ಬಹುತೇಕರು ವೀಕೆಂಡ್ (Weekend) ಬಂದ್ರೆ ಸಾಕು ಮನೆಯಲ್ಲಿ (Home) ಇರೋದೇ ಇಲ್ಲ. ಬೇರೆ ಬೇರೆ ಊರುಗಳಿಗೆ ಪ್ರವಾಸ (Tour) ಹೋಗ್ತಾರೆ. ಅಲ್ಲಿಯ ಜನ, ಭಾಷೆ, ತಿಂಡಿ, ಸ್ಥಳ ಹಾಗೂ ಐತಿಹಾಸಿಕ ಮಾಹಿತಿ ಪಡೆಯುತ್ತಾರೆ. ಇತ್ತೀಚೆಗೆ ಯೂಟ್ಯೂರ್ ಗಳು, ಬ್ಲಾಗರ್ ಗಳ ಸಂಖ್ಯೆ ಹೆಚ್ಚಿದೆ. ಇವರೆಲ್ಲಾ ಯಾವುದೇ ಊರಿನ, ಯಾವುದೇ ಮೂಲೆಯಲ್ಲಿನ ವಿಶಿಷ್ಟ ಖಾದ್ಯವನ್ನೂ (Recipe) ಸಹ ಪರಿಚಯಿಸುತ್ತಾರೆ. ಇದು ತುಂಬಾ ಜನರಿಗೆ ಆ ಊರಿಗೆ ಹೋದಾಗ ಅಲ್ಲಿ ಹೋಗಿ ಆ ಖಾದ್ಯವನ್ನು ಸವಿಯಲು ಸಹಾಯ ಮಾಡಿ ಕೊಟ್ಟಂತಾಗುತ್ತದೆ. ಕೆಲವೊಮ್ಮೆ ನಮ್ಮ ಸುತ್ತಮುತ್ತಲ ಕೆಲವೊಂದು ಪ್ರತಿಭೆಗಳನ್ನು, ಖಾದ್ಯದ ರುಚಿಯನ್ನು ನಾವು ಕಂಡರೂ ಕಾಣದಂತೆ, ತಿಂದರೂ ಶ್ಲಾಘಿಸದೇ ಹೋಗಿ ಬಿಡುತ್ತೇವೆ.
ನೀವು ಬೇರೆ ಬೇರೆ ಊರುಗಳಿಗೆ ಕೆಲವೊಂದು ವಿಶಿಷ್ಟ ಖಾದ್ಯ ಸವಿಯಲೆಂದೇ ಹೋಗುವ ಅಭ್ಯಾಸ ಹೊಂದಿರಬಹುದು. ಅಲ್ಲಿ ಅದನ್ನು ಮಾಡುವ ರೀತಿ ನಿಮಗೆ ಖುಷಿ ಕೊಟ್ಟಿರಬಹುದು. ಅಡುಗೆ ಮಾಡಿದವನಿಗಿಂತ ಬಡಿಸಿದವನೇ ಎಲ್ಲರ ಹೊಗಳಿಕೆಗೆ ಪಾತ್ರಾನಾಗ್ತಾನೆ ಅನ್ನೋ ಮಾತಿದೆ.
ಹಳ್ಳಿ ಕಡೆಯ ಮನೆಗಳಲ್ಲಿ ಅಡುಗೆ ಮಾಡಿದ್ರೆ ಸಾಕಾಗಲ್ಲ. ಅದನ್ನು ಚೆನ್ನಾಗಿ ಬಡಿಸಬೇಕು ಅಂತಾ ಹೇಳ್ತಾರೆ. ಹೀಗೆ ನೀವೂ ಎಲ್ಲೋ ಕಾಫಿ ಮಾಡುವವನ ಬಳಿ ಹೋದಾಗ ಆತ ಚಿಕ್ಕ ಚಿಕ್ಕ ಗ್ಲಾಸ್ ಹಿಡಿದು, ಕೈಯನ್ನು ಆಕಾಶದೆತ್ತರಕ್ಕೆ ಹೋಗಿಸಿ,
ಚುರ್ ಅಂತಾ ಇನ್ನೊಂದು ಗ್ಲಾಸ್ ಗೆ ಕಾಫಿ, ಚಹಾ ಫಿಲ್ಟರ್ ಮಾಡುವಾಗ ಎಲ್ಲರ ಚಿತ್ತ ಅಲ್ಲೇ ಇರುತ್ತೆ. ವಾಹ್ ಏನಪ್ಪಾ, ಸ್ವಲ್ಪನೂ ಕೆಳಗೆ ಚೆಲ್ಲದೇ ಎಷ್ಟೊಂದು ಚೆನ್ನಾಗಿ ಚಹಾ ಮಾಡಿ ಕೊಟ್ಟ ಅಂತಾ ಸ್ನೇಹಿತರ ಬಳಿ ಮಾತಾಡಿಕೊಳ್ಳುತ್ತೇವೆ. ಇಲ್ಲದಿದ್ದರೆ ಮನಸಲ್ಲಿ ಅಂದುಕೊಳ್ತೇವೆ.
ಇಂತಹ ಹಲವು ವಿಡಿಯೋಗಳನ್ನು ನೀವು ಟ್ವಿಟ್ಟರ್, ವ್ಯಾಟ್ಸ್ಯಾಪ್, ಯೂಟ್ಯೂಬ್ ಗಳಲ್ಲಿ ನೋಡಿರಬಹುದು. ಕೆಲವರಿಗೆ ತಾವು ಮಾಡುವ ಕೆಲಸದ ಮೇಲೆ ಎಂಥಾ ಪ್ರೀತಿ ಇರುತ್ತೆ ಅಂದ್ರೆ. ಎಷ್ಟೇ ಹೊತ್ತು ನಿಂತರೂ,
ಒಳ್ಳೆಯ ವ್ಯಕ್ತಿತ್ವ ಹೊಂದಿ
ಎಷ್ಟೇ ಜನ ಇದ್ದರೂ, ಒಂದು ಸ್ವಲ್ಪವೂ ಗಡಿ ಬಿಡಿ ಮಾಡದೇ, ಶ್ರದ್ಧೆ ಮತ್ತು ಪ್ರೀತಿಯಿಂದ ಆಹಾರ ತಯಾರಿಸುತ್ತಾರೆ. ಇದು ಅವರ ಸ್ವಭಾವ ತೋರಿಸುತ್ತದೆ. ಇದು ಅವರ ಒಳ್ಳೆಯ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ.
We need to get ‘Waiter Productivity’ recognised as an Olympic sport. This gentleman would be a contender for Gold in that event… pic.twitter.com/2vVw7HCe8A
— anand mahindra (@anandmahindra) January 31, 2023
ಇದು ತುಂಬಾ ಜನರ ಅಚ್ಚರಿಗೆ ಕಾರಣವಾದ್ರೆ, ಇನ್ನು ಕೆಲವರಿಗೆ ಇಷ್ಟೊಂದು ದೋಸೆ ಪ್ಲೇಟ್ ಒಂದೇ ಕೈಯಲ್ಲಿ ಹಿಡಿದು ಪ್ರತೀ ಟೇಬಲ್ ಗೆ ಹೋಗಿ ಸರ್ವ್ ಮಾಡಿದ್ದಾನೆ. ಇದು ತಂಬಾ ಜನರ ಮೆಚ್ಚುಗಗೆ ಕಾರಣವಾಗಿದೆ.
16 ದೋಸೆ ತಟ್ಟೆಗಳನ್ನು ಗ್ರಾಹಕರಿಗೆ ತಲುಪಿಸಿದ ವ್ಯಕ್ತಿ
ಹದಿನಾರು ದೋಸೆ ತಟ್ಟೆಗಳನ್ನು ಹೀಗೆ ಒಂದೇ ಏಟಿಗೆ ಕೈಯಲ್ಲಿ ಹಿಡಿದು ತಂದು ಗ್ರಾಹಕರಿಗೆ ತಲುಪಿಸಿದ್ದಾನೆ. ಈ ವಿಡಿಯೋ ಈಗಾಗಲೇ 1.5 ಮಿಲಿಯನ್ ಜನರು ನೋಡಿದ್ದಾರೆ.
ವಿಭಿನ್ನ ಕಮೆಂಟ್ ಪಡೆದ ಚಲನಚಿತ್ರ. ಸರ್ವರ್ಗಳು ಹುಟ್ಟಿನಿಂದಲೇ ಎಂಜಿನಿಯರ್ ಎಂದು ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದಾರೆ. ಹೀಗೆ ಹಲವರ ಹಲವು ವಿಡಿಯೀ ಮಾಡಿದ್ದಾರೆ.
ಇದನ್ನೂ ಓದಿ: ತೂಕ ಇಳಿಕೆಯಿಂದ ಸಂಧಿವಾತ ಸಮಸ್ಯೆಗೂ ಪರಿಹಾರ, ಹೇಗೆ ಅಂತೀರಾ? ಇಲ್ಲಿದೆ ವಿವರ
ಇನ್ನೊಬ್ಬರು ಒಂದರ ಮೇಲೊಂದ ಪ್ಲೇಟ್ ಇಟ್ಟಾಗ ದೋಸೆ ಶುಚಿಯಾಗಿರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ? ಮತ್ತೊಬ್ಬರು ಓಹೋ ಇದು ಬೆಂಗಳೂರಿನ ಗಾಂಧೀಬಜಾರ್ ನ ವಿದ್ಯಾರ್ಥಿ ಭವನ ಹೋಟೆಲ್ ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ