Viral Video: ಒಂದು ಜೀವಿಯ ಪ್ರಾಣ ಉಳಿಸಲು ಎಷ್ಟೊಂದು ಜನ; ವಿಡಿಯೋ ನೋಡಿ ಭೇಷ್ ಎಂದ ನೆಟ್ಟಿಗರು

ಈಗೀನ ಕಾಲದಲ್ಲಿ ಯಾರದೋ ಪ್ರಾಣ ಹೋಗುತ್ತಿದೆ ಎಂದರೆ ಅದನ್ನು ಕೂಡ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ವ್ಯಕ್ತಿಗಳ ಮಧ್ಯೆ ಇವರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಒಂದು ಜೀವಿಯ ಪ್ರಾಣವನ್ನು ಕಾಪಾಡಿದ್ದಾರೆ. ಈ ಘಟನೆ ಬಗ್ಗೆ ಯಾರೋ ಒಬ್ಬ ಪುಣ್ಯಾತ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ.

ಪ್ರಾಣಿಯನ್ನು ರಕ್ಷಿಸುತ್ತಿರುವ ಜನ

ಪ್ರಾಣಿಯನ್ನು ರಕ್ಷಿಸುತ್ತಿರುವ ಜನ

  • Share this:
ಈಗೀನ ಕಾಲದಲ್ಲಿ ಯಾರದೋ ಪ್ರಾಣ ಹೋಗುತ್ತಿದೆ ಎಂದರೆ ಅದನ್ನು ಕೂಡ ವಿಡಿಯೋ (Video) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಂಚಿಕೊಳ್ಳುವ ವ್ಯಕ್ತಿಗಳ ಮಧ್ಯೆ ಇವರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಒಂದು ಜೀವಿಯ ಪ್ರಾಣವನ್ನು ಕಾಪಾಡಿದ್ದಾರೆ (Saved) . ಈ ಘಟನೆ ಬಗ್ಗೆ ಯಾರೋ ಒಬ್ಬ ಪುಣ್ಯಾತ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ (Viral) ಆಗ್ತಿದೆ. ಏನಿದೆ ಈ ವಿಡಿಯೋದಲ್ಲಿ ಅಂತಹ ಇಂಟ್ರೆಸ್ಟಿಂಗ್‌ (Interesting) ವಿಷಯ ಎಂದು ಯೋಚಿಸುತ್ತಿದ್ದಿರಾ, ಅದರ ಬಗ್ಗೆ ಕಂಪ್ಲೀಟ್‌ ಮಾಹಿತಿ ನಾವು ನಿಮ್ಗೆ ನೀಡ್ತಿವಿ. ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೆ ಈ ಲೇಖನವನ್ನು ಕೊನೆಯವರೆಗೂ ಓದಿ.

ಅಪಾಯದಲ್ಲಿದ್ದ ಹಸುವಿನ ರಕ್ಷಣೆ
ಒಂದು ಹಸುವು ಬೆಟ್ಟದ ತುದಿಯಿಂದ ಬಿದ್ದಿರುವುದನ್ನು ಗಮನಿಸಿದ ಕೆಲ ಜನರು, ಅದರ ಪ್ರಾಣ ಅಪಾಯದಲ್ಲಿ ಇದೆ ಎಂದು ಅರಿತ ಕೂಡಲೇ ದೊಡ್ಡ ಹಗ್ಗಗಳನ್ನು ಬಳಸಿ ಅದನ್ನು ಮೇಲಕ್ಕೆ ಎತ್ತುತ್ತಿರುವ ದೃಶ್ಯ ಇಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ಬೆಟ್ಟದ ತುತ್ತ ತುದಿಗೆ ಈ ಹಸುವು ಮೇಯಲು ಹೋಗಿರಬಹುದು ಆಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಜೋರಾಗಿ ಕಿರುಚಾಡುತ್ತಿರುವುದು ಕೇಳಿ ಬಂದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಕೆಲವರ ಗುಂಪು ಹಸುವನ್ನು ಮೇಲಕ್ಕೆ ಎತ್ತುವ ಸಾಹಸವನ್ನು ಮಾಡಿದೆ.

ಕೊನೆಗೂ ಆ ಸಾಹಸದಲ್ಲಿ ವಿಜಯಿಶಾಲಿಯಾಗಿರುವ ವಿಡಿಯೋ ನೋಡುತ್ತಿರುವ ಪ್ರತಿಯೊಬ್ಬ ನೆಟ್ಟಿಗರು ಆ ಯುವಕರ ಗುಂಪಿಗೆ ಭೇಷ್‌ ಎಂದು ಕಮೆಂಟ್‌ ಬರೆಯುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಈ ವಿಡಿಯೋ 
ಈ ವಿಡಿಯೋ ವನ್ನು ರೆಡ್ಡಿಟ್‌ನ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ಅಲ್ಲಿ ನಡೆಯುತ್ತಿರುವ ಚರ್ಚೆಯ ಆಧಾರದ ಮೇಲೆ ಹಸು ಹುಲ್ಲು ಮೇಯುವಾಗ ಆ ಬೆಟ್ಟದಿಂದ ಕೆಳಗೆ ಬಿದ್ದಿರಬಹುದು. ಕೊನೆಗೂ ಆ ಜೀವ ತನ್ನ ಪ್ರಾಣವನ್ನು ಮತ್ತೆ ಪಡೆಯಿತು ಎಂಬ ಕಮೆಂಟ್‌ಗಳು ನೋಡಲು ಕಾಣ ಸಿಗುತ್ತವೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ ರೆಡ್ಡಿಟ್ ಬಳಕೆದಾರರು ಬ್ರೌನ್‌ಬೋಸ್ಪೀಕ್ಸ್, ಇದು ಮಹಾರಾಷ್ಟ್ರದ ಪನ್ವೆಲ್‌ನಲ್ಲಿ ಸೆರೆಹಿಡಿಯಲಾದ ಅಪರೂಪದ ವಿಡಿಯೋ ಎಂದು ಹೇಳಿದ್ದಾರೆ.

ಇದನ್ನೂ ಓದಿ: Cat And Kitten: ಬೆಕ್ಕಿನ ಮರಿಗಳ ಕ್ಯೂಟ್ ವಿಡಿಯೋ ಈಗ ಎಲ್ಲೆಡೆ ವೈರಲ್‌

ಅಂಥದ್ದೇನಿದೆ ಈ ವಿಡಿಯೋದಲ್ಲಿ 
ಈ ವಿಡಿಯೋ ದಲ್ಲಿ ಜನರು ಬೆಟ್ಟದ ಮೇಲಿಂದ ಬಿದ್ದ ಹಸುವನ್ನು ಮೇಲಕ್ಕೆ ಎಳೆಯಲು ತಮ್ಮ ಶಕ್ತಿಯನ್ನು ಮೀರಿ ಹೋರಾಡುತ್ತಿದ್ದಾರೆ. ಅವರ ಆ ಪ್ರಯತ್ನವು ತುಂಬಾ ಕಷ್ಟದಿಂದ ಇತ್ತು ಎಂದು ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ  ತಿಳಿಯುತ್ತದೆ. ಆದರೂ ಅವರು ತಮ್ಮ ಪ್ರಯತ್ನ ಮುಂದುವರಿಸಿ ಅದರಲ್ಲಿ ಯಶಸ್ವಿಯಾಗುತ್ತಾರೆ ಮತ್ತು ವಿಡಿಯೋದ ಕೊನೆಯಲ್ಲಿ ಹಸುವಿನ ಒಂದು ಕಾಲಿಗೆ ಹಗ್ಗ ಕಟ್ಟಿ ಮೇಲಕ್ಕೆ ಎತ್ತುತ್ತಿರುವ ದೃಶ್ಯವನ್ನು ಒಮ್ಮೆ ನೋಡಿದರೆ ಮೈಜುಮ್ಮೆನ್ನುತ್ತದೆ.ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ  
ಈ ವಿಡಿಯೋವನ್ನು ಸೋಮವಾರ ರೆಡ್ಡಿಟ್‌ನಲ್ಲಿ ಹಂಚಿಕೊಂಡಾಗಿನಿಂದ ಇದು 16,000 ಕ್ಕೂ ಹೆಚ್ಚು ಅಪ್‌ವೋಟ್‌ ಗಳನ್ನು ಮತ್ತು ಅನೇಕ ಕಮೆಂಟ್‌ಗಳನ್ನು ಪಡೆಯುತ್ತಿದೆ. ಒಬ್ಬ ಬಳಕೆದಾರರು “ಇದೆಂತಹ ದುರ್ಗಮ ಸ್ಥಳ, ಎಷ್ಟು ಆಳವಾಗಿದೆ ಅಲ್ವಾ?” ಎಂದು ಕಮೆಂಟ್‌ ಬರೆದರೆ ಮತ್ತೊಬ್ಬ ಬಳಕೆದಾರರು “ಈ ದೃಶ್ಯವನ್ನು ನೋಡಿದರೆ ಒಂದು ಫ್ಯಾಂಟಸಿ ಸಿನಿಮಾ ನೋಡಿದ ಅನುಭವ ನನ್ನಲ್ಲಿ ಉಂಟಾಗಿದ್ದು, ಸುಳ್ಳಲ್ಲ” ಎಂದು ಕಮೆಂಟ್‌ ಬರೆದು ಕೊಂಡಿದ್ದಾರೆ.

ಇದನ್ನೂ ಓದಿ:  Penguins: ಜಪಾನ್ ನಲ್ಲಿರುವ ಈ ಪೆಂಗ್ವಿನ್‌ಗಳು ಬರೀ ದುಬಾರಿ ಮೀನು ಮಾತ್ರ ತಿನ್ನೋದಂತೆ, ಏನ್ ಲೆವೆಲ್ ನೋಡಿ ಇವುಗಳದ್ದು!

ಹೀಗೆಯೆ ಇಂಟರ್ನೆಟ್ ಪ್ರಾಣಿಗಳ ರಕ್ಷಣೆಯ ಹಲವಾರು ವಿಡಿಯೋಗಳನ್ನು ಹೊಂದಿದೆ. ಇತ್ತೀಚಿಗೆ ಒಬ್ಬರು ಬಾವಿಯೊಳಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಕೂಡಲೇ ಅಲ್ಲಿಂದ ದೂರ ನಡೆದ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ಈ ವಿಡಿಯೋವನ್ನು ಕಳೆದ ತಿಂಗಳು ಭಾರತೀಯ ಅರಣ್ಯ ಸೇವೆಗಳ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ “ಕಾಡಿನಲ್ಲಿ ಆಳವಾದ ಬಾವಿಗಳನ್ನು ಮುಚ್ಚಿಸಿದರೆ ಇಂತಹ ಘಟನೆಗಳು ಮರುಕಳಿಸುವುದಿಲ್ಲ” ಎಂಬ ಕ್ಯಾಪ್ಷನ್‌ ನೀಡಿ ಪೋಸ್ಟ್‌ ಮಾಡಿದ್ದರು.
Published by:Ashwini Prabhu
First published: