ಈ ಸೂರ್ಯೋದಯ (Sunrise) ಮತ್ತು ಸೂರ್ಯಾಸ್ತವನ್ನು (Sunset) ಯಾರು ತಾನೇ ನೋಡಲು ಇಷ್ಟ ಪಡುವುದಿಲ್ಲ ಹೇಳಿ? ಎಲ್ಲರಿಗೂ ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ನೋಡುವುದು ಎಂದರೆ ತುಂಬಾನೇ ಇಷ್ಟ. ಬೆಳಿಗ್ಗೆ (Morning) ಬೇಗ ಎದ್ದು ಯಾವುದಾದರೂ ಬೆಟ್ಟಗುಡ್ಡದ (Hill Top) ಮೇಲೆ ಅಥವಾ ನದಿಯ ದಡದಲ್ಲಿ, ಸಮುದ್ರ ತೀರದಲ್ಲಿ ವಾಕಿಂಗ್ ಗೆ (Walking) ಹೋಗಿ ಅಲ್ಲಿಯೇ ಸ್ವಲ್ಪ ಹೊತ್ತು ನಿಂತುಕೊಂಡು ಸೂರ್ಯ ಉದಯಿಸುವುದನ್ನು ನೋಡುವುದರಿಂದ ಒಂದು ರೀತಿಯ ಚೈತನ್ಯ ನಮ್ಮ ದೇಹಕ್ಕೆ ಲಭಿಸುತ್ತದೆ ಎಂಬುದು ಅನೇಕರ ಅಭಿಪ್ರಾಯವಾಗಿರುತ್ತದೆ. ಅದರಲ್ಲೂ ಈ ಹಳ್ಳಿ (Village) ಕಡೆಗಳಲ್ಲಿ ಜನರು ಹೊಲಗದ್ದೆಗಳ ಹತ್ತಿರವೇ ಇರುವುದರಿಂದ ಅವರು ಸ್ವಲ್ಪ ದೂರ ನಡೆದುಕೊಂಡು ಹೋದರೆ ಅವರಿಗೆ ಬೆಳಿಗ್ಗೆ ಈ ಸೂರ್ಯೋದಯ ಮತ್ತು ಸಂಜೆ ಹೊತ್ತಿನಲ್ಲಿ ಸೂರ್ಯಾಸ್ತ ನೋಡಲು ಸಿಗುತ್ತದೆ.
ಇಷ್ಟೇ ಅಲ್ಲದೆ ಸಂಜೆ ಹೊತ್ತಿನಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಬಂದು ಸಮುದ್ರದ ತೀರದಲ್ಲಿ ಅಥವಾ ಬೆಟ್ಟ ಗುಡ್ಡಗಳ ಮೇಲೆ ಕುಳಿತು ಅಥವಾ ನಿಂತುಕೊಂಡು ಸೂರ್ಯಾಸ್ತವನ್ನು ನೋಡುವುದರಿಂದ ನಮ್ಮ ಇಡೀ ದಿನದ ಸುಸ್ತು, ಒತ್ತಡ ಎಲ್ಲವೂ ಕ್ಷಣ ಮಾತ್ರದಲ್ಲಿ ಕಡಿಮೆ ಆಗುತ್ತದೆ ಎಂಬ ನಂಬಿಕೆ ಸಹ ಅನೇಕರದ್ದು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಸೂರ್ಯಾಸ್ತದ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಜನ
ಆದರೆ ಈ ನಗರದಲ್ಲಿರುವವರಿಗೆ ಈ ಟ್ರಾಫಿಕ್ ಮತ್ತು ದೊಡ್ಡ ದೊಡ್ಡ ಕಟ್ಟಡಗಳ ನಡುವೆ ಈ ಸೂರ್ಯೋದಯ ಮತ್ತು ಸೂರ್ಯಸ್ತವನ್ನು ಅಷ್ಟಾಗಿ ನೋಡಲು ಸಿಗುವುದಿಲ್ಲ, ಏಕೆಂದರೆ ನಗರ ಪ್ರದೇಶಗಳಲ್ಲಿ ಕಟ್ಟಡಗಳು ತುಂಬಾನೇ ಹತ್ತಿರವಿರುವುದರಿಂದ ಒಮ್ಮೊಮ್ಮೆ ಎಷ್ಟೋ ಕಟ್ಟಡಗಳಲ್ಲಿ ಕುಳಿತು ಕೆಲಸ ಮಾಡುವ ಜನರಿಗೆ ಸರಿಯಾಗಿ ಸೂರ್ಯನ ಬೆಳಕು ಮೈಗೆ ತಾಕುವುದೇ ಇಲ್ಲ. ಇಂತದರಲ್ಲಿ ಅವರಿಗೆ ಎಲ್ಲಾದರೂ ಈ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಲು ಸಿಕ್ಕರೆ ಒಂದು ಹಬ್ಬವಿದ್ದಂತೆ ಅಂತ ಹೇಳಬಹುದು.
ಇದನ್ನೂ ಓದಿ: Geo Leon: ಖ್ಯಾತ ಛಾಯಾಗ್ರಾಹಕ ಜಿಯೋ ಲಿಯಾನ್ ಕ್ಲಿಕ್ಕಿಸಿದ ಸುಂದರವಾದ ಫೋಟೋಗಳ ಹಿಂದಿನ ಸತ್ಯವನ್ನ ತಿಳಿಯಿರಿ
ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೋ
ಇಲ್ನೋಡಿ ನ್ಯೂಯಾರ್ಕ್ ನಲ್ಲಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮತ್ತು ರಸ್ತೆಯ ಮೇಲೆ ಓಡಾಡುತ್ತಿರುವ ಜನರು ಸೂರ್ಯಾಸ್ತವನ್ನು ನೋಡಿ ಹೇಗೆ ತಮ್ಮ ತಮ್ಮ ಮೊಬೈಲ್ ಫೋನ್ ಗಳಲ್ಲಿ ಮತ್ತು ಕ್ಯಾಮೆರಾದಲ್ಲಿ ಆ ಮನಮೋಹಕ ದೃಶ್ಯವನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ ಅಂತ.
new york city is not real LMAOO pic.twitter.com/DtHa28hnty
— kira 👾 (@kirawontmiss) June 19, 2022
ಹೌದು.. ಜನನಿಬಿಡ ಮ್ಯಾನ್ಹಟನ್ ರಸ್ತೆಯಲ್ಲಿ ಸುಂದರವಾದ ಸೂರ್ಯಾಸ್ತವನ್ನು ಸೆರೆ ಹಿಡಿಯಲು ಪ್ರಯತ್ನಿಸುವ ಜನರ ದೊಡ್ಡ ಗುಂಪಿನ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವು ಈ ಸೂರ್ಯಾಸ್ತದ ಸುಂದರವಾದ ವೀಡಿಯೋವನ್ನು ಖಂಡಿತವಾಗಿಯೂ ನೋಡಲೇಬೇಕು.
ರಸ್ತೆ ತುಂಬಾ ಜನರಿಂದ ತುಂಬಿ ವಾಹನ ಸಂಚಾರ ಅಸ್ಥವ್ಯಸ್ಥ
ಈಗ ವೈರಲ್ ಆಗಿರುವ ಈ ವೀಡಿಯೋವನ್ನು ಕಿರಾ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ತಮ್ಮ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಅವಳು ಕಾರಿನಿಂದ ಕ್ಲಿಪ್ ಅನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ತಮ್ಮ ಫೋನ್ ಗಳಲ್ಲಿ ಆ ಸುಂದರವಾದ ಸೂರ್ಯಾಸ್ತವನ್ನು ಸೆರೆ ಹಿಡಿಯಲು ದೊಡ್ಡ ಜನಸಮೂಹವೇ ರಸ್ತೆ ಮೇಲೆ ಬಂದಿರುವುದನ್ನು ಈ ವೀಡಿಯೋದಲ್ಲಿ ನಾವು ನೋಡಬಹುದು. ರಸ್ತೆಯು ತುಂಬಾ ಜನರಿಂದ ತುಂಬಿತ್ತು ಮತ್ತು ವಾಹನಗಳು ಓಡಾಡಲು ಸಹ ಸ್ಥಳವಿರಲಿಲ್ಲ.
ಆದರೆ ಈ ಜನರು ಇದ್ಯಾವುದನ್ನು ಲೆಕ್ಕಿಸದೆ ಸೂರ್ಯಾಸ್ತವನ್ನು ಅವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುವತ್ತ ಮಗ್ನರಾಗಿದ್ದರು.
ರಸ್ತೆಯ ಮಧ್ಯದಲ್ಲಿ ನೃತ್ಯ ಮಾಡುವ ನರ್ತಕಿ
ಇದಷ್ಟೆ ಅಲ್ಲದೆ ಈ ರಸ್ತೆಯ ಮಧ್ಯದಲ್ಲಿ ನೃತ್ಯ ಮಾಡುವ ನರ್ತಕಿಯನ್ನು ಸಹ ನೋಡಬಹುದು. ಸೂರ್ಯಾಸ್ತದ ಸಮಯದಲ್ಲಿ ಆ ನ್ಯೂಯಾರ್ಕ್ ನಗರದ ಆ ರಸ್ತೆಯೆಲ್ಲಾ ನಸುಗೆಂಪು ಬಣ್ಣಕ್ಕೆ ತಿರುಗಿದ್ದವು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಇದನ್ನೂ ಓದಿ: Bedroom Life: ಬೆಡ್ರೂಂಗೆ ಬಂದು ಫೋಟೋ ಕ್ಲಿಕ್ಕಿಸೋ ಕಳ್ಳ ಫೋಟೋಗ್ರಫರ್ ಭಾರೀ ಫೇಮಸ್
ಈ 27 ಸೆಕೆಂಡಿನ ಅವಧಿಯ ವೀಡಿಯೋವನ್ನು ಆನ್‌ಲೈನ್ ನಲ್ಲಿ ಹಂಚಿಕೊಂಡ ನಂತರ 11 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. "ಇವರೆಲ್ಲಾ ನನ್ನ ಹಾಗೆಯೇ ಸೂರ್ಯಾಸ್ತವನ್ನು ಇಷ್ಟ ಪಡುತ್ತಾರೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು "ಇದು ನಿಜಕ್ಕೂ ತುಂಬಾನೇ ಸುಂದರವಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ