HOME » NEWS » Trend » PEOPLE OF THIS VILLAGE SLEEP ON THE ROAD WHILE WALKING TAKE DEEP SLEEP HG

ನಡು ರಸ್ತೆಯಲ್ಲೇ ನಿದ್ರೆಗೆ ಜಾರುತ್ತಾರಂತೆ ಈ ಗ್ರಾಮದ ಜನರು!

ಹೌದು!. ಕಜಕಿಸ್ಥಾನದಲ್ಲಿರುವ ಹಳ್ಳಿಯೊಂದರ ಜನರು ನಡುರಸ್ತೆಯಲ್ಲಿಯೇ ನಿದ್ರೆಗೆ ಜಾರುತ್ತಾರಂತೆ. ಒಮ್ಮೆ ನಿದ್ದೆ ಮಾಡಿದ ನಂತರ ಅನೇಕ ದಿನಗಳವರೆಗೆ ನಿದ್ದೆ ಮಾಡುತ್ತಾರಂತೆ.

news18-kannada
Updated:January 24, 2021, 9:36 PM IST
ನಡು ರಸ್ತೆಯಲ್ಲೇ ನಿದ್ರೆಗೆ ಜಾರುತ್ತಾರಂತೆ ಈ ಗ್ರಾಮದ ಜನರು!
ಪ್ರಾತಿನಿಧಿಕ ಚಿತ್ರ (ಕೃಪೆ:ಗೂಗಲ್​)
  • Share this:
ಆರೋಗ್ಯವಂತ ವ್ಯಕ್ತಿಗೆ ನಿದ್ರೆ ಅವಶ್ಯಕ. ಹಾಗಂತ ಅತಿಯಾಗಿ ನಿದ್ದೆ ಮಾಡಿದರೂ ಜೀವಕ್ಕೆ ಅಪಾಯ. ಇನ್ನು ನಿದ್ದೆ ಕೆಟ್ಟರಂತೂ ದೇಹದಲ್ಲಿ ಕೆಲವು ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ. ಹಾಗಾಗಿ ನಿಗದಿತ ಸಮಯ ನಿದ್ರೆ ಮಾಡುವುದು ಒಳಿತು. ಆದರೆ ಇಲ್ಲೊಂದು ವಿಶೇಷ ಹಳ್ಳಿಯಿದೆ. ಅಲ್ಲಿನ ಜನರು ನಡು ರಸ್ತೆಯಲ್ಲಿ ನಿದ್ರೆಗೆ ಜಾರುತ್ತಾರಂತೆ!.

ಹೌದು!. ಕಜಕಿಸ್ಥಾನದಲ್ಲಿರುವ ಹಳ್ಳಿಯೊಂದರ ಜನರು ನಡುರಸ್ತೆಯಲ್ಲಿಯೇ ನಿದ್ರೆಗೆ ಜಾರುತ್ತಾರಂತೆ. ಒಮ್ಮೆ ನಿದ್ದೆ ಮಾಡಿದ ನಂತರ ಅನೇಕ ದಿನಗಳವರೆಗೆ ನಿದ್ದೆ ಮಾಡುತ್ತಾರಂತೆ.

ಕಲಾಚಿ ಹೆಸರಿನ ಗ್ರಾಮದ ಜನರು ನಿದ್ರೆಗೆ ಜಾರುತ್ತಾರೆ. ಆದರೆ ಯಾಕಾಗಿ ಅಲ್ಲಿನ ಜನರು ನಿದ್ದೆಗೆ ಜಾರುತ್ತಾರೆ ಎಂದು ತಿಳಿದರೆ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ!.

ಕಲಾಚಿ ಗ್ರಾಮದ ಜನರು ನಿಗೂಢ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಅಲ್ಲಿನ ಜನರು ಒಮ್ಮೆ ಮಲಗಿದರೆ ತಿಂಗಳುಗಟ್ಟಲೆ ಮಲಗುತ್ತಾರಂತೆ. ಶಾಲೆಯಲ್ಲಿ ಮಕ್ಕಳು ಕೂಡ ಹೀಗೆ ನಿದ್ರೆ ಮಾಡಲು ಪ್ರಾರಂಭಿಸಿದ್ದರಂತೆ ನಂತರ ಹಳ್ಳಿಯಲ್ಲಿಯ ಜನರು ಕೂಡ ಈ ಕಾಯಿಲೆ ತುತ್ತಾಗಿ ನಿದ್ದೆ ಮಾಡುತ್ತಾರಂತೆ.

ಏನಿದು ಕಾಯಿಲೆ?

ಕಲಾಚಿ ಗ್ರಾಮದ ಜನರು ಸ್ಲೀಪಿ ಹಾಲೋ ಕಾಯಿಲೆಗೆ ತುತ್ತಾಗಿದ್ದಾರೆ. ಈ ನಿಗೂಢ ಕಾಯಿಲೆಯ ಬಗ್ಗೆ ವಿಜ್ನಾಗಿಗಳು ನಿರಂತತರವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ವೈದ್ಯರು ಮತ್ತು ವಿಜ್ನಾನಿಗಳು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಲೀಪಿ ಹಾಲೋ ರೋಗವನ್ನು ಸಂಪೂರ್ಣ ಹೋಗಲಾಡಿಸಲು ಮುಂದಾಗಿದ್ದಾರೆ.

ಈಗಾಗಲೇ ಸುಮಾರು 600ಕ್ಕೂ ಹೆಚ್ಚಿನ ಜನರು ಈ ಕಾಯಿಲೆಗೆ ತುತ್ತಾಗಿದ್ದಾರೆ. ನಡುರಸ್ತೆಯಲ್ಲಿ, ಮಾರುಕಟ್ಟೆಯಲ್ಲಿ ಮಲಗುತ್ತಿದ್ದಾರಂತೆ.

ವಿಷಕಾರಿ ವಿಕಿರಣಗಳು ಇದಕ್ಕೆ ಕಾರಣವೇ?

ಒಂದು ಕಾಲದಲ್ಲಿ ಈ ಗ್ರಾಮದ ಪಕ್ಕದಲ್ಲಿ ಯುರೇನಿಯಂ ಗಣಿಗಾರಿಕೆ ನಡೆಯುತ್ತಿತ್ತು. ಹಾಗಾಗಿ ಗಣಿಯಿಂದ ವಿಷಕಾರಿ ವಿಕಿರಣಗಳು ಹೊರಸೂಸುತ್ತಿದ್ದವು. ಈ ವಿಕಿರಣಗಳೇ ಅಲ್ಲಿನ ಜನರ ನಿಗೂಢ ಕಾಯಿಲೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.
First published: January 24, 2021, 9:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories