Dog Bite Video: ಲಿಫ್ಟ್​ನಲ್ಲಿದ್ದ ಬಾಲಕನ ಮೇಲೆರಗಿದ ನಾಯಿ, ಮಾನವೀಯತೆ ಮರೆತ ಮಾಲೀಕ ಪರಾರಿ!

ನಾಯಿ ಕಚ್ಚಿದಂತೆ ಬಾಲಕನಿಗೆ ನೋವು ತಡೆಯಲು ಸಾಧ್ಯವಾಗುವುದಿಲ್ಲ. ಆತ ಬಲ ಕಾಲನ್ನು ಎತ್ತಿಕೊಂಡು ಕುಂಟುತ್ತಾನೆ. ಮಾತ್ರವಲ್ಲದೆ ಕಚ್ಚಿದ ಜಾಗವನ್ನು ಉಜ್ಜುತ್ತಾನೆ. ಇಷ್ಟೇಲ್ಲಾ ಆದರೂ ಕೂಡ ಶ್ವಾನ ಹಿಡಿದ ಮಹಿಳೆ ಆತನಿಗೆ ಏನೂ ಸಹಾಯ ಮಾಡುವುದಿಲ್ಲ.

ಸಿಸಿಟಿವಿ ದೃಶ್ಯ

ಸಿಸಿಟಿವಿ ದೃಶ್ಯ

 • Share this:
  ಲಿಫ್ಟ್​​ನಲ್ಲಿ ಬಾಲಕನೋರ್ವನಿಗೆ ಸಾಕು ನಾಯಿಯೊಂದು ಕಚ್ಚಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್​ನಲ್ಲಿ ಈ ಘಟನೆ ಸಂಭವಿಸಿದ್ದು, ಶ್ವಾನವನ್ನು ಹಿಡಿದುಕೊಂಡಿರುವ ಮಹಿಳೆ ಬಾಲಕನಿಗೆ ಶ್ವಾನ ಕಚ್ಚಿದರು (Dog Bite) ಏನೂ ಮಾಡದೆ ಲಿಫ್ಟ್​ನಿಂದ ಹೋರ ಹೋಗುವುದು ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದೆ. ಸದ್ಯ ಈ ದೃಶ್ಯ ವೈರಲ್​ ಆಗಿದ್ದು, ಅನೇಕರು ಶ್ವಾನ (Dog) ಹಿಡಿದುಕೊಂಡ ಮಹಿಳೆಯ (women) ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

  ವೈರಲ್​ ಆಗಿರುವ ದೃಶ್ಯದಲ್ಲಿ ಕಂಡುಬರುವಂತೆ ಬಾಲಕ ಗಾಜಿಯಾಬಾದ್​ನ ಸೊಸೈಟಿ ಲಿಫ್ಟ್​ನಲ್ಲಿರುತ್ತಾನೆ. ಲಿಫ್ಟ್​ ಬಾಗಿಲಿನ ಬಳಿ ಮಹಿಳೆ ಶ್ವಾನವನ್ನು ಹಿಡಿದುಕೊಂಡು ನಿಂತಿರುತ್ತಾಳೆ. ಕೊಂಚ ಹೊತ್ತಿನ ಬಳಿಕ ಲಿಫ್ಟ್​​ ಡೋರ್​ ತೆರೆಯುತ್ತದೆ. ಈ ವೇಳೆ ಶ್ವಾನವನ್ನು ಹಿಡಿದುಕೊಂಡು ಬಾಲಕನ ಬಳಿ ಬಂದು ನಿಲ್ಲಲು ಮುಂದಾಗುತ್ತಾಳೆ. ಈ ಸಮಯದಲ್ಲಿ ಬಾಲಕ ಲಿಫ್ಟ್​ ಬಾಗಿಲ ಬಳಿ ಹೋಗುತ್ತಾನೆ. ಆದರೆ ಈ ವೇಳೆ ನಾಯಿ ಬಾಲಕನ ಬಲ ತೊಡೆಗೆ ಕಚ್ಚಿದೆ.

  ನಾಯಿ ಕಚ್ಚಿದಂತೆ ಬಾಲಕನಿಗೆ ನೋವು ತಡೆಯಲು ಸಾಧ್ಯವಾಗುವುದಿಲ್ಲ. ಆತ ಬಲ ಕಾಲನ್ನು ಎತ್ತಿಕೊಂಡು ಕುಂಟುತ್ತಾನೆ. ಮಾತ್ರವಲ್ಲದೆ ಕಚ್ಚಿದ ಜಾಗವನ್ನು ಉಜ್ಜುತ್ತಾನೆ. ಇಷ್ಟೇಲ್ಲಾ ಆದರೂ ಕೂಡ ಶ್ವಾನ ಹಿಡಿದ ಮಹಿಳೆ ಆತನಿಗೆ ಏನೂ ಸಹಾಯ ಮಾಡುವುದಿಲ್ಲ.

  ಸ್ವಲ್ಪ ಹೊತ್ತಿನ ಬಳಿಕ ಲಿಫ್ಟ್​ ಬಾಗಿಲು ತೆರೆಯುತ್ತದೆ. ಈ ವೇಳೆ ಮಹಿಳೆ ನಾಯಿಯನ್ನು ಹಿಡಿದುಕೊಂಡು ಅಲ್ಲಿಂಡ ಕಾಲ್ಕಿತ್ತಿದ್ದಾಳೆ. ಬಾಲಕ ಹೆದರಿ ಲಿಫ್ಟ್​ನ ಮೂಲೆಗೆ ಓಡಲು ಯತ್ನಿಸುತ್ತಾನೆ. ಈ ವೇಳೆ ಕೂಡ ಶ್ವಾನ ಕಚ್ಚಲು ಯತ್ನಿಸಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

  ಇದನ್ನೂ ಓದಿ: Blood Group: ಈ ಬ್ಲಡ್​ ಗ್ರೂಪ್​ನವರಿಗೆ ಲಕ್ವ ಹೊಡೆಯುವ ಸಾಧ್ಯತೆ ಹೆಚ್ಚಿದೆ, ಸಂಶೋಧನೆಯಲ್ಲಿ ಬಯಲು!

  ಮಾಹಿತಿಯಂತೆಯೇ, ಈ ಘಟನೆ ರಾಜನಗರ ವಿಸ್ತರಣೆಯ ಚಾರ್ಮ್ಸ್ ಕೌಂಟಿ ಸೊಸೈಟಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈ ಭೀಕರ ಘಟನೆಯ ಬಗ್ಗೆ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಶ್ವಾನದ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

  ಇದನ್ನೂ ಓದಿ: IPhone 14: ನಾಳೆ ಬಹುನಿರೀಕ್ಷಿತ ಐಫೋನ್​ 14 ಬಿಡುಗಡೆ! ಹೊಸ ಐಫೋನ್​ ಹೊಂದಿರುವ ಸೂಪರ್​ ಫೀಚರ್ಸ್​ಗಳ ಬಗ್ಗೆ ತಿಳಿದುಕೊಳ್ಳಿ

  ಅನೇಕರು ಈ ದೃಶ್ಯವನ್ನು ಕಂಡು ಕಾಮೆಂಟ್​​​ ಬರೆದಿದ್ದಾರೆ. ಅದರಲ್ಲೂ ಮಹಿಳೆಗೆ ಮಾನವೀಯತೆ ಎಂಬುದೇ ಇಲ್ಲ ಎಂದು ಬರೆದಿದ್ದಾರೆ. ಬಾಲಕನಿಗೆ ನಾಯಿ ಕಚ್ಚಿ ನೋಡಿನಿಂದ ಒದ್ದಾಡಿದರೂ ಆತನನ್ನು ಉಪಚರಿಸದೆ ಲಿಫ್ಟ್​​ನಿಂದ ಕಾಲ್ಕಿತ್ತಾ ಮಹಿಳೆಯ ಬಗ್ಗೆ ಅನೇಕರು ಕೋಪಗೊಂಡಿದ್ದಾರೆ.  ಬಹುತೇಕರು ಶ್ವಾನ ಪ್ರೇಮಿಗಳು ನಾಯಿಯನ್ನು ಮನೆಯಲ್ಲಿ ಅಥವಾ ಫ್ಲಾಟ್​​ನಲ್ಲಿ ಸಾಕುತ್ತಾರೆ. ಆದರೆ ನಾಯಿಯನ್ನು ಹೊರಗೆ ವಾಕಿಂಗ್​ ಕರೆದುಕೊಂಡು ಹೋಗುವಾದ ಅದರ ಮುಂಜಾಗೃತ ಕ್ರಮದ ಬಗ್ಗೆ ಎಚ್ಚೆತ್ತುಕೊಳ್ಳುವುದಿಲ್ಲ. ಕೆಲವರಂತೂ ಶೋಕಿಗಾಗಿ ನಾಯಿ ಸಾಕುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಾರೆ. ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ಅದರಲ್ಲೂ ಫ್ಲಾಟ್​ನಲ್ಲಿ ನಾಯಿ ಸಾಕುವವರಿಗೆ ನಿಯಮವನ್ನು ರೂಪಿಸಲಾಗುತ್ತದೆ. ಆದರೆ ಮಹಿಳೆ ನಾಯಿಯನ್ನು ಲಿಫ್ಟ್​ನಲ್ಲಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ಕಂಡರೆ ಇಂದು ಅಜಾಗರೂಕತೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.
  Published by:Harshith AS
  First published: