Breast Milk: ಟ್ರೆಂಡ್‌ ಆಗುತ್ತಿದೆ ಎದೆ ಹಾಲಿನ ಪೆಂಡೆಂಟ್‌..!ಆಧುನಿಕ ಯುಗದ ಹೊಸ ಆಭರಣಕ್ಕೆ ಜನರು ಫಿದಾ

ಪಾರ್ಟಿಡಾ ತನ್ನ ಪೆಂಡೆಂಟ್‌ಗಾಗಿ ಸುಮಾರು 10 ಮಿ.ಲೀಗಳಷ್ಟು ಅವಳ ಎದೆ ಹಾಲನ್ನು ಶೇಖರಿಸಿಟ್ಟುಕೊಂಡಳು. ಅದನ್ನು ನಂತರ ಕೀಪ್ಸೇಕ್ಸ್ ಬೈ ಗ್ರೇಸ್ ಎಂಬ ಕಂಪನಿಗೆ ಕಳುಹಿಸಿಕೊಟ್ಟಳು. ಒಂದು ತಿಂಗಳ ತರುವಾಯ ಅವಳು ಹಾರ್ಟ್ ಆಕಾರದ ಹಾಲಿನಂತಹ ಬಿಳಿ ಬಣ್ಣದ ಪೆಂಡೆಂಟ್ ಅನ್ನು ಅಂಚೆಯ ಮೂಲಕ ಪಡೆದಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿ ತಾಯಿ ತನ್ನ ಕಂದಮ್ಮನಿಗೆ ಎದೆ ಹಾಲು ಕುಡಿಸುವಾಗ(Breastfeeding) ಒಂದು ವಿಶಿಷ್ಟವಾದ ತಾಯ್ತನದ (Motherhood) ಅನುಭವ ಪಡೆಯುತ್ತಾಳೆ. ಅವಳಿಗೆ ಆ ಅನುಭವ ಆನಂದಿಸುವುದೆಂದರೆ ಬಲು ಇಷ್ಟ. ಇದೇ ರೀತಿಯ ಬಯಕೆ ಅಲ್ಮಾ ಪಾರ್ಟಿಡಾಳಿಗೂ ( Alma Partidal) ಇತ್ತು. ಅಲ್ಮಾ ಕಳೆದ 18 ತಿಂಗಳುಗಳಿಂದ ತನ್ನ ಮಗಳು ಅಲೆಸ್ಸಾಗೆ (Alessa) ತನ್ನ ಎದೆ ಹಾಲುಣಿಸುತ್ತಿದ್ದಾಳೆ. ಅವಳು ಈ ಪ್ರಕ್ರಿಯೆಯನ್ನು ಜೂನ್‌ವರೆಗೆ ಮಾತ್ರ ಮಾಡಬಹುದಾಗಿದೆ. ಇದೊಂದು ಸಾಮಾನ್ಯವಾಗಿ ಅಮೆರಿಕದಲ್ಲಿ (Americaತಾ0 ಯಂದಿರುವ ಮಾಡುವುದಕ್ಕಿಂತ ದೀರ್ಘವಾದ ಸಮಯವೇ ಆಗಿದೆ.

ಸದಾ ನೆನಪಾಗಿ ಮಾರ್ಗ
ಇಷ್ಟಕ್ಕೂ ಪಾರ್ಟಿಡಾಗೆ ಅಲೆಸ್ಸಾ 2020ರಲ್ಲಿ ಸಿಸೇರಿಯನ್ ಮೂಲಕ ಹುಟ್ಟಿದ್ದಳು. ತದನಂತರ ತಾಯಿ-ಮಗಳು ಆಸ್ಪತ್ರೆಯಿಂದ ಮನೆಗೆ ಬಂದಾಗ ತನ್ನ ಮಗಳಿಗೆ ಎದೆ ಹಾಲುಣಿಸುವುದು ಪರ್ಟಿಡಾಗೆ ಸವಾಲಾಗಿತ್ತು. ಕ್ಯಾಲಿಫೋರ್ನಿಯಾದ ವ್ಯಾಟ್ಸನ್ ವಿಲ್ಲೆಯಲ್ಲಿ ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥೋಲಾಜಿಸ್ಟ್ ಆಗಿರುವ ಪಾರ್ಟಿಡಾ ಹೇಳುತ್ತಾರೆ, "ಇದೊಂದು ದೀರ್ಘ ಸಮಯದ ಅನುಭವವಾಗಿತ್ತು" ಎಂದು. ಈಗ ಅವಳ ಈ ಅದ್ಭುತ ಅನುಭವವು ಕೊನೆಗೊಳ್ಳುವುದಕ್ಕೆ ಬಂದಿದ್ದು ಈ ಅನುಭವ ಸದಾ ನೆನಪಾಗಿ ಉಳಿಯುವಂತೆ ಯಾವುದಾದರೂ ಮಾರ್ಗಕ್ಕಾಗಿ ಪಾರ್ಟಿಡಾ ಹುಡುಕುತ್ತಿದ್ದರು.

ಇದನ್ನೂ ಓದಿ: Health Tips: ಎದೆ ಹಾಲು ಹೆಚ್ಚಿಸಲು ತಾಯಂದಿರು ಈ ಆಹಾರ ಪದಾರ್ಥಗಳನ್ನ ತಪ್ಪದೇ ಸೇವಿಸಿ

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೇರೆಂಟಿಂಗ್ ವಿಷಯಕ್ಕೆ ಸಂಬಂಧಿಸಿದ ಗ್ರೂಪ್ ಒಂದನ್ನು ತಡಕಾಡುತಿದ್ದಾಗ ಅವರಿಗೊಂದು ವಿಶೇಷವಾದ ವಿಷಯದ ಕುರಿತು ಕಂಡುಬಂದಿತು. ಅದು ಏನೆಂದರೆ, ಒಂದು ಹರಳನ್ನು ಹೊಂದಿರುವ ಪೆಂಡೆಂಟ್ ಹಾಗೂ ಆ ಹರಳಿನಲ್ಲಿರುವ ಮುಖ್ಯ ವಸ್ತುವೆಂದರೆ ತಾಯಿಯ ಎದೆಹಾಲು. ಇದು ತಿಳಿಯುತ್ತಿದ್ದಂತೆಯೇ ಪಾರ್ಟಿಡಾಗೆ ತನಗೂ ಈ ರೀತಿಯ ಪೆಂಡೆಂಟ್ ಬೇಕೆಂದು ಗೊತ್ತಾಗಿತ್ತು.

ಮಕ್ಕಳ ಕರುಳುಬಳ್ಳಿ ಸಂರಕ್ಷಿಸಿಟ್ಟುಕೊಳ್ಳುವುದು
ಇದು ವಿಚಿತ್ರ ಅನಿಸಿದರೂ ಸತ್ಯ. ಇಂದಿನ ಮಾರುಕಟ್ಟೆಯಲ್ಲಿ ತರಹೇವಾರಿ ವಸ್ತುಗಳ ಲಭ್ಯವಿದೆ. ಅದರಲ್ಲೂ ವಿಶೇಷವಾಗಿ ಪೆಂಡೆಂಟ್‌ಗಳಲ್ಲಿ ಜೈವಿಕ ದ್ರವ್ಯ ಇರಿಸಬಹುದಾದಂತಹ ತಂತ್ರಜ್ಞಾನವೂ ಇಂದು ಲಭ್ಯವಿದೆ. ವಿಕ್ಟೋರಿಯನ್ ಕಾಲದಲ್ಲೇ ಮಾನವ ಕೂದಲನ್ನು ಹೊಂದಿರುತ್ತಿದ್ದ ಕಿವಿ ಓಲೆ ಹಾಗೂ ಇತರೆ ಆಭರಣಗಳು ಸಿಗುತ್ತಿದ್ದವು. ಇತ್ತೀಚಿಗಷ್ಟೇ ಅಂತ್ಯಸಂಸ್ಕಾರ ಮಾಡಲ್ಪಟ್ಟ ಬೂದಿಯಿಂದ ಸಿಂಥೆಟಿಕ್ ವಜ್ರಗಳನ್ನೂ ಉತ್ಪಾದಿಸಲಾಗುತ್ತಿದೆ. ಇಂದು ಪಾಲಕರು ಮಕ್ಕಳ ಕರುಳುಬಳ್ಳಿ ಹಾಗೂ ದಂತಗಳನ್ನು ಸಂರಕ್ಷಿಸಿಟ್ಟುಕೊಳ್ಳುವುದು ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯ ಎಂಬಂತಾಗಿದೆ.

ಹಾಲಿನಂತಹ ಬಿಳಿ ಬಣ್ಣದ ಪೆಂಡೆಂಟ್
ಪಾರ್ಟಿಡಾ ತನ್ನ ಪೆಂಡೆಂಟ್‌ಗಾಗಿ ಸುಮಾರು 10 ಮಿ.ಲೀಗಳಷ್ಟು ಅವಳ ಎದೆ ಹಾಲನ್ನು ಶೇಖರಿಸಿಟ್ಟುಕೊಂಡಳು. ಅದನ್ನು ನಂತರ ಕೀಪ್ಸೇಕ್ಸ್ ಬೈ ಗ್ರೇಸ್ ಎಂಬ ಕಂಪನಿಗೆ ಕಳುಹಿಸಿಕೊಟ್ಟಳು. ಒಂದು ತಿಂಗಳ ತರುವಾಯ ಅವಳು ಹಾರ್ಟ್ ಆಕಾರದ ಹಾಲಿನಂತಹ ಬಿಳಿ ಬಣ್ಣದ ಪೆಂಡೆಂಟ್ ಅನ್ನು ಅಂಚೆಯ ಮೂಲಕ ಪಡೆದಳು. "ಇದು ಕೊನೆಯ ಹನಿ, ನನ್ನ ದೀರ್ಘ ಅನುಭವದ ಸ್ಮರಣಿಕೆ" ಎಂದು ಈ ಪೆಂಡೆಂಟ್‌ ಬಗ್ಗೆ ಪಾರ್ಟಿಡಾ ಹರ್ಷ ವ್ಯಕ್ತಪಡಿಸಿದ್ದಾರೆ.

''ಬಹು ತಾಯಂದಿರಿಗೆ ತಮ್ಮ ಮಕ್ಕಳಿಗೆ ಹಾಲುಣಿಸುವ ಕ್ರಿಯೆ ವಿಶೇಷವಾಗಿರುತ್ತದೆ. ಹಲವರು ಇದಕ್ಕಾಗಿ ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಹಾಗಾಗಿ ಅವರು ಈ ಅನುಭವ ತಮ್ಮ ಬಳಿ ಸದಾ ಒಂದು ನೆನಪಾಗಿ ಉಳಿಯಬೇಕೆಂದು ಬಯಸಿರುತ್ತಾರೆ'' ಎಂದು ಬ್ರೂಕ್ಲಿನ್‌ನಲ್ಲಿ ನೆಲೆಸಿರುವ ಲ್ಯಾಕ್ಟೇಷನ್ ಸಲಹೆಗಾರರಾಗಿರುವ ಫ್ರೀಡಾ ರೋಸನ್ ಫೀಲ್ಡ್ ಹೇಳುತ್ತಾರೆ.

ಹಾಲುಣಿಸಲು ಕಷ್ಟಪಟ್ಟ ಗ್ರಾಹಕರು
"ನನ್ನ ಬಳಿ ಸಾಮಾನ್ಯವಾಗಿ ಹಾಲುಣಿಸಲು ಕಷ್ಟಪಟ್ಟ ಗ್ರಾಹಕರು ಈ ರೀತಿಯ ವಸ್ತುಗಳನ್ನೇ ಖರೀದಿಸುತ್ತಾರೆ. ಅವರು ನನ್ನ ಬಳಿ ಬಂದು ಈ ಸಮಯ ಅದ್ಭುತವಾಗಿತ್ತು ಹಾಗೂ ಇದು ಬೇಗನೇ ಕೊನೆಗೊಳ್ಳುವುದರ ಬಗ್ಗೆ ಖೇದ ವ್ಯಕ್ತಪಡಿಸುತ್ತ ಈ ರೀತಿಯ ಪೆಂಡೆಂಟ್‌ಗಳನ್ನು ಖರೀದಿಸುವ ಮೂಲಕ ತಮ್ಮ ನೆನಪನ್ನು ಸದಾ ಜೀವಂತವಾಗಿರಿಸಿಕೊಳ್ಳುವಂತೆ ಬಯಸುತ್ತಾರೆ" ಎಂದು ಕೀಪ್ಸೇಕ್ಸ್ ಬೈ ಗ್ರೇಸ್ ಸಂಸ್ಥೆಯ ಒಡತಿಯಾಗಿರುವ ಅರಿಜೋನಾದಲ್ಲಿ ನೆಲೆಸಿರುವ ಸಾರಾ ಕ್ಯಾಸ್ಟಿಲ್ಲೊ ಹೇಳುತ್ತಾರೆ.

150 ಡಾಲರ್‌ವರೆಗೆ ಶುಲ್ಕ
ಸಾರಾ ತಾವೇ ಖುದ್ದು ಈ ಬಗ್ಗೆ ತಮ್ಮದೇ ಆದ ಭಾವನೆ ಹೊಂದಿದ್ದರು. ಇದಕ್ಕೆ ಸಂಬಂಧಿಸಿದ ಕೆಲವು ಪೋಸ್ಟುಗಳನ್ನು ಅವರು ಇನ್ಸ್ಟಾಗ್ರಾಮ್‌ನಲ್ಲಿ ನೋಡಿದಾಗ ತಮ್ಮ ಎದೆ ಹಾಲಿನಿಂದಲೇ ಈ ರೀತಿಯ ಒಂದು ವಿನೂತನ ಪ್ರಯತ್ನ ಮಾಡಲು ಮುಂದಾದರು. ಒಂದು ವಿಧಾನದ ಮೂಲಕ ಹಾಲಿನಲ್ಲಿರುವ ನೀರಿನಂಶ ಕರಗಿಸಿ ಅದನ್ನು ಪೌಡರ್ ರೂಪದಲ್ಲಿ ಪರಿವರ್ತಿಸಲು ಯಶಸ್ವಿಯಾದರು. ನಂತರ ಅದನ್ನು ರೆಸಿನ್ ಜೊತೆ ಮಿಶ್ರಣ ಮಾಡಿ ಒಂದು ಘನವಾದ ಹರಳು ಆಗುವಂತೆ ಮಾಡಿದರು. ಅವರು ಇದಕ್ಕಾಗಿ 60 ರಿಂದ 150 ಡಾಲರ್‌ವರೆಗೆ ಶುಲ್ಕ ಪಡೆಯುತ್ತಾರೆ.

ಇದನ್ನೂ ಓದಿ: Parenting: ನಿಮ್ಮ ಮಗುವಿಗೆ ಬಾಟಲ್‌ನಲ್ಲಿ ಹಾಲು ಕುಡಿಸುವ ಮುನ್ನ ಈ ಸುದ್ದಿ ಓದಿ..!

ಅರ್ಥ ಹೊಂದಿರುವ ಆಭರಣ
ಇಂದು ಜನರು ಅರ್ಥ ಹೊಂದಿರುವ ಆಭರಣಗಳನ್ನು ಕೊಳ್ಳಲು ಬಯಸುತ್ತಾರೆ. ನನ್ನ ಬಳಿ ಬರುವ ಗ್ರಾಹಕರೂ ಸಹ ತಮ್ಮದೆ ಆದ ನೆನಪು ಹೊಂದಲು ಬಯಸುತ್ತಾರೆ ಹಾಗೂ ಅವರು ತಯಾರಿಸುವ ಎದೆಹಾಲಿನ ಪೆಂಡೆಂಟ್‌ಗಳಿಗೆ ಸಾಕಷ್ಟು ಬೇಡಿಕೆ ಇಡುತ್ತಾರೆ ಎಂದಿದ್ದಾರೆ. ಫಾರ್ಮಸಿಯಲ್ಲಿ ಡಾಕ್ಟರೇಟ್ ಮಾಡಿರುವ ನ್ಯೂ ಜೆರ್ಸಿಯ ಆನ್ ಮೇರಿಯು ತಮ್ಮ ಸಂಸ್ಥೆಯ ಮೂಲಕ ಕಿವಿ ಓಲೆ, ನೆಕ್ಲೇಸ್‌, ಬ್ರೇಸ್ಲೆಟ್‌ಗಳು ಹಾಗೂ ರಿಂಗುಗಳನ್ನು ಮಾರಾಟ ಮಾಡುತ್ತಾರೆ. ಇವುಗಳಲ್ಲಿ ಮುಖ್ಯ ವಸ್ತು ತಾಯಿಯ ಎದೆ ಹಾಲು ಇರುತ್ತದೆ. ಇವುಗಳ ಬೆಲೆ 90 ರಿಂದ 1500 ಡಾಲರ್‌ವರೆಗಿದ್ದು ಈ ವರ್ಷದಲ್ಲಿ ಆನ್ 4000 ವಸ್ತುಗಳನ್ನು ಮಾರಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಹೇಳಬೇಕೆಂದರೆ ಇಂದಿನ ಆಧುನಿಕ ಯುಗದಲ್ಲಿ ಎಂದಿಗೂ ಕೇಳಿರದಂತಹ, ಊಹಿಸಲಾಗದ ಏನೇನೋ ವಿಶೇಷತೆಗಳು ಕಂಡುಬರುತ್ತಿರುವುದು ನಿಜ. ಇನ್ನೂ ಭಾರತದ ಮಟ್ಟಿಗೆ ಹೇಳುವುದಾದರೆ ಇದು ಖಂಡಿತ ಒಂದು ಕುತೂಹಲಭರಿತ ವಿಷಯವಾಗಿದ್ದು ಮುಂದೆ ಇಲ್ಲಿಯೂ ಈ ರೀತಿಯ ಮಾರುಕಟ್ಟೆಗಳು ನಿರ್ಮಾಣವಾದರೆ ಅಚ್ಚರಿ ಪಡಬೇಕಾಗಿಲ್ಲ.
Published by:vanithasanjevani vanithasanjevani
First published: