• Home
  • »
  • News
  • »
  • trend
  • »
  • Pet Dogs: ಪುಟ್ಟ ಮಗುವಿಗೆ ಹೊಸ ಟ್ರಿಕ್ಸ್ ಹೇಳ್ಕೊಡ್ತಿದೆ ಈ ನಾಯಿ, ತುಂಟರಿಬ್ಬರ ತರಲೆ ನೋಡಿ

Pet Dogs: ಪುಟ್ಟ ಮಗುವಿಗೆ ಹೊಸ ಟ್ರಿಕ್ಸ್ ಹೇಳ್ಕೊಡ್ತಿದೆ ಈ ನಾಯಿ, ತುಂಟರಿಬ್ಬರ ತರಲೆ ನೋಡಿ

ಜರ್ಮನ್ ಶೆಫರ್ಡ್

ಜರ್ಮನ್ ಶೆಫರ್ಡ್

ನಾಯಿಯೊಂದು ಮಗುವಿಗೆ ಹೊಸ ಟ್ರಿಕ್ಸ್ ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇಬ್ಬರೂ ಸೇರಿದ್ರೆ ತರಲೆ ಜಾಸ್ತಿ ಆಗೋದ್ರಲ್ಲಿ ಡೌಟೇ ಇಲ್ಲ

  • Share this:

ಪ್ರಾಣಿ ಪಕ್ಷಿಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ಬೇಗನೆ ವೈರಲ್ (Viral) ಆಗಿ ಬಿಡುತ್ತವೆ. ಪೆಟ್ ಎನಿಮಲ್ಸ್ ಅಂತೂ ನೆಟ್ಟಿಗರ ಹಾಟ್ ಫೇವರೇಟ್. ನಾಯಿ, ಬೆಕ್ಕುಗಳ (Dog & Cat) ವಿಡಿಯೋ ಕಂಡರೆ ಮತ್ತೆ ಮತ್ತೆ ವಿಡಿಯೋ ವೀಕ್ಷಿಸಿ ಶೇರ್ ಮಾಡಿ ಲೈಕ್ ಮಾಡಿ ಕಮೆಂಟ್ ಮಾಡುತ್ತಾರೆ. ಇವುಗಳು ಸಾಮಾನ್ಯವಾಗಿ ಸಿಂಪಲ್ ಆಗಿದ್ದು ಮೈಂಡ್ ರಿಲ್ಯಾಕ್ಸ್ ಮಾಡುತ್ತವೆ. ಹಾಗಾಗಿ ಇವುಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಬೇಡಿಕೆ ಹೆಚ್ಚು. ಇಂಥದ್ದೇ ವಿಡಿಯೋ ಈಗ ಫೇಸ್​ಬುಕ್​ ರೀಲ್ಸ್ ವಿಭಾಗದಲ್ಲಿ ವೈರಲ್ (Viral) ಆಗಿದ್ದು ನಾಯಿಯೊಂದು ಪುಟ್ಟ ಮಗುವಿಗೆ ಟ್ರಿಕ್ಸ್ ಹೇಳಿಕೊಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸಾಮಾನ್ಯವಾಗಿ ಬೆಳೆಯುತ್ತಿರುವ ಮಕ್ಕಳಿರುವ ಮನೆಯಲ್ಲಿ ಕೋಣೆ, ಹಜಾರಗಳಿಗೆ ಒಂದು ಸಣ್ಣ ತಡೆ ನಿರ್ಮಿಸುವ ಪದ್ಧತಿ ಎಲ್ಲ ಕಡೆಯೂ ಇದೆ. ಈ ವಿಡಿಯೋದಲ್ಲಿಯೂ ಇಂಥದ್ದೇ ಒಂದು ತಡೆ ದಾಟಲು ನಾಯಿ (Dog) ಮಗುವಿಗೆ ಸಹಾಯ ಮಾಡಿದೆ.


ಮಕ್ಕಳ ಸುರಕ್ಷೆಗಾಗಿ ಪುಟ್ಟದ್ದೊಂದು ಗೇಟ್


ಸಾಮಾನ್ಯವಾಗಿ ಮಕ್ಕಳು ಅಪಾಯಕಾರಿ ಸ್ಥಳಗಳಿಗೆ ತಲುಪದಂತೆ ತಡೆಯಲು, ಹೊರಗೆ ಹೋಗದಂತೆ ನೋಡಿಕೊಳ್ಳಲು, ಅಥವಾ ಗ್ಯಾಸ್, ಸ್ಟೌವ್​ ನಂತಹ ವಸ್ತುಗಳಿರುವ ಸ್ಥಳಕ್ಕೆ ಮಗುವನ್ನು ಬಾರದಂತೆ ನೋಡಿಕೊಳ್ಳಲು ತಡೆ ಮಾಡಲಾಗುತ್ತದೆ. ಪುಟ್ಟದೊಂದು ಗೇಟ್ ಅಥವಾ ಟೇಬಲ್ ಅಡ್ಡ ಇಟ್ಟು ಮಗುವನ್ನು ಒಂದೇ ಕೋಣೆಯಲ್ಲಿಯೋ ನಿರ್ದಿಷ್ಟ ಪ್ರದೇಶದಲ್ಲಿಯೋ ಇರುವಂತೆ ನೋಡಿಕೊಳ್ಳಲಾಗುತ್ತದೆ. ಇಲ್ಲಿಯೂ ಹಾಗೆಯೇ ಮಾಡಲಾಗಿದೆ.


ಸಣ್ಣ ತಡೆಯನ್ನು ದಾಟಲು ಮಗುವಿನ ಪ್ರಯತ್ನ


ಹೌದು. ಸಾಮಾನ್ಯ 2 ವರ್ಷ ಇರಬಹುದಾದ ಪುಟ್ಟ ಮಗುವೊಂದು ಮುದ್ದಾದ ಕೆಂಪು ಸ್ವೆಟರ್ ಧರಿಸಿಕೊಂಡು ನಾಯಿಯೊಂದಿಗೆ ಆಡುತ್ತಿರುತ್ತದೆ. ಆದರೆ ತಾನಿದ್ದಲ್ಲಿಂದ ದಾಟಿ ಈ ಕಡೆಗೆ ಬರುವುದಕ್ಕೆ ಅದಕ್ಕೆ ಸಾಧ್ಯವಾಗುವುದಿಲ್ಲ.


ನಿರಾಸೆಗೊಂಡ ಮಗುವನ್ನು ನೋಡಿ ನಾಯಿ ಮಾಡಿದ್ದೇನು?


ಗಟ್ಟಿಯ ಅಂಟಿನ ಪ್ಲಾಸ್ಟಿಕ್ ಅಂಟಿಸಿ ತಡೆಗೋಡೆ ನಿರ್ಮಿಸಲಾಗಿರುತ್ತದೆ. ಬಾಗಿಲಿನ ದಾರಂದಕ್ಕೆ ಅಂಟಿನ ಪ್ಲಾಸ್ಟಿಕ್ ಅಂಟಿಸಿ ನಾಯಿ ಹಾಗೂ ಮಗು ಅದನ್ನು ದಾಟಿ ಬರದಂತೆ ಮಾಡಿರಲಾಗುತ್ತದೆ. ಪುಟ್ಟ ಮಗು ಒಂದು ಸಲ ಪ್ರಯತ್ನಿಸಿ ದಾಟಲಾಗದೆ ನಿರಾಸೆ ಮಾಡಿಕೊಳ್ಳುತ್ತದೆ. ಆದರೆ ಬುದ್ಧಿವಂತ ನಾಯಿ ಮಗುವಿಗೊಂದು ಟ್ರಿಕ್ಸ್ ಹೇಳಿಕೊಡುತ್ತದೆ.


ಇದನ್ನೂ ಓದಿ: Viral Video: ಅಮ್ಮ ಅಂದ್ರೆ ಹಂಗೇನೆ! ಎಲ್ಲಾದಕ್ಕೂ ಸೊಲ್ಯೂಷನ್! ತಾಯಿ-ಮಗುವಿನ ಹ್ಯಾಪಿ ರೈಡ್


ಸಾಮಾನ್ಯ ಅಂತರದಲ್ಲಿ ಅಂಟಿಸಲಾಗಿದ್ದ ಪ್ಲಾಸ್ಟಿಕ್ ಸ್ಟಿಕರ್​ ಮಧ್ಯೆ ಸಣ್ಣ ಗ್ಯಾಪ್ ಇರುತ್ತದೆ. ಇದನ್ನೇ ಬಳಸಿಕೊಳ್ಳುವ ನಾಯಿ ನೀಟಾಗಿ ನೆಲದ ಮೇಲೆ ಮಲಗುತ್ತದೆ. ನಂತರ ತನ್ನ ಕೈಗಳನ್ನು ಮುಂದಕ್ಕೆ ಚಾಚಿಕೊಂಡು ಹೊಟ್ಟೆಯನ್ನು ಎಳೆಯುತ್ತಾ ಕೋಣೆಯ ಈ ಕಡೆಗೆ ಬರುತ್ತದೆ. ಅದರ ನಡುವಲ್ಲಿಯು ಮಗು ತನ್ನನ್ನು ಸರಿಯಾಗಿ ಗಮನಿಸುತ್ತಿದೆ ಎನ್ನುವುದನ್ನು ನಾಯಿ ಖಚಿತಪಡಿಸಿಕೊಳ್ಳುತ್ತದೆ.


ನಾಯಿ ಸುಲಭವಾಗಿ ತಡೆ ದಾಟಿ ಈ ಬರುವುದೇ ತಡ ತಕ್ಷಣ ಟ್ರಿಕ್ ಅರ್ಥ ಮಾಡಿಕೊಂಡ ಮಗು ತಾನು ನಿಲದ ಮೇಲೆ ಮಲಗಿ ನಿಧಾನವಾಗಿ ಹೊಟ್ಟೆ ಎಳೆದುಕೊಂಡು ತೆವಳಿಕೊಂಡು ಇತ್ತ ಕಡೆ ಬರುತ್ತದೆ. ಇವರಿಬ್ಬರ ತರಲೆ ವಿಡಿಯೋ ಮಾತ್ರ ನೆಟ್ಟಿಗರಿಗೆ ಭಾರೀ ಇಷ್ಟವಾಗಿದೆ. ನೀವು ಇಲ್ಲಿ ಈ ವಿಡಿಯೋವನ್ನು ವೀಕ್ಷಿಸಬಹುದು.


ಇದನ್ನೂ ಓದಿ: Viral Post: ಅಂಬೆಗಾಲಿಡುವ ಮಗುವಿಗೆ ಆಹಾರ ನೀಡುತ್ತಿರುವ ಸೇನಾಧಿಕಾರಿ! ನೆಟ್ಟಿಗರಿಂದ ಭಾರೀ ಮೆಚ್ಚುಗೆ


421 ಸಾವಿರ ಲೈಕ್ಸ್ ಪಡೆದ ವಿಡಿಯೋ


ಈ ವಿಡಿಯೋವನ್ನು ಕ್ಯೂಟ್ ಬೇಬೀಸ್ ವರ್ಲ್ಡ್ ವಿಡಿಯೋ ಎನ್ನುವ ಫೇಸ್​ಬುಕ್ ಪೇಜ್​ನಿಂದ ಶೇರ್ ಮಾಡಲಾಗಿದ್ದು 1300 ಜನರು ಕಮೆಂಟ್ ಮಾಡಿದ್ದಾರೆ. 3500 ಕ್ಕೂ ಹೆಚ್ಚು ಬಾರಿ ಈ ವಿಡಿಯೋ ಶೇರ್ ಆಗಿದೆ.

Published by:Divya D
First published: