ಸಾಕು ಪ್ರಾಣಿಗಳು ಎಂದರೆ ಕೆಲವು ಜನರಿಗೆ ತಮ್ಮ ಮನೆಯಲ್ಲಿರುವ ಮಕ್ಕಳಿಗಿಂತ ತುಂಬಾ ಪ್ರೀತಿ, ಅವುಗಳನ್ನು ತುಂಬಾ ಅಕ್ಕರೆಯಿಂದ ನೋಡಿಕೊಳ್ಳುತ್ತಿರುತ್ತಾರೆ. ಅವುಗಳಿಗೆ ಊಟ ಮಾಡಿಸುವುದು, ಆರೈಕೆ ಮಾಡುವುದು ಮತ್ತು ಸಾಕು ಪ್ರಾಣಿಯನ್ನು ತಮ್ಮ ಎರಡು ಕೈಗಳಲ್ಲಿ ಹಿಡಿದುಕೊಂಡು ಮುದ್ದಾಡುವುದನ್ನು ನೋಡಿರುತ್ತೇವೆ. ಅದರಲ್ಲಿಯೂ ಸಾಕು ಪ್ರಾಣಿ ನಾಯಿ ಆಗಿದ್ದರೆ ತುಂಬಾ ಮುದ್ದಾಗಿರುತ್ತವೆ ಮತ್ತು ಅವುಗಳು ಮನೆಯವರು ಮಾಡಿದಂತೆ ಅನುಕರಣೆ ಮಾಡುವುದಂತೂ ನೋಡಲು ತುಂಬಾ ಖುಷಿ ನೀಡುತ್ತದೆ. ಇತ್ತೀಚೆಗೆ ಸಾಕು ನಾಯಿಗಳು ಮಾಡುವಂತಹ ಚಿಕ್ಕ ಪುಟ್ಟ ಚೇಷ್ಟೆಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಅವುಗಳ ವಿಡಿಯೋ ಕ್ಲಿಪ್ಗಳು ವೈರಲ್ ಆಗುತ್ತಿವೆ. ಇಲ್ಲಿ ಅಂತಹದೇ ಒಂದು ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ವೈರಲ್ ಆಗಿದೆ.
ಈ 10 ಸೆಕೆಂಡುಗಳ ಮುದ್ದಾದ ವೀಡಿಯೋದಲ್ಲಿ ಇಬ್ಬರು ಹುಡುಗಿಯರು ತಮ್ಮ ದೈನಂದಿನ ವ್ಯಾಯಾಮವನ್ನು ಮನೆಯಲ್ಲಿ ಮಾಡುತ್ತಿದ್ದು, ಅವರು ಮನೆಯಲ್ಲಿ ಸಾಕಿದಂತಹ ಮುದ್ದಾದ ಪುಟ್ಟ ನಾಯಿಯೊಂದು ಅವರ ಎದುರಿಗೆ ನಿಂತು ವ್ಯಾಯಾಮ ಮಾಡುವುದನ್ನು ಸ್ವಲ್ಪ ಸಮಯದವರೆಗೆ ಹಾಗೆಯೇ ನೋಡುತ್ತಿತ್ತು.
ನಂತರ ಅವರು ಅದನ್ನು ನೋಡಿ ಸಾಕು ನಾಯಿಯನ್ನು ಅವರೊಟ್ಟಿಗೆ ಅವರು ಹೇಗೆ ಜಿಗಿಯುತ್ತಾರೆ, ಹಾಗೆಯೇ ಜಿಗಿಯಲು ಮತ್ತು ಕೆಳಗೆ ಮಲಗಿ ಮತ್ತೆ ಮೇಲಕ್ಕೆ ಜಿಗಿಯುವ ವ್ಯಾಯಾಮ ಮಾಡಲು ಹೇಳಿದ್ದಾರೆ, ಆಗ ನಾಯಿಯೂ ಹಾಗೆಯೇ ಅನುಕರಣೆ ಮಾಡಿದೆ.
ಈ ವೀಡಿಯೋ ತುಣುಕನ್ನು ಟ್ವಿಟ್ಟರ್ ಖಾತೆಯಲ್ಲಿನ ‘ಬ್ಯುಟೆಂಜೆಬೈಡನ್’ ಎನ್ನುವಂತಹ ಪುಟದಲ್ಲಿ ಹಂಚಿಕೊಂಡಿದ್ದು, ಇದುವರೆಗೆ ಈ ವೀಡಿಯೋವನ್ನು ತುಂಬಾ ಜನರು ವೀಕ್ಷಿಸಿ ವೈರಲ್ ಮಾಡಿದ್ದಾರೆ.
ಇಬ್ಬರು ಹುಡುಗಿಯರು ಕ್ರೀಡಾ ಉಡುಪುಗಳನ್ನು ಧರಿಸಿ ವೇಗವಾಗಿ ವ್ಯಾಯಾಮ ಮಾಡುತ್ತಾ ತಮ್ಮ ನಾಯಿಯನ್ನು ಅನುಕರಿಸುವಂತೆ ಪ್ರೋತ್ಸಾಹಿಸಿದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. "ಮೇಲಕ್ಕೆ ಹಾರಿ ಮತ್ತೆ ಕೆಳಗೆ ಮಲಗಿ ಮತ್ತೆ ಮೇಲಕ್ಕೆ ಹಾರಿ," ಎಂದು ತಮ್ಮ ನಾಯಿಗೆ ಹೇಳುತ್ತಾ ಅವರಂತೆ ಮಾಡಲು ಹುರಿದುಂಬಿಸಿದ್ದಾರೆ.
Workout buddies are the best.. 😁 pic.twitter.com/LGmdoiN723
— Buitengebieden (@buitengebieden_) August 17, 2021
ಈ ವಿಡಿಯೋದೊಂದಿಗೆ "ಜೊತೆಗೆ ವ್ಯಾಯಾಮ ಮಾಡುವ ಸ್ನೇಹಿತರು ಅತ್ಯುತ್ತಮರು" ಎಂದು ಶೀರ್ಷಿಕೆಯನ್ನು ಬರೆದಿರುವುದನ್ನು ನಾವು ನೋಡಬಹುದಾಗಿದೆ.
ಈ ಮುದ್ದಾದ ವೀಡಿಯೋ ತುಣುಕನ್ನು 90,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 8000 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಇದನ್ನು ತುಂಬಾ ಜನ ಮರು ಟ್ವೀಟ್ ಮಾಡಿರುವುದು ವಿಶೇಷವಾದ ಸಂಗತಿಯಾಗಿದೆ.
Workout buddies are the best.. 😁 pic.twitter.com/LGmdoiN723
— Buitengebieden (@buitengebieden_) August 17, 2021
ಈ ವೀಡಿಯೋ ನೋಡಿ "ಇದು ತುಂಬಾ ಚೆನ್ನಾಗಿದೆ" ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಇನ್ನೊಬ್ಬ ಬಳಕೆದಾರರು "ಇದು ನೋಡಲು ಅತ್ಯಂತ ಮುದ್ದಾಗಿದೆ" ಎಂದು ಬರೆದಿದ್ದಾರೆ.
ಇನ್ನೂ ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದು “ಓ ದೇವರೇ..ಎಂತಹ ಒಳ್ಳೆಯ ವಿಡಿಯೋ”, “ಇನ್ನೊಂದು ಸುಂದರವಾದ ವಿಡಿಯೋ”, ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋದಲ್ಲಿ ವ್ಯಾಯಾಮ ಮಾಡಿದ ಇಬ್ಬರು ಹುಡುಗಿಯರನ್ನು ಮರೆತು ಸಾಕು ನಾಯಿ ಮಾಡಿದಂತಹ ಅವರ ಅನುಕರಣೆಯನ್ನು ನೋಡಿ ನೆಟ್ಟಿಗರು ತುಂಬಾ ಖುಷಿ ಪಟ್ಟಿದ್ದಂತೂ ನಿಜ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ