ಸಾಕು ಪ್ರಾಣಿಗಳನ್ನು ಕರೆದೊಯ್ಯಲು ಖಾಸಗಿ ಜೆಟ್ ಬಾಡಿಗೆಗೆ ಪಡೆದ Hong Kongನ ವ್ಯಕ್ತಿ

Hong Kong: ಒಂದೊಮ್ಮೆ ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ಗೇಟ್ ವೇ ದ್ವಾರದಂತಿತ್ತು. ಸದಾ ವಿದೇಶಿ ಪ್ರಯಾಣಿಕರಿಂದ, ಟ್ರಾನ್ಸಿಟ್ ಪ್ರಯಾಣಿಕರಿಂದ ಹಾಂಗ್ ಕಾಂಗ್ ಗಿಜಿಗುಡುತ್ತಿತ್ತು. ಆದರೆ ಚೀನಾದ ಜೀರೋ ಕೋವಿಡ್ ಪಾಲಿಸಿಗೆ ಬದ್ಧವಾದಾಗಿನಿಂದ ಇಲ್ಲಿನ ಹುರುಪು ಮಾಯವಾದಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನ ಜಗತ್ತಿನಲ್ಲಿ ಹಲವಾರು ಕಷ್ಟಗಳಿರುವುದನ್ನ ಕಾಣಬಹುದು. ಎಷ್ಟೋ ಜನರಿಗೆ ಒಂದು ಹೊತ್ತಿನ ಊಟ (Food) ದಕ್ಕಿಸಿಕೊಳ್ಳುವುದೂ ಕಷ್ಟಕರವಾಗಿದ್ದರೆ ಕೆಲ ಪ್ರಾಣಿಗಳು (Animals) ಯಾವ ಕೆಲಸ ಕಾರ್ಯಗಳಿಲ್ಲದೆ ಸುಖ-ಭೋಗಗಳ ಜೀವನ ನಡೆಸುತ್ತವೆ. ಹೌದು, ಸಾಮಾನ್ಯವಾಗಿ ಪಾಶ್ಚಿಮಾತ್ಯ ದೇಶಗಳ (western Countries) ಜನರು ಸಾಕು ಪ್ರಾಣಿಗಳಿಗೆ ಸಾಕಷ್ಟು ಮಹತ್ವ ನೀಡುತ್ತಾರೆ. ಅದರಲ್ಲೂ ಹಲವಾರು ಶ್ರೀಮಂತರು ತಮ್ಮ ನೆಚ್ಚಿನ ಬೆಕ್ಕು (cat) ಅಥವಾ ನಾಯಿಗಳಿಗೆ (Dog) ಎಲ್ಲ ಸವಲತ್ತುಗಳು ಸಿಗಲೆಂದು ಲಕ್ಷಾಂತರ ರೂಪಾಯಿ ವ್ಯಯಿಸುವುದು ಸಾಮಾನ್ಯ.

ಈಗ ಬಂದಿರುವ ಸುದ್ದಿಯ ಪ್ರಕಾರ, ಹಾಂಗ್‌ ಕಾಂಗ್ ನಗರದಲ್ಲೊಬ್ಬ ತನ್ನ ಎರಡು ಸಾಕು ಬೆಕ್ಕುಗಳನ್ನು ತನ್ನೊಡನೆ ಕರೆದೊಯ್ಯಲು ಅನುಕೂಲವಾಗುವಂತೆ ಖಾಸಗಿಯಾಗಿ ಜೆಟ್ ವಿಮಾನುಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಇದರ ಪರಿಣಾಮವಾಗಿ ಆ ವ್ಯಕ್ತಿಯ ನೆಚ್ಚಿನ ಸಾಕು ಬೆಕ್ಕುಗಳಾದ ಟೆಡ್ಡಿ ಹಾಗೂ ನ್ಯೂಮನ್ ಈಗ ಖಾಸಗಿ ಜೆಟ್ ಪ್ಲೇನುಗಳಲ್ಲಿ ಹಾರಲು ಸಜ್ಜಾಗುತ್ತಿವೆ. ಕೋವಿಡ್ ನಿಯಮಗಳ ಕಟ್ಟುನಿಟ್ಟಾದ ನಿರ್ಬಂಧಗಳೇ ಈ ಒಟ್ಟಾರೆ ಪರಿಸ್ಥಿತಿ ಬರಲು ಕಾರಣವಾದಂತಾಗಿದೆ.

ನಿಮಗೆಲ್ಲ ಗೊತ್ತಿರುವಂತೆ ವಿಶ್ವದಲ್ಲಿ ಕೇವಲ ಕೆಲವೇ ದೇಶಗಳು ಇಂದಿಗೂ ಕೋವಿಡ್ ಪ್ರಸರಣಕ್ಕೆ ಸಂಬಂಧಿಸಿದಂತೆ 'ಕೋವಿಡ್ ಜೀರೋ ಪಾಲಿಸಿ'ಯನ್ನು ಅನುಸರಿಸುತ್ತಿದ್ದು ಅದರಲ್ಲಿ ಚೀನಾ ದೇಶವೂ ಸಹ ಒಂದಾಗಿದೆ. ಹಾಗಾಗಿ ಹಾಂಗ್‌ ಕಾಂಗ್ ನಗರವು ಒಂದೊಮ್ಮೆ ಏವಿಯೇಷನ್‌ಗೆ ಸಂಬಂಧಿಸಿದಂತೆ ಹಬ್ ಎಂದೇ ಕರೆಸಿಕೊಳ್ಳುತ್ತಿದ್ದ ಕಾಲದಿಂದ ಜರಿದಿದ್ದು ಈಗ ಇಲ್ಲಿ ಸಾಕಷ್ಟು ನಿರ್ಬಂಧಗಳನ್ನು ಹೇರಲಾಗಿದೆ. ಅದರಲ್ಲೂ ಪ್ರಯಾಣಿಕ ವಿಮಾನುಗಳ ಹಾರಾಟದಲ್ಲಿ ಬಲು ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಇಲ್ಲಿ ಅನುಷ್ಠಾನಗೊಳಿಸಲಾಗಿದೆ.

ಇದನ್ನೂ ಓದಿ: ಡಾಟಾ ರೀಚಾರ್ಜ್‌ ಬೆಲೆ ಹೆಚ್ಚಳ, ಭಾರತದಲ್ಲಿ ಕಮ್ಮಿಯಾಗ್ತಿದೆ Facebook ಬಳಕೆ

ಹಾಂಗ್ ಕಾಂಗ್ ನಗರದಿಂದ ಬ್ರಿಟನ್ ನಗರಕ್ಕೆ ವಲಸೆ ಹೋಗುತ್ತಿರುವ ಲೀ ಎಂಬ ವ್ಯಕ್ತಿಗೆ ಬಲು ಇಷ್ಟವಾದದ್ದು ಅವನ ಎರಡು ಸಾಕು ಬೆಕ್ಕುಗಳಾದ ಟೆಡ್ಡಿ ಹಾಗೂ ನ್ಯೂಮನ್. ಇವುಗಳನ್ನು ಬಿಟ್ಟು ಲೀ ಇರಲಾರ. ಹಾಗಾಗಿ ಅವುಗಳನ್ನು ತನ್ನೊಡನೆ ಕರೆದುಕೊಂಡಲು ಹೋಗಲು ಲೀ ಸಜ್ಜಾಗಿದ್ದ. ಆದರೆ, ಪ್ರಸ್ತುತ ಕೋವಿಡ್ ನಿಬಂಧನೆಗಳಿಗನುಸಾರ ಲೀಗೆ ತನ್ನ ಬೆಕ್ಕುಗಳನ್ನು ವಿಮಾನದಲ್ಲಿ ಕರೆದುಕೊಂಡು ಹೋಗಲು ಅನುಮತಿಯಿಲ್ಲ.

ಹಾಗಾಗಿ ಬೇರೆ ಮಾರ್ಗವಿಲ್ಲದೆ ಲೀ ಈಗ ಖಾಸಗಿಯಾಗಿ ಜೆಟ್ ವಿಮಾನವನ್ನು ಬಾಡಿಗೆಗೆ ಪಡೆದು ಅದರಲ್ಲಿ ತನ್ನ ಬೆಕ್ಕುಗಳನ್ನು ಕರೆದುಕೊಂಡು ಹೋಗುತ್ತಿರುವುದಾಗಿ ಸುದ್ದಿಯಾಗಿದೆ. ಲೀ ಮಾಧ್ಯಮವೊಂದಕ್ಕೆ ಹೀಗೆ ಹೇಳಿದ್ದಾರೆ, "ಇದೊಂದು ಅಸಾಮಾನ್ಯವಾದ ಸ್ಥಿತಿ. ಕೇವಲ ನಾನು ಮತ್ತು ನನ್ನ ಮಡದಿ ಪ್ರಯಾಣಿಸುತ್ತಿದ್ದರೆ ಖಂಡಿತವಾಗಿಯೂ ಇಷ್ಟೊಂದು ದುಬಾರಿಯಾದ ಜೆಟ್ ಪ್ಲೇನ್ ಪಡೆಯುತ್ತಿರಲಿಲ್ಲ. ನಮ್ಮ ಸಾಕು ಬೆಕ್ಕುಗಳು ನಮ್ಮೊಂದಿಗೆ ಬರುವಂತಾಗಲು ಮಾತ್ರವೇ ನಾವು ಖಾಸಗಿ ವಿಮಾನದಲ್ಲಿ ಪ್ರಯಾಣಿಸಬೇಕಾಗಿದೆ" ಎಂದಿದ್ದಾರೆ.

ಇದೀಗ ಸಾಕು ಪ್ರಾಣಿಗಳ ಮಾಲಿಕರು ಹೆಚ್ಚು ಹೆಚ್ಚು ಇಂತಹ ದುಬಾರಿ ಸೇವೆಗಾಗಿ ಮೊರೆ ಹೋಗಲು ಕಾಯುತ್ತಿರುವುದು ಕಂಡುಬರುತ್ತಿದೆ ಎನ್ನಲಾಗಿದೆ.

ಈಗಾಗಲೇ ಕಮರ್ಷಿಯಲ್ ಏರ್ಲೈನ್ಸ್ ಸಂಸ್ಥೆಗಳು ಪ್ರಸ್ತುತ ಕ್ಲಿಷ್ಟಕರ ಸಂದರ್ಭದ ನಿಮಿತ್ತ ತಮ್ಮ ವಿಮಾನಗಳಲ್ಲಿ ಅನುಮತಿಸಲಾಗುವ ಪ್ರಾಣಿಗಳ ಸಂಖ್ಯೆಗಳ ಮೇಲೆ ಮೊದಲೇ ಮಿತಿ ಹೇರಿದೆ. ಈಗ ಗಾಯದ ಮೇಲೆ ಬರೆ ಎಂಬಂತೆ ಫ್ಲೈಟುಗಳು ರದ್ದಾಗುತ್ತಿರುವುದು ಈಗಾಗಲೇ ಹೊರ ದೇಶಗಳಲ್ಲಿರುವ ಸಾಕು ಪ್ರಾಣಿಗಳು ಹಾಗೂ ಅವುಗಳ ಮಾಲಿಕರು ಸ್ವದೇಶಕ್ಕೆ ಮರಳಲು ಹರಸಾಹಸ ಪಡುತ್ತಿದ್ದಾರೆ. ಪ್ರಾಣಿಗಳ ಪ್ರಯಾಣಕ್ಕೆ ಸಂಬಂಧಿಸಿದ ಸಂಸ್ಥೆಯಾದ ಪೆಟ್ ಹಾಲಿಡೇಸ್ ಪ್ರಕಾರ, ಸದ್ಯ ಡಿಸೆಂಬರ್‌ನಲ್ಲಿ ಫ್ಲೈಟುಗಳು ರದ್ದಾದ ಕಾರಣ ಸುಮಾರು 3000-4000ಗಳಷ್ಟು ಬೆಕ್ಕು ಹಾಗೂ ನಾಯಿಗಳು ಜಗತ್ತಿನ ವಿವಿಧ ಭಾಗಗಳಲ್ಲಿ ಸಿಲುಕಿ ಹಾಕಿಕೊಂಡಿವೆ.

ಪೆಟ್ ಹಾಲಿಡೇಸ್ ಸಂಸ್ಥೆಯ ಸಲಹೆಗಾರರಾದ ಲಿಯಾಂಗ್ ಅವರು ಹೇಳುವಂತೆ ಯಾವುದೇ ಹಣದ ಮೊತ್ತವು ಸಾಕು ಪ್ರಾಣಿಗಳಿಗೆ ಕಮರ್ಷಿಯಲ್ ಫ್ಲೈಟ್‌ನಲ್ಲಿ ಆಸನ ದೊರಕಿಸಕೊಡದು. ಅವರ ಪ್ರಕಾರ, ಅವರ ಸಂಸ್ಥೆಯ ಪ್ರೈವೆಟ್ ಜೆಟ್ ಪ್ಯಾಕೇಜ್ ಪ್ರಯಾಣವು ಒಂದು ಬೆಕ್ಕು ಹಾಗೂ ಅದರ ಮಾಲಿಕನಿಗಾಗಿ 23,100 ಡಾಲರ್ ಮೊತ್ತದಲ್ಲಿ ಸೇವೆ ನೀಡಲಿದೆ. ಈ ಮೊತ್ತವು ಸಾಕು ಪ್ರಾಣಿಯ ಆಕಾರಕ್ಕೆ ತಕ್ಕಂತೆ ಹೆಚ್ಚಾಗಲಿದೆ ಎಂಬುದನ್ನು ಹೇಳಲು ಲಿಯಾಂಗ್ ಮರೆಯುವುದಿಲ್ಲ.

ಒಂದೊಮ್ಮೆ ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ಗೇಟ್ ವೇ ದ್ವಾರದಂತಿತ್ತು. ಸದಾ ವಿದೇಶಿ ಪ್ರಯಾಣಿಕರಿಂದ, ಟ್ರಾನ್ಸಿಟ್ ಪ್ರಯಾಣಿಕರಿಂದ ಹಾಂಗ್ ಕಾಂಗ್ ಗಿಜಿಗುಡುತ್ತಿತ್ತು. ಆದರೆ ಚೀನಾದ ಜೀರೋ ಕೋವಿಡ್ ಪಾಲಿಸಿಗೆ ಬದ್ಧವಾದಾಗಿನಿಂದ ಇಲ್ಲಿನ ಹುರುಪು ಮಾಯವಾದಂತಾಗಿದೆ.

ಇದನ್ನೂ ಓದಿ: ಇವು ಒಂದಲ್ಲಾ, ಎರಡಲ್ಲಾ 99 ಮಿಲಿಯನ್ ವರ್ಷಗಳ ಹಿಂದಿನ ಹೂವು! ವಿಶೇಷ ಪುಷ್ಪದ ಬಗ್ಗೆ ಮಾಹಿತಿ

ಹಲವಾರು ಕಟ್ಟುನಿಟ್ಟಿನ ನಿಬಂಧನೆಗಳು ಸ್ವಾತಂತ್ರ್ಯ ಕಿತ್ತುಕೊಂಡಂತಾಗಿದೆ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, 40%ಕ್ಕಿಂತ ಹೆಚ್ಚು ವಿದೇಶಿ ವಾಸಿಗಳು ಈ ನಗರವನ್ನು ಬಿಟ್ಟು ಹೋಗಲು ಸಜ್ಜಾಗಿದ್ದಾರೆ.
Published by:Sandhya M
First published: