Dog Killed the Owner: ಮಾಲೀಕನನ್ನು ಕೊಂದು ಇನ್ನೊಬ್ಬರ ಕಾಲು ತುಂಡರಿಸಿದ ನಾಯಿ!

Dog Bite: ಮಾಲೀಕನ ಮರಣದ ನಂತರ, ಅವರ ಅತ್ತಿಗೆ ಆ ನಾಯಿಯನ್ನು ಕರೆದುಕೊಂಡು ಹೋದರು. ಆದರೆ ಹ್ಯಾರಿಸ್​ನ ಅಂತ್ಯಕ್ರಿಯೆಯ ದಿನದಂದು ನಾಯಿ ಆಕೆಯ ಸೋದರ ಮಾವ ಮಾರ್ಕ್ ಡೇ ಅವರಿಗೂ ಕಚ್ಚಿತ್ತು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನಾಯಿ (Dog) ಅತ್ಯಂತ ನಿಷ್ಠಾವಂತ (Loyal) ಪ್ರಾಣಿ ಎಂದು ಪರಿಗಣಿಸಲಾಗಿದೆ. ಶ್ವಾನ ಯಾವಾಗಲೂ ಮನೆಯನ್ನು ಶ್ರದ್ಧೆಯಿಂದ ಕಾಪಾಡುತ್ತದೆ. ಆದರೆ ಅದರ ಸ್ವಭಾವಕ್ಕೇ ವಿರುದ್ಧವಾದ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೀತಿಯಿಂದ ಸಾಕಿದ್ದ, ಸಾಕುನಾಯಿಯೊಂದು ಮಾಲೀಕನನ್ನೇ ಕೊಂದಿದೆ!. ಮಾಲೀಕನ ಸಂಬಂಧಿಕನೂ ನಾಯಿ ಕಡಿತದಿಂದ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

  ಬ್ರಿಟನ್​ನಲ್ಲಿ (Britain) ಈ ಘಟನೆ ನಡೆದಿದೆ. ಮಾಲೀಕ ಬ್ಯಾರಿ ಹ್ಯಾರಿಸ್ ಸಾಕು ನಾಯಿ (Pet Dog) ಕಚ್ಚಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ವೈದ್ಯರ ಪ್ರಕಾರ, ಅವರಿಗೆ ಹೃದಯಾಘಾತವಾಗಿತ್ತು ಮತ್ತು ಅವರ ದೇಹದಲ್ಲಿ ಸೋಂಕು ಹರಡಿತು. ಅಂದಹಾಗೆಯೇ ಬರೋಬ್ಬರಿ 1.5 ಲಕ್ಷ ರೂಪಾಯಿಗೆ ನಾಯಿಯನ್ನು ಖರೀದಿಸಿದ್ದರು. ಎತ್ತರವಾಗಿದ್ದರಿಂದ ಇದನ್ನು ದೊಡ್ಡ ಟೆಡ್ಡಿ ಬೇರ್ ಎಂದು ಕರೆಯಲಾಗುತ್ತಿತ್ತು. ಆದರೆ ಈ ನಾಯಿ ಒಂದು ದಿನ ಇದ್ದಕ್ಕಿದ್ದಂತೆ ಮಾಲೀಕರ ಮೇಲೆ ದಾಳಿ ಮಾಡಿತು ಮತ್ತು ಮೂರು ದಿನಗಳ ನಂತರ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು.

  ಮಾಲೀಕನ ಮರಣದ ನಂತರ, ಅವರ ಅತ್ತಿಗೆ ಆ ನಾಯಿಯನ್ನು ಕರೆದುಕೊಂಡು ಹೋದರು. ಆದರೆ ಹ್ಯಾರಿಸ್​ನ ಅಂತ್ಯಕ್ರಿಯೆಯ ದಿನದಂದು ನಾಯಿ ಆಕೆಯ ಸೋದರ ಮಾವ ಮಾರ್ಕ್ ಡೇ ಅವರಿಗೂ ಕಚ್ಚಿತ್ತು. ಕೊನೆಗೆ ನಾಯಿ ದಾಳಿಯಿಂದಾಗಿ ಮಾರ್ಕ್‌ ಡೇ  ಅವರ ದೇಹದಲ್ಲಿ ಸೋಂಕು ಹರಡಿತು. ವೈದ್ಯರು ಆಪರೇಷನ್ ಮಾಡಿ ಅವರ ಎರಡೂ ಕಾಲುಗಳನ್ನು ಕತ್ತರಿಸಬೇಕಾಯಿತು.  ಶಸ್ತ್ರಚಿಕಿತ್ಸೆಯ ನಂತರ ಎಡಗೈಯ ಬೆರಳುಗಳನ್ನು ಸಹ ಕತ್ತರಿಸಬೇಕಾಯಿತು.

  ಸಾವಿನ ಸನಿಹದಲ್ಲಿದ್ದ ಸಂಬಂಧಿಕ

  ನಾಯಿ ಕಚ್ಚಿದ ನಂತರ ಮಾರ್ಕ್‌ನ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಅವನ ಗಾಯಕ್ಕೆ ನಾಯಿ 100% ಹೊಣೆ ಎಂದು ವೈದ್ಯರು ಹೇಳಿದ್ದಾರೆ. ಚಿಕಿತ್ಸೆಯ ಸಮಯದಲ್ಲಿ ಮಾರ್ಕ್‌ನ ಇಡೀ ದೇಹವು ತಣ್ಣಗಾಯಿತು ಮತ್ತು ಅವನ ಜೀವವನ್ನು ಉಳಿಸಲು ಹರ ಸಾಹಸ ಪಡಬೇಕಾದ ಅನಿವಾರ್ಯತೆ ಎದುರಾಯಿತು.ಮಾರ್ಕ್​ನ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಲು ಪ್ರಾರಂಭಿಸಿತು. ಕೋಮಾ ಜಾರಿದನು, ನಂತರ 10 ದಿನಗಳವರೆಗೆ ಐಸಿಯುವಿನಲ್ಲಿ ಚಿಕಿತ್ಸೆ ಪಡೆದನು . ಕೊನೆಗೆ, ಶಸ್ತ್ರಚಿಕಿತ್ಸೆಯ ನಂತರ ಅವರ ಎರಡೂ ಕಾಲುಗಳು ಮತ್ತು ಬೆರಳುಗಳನ್ನು ಕತ್ತರಿಸಬೇಕಾಯಿತು.  ಇದನ್ನು ಓದಿ: Viral Story: ಗಂಡನಿಗೆ ವಿಚ್ಛೇದನ ನೀಡಿ ನಾಯಿಯನ್ನು ಮದುವೆಯಾದ 47 ವರ್ಷದ ಮಹಿಳೆ!

  ಮಾರ್ಕ್ನ ಪತ್ನಿ ಈ ಘಟನೆಯ ಬಗ್ಗೆ ಮಾತನಾಡಿದ್ದು, ಇದೊಂದು ನಿಜವಾಗಿಯೂ ಭಯಾನಕ ಕನಸಿನಂತೆ, ಹೀಗೊಂದು ಘಟನೆ ಸಂಭವಿಸಿದೆ ಎಂದು ನಾನಗೆ ನಂಬಲು ಸಾಧ್ಯವಿಲ್ಲ. ಮೊದಲು ನನ್ನ ಸಹೋದರ ಬಲಿಯಾದ. ಈಗ ಪತಿ ಈ ನಾಯಿಗೆ ಕಾಳು ಕಳೆದುಕೊಂಡರು. ನಾಯಿ ಯಾರನ್ನೂ ಕಚ್ಚಿಲ್ಲ, ಆದರೆ ಆಹಾರ ಹತ್ತಿರ ಬಂದ ತಕ್ಷಣ ಕೋಪಗೊಳ್ಳುತ್ತಿತ್ತು ಎಂದು ಹೇಳಿದರು. ಬಹುಶಃ ನಾವು ಅವನನ್ನು ಅರ್ಥಮಾಡಿಕೊಳ್ಳಲು ತಪ್ಪು ಮಾಡಿದ್ದೇವೆ ಎಂದು ಮಾರ್ಕ್ ಅವರ ಹೆಂಡತಿ ಹೇಳಿದರು.

  ಇದನ್ನು ಓದಿ: Elon Musk: ಆದೇಶ ಪಾಲಿಸದಿದ್ರೆ ಕೆಲಸಕ್ಕೆ ರಾಜೀನಾಮೆ ನೀಡಿ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್!  ಮಾಲೀಕ ಹ್ಯಾರಿಸ್ ತನ್ನ ಸಾವಿನ ಒಂದು ವಾರದ ಮೊದಲು ನಾಯಿಯನ್ನು ಖರೀದಿಸಿದನು. ಅದು ಅವನ ಕುಟುಂಬವನ್ನೇ ನಾಶಮಾಡಿತು. ಹ್ಯಾರಿಸ್ ಅವರ ಸಂಬಂಧಿಕ 82 ದಿನಗಳ ಆಸ್ಪತ್ರೆಯಲ್ಲಿ ಕಳೆದ ನಂತರ ಮನೆಗೆ ಮರಳಿದ್ದಾರೆ ಮತ್ತು ಅವರು ಕೃತಕ ಕಾಲುಗಳ ಸಹಾಯದಿಂದ ಮತ್ತಷ್ಟು ನಡೆಯಲು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ.
  Published by:Harshith AS
  First published: