ಇಂದಿನ ಆರೋಗ್ಯಕರ ಸುದ್ದಿ(Healthy News) ನಿಮಗಾಗಿ ಇದ್ದು ಈ ಮುದ್ದಾದ ವೀಡಿಯೊವು ಇಂದು ತುಸು ವಿಶೇಷವನ್ನು ನಿಮಗಾಗಿ ತಂದಿದೆ. ವ್ಯಕ್ತಿಯೊಬ್ಬ ಯುನಿಕಾರ್ನ್(Unicorn) ನಂತೆ ಬಟ್ಟೆ ಧರಿಸಿ ಹಿಮವನ್ನು ತೆರವುಗೊಳಿಸುವ (Snow Clearing Video) ವಿಡಿಯೋ ಆನ್‌ಲೈನ್‌ನಲ್ಲಿ ಇದೀಗ ವೈರಲ್ ಆಗಿದೆ. ಬ್ಯುಟೆಂಗೆಬೀಡೆನ್(Beutengebeiden) ಇದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು ಈಗಾಗಲೇ 73 ಸಾವಿರಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ.
ವರ್ಣರಂಜಿತ ವೇಷಭೂಷಣ
ಕ್ಲೀವ್‌ಲ್ಯಾಂಡ್‌ನ ಲೇಕ್‌ವುಡ್‌ನಲ್ಲಿ ಆಕರ್ಷಕ ಗುಲಾಬಿ ಉಡುಗೆಯನ್ನು ಧರಿಸಿರುವ ವ್ಯಕ್ತಿಯೊಬ್ಬ ಕಾಲುದಾರಿಗಳ ಮೇಲೆ ಹಿಮವನ್ನು ತೆರವುಗೊಳಿಸುತ್ತಿರುವುದನ್ನು ಈ ವೀಡಿಯೋದಲ್ಲಿ ನೋಡಬಹುದು.
ಈ ವ್ಯಕ್ತಿ ರಸ್ತೆಯಲ್ಲಿನ ಹಿಮವನ್ನು ತೆರವುಗೊಳಿಸುತ್ತಾ ಮುಂದೆ ಸಾಗುತ್ತಾನೆ. ಈ ವರ್ಣರಂಜಿತ ವೇಷಭೂಷಣವು ನಿಸ್ಸಂಶಯವಾಗಿ ಸುತ್ತಮುತ್ತಲಿನ ಜನರ ಗಮನ ಸೆಳೆಯುವುದರ ಜೊತೆಗೆ ಜನರು ಈ ಹಾವಭಾವಕ್ಕೆ ಸಂಪೂರ್ಣವಾಗಿ ಬೆರಗಾದರು.
ವ್ಯಕ್ತಿಯ ಚಿತ್ರವನ್ನು ಟ್ವಿಟ್ಟರ್ ಬಳಕೆದಾರ ಸುಜಿ ಲೀ ಕೂಡ ಪೋಸ್ಟ್ ಮಾಡಿದ್ದಾರೆ. ಶೀರ್ಷಿಕೆಯಲ್ಲಿ, "ಲೇಕ್‌ವುಡ್‌ನಲ್ಲಿ ವ್ಯಕ್ತಿಯೊಬ್ಬರು ಯುನಿಕಾರ್ನ್ ಉಡುಗೆಯನ್ನು ಧರಿಸಿ ಹಿಮವನ್ನು ತೆರವುಗೊಳಿಸುತ್ತಿದ್ದಾರೆ . ಇಂತಹ ಸಮುದಾಯವೇ ನನಗೆ ಬೇಕಾಗಿರುವುದು " ಎಂದು ಅವರು ಬರೆದಿದ್ದಾರೆ.
ಸೋಮವಾರ ಬೆಳಿಗ್ಗೆಯ ಹೊತ್ತಿಗೆ, ಟ್ವೀಟ್ 7,000 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲ್ಪಟ್ಟಿದೆ . ಟ್ವೀಟ್‌ಗೆ ಜಾನ್ ಕಾರ್ಲೆಟ್ ಅವರು 2020 ರಲ್ಲಿ ಕ್ರಿಸ್ಮಸ್ ದಿನದಂದು ತೆಗೆದ ಯುನಿಕಾರ್ನ್ ಫೋಟೋದೊಂದಿಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ: Pink Marriage: ಪಿಂಕ್ ಬಣ್ಣದ ಜೊತೆಗೆ 40 ವರ್ಷ ಡೇಟಿಂಗ್, ನಂತರ ಮದುವೆ! ಹೀಗೂ ಇರ್ತಾರೆ
ದೃಶ್ಯ ಎಷ್ಟು ಮುದ್ದಾಗಿದೆ
"ಈ ಕ್ರಿಸ್‌ಮಸ್‌ನಲ್ಲಿ ಹಿಮ ಬೀಳಲಿಲ್ಲ ಎಂದು ನಾನು ಸ್ವಲ್ಪ ನಿರಾಶೆಗೊಂಡಿದ್ದೆ. ನಾನು ಅವನನ್ನು ಮತ್ತೆ ನೋಡಬೇಕೆಂದು ಆಶಿಸಿದ್ದೆ. ಅವನು ಬೀದಿಯುದ್ದಕ್ಕೂ ನೆರೆಹೊರೆಯವರ ವಾಹನಪಥವನ್ನು ತೆರವುಗೊಳಿಸಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ." ಎಂದು ಕಾರ್ಲೆಟ್ ಕಾಮೆಂಟ್ ಮಾಡಿದ್ದಾರೆ .ಕ್ಲೀವ್ಲ್ಯಾಂಡ್ ಚಳಿಗಾಲವು ವರ್ಷದ ಮಂಕುಕವಿದ ಸಮಯವಾಗಿದೆ.
ಆದರೆ ಈಗ ನಾವು ಲೇಕ್‌ವುಡ್‌ನಲ್ಲಿ ಮತ್ತೆ ಹಿಮ ಬೀಳುವ ಸಮಯಕ್ಕಾಗಿ ಹಾಗೂ ಮಾಂತ್ರಿಕ ಯುನಿಕಾರ್ನ್‌ನ ಹಿಂತಿರುಗುವಿಕೆಗಾಗಿ ಕಾಯಬಹುದು.ಈ ದೃಶ್ಯ ಎಷ್ಟು ಮುದ್ದಾಗಿದೆ ಅಲ್ಲವೇ? ನಿಸ್ಸಂಶಯವಾಗಿ, ನೆಟಿಜನ್‌ಗಳು ಕೂಡ ಇದೇ ರೀತಿ ಭಾವಿಸಿ ಕಾಮೆಂಟ್ ಕೂಡ ಮಾಡಿದ್ದಾರೆ .
ವಿಡಿಯೋ ನೋಡಿ:
Perfect.. 😅 https://t.co/7tO8ySpB1z pic.twitter.com/tbYyfNmE6s
— Buitengebieden (@buitengebieden_) January 24, 2022
ಬೆಥನಿ ಸ್ಟಾಲಿ ಹೆಸರಿನ ಬಳಕೆದಾರರು ಕೆಲವು ಫೋಟೋಗಳು ಮತ್ತು ವೀಡಿಯೊವನ್ನು ಲೇಕ್‌ವುಡ್ ಸಮುದಾಯದ ಫೇಸ್‌ಬುಕ್ ಗುಂಪಿಗೆ ಪೋಸ್ಟ್ ಮಾಡಿದ್ದಾರೆ, " ಎಂತಹ ಅದ್ಭುತ ಸಮುದಾಯ!! ನಿಜಕ್ಕೂ ಅರ್ಥಪೂರ್ಣ. ಯುನಿಕಾರ್ನ್ ಈ ವರ್ಷ ಮತ್ತೆ ಮರಳಿತು ಮತ್ತು ಅದು ನನ್ನ ರಾತ್ರಿಯನ್ನು ಸಂಪೂರ್ಣಗೊಳಿಸಿತು !! ನನ್ನ ಮತ್ತು ನನ್ನ ಕುಟುಂಬಕ್ಕೆ ಆತ ಹಾದುಹೋಗುವುದನ್ನು ವೀಕ್ಷಿಸುವುದೇ ಒಂದು ಸಂಭ್ರಮ. ಧನ್ಯವಾದಗಳು, ಗೆಳೆಯ."
ಅನಿರೀಕ್ಷಿತ ದೃಶ್ಯ
ಇಂತಹುದೇ ಒಂದು ದೃಶ್ಯ 2020 ರಲ್ಲಿ ಪಶ್ಚಿಮ ವಿಕ್ಟೋರಿಯಾದ, ಸೂಕ್‌ನ ವ್ಯಾಂಕೋವರ್ ದ್ವೀಪದಲ್ಲಿ ಕೂಡ ಕಂಡು ಬಂದಿತ್ತು . ಚಳಿಗಾಲದ ಹವಾಮಾನ ವೈಪರೀತ್ಯ ಅದರಲ್ಲೂ , ಕೆಲವು ಸ್ಥಳಗಳಲ್ಲಿ 36 ಸೆಂಟಿಮೀಟರ್ ಗಳಷ್ಟು ತಾಜಾ ಹಿಮಪಾತ ವ್ಯಾಂಕೋವರ್ ದ್ವೀಪದಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಲ್ಲ .
ಇದನ್ನೂ ಓದಿ: ಸರೋವರಗಳು ಗುಲಾಬಿ ಬಣ್ಣಕ್ಕೆ ತಿರುಗುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ..
ಕೆನಡಿಯನ್ನರು ಎಲ್ಲಾ ತರಹದ ಕೆನಡಿಯನ್ ಹಿಮ ದಿನಗಳಿಗೂ ಒಗ್ಗಿಕೊಂಡಿದ್ದಾರೆ . ಕ್ಲೋಯ್ ನಾರ್ತ್ ಮತ್ತು ಅವರ ಮಕ್ಕಳು ವಿಕ್ಟೋರಿಯಾದ ಪಶ್ಚಿಮದಲ್ಲಿರುವ ಸೂಕ್‌ನಲ್ಲಿ ಕಂಡ ಅನಿರೀಕ್ಷಿತ ದೃಶ್ಯದಿಂದ ಎಚ್ಚರಗೊಂಡರು . ಆದರೆ ಆ ದೃಶ್ಯ ಹಿಂದಿನ ರಾತ್ರಿ ಬಿದ್ದ ಹಿಮದ ಹೊದಿಕೆಯದ್ದಾಗಿರಲಿಲ್ಲ .
ಟೋಮಿನ್ನಿ ರಸ್ತೆಯಲ್ಲಿ ಒಂದು ದೊಡ್ಡ ಸ್ನೋ ಬ್ಲೋವರ್ ಅನ್ನು ತಳ್ಳುತ್ತಿರುವ ಪ್ರಕಾಶಮಾನವಾದ ಗುಲಾಬಿ ಆಕೃತಿಯನ್ನು ನಾರ್ತ್ ಗಮನಿಸಿದರು. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದು ಗಾಳಿ ತುಂಬಿದ ಯುನಿಕಾರ್ನ್ ಸೂಟ್‌ನಲ್ಲಿ ಆಕೆಯ ನೆರೆಹೊರೆಯವರಾಗಿದ್ದರು .
ನಾರ್ತ್ CTV ವ್ಯಾಂಕೋವರ್ ಐಲ್ಯಾಂಡ್‌ಗೆ, "ಕಿಟಕಿಯಿಂದ ಹಿಮದ ನೇಗಿಲು ಹೊಂದಿರುವ ಯುನಿಕಾರ್ನ್ ಅನ್ನು ನೋಡುವುದು ಖಂಡಿತವಾಗಿಯೂ ಆಶ್ಚರ್ಯಕರವಾಗಿದೆ" ಎಂದು ಹೇಳಿದರು. ನಾರ್ತ್ ಸೆರೆಹಿಡಿದ ಕಿರು ವೀಡಿಯೋದಲ್ಲಿ ಅವರ ಮಗಳು ಸಂತೋಷದಿಂದ ಆ ದೃಶ್ಯವನ್ನು ನೋಡಿ ನಗುತ್ತಿರುವುದನ್ನು ಆಲಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ