• Home
  • »
  • News
  • »
  • trend
  • »
  • Viral Video: ಈ ನಾಯಿ ಮನುಷ್ಯರೊಂದಿಗೆ ಹೇಗೆ ವಾಲಿಬಾಲ್ ಆಡ್ತಿದೆ ನೋಡಿ

Viral Video: ಈ ನಾಯಿ ಮನುಷ್ಯರೊಂದಿಗೆ ಹೇಗೆ ವಾಲಿಬಾಲ್ ಆಡ್ತಿದೆ ನೋಡಿ

ವಾಲಿಬಾಲ್ ಆಡುತ್ತಿರುವ ಸಾಕು ನಾಯಿ

ವಾಲಿಬಾಲ್ ಆಡುತ್ತಿರುವ ಸಾಕು ನಾಯಿ

ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ನಾಯಿಯ ಅನೇಕ ಮುದ್ದಾದ ವಿಡಿಯೋಗಳು ನಮಗೆ ನೋಡಲು ಸಿಗುತ್ತವೆ. ಇಲ್ಲೊಂದು ವಿಡಿಯೋ ಇದೆ ನೋಡಿ, ಅದರಲ್ಲಿ ನಾರ್ವೆಯ ಬೀಚ್ ನಲ್ಲಿ ಮನೆಯವರೊಂದಿಗೆ ಒಂದು ಸಾಕು ನಾಯಿ ವಾಲಿಬಾಲ್ ಆಡುತ್ತಿದೆ. ಇದು ಹಳೆಯ ವಿಡಿಯೋ ಆಗಿದ್ದು ಈಗ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿ ಹರಿದಾಡಲು ಶುರು ಮಾಡಿದೆ.

ಮುಂದೆ ಓದಿ ...
  • Share this:

ಇತ್ತೀಚೆಗೆ ನಾವು ಒಂದು ನಾಯಿಯು (Dog) ತನ್ನ ಮನೆಯ ಒಡೆಯನೊಂದಿಗೆ ಬೈಕ್ ಮೇಲೆ ರೈಡ್ ಹೋಗಿದ್ದನ್ನು ನೋಡಿದ್ದೆವು. ಆ ವಿಡಿಯೋದಲ್ಲಿ (Video) ನಾಯಿ ತನ್ನ ಒಡೆಯನ ಬೆನ್ನಿನ ಮೇಲೆ ತನ್ನೆರಡು ಮುಂಗಾಲುಗಳನ್ನು ಎತ್ತಿಟ್ಟು ಕಣ್ಣುಗಳಿಗೆ ಒಂದು ಸ್ಟೈಲಿಶ್ ಕನ್ನಡಕ ಹಾಕ್ಕೊಂಡು, ಹಾಗೆ ಅಕ್ಕಪಕ್ಕ ಬಂದವರನ್ನು ತುಂಬಾನೇ ಸ್ಟೈಲಿಶ್ (Stylish) ಆಗಿ ನೋಡುತ್ತಾ ಇತ್ತು. ಹೌದು.. ಈ ಸಾಕು ನಾಯಿಗಳು ತನ್ನ ಮನೆಯ ಒಡೆಯರಿಗೆ ಒಳ್ಳೆಯ ಸ್ನೇಹಿತರು (Friends) ಆಗಿರುತ್ತವೆ . ಏಕೆಂದರೆ ಆ ಸಾಕು ನಾಯಿಗಳು ತನ್ನ ಒಡೆಯನ ಬಳಿಯೇ ಸದಾ ಕೂತಿರುತ್ತವೆ ಮತ್ತು ಒಡೆಯ ಎಲ್ಲೆ ಹೋದರೂ ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತದೆ.


ಮನೆಯವರೊಂದಿಗೆ ವಾಲಿಬಾಲ್ ಆಡುತ್ತಿರುವ ಸಾಕು ನಾಯಿ
ಮನೆಯ ಒಡೆಯ ಮನೆಯಿಂದ ಹೊರಗೆ ವಾಕಿಂಗ್ ಗೆ ಹೋದರೆ ಆ ಸಾಕು ನಾಯಿ ಸಹ ಅವರ ಹಿಂದೆಯೇ ವಾಕಿಂಗ್ ಹೋಗುತ್ತದೆ. ಮನೆಯ ಮಾಲೀಕ ಯಾವುದಾದರೂ ಆಟವಾಡಲು ಶುರು ಮಾಡಿದರೆ, ನಾಯಿಯು ಸಹ ಅವರಂತೆ ಆಟ ಆಡಲು ಬಯಸುತ್ತದೆ. ಹೀಗೆ ಒಟ್ಟಿನಲ್ಲಿ ಹೇಳುವುದಾದರೆ ಸಾಕು ನಾಯಿಗಳು ತುಂಬಾನೇ ಚುರುಕಾಗಿ ಮುದ್ದಾಗಿರುತ್ತವೆ. ಅದಕ್ಕೆ ಈ ಸಾಕು ನಾಯಿಗಳು ಮನುಷ್ಯನ ಅತ್ತ್ಯುತ್ತಮ ಸ್ನೇಹಿತ ಅಂತ ಸಹ ಹೇಳುತ್ತಾರೆ.


ಇದನ್ನೂ ಓದಿ: Viral Video: ಈ ನಾಯಿ ಬೈಕ್ ಸವಾರಿಯನ್ನು ಹೇಗೆ ಆನಂದಿಸುತ್ತಿದೆ ನೋಡಿ! ನೆಟ್ಟಿಗರು ಫುಲ್ ಖುಷ್


ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ನಾಯಿಯ ಅನೇಕ ಮುದ್ದಾದ ವಿಡಿಯೋಗಳು ನಮಗೆ ನೋಡಲು ಸಿಗುತ್ತವೆ. ಇಲ್ಲೊಂದು ವಿಡಿಯೋ ಇದೆ ನೋಡಿ, ಅದರಲ್ಲಿ ನಾರ್ವೆಯ ಬೀಚ್ ನಲ್ಲಿ ಮನೆಯವರೊಂದಿಗೆ ಒಂದು ಸಾಕು ನಾಯಿ ವಾಲಿಬಾಲ್ ಆಡುತ್ತಿದೆ. ಇದು ಹಳೆಯ ವಿಡಿಯೋ ಆಗಿದ್ದು ಈಗ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿ ಹರಿದಾಡಲು ಶುರು ಮಾಡಿದೆ.


ವೈರಲ್ ವಿಡಿಯೋದಲ್ಲಿ ಏನಿದೆ?
ಈಗ ವೈರಲ್ ಆಗಿರುವ 31 ಸೆಕೆಂಡುಗಳ ಕ್ಲಿಪ್ ನಲ್ಲಿ ನಾಯಿಯೊಂದು ಮೂರು ಜನರೊಂದಿಗೆ ವಾಲಿಬಾಲ್ ಆಡುವುದನ್ನು ತೋರಿಸುತ್ತದೆ. ಈ ವಿಡಿಯೋ ಲಕ್ಷಾಂತರ ಜನರನ್ನು ತನ್ನೆಡೆಗೆ ಸೆಳೆದಿರುವುದನ್ನು ನಾವು ನೋಡಬಹುದು. ಇಲ್ಲಿ ಒಂದು ಚೆಂಡನ್ನು ಆ ಮೂವರು ಒಬ್ಬರಿಗೊಬ್ಬರು ಪಾಸ್ ಮಾಡಿಕೊಳ್ಳುತ್ತಿರುವಾಗ ಮಧ್ಯೆ ಆ ಸಾಕು ನಾಯಿ ಸಹ ಒಳ್ಳೆ ನಾಲ್ಕನೇ ಆಟಗಾರನಂತೆ ತುಂಬಾ ಚೆನ್ನಾಗಿ ಆ ಬಾಲ್ ಆನ್ನು ತನ್ನ ಒಡೆಯನಿಗೆ ಮೇಲೆ ಎತ್ತಿ ಎತ್ತಿ ನೀಡುತ್ತಿತ್ತು. ಆ ಹಾರಿದ ಚೆಂಡನ್ನು ಆ ವ್ಯಕ್ತಿ ಹಾರಿ ಹಾರಿ ನೆಟ್ ನ ಆ ಕಡೆ ಹಾಕುತ್ತಿದ್ದರು. ಒಟ್ಟಿನಲ್ಲಿ ಈ ವಾಲಿಬಾಲ್ ಆಟವನ್ನು ಮೂವರು ಮತ್ತು ಒಂದು ನಾಯಿ ಆಡುತ್ತಿದೆ ಎನ್ನುವಂತಿರಲಿಲ್ಲ, ಬದಲಾಗಿ ನಾಲ್ಕು ಜನರು ಆಡುವಂತಿತ್ತು.


ವಿಡಿಯೋ ಮೊದಲು 2020 ರಲ್ಲಿ ಹಂಚಿಕೊಂಡಿದ್ದರು
ಈ ವಿಡಿಯೋವನ್ನು ಮೂಲತಃ ಏಪ್ರಿಲ್ 2020 ರಲ್ಲಿ ನಾಯಿ ಕಿಯಾರಾ ಮತ್ತು ಮನೆಯ ಒಡೆಯ ಮಥಿಯಾಸ್ ಬೆರ್ಂಟ್ಸೆನ್ ಅವರ ಇನ್‌ಸ್ಟಾಗ್ರಾಮ್ ಖಾತೆಯ ಪುಟಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಇದನ್ನು ಗೇಬ್ರಿಯೆಲ್ ಕಾರ್ನೊ ಅವರ ಬಳಕೆದಾರರೊಬ್ಬರು ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಮರು ಹಂಚಿಕೊಂಡಿದ್ದಾರೆ. "ಕಪ್ಪು ಅಂಗಿಯಲ್ಲಿರುವ ಪುಟ್ಟ ವ್ಯಕ್ತಿಗೆ ವಾಲಿಬಾಲ್ ನಲ್ಲಿ ಒಳ್ಳೆಯ ಭವಿಷ್ಯವಿದೆ" ಎಂದು ವೀಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.









View this post on Instagram






A post shared by Kiara (@kiarathevolleydog)




ಈ ವಿಡಿಯೋವನ್ನು ಒಂದು ದಿನದ ಹಿಂದೆ ಟ್ವಿಟ್ಟರ್ ನಲ್ಲಿ ಮತ್ತೆ ಹಂಚಿಕೊಳ್ಳಲಾಗಿದೆ ಮತ್ತು ಅಂದಿನಿಂದ ಇಂದಿನವರೆಗೂ 3.6 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದು ಸಾವಿರಾರು ಲೈಕ್ ಗಳು, ರೀಟ್ವೀಟ್ ಗಳು ಮತ್ತು ನಾಲ್ಕು ಕಾಲಿನ ಜೀವಿಯ ವಾಲಿಬಾಲ್ ಕೌಶಲ್ಯವನ್ನು ಶ್ಲಾಘಿಸುವ ಹಲವಾರು ಕಾಮೆಂಟ್ ಗಳನ್ನು ಸಹ ಪಡೆದಿದೆ.


ಇದನ್ನೂ ಓದಿ:  Viral Video: ಹುಲಿಯ ಜೊತೆಯೇ ಕಾಲುಕೆರೆದು ಜಗಳಕ್ಕಿಳಿದ ನಾಯಿ, ಮುಂದೇನಾಯ್ತು ನೀವೇ ನೋಡಿ


"ಈ ನಾಯಿಯನ್ನು ಒಲಿಂಪಿಕ್ ಆಟಗಳಿಗೆ ಕರೆದೊಯ್ಯಿರಿ" ಎಂದು ಒಬ್ಬ ವ್ಯಕ್ತಿಯು ಕಾಮೆಂಟ್ ಮಾಡಿದ್ದಾರೆ. "ನನ್ನನ್ನು ನಂಬಿ, ಅವನು ನನಗಿಂತ ಚೆನ್ನಾಗಿ ವಾಲಿಬಾಲ್ ಆಡುತ್ತಾನೆ" ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ. "ನಾನು ಇಡೀ ಆಟವಿರುವ ವಿಡಿಯೋವನ್ನು ನೋಡಲು ನಾನು ಬಯಸುತ್ತೇನೆ" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.

Published by:Ashwini Prabhu
First published: