Family Man 2 : ಬೆಳಗ್ಗೆ ತನಕ ಕುಳಿತು ಇಡೀ ಸೀರೀಸ್ ನೋಡಿದ್ದಾರೆ ಜನ, ಇಷ್ಟು ದಿನ ಕಾದಿದ್ದೂ ಸಾರ್ಥಕವಾಯ್ತಾ?

ಅಮೇಜಾನ್ ಪ್ರೈಮ್ (Amazon Prime) ನಲ್ಲಿ ಬಿಡುಗಡೆಯಾದ ಈ ಸೀರೀಸ್ ಗೆ ಜನರಲ್ಲಿ ಅದೆಷ್ಟು ಕುತೂಹಲ ಇತ್ತು ಅಂದ್ರೆ ಅನೇಕರು 12 ಗಂಟೆವರಗೆ ಕಾದುಕೊಂಡಿದ್ದು ಬೆಳಗ್ಗೆ ತನಕ ಇಡೀ ಸೀರೀಸ್ ನೋಡಿ ಮುಗಿಸಿಬಿಟ್ಟಿದ್ದಾರೆ. ಈಗಂತೂ ಎಲ್ಲಾ ಕಡೆ ಅದರ ರೋಚಕತೆಯದ್ದೇ ಚರ್ಚೆಯಾಗುತ್ತಿದೆ. ಸಮಂತಾ ಅಕ್ಕಿನೇನಿ (Samantha Akkineni) ಮತ್ತು ಮನೋಜ್ ಬಾಜಪೇಯಿ(Manoj Bajpayee) ಇಡೀ ಸೀರೀಸ್​ನ್ನು ಅದ್ಭುತ ಎನಿಸುವಂತೆ ಮಾಡಿದ್ದಾರೆ ಎಂದು ಚರ್ಚೆಯಾಗ್ತಿದೆ.

ದ ಫ್ಯಾಮಿಲಿ ಮ್ಯಾನ್​ 2 ವೆಬ್​ ಸರಣಿ

ದ ಫ್ಯಾಮಿಲಿ ಮ್ಯಾನ್​ 2 ವೆಬ್​ ಸರಣಿ

 • Share this:
  Family Man 2 Series: ಬಹುನಿರೀಕ್ಷಿತ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ ಮಧ್ಯರಾತ್ರಿ 12 ಗಂಟೆಗೆ ಬಿಡುಗಡೆಯಾಗಿದೆ. ಅಮೇಜಾನ್ ಪ್ರೈಮ್ (Amazon Prime) ನಲ್ಲಿ ಬಿಡುಗಡೆಯಾದ ಈ ಸೀರೀಸ್ ಗೆ ಜನ ಅದೆಷ್ಟು ಕಾತರತೆ ಇತ್ತು ಅಂದ್ರೆ ಅನೇಕರು 12 ಗಂಟೆವರಗೆ ಕಾದುಕೊಂಡಿದ್ದು ಬೆಳಗ್ಗೆ ತನಕ ಇಡೀ ಸೀರೀಸ್ ನೋಡಿ ಮುಗಿಸಿಬಿಟ್ಟಿದ್ದಾರೆ. ಈಗಂತೂ ಎಲ್ಲಾ ಕಡೆ ಅದರ ರೋಚಕತೆಯದ್ದೇ ಚರ್ಚೆಯಾಗುತ್ತಿದೆ.

  ಮನೋಜ್ ಬಾಜಪೇಯಿ, ಸಮಂತಾ ಅಕ್ಕಿನೇನಿ, ಪ್ರಿಯಮಣಿ, ಶರೀಬ್ ಹಶ್ಮಿ, ಸೀಮಾ ಬಿಸ್ವಾಸ್, ದರ್ಶನ್ ಕುಮಾರ್, ಶರದ್ ಕೇಲ್ಕರ್, ಸನ್ನಿ ಹಿಂದೂಜಾ, ಶ್ರೇಯಾ ಧನ್ವಂತರಿ, ಶಹಾಬ್ ಅಲಿ, ವೇದಾಂತ್ ಸಿನ್ಹಾ, ಮಹೇಕ್ ಠಾಕಿ, ದೇವರಾಪಿ , ಆನಂದಮಿ ಮತ್ತು ಎನ್.ಅಲಗಂಪೇರುಮಾಲ್ ನಟನೆಯ ಬಹು ನಿರೀಕ್ಷಿತ ಫ್ಯಾಮಿಲಿ ಮ್ಯಾನ್ ಸೀಸನ್ 2 ವೆಬ್​ ಸೀರಿಸ್​ ಅಮೆಜಾನ್ ಪ್ರೈಮ್ ವಿಡಿಯೋ ದಲ್ಲಿ ಬಿಡುಗಡೆ ಮಾಡಲಾಗಿದೆ. ಎರಡನೇಯ ಸೀಸನ್​ನಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತಾ ಅಕ್ಕಿನೇನಿ ಅಭಿನಯಿಸುತ್ತಿದ್ದು, ಇದು ಅವರ ಚೊಚ್ಚಲ ಡಿಜಿಟಲ್ ವೆಬ್​ ಸೀರಿಸ್​ ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು.

  ಫ್ಯಾಮಿಲಿ ಮ್ಯಾನ್ ಸೀಸನ್ 2ನ ಟ್ರೈಲರ್‌ನಲ್ಲಿ ನಟಿ ಸಮಂತಾ ಅಕ್ಕಿನೇನಿ ಕಾಣಿಸಿಕೊಂಡ ಮೊದಲ ಟ್ರೈಲರ್​ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿದ್ದರೂ, ತಯಾರಕರು ಸಮಂತಾ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು,“ಈ ಪಾತ್ರವನ್ನು ಮಾಡಲು ಅವರು ಸಾಕಷ್ಟು ಅಪಾಯಗಳನ್ನು ಎದುರಿಸುವಂತಾಗಿತ್ತು" ಎಂದು ತಿಳಿಸಿದ್ದಾರೆ.

  ಮನೋಜ್ ಬಾಜಪೇಯಿ ಸಹ ಈ ಬಗ್ಗೆ ಮಾತನಾಡಿದ್ದು, "ಫ್ಯಾಮಿಲಿ ಮ್ಯಾನ್ ಸೀಸನ್ ಒಂದರಲ್ಲಿ ಸೃಜನಶೀಲವಾದ ಅದ್ಭುತ ಸೀರಿಸ್ ಅನ್ನು ರಚಿಸಲಾಗಿತ್ತು. ಆದರೂ, ಮೊದಲ ಸೀಸನ್ ಗೆಲುವು ಎರಡನೇ ಸೀಸನ್ ವೆಬ್ ಸೀರಿಸ್ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೂ, ಈ ಸೀರಿಸ್​ ಅನ್ನು ಉತ್ತಮವಾಗಿ ನಿರ್ಮಿಸಲಾಗಿದೆ" ಎಂದು ತಿಳಿಸಿದ್ದಾರೆ.
  Published by:Soumya KN
  First published: