Eye Donation: ನೀವೂ ನೇತ್ರದಾನ ಮಾಡಬೇಕಾ? ಹಾಗಾದ್ರೆ ಈ ರೀತಿ ಮಾಡಿ

Step by Step guide for Eye Donation: ನಿಮ್ಮದೊಂದು ಫೋಟೋ ಐಡಿಯ ಸಂಖ್ಯೆ ಜೊತೆಗೆ ನಿಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆ ನೀಡಬೇಕು. ನಿಮ್ಮ ವಿಳಾಸ ಬದಲಾದರೆ ಐ ಬ್ಯಾಂಕ್ ಗೆ ತಿಳಿಸಿ. ನೀವು ನೇತ್ರದಾನ ಮಾಡಲು ಬರೆದು ಕೊಟ್ಟಿರುವುದು ನಿಮ್ಮ ಕುಟುಂಬಸ್ಥರಿಗೆ ತಿಳಿದಿರಲಿ.

ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್

  • Share this:
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಬದುಕಿದ್ದಾಗ ಎಷ್ಟು ಜನರಿಗೆ ಮಾದರಿಯಾಗಿದ್ದರೋ ಸತ್ತ ನಂತರವೂ ಅದೇ ರೀತಿ ಆದರ್ಶವಾಗಿದ್ದಾರೆ. ಅಪ್ಪು ಸಾವಿನ ನಂತರ ಅವರ ಆಸೆಯಂತೆಯೇ ಅವರ ಕುಟುಂಬ ನೇತ್ರದಾನ (Eye Donation) ಮಾಡಿದೆ. ಪುನೀತ್ ತಂದೆ ವರನಟ ಡಾ ರಾಜ್ಕುಮಾರ್ ಕೂಡಾ ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದರು. ಡಾ ರಾಜ್ಕುಮಾರ್ (Dr Rajkumar) ನೇತ್ರದಾನ ಮಾಡಿದ ನಂತರ ಅನೇಕ ಅಭಿಮಾನಿಗಳು ಸ್ವ ಇಚ್ಛೆಯಿಂದ ನೇತ್ರದಾನಕ್ಕೆ ಮುಂದಾಗಿದ್ದರು. ಈಗ ಅಪ್ಪು ಸಾವಿನ ನಂತರವೂ ನೇತ್ರದಾನದ ಸರಣಿ ಮುಂದುವರೆದಿದೆ. ಯಾರು ನೇತ್ರದಾನ ಮಾಡಬಹುದು? ಅದಕ್ಕೆ ಇರುವ ನಿಯಮಗಳೇನು? ಯಾವೆಲ್ಲಾ ದಾಖಲೆ ನೀಡಬೇಕು? ಈ ಬಗ್ಗೆ ಪೂರ್ಣ ವಿವರ ಇಲ್ಲಿದೆ.

ನೇತ್ರದಾನ ಎಂದರೇನು?

ಯಾವುದೇ ವ್ಯಕ್ತಿ ಮರಣ ಹೊಂದಿದ ನಂತರ ಅವರ ಆರೋಗ್ಯವಂತ ಕಣ್ಣುಗಳನ್ನು ಪಡೆದು ಅದನ್ನು ಅಗತ್ಯ ಇರುವ ಬೇರೆ ರೋಗಿಗೆ ಕಸಿ ಶಸ್ತ್ರಚಿಕಿತ್ಸೆ ಮಾಡುವ ಸೌಕರ್ಯವಿದೆ. ತಾನು ಮರಣ ಹೊಂದಿದ ನಂತರ ತನ್ನ ಕಣ್ಣುಗಳನ್ನು ದಾನವಾಗಿ ಪಡೆಯಬಹುದು ಎಂದು ಬದುಕಿರುವಾಗಲೇ ನೋಂದಣಿ ಮಾಡಿಸಿ ಒಪ್ಪಿಗೆ ನೀಡುವುದೇ ನೇತ್ರದಾನ.

ಯಾರು ನೇತ್ರದಾನ ಮಾಡಬಹುದು?

ಯಾವುದೇ ವಯಸ್ಸಿನ ಆರೋಗ್ಯವಂತ ವ್ಯಕ್ತಿ ನೇತ್ರದಾನ ಮಾಡಬಹುದು. ಒಂದು ವೇಳೆ ದೃಷ್ಟಿ ಸಮಸ್ಯೆ ಇದ್ದರೆ ಆಗಲೂ ನೇತ್ರದಾನ ಮಾಡಬಹುದು. ಕಣ್ಣಿನ ಬೇರೆ ಬೇರೆ ಭಾಗಗಳನ್ನು ಬೇರ್ಪಡಿಸಿ ಕಸಿ ಮಾಡಲಾಗುತ್ತದೆ. ಹಾಗಾಗಿ ಒಂದು ಭಾಗ ಪ್ರಯೋಜನಕ್ಕೆ ಬಾರದಿದ್ದರೂ ಮತ್ತೊಂದು ಭಾಗವನ್ನು ಅದಕ್ಕೆ ಸೂಕ್ತವೆನಿಸುವ ರೋಗಿಗೆ ನೀಡಬಹುದಾಗಿದೆ.

ಇದನ್ನೂ ಓದಿ: Puneeth Rajkumar: ಅಪ್ಪು ಎರಡು ಕಣ್ಣುಗಳು ನಾಲ್ಕು ಜನರಿಗೆ ಬೆಳಕು ನೀಡಿವೆ, ಸಾರ್ಥಕತೆ!

ನೇತ್ರದಾನ ಮಾಡುವುದು ಹೇಗೆ?

ಯಾವುದೇ ಕಣ್ಣಿನ ಆಸ್ಪತ್ರೆ, ಅಥವಾ ಕಣ್ಣಿನ ಬ್ಯಾಂಕಿಗೆ ಹೋದರೆ ಅಲ್ಲಿ ನೇತ್ರದಾನಕ್ಕೆ ಸಂಬಂಧಿಸಿದ ಅರ್ಜಿಯೊಂದನ್ನು ನೀಡುತ್ತಾರೆ. ಅದನ್ನು ತುಂಬಿದರೆ ನೇತ್ರದಾನದ ಕ್ರಮಸಂಖ್ಯೆ ಇರುವ ಕಾರ್ಡ್ ಒಂದನ್ನು ನೀಡುತ್ತಾರೆ. ನೀವು ಈಮೇಲ್ ಮೂಲಕವೂ ಈ ಅರ್ಜಿಗಳನನು ಪಡೆದು ತುಂಬಿ ಕಳಿಸಬಹುದು. ನಿಮಗೆ ನೀಡಲಾಗುವ ಕಾರ್ಡ್ ನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ. ಪರ್ಸಿನಲ್ಲಿ ಇದ್ದರೆ ಒಳಿತು. ಇದು ಮುಂದೆ ನಿಮ್ಮ ನೇತ್ರದಾನಕ್ಕೆ ಅನುಕೂಲವಾಗುತ್ತದೆ.

ನೇತ್ರದಾನ ಮಾಡಲು ಯಾವೆಲ್ಲಾ ದಾಖಲೆಗಳನ್ನು ನೀಡಬೇಕು?

ನಿಮ್ಮದೊಂದು ಫೋಟೋ ಐಡಿಯ ಸಂಖ್ಯೆ ಜೊತೆಗೆ ನಿಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆ ನೀಡಬೇಕು. ನಿಮ್ಮ ವಿಳಾಸ ಬದಲಾದರೆ ಐ ಬ್ಯಾಂಕ್ ಗೆ ತಿಳಿಸಿ. ನೀವು ನೇತ್ರದಾನ ಮಾಡಲು ಬರೆದು ಕೊಟ್ಟಿರುವುದು ನಿಮ್ಮ ಕುಟುಂಬಸ್ಥರಿಗೆ ತಿಳಿದಿರಲಿ.

ಇದನ್ನೂ ಓದಿ: Puneeth Rajkumar: ಗರ್ಭಿಣಿ ಜಪಾನಿ ಮಹಿಳೆಯನ್ನು ಅಕ್ಕರೆಯಿಂದ ಮಾತನಾಡಿಸಿದ್ದ ಅಪ್ಪು, ಮಗನಿಗೆ ಅಣ್ಣಾವ್ರ ಚಿತ್ರದ ಹೆಸರಿಟ್ಟ ಮಹಿಳೆ!

ಸಾವು ಸಂಭವಿಸಿದ ಎಷ್ಟು ಸಮಯದೊಳಗೆ ನೇತ್ರದಾನ ಮಾಡಬೇಕು?

ಆದಷ್ಟು ಶೀಘ್ರವಾಗಿ. ವ್ಯಕ್ತಿ ಸಾವನ್ನಪ್ಪಿದ ಸಂದರ್ಭದಲ್ಲಿ ಕುಟುಂಬಸ್ಥರು ದುಃಖದಲ್ಲಿ ಇರುತ್ತಾರೆ, ನಿಜ. ಆದರೆ ಮರಣ ಸಂಭವಿಸಿದ ಕೂಡಲೇ ನೇತ್ರದಾನ ಮಾಡುವ ಆಸ್ಪತ್ರೆ ಅಥವಾ ಐ ಬ್ಯಾಂಕ್ ಗೆ ತಿಳಿಸಬೇಕು. 6ರಿಂದ 8 ಗಂಟೆಗಳೊಳಗೆ ಕಣ್ಣುಗಳನ್ನು ತೆಗೆದರೆ ಮಾತ್ರ ನೇತ್ರದಾನ ಮಾಡಿದ್ದು ಯಶಸ್ವಿಯಾಗಿ ಮತ್ತಷ್ಟು ರೋಗಿಗಳಿಗೆ ಪ್ರಯೋಜನವಾಗುತ್ತದೆ. ವ್ಯಕ್ತಿ ಯಾವುದೇ ಊರಿನಲ್ಲಿದ್ದರೂ ಐ ಬ್ಯಾಂಕ್ ನ ತಜ್ಞರು ಯಶಸ್ವಿಯಾಗಿ ಕಣ್ಣುಗಳನ್ನು ಪಡೆಯುತ್ತಾರೆ.

ನೇತ್ರದಾನ ಮಾಡಲು ಹಣ ಪಾವತಿಸಬೇಕಾ? ದಾನಿಯ ವಿವರವನ್ನು ಬಹಿರಂಗ ಪಡಿಸುತ್ತಾರಾ?

ಖಂಡಿತಾ ಇಲ್ಲ. ನೇತ್ರದಾನ ಮಾಡುವುದು ಮತ್ತು ಪಡೆಯುವುದು ಸಂಪೂರ್ಣ ಉಚಿತ. ದಾನಿಗಳು ಮತ್ತು ದಾನ ಪಡೆದ ವ್ಯಕ್ತಿಯ ಯಾವುದೇ ವಿವರಗಳನ್ನು ಹೊರಬರದಂತೆ ನೋಡಿಕೊಳ್ಳಲಾಗುತ್ತದೆ. ದಾನಿಯ ವಿವರಗಳ ಗೌಪ್ಯತೆ ಐ ಬ್ಯಾಂಕ್ ಮತ್ತು ಸಿಬ್ಬಂದಿಯ ಜವಾಬ್ದಾರಿ ಆಗಿರುತ್ತದೆ. ಬಹಳ ಜನರಿಗೆ ಬದಲಿ ಕಣ್ಣುಗಳ ಅವಶ್ಯಕತೆ ಇದೆ. ಆದರೆ ಅಗತ್ಯವಿದ್ದಷ್ಟು ಕಣ್ಣುಗಳ ದಾನ ಆಗುತ್ತಿಲ್ಲ. ಆದ್ದರಿಂದ ಇದು ಅತ್ಯುತ್ತಮ ಕಾರ್ಯ.
Published by:Soumya KN
First published: