದಿನ ಡೀಸೆಲ್ ಬೆಲೆ ಎಷ್ಟು?
ಸಾಂದರ್ಭಿಕ ಚಿತ್ರ
  • Share this:
Fuel Price Today: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿದಿನ ಏರಿಳಿತಗಳು ಉಂಟಾಗುತ್ತಲೇ ಇರುತ್ತವೆ. ಆದರೆ, ಕಳೆದ 1 ತಿಂಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಳಿತಗಳನ್ನು ಬಿಟ್ಟರೆ ಹೆಚ್ಚಿನ ಬದಲಾವಣೆಯಾಗಿಲ್ಲ. ಬೆಂಗಳೂರು, ದೆಹಲಿ, ಜೈಪುರ, ಚೆನ್ನೈ, ಕೊಲ್ಕತ್ತಾ, ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೆಷ್ಟು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90.40 ರೂ. ಇದೆ. ಮುಂಬೈನಲ್ಲಿ 96.83 ರೂ, ಜೈಪುರದಲ್ಲಿ 96.82 ರೂ, ಬೆಂಗಳೂರಿನಲ್ಲಿ 93.43 ರೂ, ಹೈದರಾಬಾದ್​ನಲ್ಲಿ 93.99 ರೂ, ತಿರುವನಂತಪುರದಲ್ಲಿ 92.41 ರೂ, ಚೆನ್ನೈನಲ್ಲಿ 92.51 ರೂ, ಕೊಲ್ಕತ್ತಾದಲ್ಲಿ 90.62 ರೂ. ಇದೆ.

ಭಾರತದ ಕೆಲವು ನಗರಗಳಲ್ಲಿ ಡೀಸೆಲ್ ಬೆಲೆ ಕೊಂಚ ಏರಿಕೆಯಾಗಿದೆ. ಬೆಂಗಳೂರು, ಮುಂಬೈ, ಹೈದರಾಬಾದ್, ಭುವನೇಶ್ವರ, ತಿರುವನಂತಪುರ, ಪಾಟ್ನಾದಲ್ಲಿ 1 ಲೀಟರ್ ಡೀಸೆಲ್ ಬೆಲೆ 87 ರೂ. ಆಗಿದೆ. ವಿವಿಧ ನಗರಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ. ನವದೆಹಲಿಯಲ್ಲಿ ಇಂದು 1 ಲೀಟರ್ ಡೀಸೆಲ್​ಗೆ 80.73 ರೂ. ಇದೆ. ಚೆನ್ನೈನಲ್ಲಿ 85.83 ರೂ, ಮುಂಬೈನಲ್ಲಿ 87.81 ರೂ, ಬೆಂಗಳೂರಿನಲ್ಲಿ 85.60 ರೂ, ಹೈದರಾಬಾದ್​ನಲ್ಲಿ 88.05 ರೂ. ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ.
Published by: Sushma Chakre
First published: May 2, 2021, 11:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories