HOME » NEWS » Trend » PEOPLE USE SOCIAL MEDIA TO CREATE AWARENESS AND DISCUSS COVID DISTRESS SKTV

Social Mediaದಲ್ಲಿ ಕೋವಿಡ್ ಚರ್ಚೆ, ಮಾಹಿತಿ-ಸಾಂತ್ವನ-ಸಮಸ್ಯೆ ಎಲ್ಲದಕ್ಕೂ ಇದೇ ವೇದಿಕೆ

ಟ್ವಿಟರ್, ವಾಟ್ಸಪ್, ಫೇಸ್ಬುಕ್, ಇನ್ಸ್ಟಾಗ್ರಾಂನಂಥಾ ಅಂತಾರಾಷ್ಟ್ರೀಯ ಮಟ್ಟದ ಸಾಮಾಜಿಕ ತಾಣಗಳಲ್ಲಿ ಈ ಚರ್ಚೆಗಳು ದೀರ್ಘಕಾಲದಿಂದ ಪರ ಮತ್ತು ವಿರೋಧ ಅನಿಸಿಕೆಗಳನ್ನು ವ್ಯಕ್ತಪಡಿಸಲು ವೇದಿಕೆ ಒದಗಿಸಿಕೊಟ್ಟಿವೆ. ಆದ್ರೆ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ದೇಸೀ ಆಪ್ಗಳಾದ ಕೂ ಮುಂತಾದವುಗಳಲ್ಲಿ ಸ್ಥಳೀಯ ಮಟ್ಟದ ಸಮಸ್ಯೆಗಳು ಮತ್ತು ಪರಿಹಾರದ ಚರ್ಚೆಗಳಾಗ್ತಿರುವುದು ವಿಶೇಷ.

Soumya KN | news18-kannada
Updated:April 18, 2021, 1:04 PM IST
Social Mediaದಲ್ಲಿ ಕೋವಿಡ್ ಚರ್ಚೆ, ಮಾಹಿತಿ-ಸಾಂತ್ವನ-ಸಮಸ್ಯೆ ಎಲ್ಲದಕ್ಕೂ ಇದೇ ವೇದಿಕೆ
ಸಾಂದರ್ಭಿಕ ಚಿತ್ರ
  • Share this:
Covid Effect: ಈಗಂತೂ ಸಾಮಾಜಿಕ ಜಾಲತಾಣಗಳು ಅತ್ಯಂತ ಪ್ರಬಲ ಮಾಧ್ಯಮಗಳಾಗಿ ಬದಲಾಗಿವೆ. ಜನಸಾಮಾನ್ಯರ ಕೈಗೇ ಒಂದು ಪತ್ರಿಕೆಯೋ, ನ್ಯೂಸ್ ಚಾನೆಲ್ಲೋ ನಡೆಸುವ ಸಾಧ್ಯತೆಯಂತೆ ಸಾಮಾಜಿಕ ಜಾಲತಾಣಗಳು ಕೆಲಸ ಮಾಡ್ತಿವೆ. ಅನೇಕ ಬಾರಿ ಇವುಗಳಿಂದ ಒಳ್ಳೆಯದು, ಕೆಟ್ಟದ್ದು ಎರಡೂ ಸಾಕಷ್ಟು ಪ್ರಮಾಣದಲ್ಲಿ ಆಗಿವೆ. ಸದ್ಯ ಎಲ್ಲರೂ ಎದಿರಿಸುತ್ತಿರುವ ಕೋವಿಡ್ ಸಮಸ್ಯೆಗೆ ಜನ ತಾವಾಗೇ ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ, ಸಾಂತ್ವನ ನೀಡೋದಲ್ಲದೇ ಅಗತ್ಯ ಮಾಹಿತಿಗಳನ್ನು ಹಂಚಿಕೊಂಡು ಚರ್ಚೆಯನ್ನೂ ಮಾಡ್ತಿದ್ದಾರೆ.

ಕೊರೊನಾ ಹೀಗೆ ಕೈಮೀರಿ ಹೋಗೋದಕ್ಕೆ ಜನರೇ ಕಾರಣ. ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಎಲ್ಲರಿಗೂ ಈ ಸೋಂಕಿನ, ಅದರ ತೀವ್ರತೆಯ ಅರಿವಿದೆ. ಆದರೂ ಸಭೆ- ಸಮಾರಂಭಗಳನ್ನು ಮಾಡೋದು, ಗುಂಪು ಸೇರೋದು, ಮಾಸ್ಕ್ ಧರಿಸದೇ ಇರುವುದು ಇದೆಲ್ಲವೂ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಸರ್ಕಾರವಾಗಲೀ, ಬಿಬಿಎಂಪಿ ಆಗಲಿ ಎಷ್ಟು ಎಂದು ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯ? ಜನರೇ ಅರಿತು ನಡೆಯುವ ತನಕ ಕೊರೊನಾ ಕಂಟಕ ತಪ್ಪಿದ್ದಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗ್ತಿದೆ.

ಟ್ವಿಟರ್, ವಾಟ್ಸಪ್, ಫೇಸ್ಬುಕ್, ಇನ್ಸ್ಟಾಗ್ರಾಂನಂಥಾ ಅಂತಾರಾಷ್ಟ್ರೀಯ ಮಟ್ಟದ ಸಾಮಾಜಿಕ ತಾಣಗಳಲ್ಲಿ ಈ ಚರ್ಚೆಗಳು ದೀರ್ಘಕಾಲದಿಂದ ಪರ ಮತ್ತು ವಿರೋಧ ಅನಿಸಿಕೆಗಳನ್ನು ವ್ಯಕ್ತಪಡಿಸಲು ವೇದಿಕೆ ಒದಗಿಸಿಕೊಟ್ಟಿವೆ. ಆದ್ರೆ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ದೇಸೀ ಆಪ್​​ಗಳಾದ ಕೂ ಮುಂತಾದವುಗಳಲ್ಲಿ ಸ್ಥಳೀಯ ಮಟ್ಟದ ಸಮಸ್ಯೆಗಳು ಮತ್ತು ಪರಿಹಾರದ ಚರ್ಚೆಗಳಾಗ್ತಿರುವುದು ವಿಶೇಷ.

People Use Social media to create awareness and discuss covid distress
ಕೃಪೆ: Koo App


ಈ ಹಿಂದೆಯೂ  ಜನ ಕೋವಿಡ್ ಸಹಾಯವಾಣಿಗೆ ಕರೆ ಮಾಡಿ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ಆ ಬಗ್ಗೆ ವಿಚಾರ ಹಂಚಿಕೊಂಡು ಅದ್ನನು ನೋಡಿದ ಮತ್ಯಾರೋ ಅವರ ಸಹಾಯಕ್ಕೆ ಬಂದ ಉದಾಹರಣೆಗಳು ಸಾಕಷ್ಟಿವೆ. 2020ರ ಸನ್ನಿವೇಶಗಳೆಲ್ಲಾ ಮರುಕಳಿಸುತ್ತಿರುವ ಈ ಸಂದರ್ಭದಲ್ಲಿ ಮಾನವೀಯತೆಗಳ ನಿದರ್ಶನವೂ ಮರುಕಳಿಸುತ್ತಿದೆ. ಈ ಬಾರಿಯೂ ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳು ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈಸೇರುವ ಲಕ್ಷಣಗಳಿವೆ.

ಕೇವಲ ವ್ಯವಸ್ಥೆಯ ಭಾಗವಾಗಿರುವವರಲ್ಲದೇ ಗೃಹಿಣಿಯರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲಾ ವರ್ಗದ ಜನರೂ ಬಹಳ ಆಕ್ಟಿವ್ ಆಗಿ ಈ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ತಮ್ಮಂತೆಯೇ ಸಮಸ್ಯೆಯಲ್ಲಿ ಇರುವ ಹಲವಾರು ಜನರಿದ್ದಾರೆ ಎನ್ನುವ ಯೋಚನೆಯೇ ಒಂದು ಸಮಾಧಾನ ತರುತ್ತದೆ. ಆ ಸಮಾಧಾನವನ್ನು ಸಾಮಾಜಿಕ ಜಾಲತಾಣಗಳು ಮಾಡುತ್ತಿವೆ.
ತನ್ನ ಸಂಬಂಧಿಯೊಬ್ಬರಿಗೆ ಕೋವಿಡ್ ಇಲ್ಲದಿದ್ದರೂ ತುರ್ತಾಗಿ ಬೇಕಾಗಿದ್ದ ರಕ್ತವನ್ನು ತಾನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಪೋಸ್ಟ್​ ದೊರಕಿಸಿಕೊಟ್ಟಿತು ಎನ್ನುತ್ತಾರೆ ವಿಜಯನಗರದ ವ್ಯಾಪಾರಿ ಚಂದ್ರು. ಒಂದು ಪೋಸ್ಟ್ ನೇರವಾಗಿ ಜನರನ್ನು ತಲುಪುವುದು ಮಾತ್ರವಲ್ಲ, ಅವರಿಂದ ಮತ್ತೊಬ್ಬರಿಗೆ ಮಗದೊಬ್ಬಿಗೆ ಎನ್ನುವಂತೆ ಹೆಚ್ಚಿನ ಜನರಿಗೆ ಅತೀ ಕಡಿಮೆ ಸಮಯದಲ್ಲಿ ತಲುಪುವಂತೆ ಮಾಡುತ್ತದೆ. ಇದು ಇಂಥಾ ಸಂಕಷ್ಟದ ಸಂದರ್ಭಗಳಲ್ಲಿ ಅತ್ಯಂತ ಅವಶ್ಯಕವಾದ ವಿಚಾರ ಕೂಡಾ ಹೌದು.
Published by: Soumya KN
First published: April 18, 2021, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories