Periods​ ನೋವು ಹೇಗಿರುತ್ತೆ ಎಂದು ಅನುಭವಿಸಿದ ಯುವಕರು! ವಿಡಿಯೋ ಇಲ್ಲಿದೆ ನೋಡಿ

ಪುರುಷರಿಗೆ ಮಹಿಳೆಯರು ಪಿರಿಯಡ್ಸ್​ ಸಮಯದಲ್ಲಿ ವಿಪರೀತ ನೋವು ಅನುಭವಿಸುತ್ತಾರೆ ಎಂಬುದು ಗೊತ್ತಿರುವುದಿಲ್ಲ. ಕೆಲವರಿಗಂತೂ ಮನೆಯಲ್ಲಿ ತಾಯಿ, ತಂಗಿ, ಅಕ್ಕ ಮುಟ್ಟಿನ ಸಮಯದಲ್ಲಿ ನರಳಾಡುವುದನ್ನು ಕಂಡು ಅವರ ಸಂಕಟದ ಬಗ್ಗೆ ಗೊತ್ತಿರುತ್ತದೆ.

ಪಿರಿಯಡ್ಸ್​​ ಪೇನ್​ ಸಿಮ್ಯುಲೇಟರ್

ಪಿರಿಯಡ್ಸ್​​ ಪೇನ್​ ಸಿಮ್ಯುಲೇಟರ್

  • Share this:
    ಮುಟ್ಟಿನ ನೋವು ಹೇಗಿರುತ್ತದೆ ಎಂಬುದು ಮಹಿಳೆಯರಿಗೆ ಮಾತ್ರ ತಿಳಿದಿರುತ್ತದೆ. ಮಹಿಳೆಯರು ಮಾತ್ರ ಆ ಸಂಕಟದ ನೋವನ್ನು ಅನುಭವಿಸಿರುತ್ತಾರೆ. ಆದರೆ ಕೇರಳದ (Kerala) ಕೊಚ್ಚಿಯಲ್ಲಿರುವ (Kocchi) ಲುಲು ಮಾಲ್​ನಲ್ಲಿ ಪಿರಿಯಡ್ಸ್​​ (Periods) ಸಮಯದಲ್ಲಿ ಮಹಿಳೆಯರಿಗೆ ಕಾಣಿಸುವ ನೋವು ಪುರುಷರಿಗೂ ತಿಳಿಯಲಿ ಮತ್ತು ಅದರ ಅನುಭವ ಹೇಗಿರುತ್ತದೆ ಎಂಬುದನ್ನು ತೋರ್ಪಡಿಸುವ ಸಿಮ್ಯುಲೇಟರ್​ ತಂತ್ರಜ್ಞಾನವನ್ನು ಇರಿಸಲಾಗಿತ್ತು. ಮಾತ್ರವಲ್ಲದೆ, ಪುರುಷರು ಮಾಲ್​ಗೆ ತೆರಳಿದಾಗ ಪಿರಿಯಡ್ಸ್​ ಅನುಭವನ್ನು ಪಡೆಯಲು ಮುಕ್ತ ಅವಕಾಶ ತೆರೆದಿಟ್ಟಿತ್ತು. ಅನೇಕ ಪುರುಷರು ಈ ಅನುಭವವನ್ನು ಪಡೆದಿದ್ದಾರೆ. ಸದ್ಯ ಅವರ ಚೀರಾಟದ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಿರಿಯಡ್ಸ್​ ಸಮಯದಲ್ಲಿ ಮಹಿಳೆಯರು ಸಾಕಷ್ಟು ನೋವು ಅನುಭವಿಸುತ್ತಾರೆ. ಒಬ್ಬೊಬ್ಬರಿಗೆ ಈ ನೋವು ಒಂದೊಂದು ತರ ಇರುತ್ತದೆ. ಕೆಲವರಿಗೆ ಹೊಟ್ಟೆ ನೋವು ಪ್ರಾರಂಭವಾಗಿ ನೆಲಕ್ಕೆ ಬಿದ್ದು ಹೊರಳಾಡುವಷ್ಟು ನೋವು ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಿಗೆ ಸಹಜ ನೋವಿರುತ್ತದೆ. ಮತ್ತೆ ಹಲವರಿಗೆ ಹೊಟ್ಟೆ ನೋವಿಲ್ಲದೇ ಇದ್ದರು, ಸೊಂಟ, ಕೈ-ಕಾಲು ಸೆಳೆಯುತ್ತಿರುತ್ತದೆ. ಆದರೂ ಮಹಿಳೆಯರು ಈ ಮುಟ್ಟಿನ ನೋವಿನಿಂದ ಮಾನಸಿಕವಾಗಿ ಕಿರಿಕಿರಿ ಅನುಭವಿಸುತ್ತಿರುತ್ತಾರೆ.

    ಪುರುಷರಿಗೆ ಮಹಿಳೆಯರು ಪಿರಿಯಡ್ಸ್​ ಸಮಯದಲ್ಲಿ ವಿಪರೀತ ನೋವು ಅನುಭವಿಸುತ್ತಾರೆ ಎಂಬುದು ಗೊತ್ತಿರುವುದಿಲ್ಲ. ಕೆಲವರಿಗಂತೂ ಮನೆಯಲ್ಲಿ ತಾಯಿ, ತಂಗಿ, ಅಕ್ಕ ಮುಟ್ಟಿನ ಸಮಯದಲ್ಲಿ ನರಳಾಡುವುದನ್ನು ಕಂಡು ಅವರ ಸಂಕಟದ ಬಗ್ಗೆ ಗೊತ್ತಿರುತ್ತದೆ. ಆದರೆ ಇನ್ನು ಕೆಲವರಿಗೆ ಇದಾವುದು ತಿಳಿಯದು. ಹೀಗಿರುವಾಗ ಅಂತಹ ಯುವಕರಿಗೆ ಮುಟ್ಟಿನ ಸಮಯಲ್ಲಿ ಮಹಿಳೆಯರಿಗೆ ಆಗುವ ನಿಜವಾದ ಅನುಭವ ಪುರುಷರಿಗೂ ಗೊತ್ತಾಗಲಿ ಎಂಬ ನಿಟ್ಟಿನಲ್ಲಿ ಈ ತಂತ್ರಜ್ಞಾನವನ್ನು ಮಾಲ್​ನಲ್ಲಿ ಇಟ್ಟಿದೆ. ಅನೇಕ ಪುರುಷರು ಇದರ ಅನುಭವ ಪಡೆದಿದ್ದಾರೆ.

    ಕೇರಳದ ಕೊಚ್ಚಿಯ ಲುಲು ಮಾಲ್​ನಲ್ಲಿ ಈ ರೀತಿ ತಂತ್ರಜ್ನಾವನ್ನು ತೆರೆದಿಟ್ಟಿದೆ. ಯುವಕರು ಮುಟ್ಟಿನ ನೋವಿನ ಅನುಭವ ಹೇಗಿರಲಿದೆ ಎಂಬುದನ್ನು ಅನುಭವಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅನೇಕರು ಇದರಲ್ಲಿ ಬೊಬ್ಬೆ ಹೊಡೆಯುವುದನ್ನು ಕಾಣಬಹುದಾಗಿದೆ. ಹೆಣ್ಣು ಮಕ್ಕಳು ಎಷ್ಟು ಕಷ್ಟ ಅನುಭವಿಸುತ್ತಾರೆ ಎಂಬ ಅರಿವನ್ನು ಇದು ತೋರಿಸುತ್ತದೆ.

    ಅನೇಕರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಿದ್ದಾರೆ. Feelthepain ಎಂಬ ಹ್ಯಾಶ್​ ಟ್ಯಾಗ್​ ಬಳಸಿ ಶೇರ್​ ಮಾಡುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಕಪ್​ ಆಫ್​ ಲೈಫ್​ನ ಭಾಗವಾಗಿ ನಡೆಸಲಾಯಿತು.






    ಇದನ್ನೂ ಓದಿ: Army Background: ಬಾಲಿವುಡ್​ನ ಈ ನಟಿಯರು ಸೇನಾ ಕುಟುಂಬದಿಂದ ಬಂದವರು! ಇವರ ಫ್ಯಾಮಿಲಿ ಬಗ್ಗೆ ತಿಳಿದುಕೊಳ್ಳಲೇಬೇಕು

    ಮುಟ್ಟಿನ ನೋವನ್ನು ಅನುಭವಿಸಿದ್ದೀರಾ ಎಂದು ಅಲ್ಲಿನ ಸಂಸದ ಹೈಬಿ ಈಡನ್​ ಬಳಿ ಕೇಳಿದಾಗ, ‘‘ನಾನು ಪ್ರಯತ್ನಿಸಿದೆ. ಇದು ನೋವಿನಿಂದ ಕೂಡಿಲ್ಲ. ಆದರೆ ತುಂಬಾ ಕಿರಿಕಿರಿ ಉಂಟು ಮಾಡುತ್ತದೆ’’ ಎಂದು ಹೇಳಿದ್ದಾರೆ.

    ಇಂಡಿಯನ್​ ಮೆಡಿಕಲ್​ ಅಶೋಸಿಯೇಷನ್​ ಕೊಚ್ಚಿಯ ಲುಲು ಮಾಲ್​ನಲ್ಲಿ ಈ ಪಿರಿಯಡ್ಸ್​​ ಪೇನ್​ ಸಿಮ್ಯುಲೇಟರ್​ ಸೌಲಭ್ಯವನ್ನು ಇರಿಸಲಾಗಿದೆ. ಬಹುತೇಕರು ಈ ಅನುಭವನ್ನು ಪಡೆಯಲು ಹಿಂದೆ ಸರಿದರು. ಇನ್ನು ಕೆಲವರು ಇದರಿಂದ ಏನಾಗುತ್ತದೆ ನೋಡೋಣ ಎಂದು ತಿಳಿದು ಮುಂದೆ ಬಂದವರು ಇದ್ದಾರೆ. ಆದರೆ ಈ ಸಿಮ್ಯುಲೇಟರ್​ನಿಂದ ಅನುಭವ ಪಡೆದ ನಂತರ ಮುಟ್ಟಿನ ನಿಜವಾದ ಅನುಭವವನ್ನು ಕೆಲವರು ಪುರುಷರು ಪಡೆದಿದ್ದಾರೆ.

    ಇದನ್ನೂ ಓದಿ: Viral Story: ಆತನದ್ದು ಆಂಧ್ರ ಪ್ರದೇಶ, ಆಕೆಯದ್ದು ಜರ್ಮನಿ! ಇಬ್ಬರ ಲವ್​ ಮ್ಯಾರೇಜ್​ ನಡೆದದ್ದು ಅಮೆರಿಕದಲ್ಲಿ

    ಮಹಿಳೆಯರ ಮುಟ್ಟಿನ ಬಗ್ಗೆ ಮುಕ್ತ ವೇದಿಯಲ್ಲಿ ಸಂವಾದ ನಡೆಸಲು ಮತ್ತು ಅದನ್ನು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ನಿಜವಾಗಿಯೂ ಈ ವಿಚಾರದ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಸಿಮ್ಯುಲೇಟರ್​ ಮೂಲಕ ಮುಟ್ಟಿನ ನೋವಿನ ಅನುಭವ ಪಡೆದಾಗ ಮಹಿಳೆಯರು ಎಷ್ಟೆಲ್ಲಾ ಕಷ್ಟ ಅನುಭವಿಸುತ್ತಿದ್ದಾರೆ ಎಂಬುದು ಈ ಕಾರ್ಯಕ್ರಮವು ತಿಳಿಸಿದೆ. ಸದ್ಯ ವಿಡಿಯೋ ಇನ್​ಸ್ಟಾಗ್ರಾಂಲ್ಲಿ ವೈರಲ್​ ಆಗುತ್ತಿದೆ.
    Published by:Harshith AS
    First published: