ಹಲ್ಲೆ ಮಾಡಿದ ವ್ಯಕ್ತಿಯ ಕಾಲು ಕಚ್ಚಿ ಒಡತಿಯನ್ನು ಕಾಪಾಡಿದ ಸಾಕು ನಾಯಿ!

ಪ್ರೀತಿಯ ಪುಟ್ಟ ನಾಯಿ ಆ ವ್ಯಕ್ತಿಯನ್ನು ಬಿಡಲು ನಿರಾಕರಿಸಿತ್ತು. ನಂತರ ಆತನ ಜೀವ ಉಳಿಸಿಕೊಳ್ಳಲು, ಆ್ಯಮಿಯನ್ನು ಬಿಟ್ಟುಬಿಡುವ ಭರವಸೆ ನೀಡಿದ ನಂತರ, ಆಕೆ ತನ್ನ ಶ್ವಾನವನ್ನು ಹಿಡಿದು ಅವನಿಗೆ ಹೋಗಲು ಅವಕಾಶ ಮಾಡಿಕೊಟ್ಟಳು.

ನಾಯಿ

ನಾಯಿ

  • Share this:
ಏಪ್ರಿಲ್ 12ರ ರಾತ್ರಿ ಮಹಿಳೆಯೊಬ್ಬಳು ಅಡ್ಡಾಡುತ್ತಿದ್ದಾಗ, ಆಕೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ಕಾಲನ್ನು ಆ ಮಹಿಳೆಯ ಸಾಕು ನಾಯಿ ಕಚ್ಚಿದೆ. ಇದರಿಂದ ಆಕೆ ಬಚಾವಾಗಿದ್ದಾಳೆ. ಅಲ್ಲದೆ, ಕೆಲವೇ ಸೆಕೆಂಡ್‌ಗಳ ಕಾಲ ನಡೆದ ಆ ಘಟನೆಯನ್ನು ನೆನೆಸಿಕೊಂಡು ಮಹಿಳೆ ಶಾಕ್‌ ಆಗಿದ್ದಳು.

ಆ್ಯಮಿ ಎಡ್ಮಂಡ್‌ಸನ್‌ ತನ್ನ ಸಾಕು ನಾಯಿ 'ಸ್ಟಾರ್' ಸ್ಟಾಫರ್ಡ್‌ಶೈರ್‌ ಬುಲ್ ಟೆರಿಯರ್ ಕ್ರಾಸ್ ಜ್ಯಾಕ್ ರಸ್ಸೆಲ್ ಕ್ರಾಸ್ ಪಿಟ್‌ಬುಲ್‌ ಜೊತೆ ಸೌತೆಂಡ್-ಆನ್-ಸೀನಲ್ಲಿ ನಡೆದಾಡಲು ಹೋಗಿದ್ದರು. ಒಬ್ಬ ವ್ಯಕ್ತಿಯು ಅವಳನ್ನು ದಾರಿ ಕೇಳಲು ಬಂದ. ನಂತರ ಅವಳು ದಾರಿ ಹೇಳಲು ಇನ್ನೊಂದು ಕಡೆ ತಿರುಗುತ್ತಿದ್ದಂತೆ ಆತ ಹಿಂದಿನಿಂದ ಜಿಗಿದು, ಅವಳನ್ನು ನೆಲಕ್ಕೆ ಬೀಳಿಸಿ ಅವಳ ಗಂಟಲಿಗೆ ಚಾಕು ಹಿಡಿದುಕೊಂಡ. ಆ ವೇಳೆ ವ್ಯಕ್ತಿಯ ಕಾಲು ಕಚ್ಚಿದ ಸ್ಟಾರ್‌ ಆತನನ್ನು ಅಟ್ಯಾಕ್‌ ಮಾಡಿದೆ.

ಪ್ರೀತಿಯ ಪುಟ್ಟ ನಾಯಿ ಆ ವ್ಯಕ್ತಿಯನ್ನು ಬಿಡಲು ನಿರಾಕರಿಸಿತ್ತು. ನಂತರ ಆತನ ಜೀವ ಉಳಿಸಿಕೊಳ್ಳಲು, ಆ್ಯಮಿಯನ್ನು ಬಿಟ್ಟುಬಿಡುವ ಭರವಸೆ ನೀಡಿದ ನಂತರ, ಆಕೆ ತನ್ನ ಶ್ವಾನವನ್ನು ಹಿಡಿದು ಅವನಿಗೆ ಹೋಗಲು ಅವಕಾಶ ಮಾಡಿಕೊಟ್ಟಳು. ಇನ್ನು, ಈ ಘಟನೆ ನಂತರ ಆ್ಯಮಿ, ತನ್ನ ಸಾಕು ನಾಯಿ ಜತೆಗೆ ಓಡಿ ಹೋಗಿ ತಮ್ಮ ಮನೆಗೆ ಹೋದರು.

ಸೋಮವಾರ ರಾತ್ರಿ 11.30 ರ ಸುಮಾರಿಗೆ, ಇವರಿಬ್ಬರು ವಾಕ್‌ನಿಂದ ಹಿಂದಿರುಗುತ್ತಿದ್ದಾಗ ಆಕೆಯ ಫ್ಲಾಟ್‌ಗಳ ಹೊರಗಡೆ ಈ ಘಟನೆ ನಡೆದಿದೆ. ಒಬ್ಬ ವ್ಯಕ್ತಿಯು ಅವಳನ್ನು ಸಮೀಪಿಸಿ ಸೌತ್‌ಚರ್ಚ್‌ಗೆ ನಿರ್ದೇಶನ ಕೇಳಿದನು. ಆ್ಯಮಿ ತಿರುಗುತ್ತಿದ್ದಂತೆ, ಆ ವ್ಯಕ್ತಿ ಅವಳ ಬೆನ್ನಿನ ಮೇಲೆ ಹಾರಿ ಹಣವನ್ನು ಕೇಳಿದನು. ಆದರೆ, ಸಾಕು ನಾಯಿ ಅವನ ಮೇಲೆ ಹಾರಿ ತನ್ನ ಮಾಲೀಕರನ್ನು ಉಳಿಸಿದೆ.

ತನ್ನ ಸಾಕು ನಾಯಿ ಸ್ಟಾರ್‌ ಬಗ್ಗೆ ತೀವ್ರ ಖುಷಿಯಾಗಿ, ಅದಕ್ಕೆ ಹೆಚ್ಚುವರಿ ಭೋಜನ ನೀಡಿದ್ದಲ್ಲದೆ, ಹೆಚ್ಚು ಬಾರಿ ಅದನ್ನು ಮುದ್ದಾಡಿದ್ದಾಳೆ ಆ್ಯಮಿ. ಈ ಬಗ್ಗೆ ಡೈಲಿ ಮೇಲ್ ವರದಿ ಮಾಡಿದೆ.

ಈ ಘಟನೆ ನನಗೆ ಶಾಶ್ವತವಾಗಿ ನೆನಪಿರುತ್ತದೆ, ದಾಳಿಕೋರ ತನ್ನನ್ನು ಕೆಳಕ್ಕೆ ತಳ್ಳಿದಾಗ ನನಗೆ ತೀವ್ರ ಶಾಕ್‌ ಆಯಿತು. ಆದರೆ ಹೆಚ್ಚು ಭಯಪಟ್ಟಿದ್ದ ಸಂಗತಿಯೆಂದರೆ, ತನ್ನ 9 ವರ್ಷದ ಮಗ ಎಲ್ಲಿ ತಾಯಿಯನ್ನು ಕಳೆದುಕೊಳ್ಳುತ್ತಾನೋ ಎನಿಸಿತ್ತು ಎಂದು ಡೈಲಿ ಮೇಲ್ ವರದಿ ಮಾಡಿದೆ. ಅಲ್ಲದೆ, ತನ್ನ ನಾಯಿಯನ್ನು ಶೇ. 100 ರಷ್ಟು ಬಚಾವ್‌ ಮಾಡಿದ ನಾಯಿಗೆ ಕೃತಜ್ಞಳಾಗಿರುತ್ತೇನೆ, ಇದು ಎಂದೆಂದಿಗೂ ನನ್ನ ಪ್ರೀತಿಯ ನಾಯಿ ಎಂದೂ ಆ್ಯಮಿ ವೆಬ್‌ಸೈಟ್‌ ಸುದ್ದಿ ಮಾಧ್ಯಮಕ್ಕೆ ಕೇಳಿದ್ದಾಳೆ.
Published by:Sushma Chakre
First published: