Viral Video: ಕ್ಯೂ ತಪ್ಪಿಸಿ ಕಳ್ಳದಾರಿ ಹಿಡಿದು ಕಿಟಕಿ ಮೂಲಕ ವ್ಯಾಕ್ಸಿನ್ ಹಾಕಿಸಿಕೊಂಡ ಭೂಪ..!

ಇಲ್ಲೊಬ್ಬ ಭೂಪ ಸರತಿ ಸಾಲನ್ನು ತಪ್ಪಿಸಿ ಕಳ್ಳದಾರಿ ಹಿಡಿದು ಲಸಿಕಾ ಕೇಂದ್ರದ ಹಿಂಬದಿ ಕಿಟಕಿ ಮೂಲಕ ವ್ಯಾಕ್ಸಿನ್​ ಪಡೆದಿದ್ದಾನೆ. ಸದ್ಯ ಈ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.

ಕಿಟಕಿಯಿಂದ ವ್ಯಾಕ್ಸಿನ್​ ಪಡೆದ ಭೂಪ

ಕಿಟಕಿಯಿಂದ ವ್ಯಾಕ್ಸಿನ್​ ಪಡೆದ ಭೂಪ

  • Share this:
ದೇಶದಲ್ಲಿ ಕೊರೊನಾ 2ನೇ ಅಲೆ ತಗ್ಗಿದೆಯಾದರೂ ಸೋಂಕಿನಿಂದ ಯಾರೂ ಸುರಕ್ಷಿತರಲ್ಲ. ವೈರಸ್​ನಿಂದ ಬಚಾವ್​ ಆಗಲು ಇರುವ ಏಕೈಕ ಅಸ್ತ್ರ ಕೋವಿಡ್​ ಲಸಿಕೆ. ಈಗಾಗಲೇ ದೇಶಾದ್ಯಂತ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಜನರಲ್ಲೂ ಲಸಿಕೆ ಬಗ್ಗೆ ಜಾಗೃತಿ ಮೂಡಿದ್ದು, ಸರತಿ ಸಾಲಿನಲ್ಲಿ ನಿಂತು ಚುಚ್ಚುಮದ್ದನ್ನು ಪಡೆದುಕೊಳ್ಳುತ್ತಿದ್ದಾರೆ. ಲಸಿಕೆಗಾಗಿ ಲಸಿಕಾ ಕೇಂದ್ರಗಳ ಮುಂದೆ ಕ್ಯೂ ನಿಲ್ಲುವುದು ಸದ್ಯ ಸಾಮಾನ್ಯ ದೃಶ್ಯವಾಗಿದೆ. ಹಣವಿದ್ದವರು ಖಾಸಗಿ ಲಸಿಕಾ ಕೇಂದ್ರಗಳು, ಆಸ್ಪತ್ರೆಗಳಲ್ಲಿ ಸ್ಲಾಟ್​ ಬುಕ್​ ಮಾಡಿಕೊಂಡು ಲಸಿಕೆ ಪಡೆಯುತ್ತಿದ್ದಾರೆ. ಆದರೆ ಬಡ, ಮಧ್ಯಮ ವರ್ಗದ ಜನ ಸರ್ಕಾರಿ ಲಸಿಕಾ ಕೇಂದ್ರಗಳ ಮೇಲೆ ಅವಲಂಭಿಸಿದ್ದಾರೆ.

ಸರತಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯಲೇಬೇಕಿದೆ. ಇಂಥ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ಭೂಪ ಸರತಿ ಸಾಲನ್ನು ತಪ್ಪಿಸಿ ಕಳ್ಳದಾರಿ ಹಿಡಿದು ಲಸಿಕಾ ಕೇಂದ್ರದ ಹಿಂಬದಿ ಕಿಟಕಿ ಮೂಲಕ ವ್ಯಾಕ್ಸಿನ್​ ಪಡೆದಿದ್ದಾನೆ. ಸದ್ಯ ಈ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.



15 ಸೆಕೆಂಡುಗಳ ಕ್ಲಿಪ್ ಅನ್ನು ತರುಣ್ ತ್ಯಾಗಿ ಎಂಬುವರು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯು ಕಿಟಕಿಯ ಪಕ್ಕದಲ್ಲಿರುವ ಕಟ್ಟಡದ ಹಿಂದೆ ನಿಂತಿದ್ದಾನೆ. ಸ್ವಲ್ಪ ಸಮಯದ ನಂತರ, ರಬ್ಬರ್ ಕೈಗವಸುಗಳನ್ನು ಧರಿಸಿದ ವ್ಯಕ್ತಿಯು ಕಿಟಕಿಯಿಂದ ವ್ಯಕ್ತಿಗೆ ಲಸಿಕೆ ಹಾಕುತ್ತಿರುವುದು ವಿಡಿಯೋದಲ್ಲಿ ನೋಡಬಹುದು.  ಕ್ಯಾಮರಾ ನಂತರ ಇನ್ನೊಂದು ಬದಿಯಲ್ಲಿ ದೀರ್ಘ ಸರತಿ ಸಾಲನ್ನು ತೋರಿಸುತ್ತದೆ. ಅಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ಕಾಯುತ್ತಿರುವುದು ಕಂಡು ಬರುತ್ತದೆ. ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, 5,000 ಹೆಚ್ಚು ಮಂದಿ ಈ ವಿಡಿಯೋವನ್ನು ಶೇರ್​ ಮಾಡಿದ್ದಾರೆ.

ವಿಡಿಯೋ ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ  ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೆಲವರು ಈ ಘಟನೆಯನ್ನು ರಂಜನೀಯವಾಗಿ ಕಂಡರೆ, ಇತರರು ಅಂತಹ ವಿಧಾನಗಳ ಮೂಲಕ ಲಸಿಕೆ ಹಾಕುವುದು ಅಸುರಕ್ಷಿತ ಎಂದು ಬರೆದಿದ್ದಾರೆ.

ಇದನ್ನೂ ಓದಿ: Viral Video: ಅಯ್ಯೋ..! ದೈತ್ಯ ಹಲ್ಲಿ ಮುಖವನ್ನು ಮುದ್ದಾಡಿದರೂ ಈಕೆಗೆ ಸ್ವಲ್ಪವೂ ಭಯವಿಲ್ಲ!

ಇನ್ನು ಇಂದು ರಾಜ್ಯದಲ್ಲಿ  1,298 ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿನಿಂದ ರಾಜ್ಯಾದ್ಯಂತ 32 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 1,833 ಸೋಂಕಿನಿಂದ ಗುಣಮುಖರಾಗಿದ್ದಾರೆ. ಇತ್ತ ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನ 340 ಮಂದಿ ಕೊರೊನಾ ರಿಪೋರ್ಟ್​ ಪಾಸಿಟಿವ್​ ಬಂದಿದೆ. 10 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಪಾಸಿಟಿವಿಟ್ 1.1 % ಹಾಗೂ ಸಾವಿನ ಪ್ರಮಾಣ 2.46 % ರಷ್ಟಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: