Farting: ಅದೊಂದು ರೋಲ್ ತಿಂದು ಐದು ವರ್ಷ ಆಯ್ತಂತೆ, ಗ್ಯಾಸ್ ಬಿಡೋದು ಮಾತ್ರ ಇನ್ನೂ ನಿಂತಿಲ್ಲ! ಅಕಟಕಟಾ!!

ಸಾಮಾನ್ಯವಾಗಿ ಒಮ್ಮೊಮ್ಮೆ ಜನರು ಹೆಚ್ಚುಕಡಿಮೆ ತಿಂದು ಹೊಟ್ಟೆಯಲ್ಲಿ ವಾಯು ಉಂಟಾಗಿ ಅದನ್ನು ಗುದದ್ವಾರದ ಮೂಲಕ ಹೊರ ಹಾಕುವುದರ ಬಗ್ಗೆ ಕೇಳಿದ್ದೇವೆ. ಇದು ಸಾಮಾನ್ಯವಾಗಿ ಅತ್ಯಂತ ಅಲ್ಪಾವಧಿಯಲ್ಲೇ ಶಮನವಾಗುತ್ತದೆ. ಆದರೆ, ಇಂತಹ ಸಮಸ್ಯೆ ದೀರ್ಘ ಕಾಲದವರೆಗೆ ಅಂದರೆ ವರ್ಷಾನುಗಟ್ಟಲೇ ಇರುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಇಲ್ಲಿದೆ ನೋಡಿ

ಟಿರಾನ್ ಪ್ರೇಡ್ಸ್

ಟಿರಾನ್ ಪ್ರೇಡ್ಸ್

  • Share this:
ಇದೊಂದು ವಿಚಿತ್ರ ಸುದ್ದಿ ಎಂದೇ ಹೇಳಬಹುದು. ಸಾಮಾನ್ಯವಾಗಿ ಒಮ್ಮೊಮ್ಮೆ ಜನರು (People) ಹೆಚ್ಚುಕಡಿಮೆ ತಿಂದು ಹೊಟ್ಟೆಯಲ್ಲಿ (Stomach) ವಾಯು ಉಂಟಾಗಿ ಅದನ್ನು ಗುದದ್ವಾರದ ಮೂಲಕ ಹೊರ ಹಾಕುವುದರ ಬಗ್ಗೆ ಕೇಳಿದ್ದೇವೆ. ಇದು ಸಾಮಾನ್ಯವಾಗಿ ಅತ್ಯಂತ ಅಲ್ಪಾವಧಿಯಲ್ಲೇ ಶಮನವಾಗುತ್ತದೆ. ಆದರೆ, ಇಂತಹ ಸಮಸ್ಯೆ (Problem) ದೀರ್ಘ ಕಾಲದವರೆಗೆ ಅಂದರೆ ವರ್ಷಾನುಗಟ್ಟಲೇ ಇರುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಪ್ರಸ್ತುತ ಅಂತಹ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿಯೋರ್ವ ತಾನು ತಿಂದಿದ್ದ ಹ್ಯಾಮ್ ರೋಲ್ ನೀಡಿದ ಫುಡ್ ಸ್ಟಾಲ್ (Food Stall) ವಿರುದ್ಧ ಕೋರ್ಟಿಗೆ ಮೊರೆ ಹೋಗಿದ್ದಾನೆಂದು ತಿಳಿದುಬಂದಿದೆ.

ಹ್ಯಾಮ್ ರೋಲ್ ತಿಂದು ಇಂದಿಗೂ ವಾಯು ವಿಸರ್ಜನೆ ಅನುಭವಿಸುತ್ತಿರುವ ವ್ಯಕ್ತಿ
ಯುಕೆಯ ಬರ್ಮಿಂಗ್ ಹ್ಯಾಮ್ ಪ್ರದೇಶದ ವಿಲ್ಟ್ ಶೈರ್ ಸ್ಥಿತ ವ್ಯಕ್ತಿಯೊಬ್ಬ ಸುಮಾರು ಐದು ವರ್ಷಗಳ ಹಿಂದೆ ತಿಂದಿರುವ ಹ್ಯಾಮ್ ರೋಲ್ ಒಂದರ ಪರಿಣಾಮ ಇಂದಿಗೂ ಹೊಟ್ಟೆಯಲ್ಲಿ ಉಪದ್ರವ ಅನುಭವಿಸುತ್ತಿದ್ದು ಇಂದಿಗೂ ವಾಯು ವಿಸರ್ಜನೆಯನ್ನು ಅನುಭವಿಸುತ್ತಿದ್ದಾನೆಂದು ವರದಿಯಾಗಿದೆ.

46 ವಯೋಮಾನದ ಟಿರಾನ್ ಪ್ರೇಡ್ಸ್ ಎಂಬ ವ್ಯಕ್ತಿ ತನ್ನ ಕುಟುಂಬದ ಸಮೇತ ಫುಡ್ ಸ್ಟಾಲ್ ಒಂದಕ್ಕೆ 2017 ರಲ್ಲಿ ಭೇಟಿ ನೀಡಿದ್ದಾಗ ಅಲ್ಲಿನ ಫೆಸ್ಟಿವ್ ಹ್ಯಾಮ್ ರೋಲ್ ಒಂದನ್ನು ಖರೀದಿಸಿ ತಿಂದಿದ್ದರು. ತಿಂದ ಕೆಲ ಸಮಯದ ಬಳಿಕ ಅವರ ಹೊಟ್ಟೆಯಲ್ಲಿ ಕ್ರ್ಯಾಂಪ್ ಉಂಟಾಯಿತು. ತದನಂತರ ಟಿರಾನ್ ಡಯಾರಿಯಾ ಹಾಗೂ ವಾಂತಿಯನ್ನೂ ಅನುಭವಿಸಿದ್ದರು ಎಂದು ಐರಿಶ್ ಮಿರರ್ ಎಂಬ ಮಾಧ್ಯಮ ವರದಿ ಮಾಡಿದೆ. ಆದರೆ ಅವರ ಶಮನ ಅಲ್ಲಿಗೆ ಕೊನೆಗೊಳ್ಳಲಿಲ್ಲ. ಮುಂದೆ ಸತತವಾಗಿ ಆ ಸಮಸ್ಯೆಯಿಂದ ಬಳಲುವಂತಾಯಿತು ಎಂದು ಅವರ ಪರ ವಾದ ಮಾಡುತ್ತಿರುವ ವಕೀಲರು ಅಲ್ಲಿನ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಏನಿದು ಸಲ್ಮೋನೆಲ್ಲಾ ಬ್ಯಾಕ್ಟೀರಿಯಾ ಸೋಂಕು 
ವಕೀಲರ ಪ್ರಕಾರ ಮೊದಲಿಗೆ ಅವರು ಸಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾ ಸೋಂಕಿನಿಂದ ಬಳಲುತ್ತಿರಬಹುದೆಂದು ಅಂದಾಜಿಸಲಾಗಿತ್ತು. ಆದರೆ ಅವರ ಬಳಲಿಕೆ ಅಲ್ಲಿಗೆ ಕೊನೆಗೊಳ್ಳಲಿಲ್ಲ, ನಂತರ ಅವರು ನಿಯಮಿತವಾಗಿ ಅನಿಯಂತ್ರಿತವಾದ ವಾಯು ವಿಸರ್ಜನೆ, ಹೊಟ್ಟೆ ಶಬ್ದ ಮಾಡುವಿಕೆ ಮುಂತಾದ ಸಮಸ್ಯೆಗಳನ್ನು ವಿಶೇಷವಾಗಿ ರಾತ್ರಿಯ ಸಮಯದಲ್ಲೇ ಅನುಭವಿಸಬೇಕಾಯಿತು. ಇದರಿಂದಾಗಿ ಅವರು ನಿದ್ರೆಗೆ ಅಡಚಣೆ ಆಯಿತಲ್ಲದೆ ಸಾರ್ವಜನಿಕವಾಗಿ ಅವರ ಈ ಲಕ್ಷಣವು ಅವರಿಗೆ ಎಲ್ಲರ ಮುಂದೆ ಮುಜುಗರ ಉಂಟು ಮಾಡುವಂತಾಯಿತು.

ಇದನ್ನೂ ಓದಿ:  Lovely Wake up: ಮಲಗಿದ್ದ ಮಹಿಳೆಯನ್ನು ಎಬ್ಬಿಸಿದ ಆನೆ, ಎಲ್ಲೆಡೆ ವಿಡಿಯೋ ವೈರಲ್

ಈ ಬಗ್ಗೆ ಮುಂದುವರೆದ ಅವರ ವಕೀಲರಾದ ರಾಬರ್ಟ್ ಪಾರ್ಕಿನ್ ಅವರು ನ್ಯಾಯಾಲಯದ ಮುಂದೆ ಹೇಳುತ್ತಾರೆ, "ತಮ್ಮ ಕಕ್ಷೀದಾರರ ಹೊಟ್ಟೆಯು ಈಗಲೂ ಸದ್ದು ಮಾಡುವುದು ಮುಂದುವರೆದಿದ್ದು ಇದರಿಂದಾಗಿ ಅವರ ನಿದ್ರೆ ಅಡಚಣೆಯಾಗಿದೆ, ಇದರ ತೀವ್ರತೆ ಹೇಗಾಗುತ್ತಿದೆ ಎಂದರೆ ಅವರ ಜೀವನವೇ ಬದಲಾಗಿ ಹೋಗುತ್ತಿದೆ" ಎಂದು ವಾದ ಮಂಡಿಸಿದ್ದಾರೆ.

ಫುಡ್ ಸ್ಟಾಲ್ ವಿರುದ್ಧ  ಪರಿಹಾರ ಧನದ ಮೊಕದ್ದಮೆ ಹೂಡಿದ ಟಿರಾನ್ 
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿರಾನ್ ಈಗ ಆ ಫುಡ್ ಸ್ಟಾಲ್ ವಿರುದ್ಧ 200000 ಪೌಂಡುಗಳ (ಒಂದು ಕೋಟಿ ರೂಪಾಯಿಗೂ ಅಧಿಕ) ಪರಿಹಾರ ಧನದ ಮೊಕದ್ದಮೆ ಹೂಡುತ್ತಿದ್ದಾರೆನ್ನಲಾಗಿದೆ. ಆದರೆ ಅವರು ಈ ಮೊಕದ್ದಮೆಯನ್ನು ಹೂಡುವುದು ಅವರಿಗೆ ನಿಜವಾಗಿಯೂ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಸೋಂಕು ಉಂಟಾಗಿದೆಯೆ ಅಥವಾ ಇಲ್ಲವೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದೂ ಸಹ ತಿಳಿದುಬಂದಿದೆ.

ಆದರೆ, ಇದೇ ಸಂದರ್ಭದಲ್ಲಿ ಆ ಫುಡ್ ಸ್ಟಾಲ್ ಪರ ವಾದ ಮಾಡುತ್ತಿರುವ ಕೌನ್ಸೆಲ್ ಕೋರ್ಟಿಗೆ ಹ್ಯಾಮ್ ರೋಲ್ ಕತ್ತರಿಸಿದ ಚಾಕುವಿನ ಮೇಲೆ ಇ-ಕೋಲಿ ಬ್ಯಾಕ್ಟೀರಿಯಾ ಕಂಡುಬಂದಿದೆಯೇ ಹೊರತು ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಕಂಡುಬಂದಿಲ್ಲ ಎಂದು ಹೇಳಿದೆ ಎನ್ನಲಾಗಿದೆ. ಆದರೆ, ಇದೇ ಸಂದರ್ಭದಲ್ಲಿ ವಕೀಲರಾದ ಫಿಲಿಪ್ ಡೇವಿ ಅವರು ಇದು ಇಕೋಲಿ ಬ್ಯಾಕ್ಟೀರಿಯಾಗೆ ಸಂಬಂಧಿಸಿದ ಪ್ರಕರಣ ಇಲ್ಲವಾಗಿದ್ದು ಇದನ್ನು ಸಾಬೀತು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Wrist Phobia: ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ ಈ ಮಹಿಳೆ! ತನ್ನದೇ ಕೈಯನ್ನು ಕಂಡರೆ ಭಯಗೊಂಡು ಕಿರುಚುತ್ತಾಳಂತೆ!

ಒಟ್ಟಿನಲ್ಲಿ ಇದು ನಿಜಕ್ಕೂ ಹ್ಯಾಮ್ ರೋಲ್ ನಿಂದ ಟಿರಾನ್ ಪ್ರಸ್ತುತ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆಯೇ ಎಂಬುದು ಸಾಬೀತಾಗಬೇಕಿದ್ದು ಅದು ಸಾಬೀತಾಗುವವರೆಗೆ ಟಿರಾನ್ ಕಾಯಬೇಕಾಗಿದೆ.
Published by:Ashwini Prabhu
First published: