Pet Dog: ನಂದಿ ವಿಗ್ರಹ ಮುಟ್ಟಿ ನಮಸ್ಕರಿಸಿದ ನಾಯಿ! ಕ್ಯೂಟ್ ವಿಡಿಯೋ ಹುಟ್ಟಿಹಾಕಿತು ಹೊಸ ವಿವಾದ

ಸಾಕು ನಾಯಿಯನ್ನು ಜೊತೆಗೆ ಕರೆದುಕೊಂಡು ಹೋಗಿದ್ದು ಒಳ್ಳೆಯದೇ, ಆದರೆ ಇಲ್ಲೊಂದು ಎಡವಟ್ಟು ಮಾಡಿಕೊಂಡಿದ್ದಾನೆ ಈ ವ್ಯಕ್ತಿ. ಏನಪ್ಪಾ ಅದು ಅಂತ ತಿಳಿದುಕೊಳ್ಳಲು ನೀವು ತುಂಬಾನೇ ಕಾತುರರಾಗಿದ್ದೀರಿ ಎಂದು ನಮಗೆ ಅರ್ಥವಾಗುತ್ತದೆ.

ಸಾಕು ನಾಯಿ

ಸಾಕು ನಾಯಿ

  • Share this:
ಎಷ್ಟೋ ಜನರು ತಾವು ಪ್ರವಾಸಕ್ಕೆಂದು ಹೋಗುವಾಗ ತಮ್ಮ ಮನೆಯಲ್ಲಿ ಸಾಕಿದಂತಹ ಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳನ್ನು ಮನೆಯಲ್ಲಿ ಒಂಟಿಯಾಗಿ ಏಕೆ ಬಿಟ್ಟು ಹೋಗಬೇಕು, ಅವುಗಳಿಗೆ ಊಟ ತಿಂಡಿ ಹಾಕುವವರು ಯಾರು ಇರುವುದಿಲ್ಲ, ಅವುಗಳನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರು ಇರುವುದಿಲ್ಲ ಎಂದು ತಮ್ಮ ಜೊತೆಗೆ ಕರೆದುಕೊಂಡು ಹೋಗುವುದನ್ನು ನಾವು ಅನೇಕ ಸಂದರ್ಭಗಳಲ್ಲಿ ನೋಡಿರುತ್ತೇವೆ. ಹೀಗೆ ಕರೆದುಕೊಂಡು ಹೋದಾಗ ಅವುಗಳು ನಮ್ಮ ಜೊತೆಯಲ್ಲಿಯೇ ಊಟ ಮಾಡುತ್ತವೆ ಮತ್ತು ನಮ್ಮ ಹಾಸಿಗೆಯ ಅಕ್ಕ ಪಕ್ಕದಲ್ಲಿ ಅಲ್ಲೇ ಎಲ್ಲೋ ಮಲಗುತ್ತವೆ. ಹೀಗೆ ಇಲ್ಲೊಬ್ಬ ವ್ಯಕ್ತಿ ತನ್ನ ಸಾಕು ನಾಯಿಯನ್ನು ತನ್ನ ಜೊತೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾನೆ.

ಆಯ್ತು ಬಿಡಿ.. ಸಾಕು ನಾಯಿಯನ್ನು ಜೊತೆಗೆ ಕರೆದುಕೊಂಡು ಹೋಗಿದ್ದು ಒಳ್ಳೆಯದೇ, ಆದರೆ ಇಲ್ಲೊಂದು ಎಡವಟ್ಟು ಮಾಡಿಕೊಂಡಿದ್ದಾನೆ ಈ ವ್ಯಕ್ತಿ. ಏನಪ್ಪಾ ಅದು ಅಂತ ತಿಳಿದುಕೊಳ್ಳಲು ನೀವು ತುಂಬಾನೇ ಕಾತುರರಾಗಿದ್ದೀರಿ ಎಂದು ನಮಗೆ ಅರ್ಥವಾಗುತ್ತದೆ.

ಕೇದಾರನಾಥ ದೇವಾಲಯಕ್ಕೆ ಸಾಕು ನಾಯಿಯೊಂದಿಗೆ ಪ್ರವಾಸ
ಒಬ್ಬ ವ್ಯಕ್ತಿ ತಾನು ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಹೋಗುತ್ತಿದ್ದೇನೆ ಎಂದು ಕೊಂಡು ತನ್ನ ಸಾಕು ನಾಯಿಯನ್ನು ತನ್ನ ಒಮ್ಮೆ ಹೆಗಲ ಮೇಲೆ ಕೂರಿಸಿಕೊಂಡು ಮತ್ತು ಇನ್ನೊಮ್ಮೆ ಒಳ್ಳೆ ಚಿಕ್ಕ ಮಗುವಿನಂತೆ ತನ್ನ ಕೈಗಳಲ್ಲಿ ಎತ್ತಿಕೊಂಡು ಸುತ್ತಾಡಿದ್ದಾನೆ. ಈ ವ್ಯಕ್ತಿ ಕೇದಾರನಾಥ ದೇವಾಲಯದಲ್ಲಿ ದೇವರ ಆಶೀರ್ವಾದ ಪಡೆಯಲು ತನ್ನ ಮುದ್ದಿನ ನಾಯಿಯನ್ನು ಅಲ್ಲೇ ಇರುವಂತಹ ನಂದಿ ಪ್ರತಿಮೆಯನ್ನು ಸ್ಪರ್ಶಿಸುವಂತೆ ಮಾಡಿದ ನಂತರ ದೊಡ್ಡ ವಿವಾದವೊಂದು ಭುಗಿಲೆದ್ದಿದೆ ನೋಡಿ.

ಇದನ್ನೂ ಓದಿ:  Viral Photo: ಇದು ಗಂಗೂಬಾಯಿ ಅಲ್ಲ ಗಂಗೂ ಕ್ಯಾಟ್; ಬೆಕ್ಕಿನ ವೇಷಕ್ಕೆ ನೆಟ್ಟಿಗರು ಫ್ಲ್ಯಾಟ್!

ಈ ಘಟನೆಯ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಘಟನೆಯು ಬದರೀನಾಥ್ ಮತ್ತು ಕೇದಾರನಾಥ ದೇವಾಲಯ ಸಮಿತಿಯನ್ನು ಕೆರಳಿಸಿದೆ ಎಂದು ಹೇಳಲಾಗುತ್ತಿದೆ. ಈ ಕೃತ್ಯದಲ್ಲಿ ಭಾಗಿಯಾದ ಭಕ್ತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಮಿತಿ ನಿರ್ಧರಿಸಿದೆ ಅಂತೆ.

ಘಟನೆಯನ್ನು ತೀವ್ರವಾಗಿ ಖಂಡಿಸಿದ ದೇವಾಲಯ ಸಮಿತಿಯ ಅಧ್ಯಕ್ಷರು
ದೇವಾಲಯ ಸಮಿತಿಯು ಈಗ ವೈರಲ್ ವೀಡಿಯೋವನ್ನು ಗಮನಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ದೇವಾಲಯ ಸಮಿತಿಯ ಅಧ್ಯಕ್ಷರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಇದು ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದರು.



18 ಸೆಕೆಂಡಿನ ಈ ವೈರಲ್ ವೀಡಿಯೋದಲ್ಲಿ, ಒಬ್ಬ ವ್ಯಕ್ತಿಯು ತನ್ನ ಸೈಬೀರಿಯನ್ ಹಸ್ಕಿ ತಳಿ ಸಾಕು ನಾಯಿಯನ್ನು ಅಲ್ಲೇ ಇರುವಂತಹ ನಂದಿಯ ಪ್ರತಿಮೆಯನ್ನು ಸ್ಪರ್ಶಿಸುವಂತೆ ಮತ್ತು ಪುರೋಹಿತರಿಂದ ಕುಂಕುಮ ಪಡೆಯುವಂತೆ ಮಾಡುವುದನ್ನು ನಾವು ನೋಡಬಹುದು. ದೇವಾಲಯ ಸಮಿತಿಯು ಈಗ ಅರ್ಚಕರು ಮತ್ತು ಇತರ ಅಧಿಕಾರಿಗಳಿಗೆ ಅಂತಹ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ತಿಳಿಸಿದೆ.

ವೈರಲ್ ಆಯಿತು ವಿವಾದಾತ್ಮಕ ವೀಡಿಯೋ
ಈ ಸಾಕು ನಾಯಿಯ ಒಡೆಯ 73,000 ಜನ ಫಾಲೋವರ್ಸ್ ಗಳನ್ನು ಹೊಂದಿರುವ ಇನ್‌ಸ್ಟಾಗ್ರಾಮ್ ಪುಟವನ್ನು ಹೊಂದಿದ್ದಾರೆ ಮತ್ತು ವಿವಾದಾತ್ಮಕ ವೀಡಿಯೋವನ್ನು ಅವರ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ವೀಡಿಯೋವನ್ನು ಈಗಾಗಲೇ 7,000ಕ್ಕೂ ಹೆಚ್ಚು ಬಾರಿ ನೋಡಿದ್ದಾರೆ ಮತ್ತು ಇದರೊಂದಿಗೆ ಇನ್ನೊಂದು ವೀಡಿಯೋ ಸಹ ಇವರು ಹಂಚಿ ಕೊಂಡಿದ್ದಾರೆ. ಈ ವೀಡಿಯೋದಲ್ಲಿ ತನ್ನ ಸಾಕು ನಾಯಿಯನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಹೋಗುವುದನ್ನು ನೋಡಬಹುದು. ಇದನ್ನು ಸಹ 4,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 80ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ.

ಇದನ್ನೂ ಓದಿ: Cashew Shaped Egg: ಗೋಡಂಬಿ ಆಕಾರದ ಮೊಟ್ಟೆ ಇಟ್ಟ ಕೋಳಿ, ಫೋಟೋಸ್ ವೈರಲ್

ಇಲ್ಲಿ ಇನ್ನೊಂದು ವಿಶೇಷವಾದ ಸುದ್ದಿ ಎಂದರೆ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಕಡಿಮೆಯಾದಂತೆ, ಕೇದಾರನಾಥದಲ್ಲಿ ಭಕ್ತರಿಗೆ ಧಾರ್ಮಿಕ ಭೇಟಿಗೆ ಅವಕಾಶ ನೀಡಲಾಯಿತು. ಮೇ 6 ರಂದು ದೇವಾಲಯವನ್ನು ತೆರೆದಾಗಿನಿಂದ ಇದುವರೆಗೂ 2 ಲಕ್ಷಕ್ಕೂ ಹೆಚ್ಚು ಭಕ್ತರು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
Published by:Ashwini Prabhu
First published: