ಬಂಕಾ, ಬಿಹಾರ: ಕಳ್ಳರು (Thieves), ದರೋಡೆಕೋರರು (robbers) ಚಿನ್ನ, ಬೆಳ್ಳಿ, ಬೆಲೆಬಾಳುವ ಆಭರಣ, ಹಣ, ನಗದು ನಾಣ್ಯಗಳನ್ನು ಕಳ್ಳತನ ಮಾಡುವುದು ಸಾಮಾನ್ಯವಾಗಿ ನಡೆಯುತ್ತದೆ. ಇನ್ನೂ ಮುಂದುವರೆದು ವಾಹನಗಳು, ರೈಲ್ವೇ ಇಂಜಿನ್, ಕಬ್ಬಿಣದ ಸೇತುವೆ ಕಳ್ಳತನವಾದ ಸುದ್ದಿಯನ್ನು ನೀವು ಓದಿರಬಹುದು ಅಥವಾ ಕೇಳಿರಬಹುದು. ಆದರೆ ಬಿಹಾರದ (Bihar) ಬಂಕಾ (Banka) ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಂಕಾದಲ್ಲಿ ಸುಮಾರು 2 ಕಿಲೋ ಮೀಟರ್ ಉದ್ದದ ರಸ್ತೆಯೇ (Road) ರಾತ್ರೋರಾತ್ರಿ ಕಣ್ಮರೆಯಾಗಿದ್ಯಂತೆ! ಗ್ರಾಮದಲ್ಲಿ (Village) ನಿನ್ನೆ ರಾತ್ರಿವರೆಗೂ (Night) ಆ ರಸ್ತೆಯನ್ನು ಗ್ರಾಮಸ್ಥರು ನೋಡಿದ್ದರಂತೆ, ಅದರ ಮೇಲೆ ನಡೆದಾಡಿದ್ದರು, ವಾಹನ ಓಡಿಸಿದ್ದರಂತೆ. ಆದರೆ ಬೆಳಗ್ಗೆ (Morning) ಎದ್ದು ನೋಡಿದರೆ ರಸ್ತೆಯೇ ಮಂಗಮಾಯವಾಗಿದ್ಯಂತೆ!
2 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಜನ ಓಡಾಟ
ಬಿಹಾರ ರಾಜ್ಯದ ಬಂಕಾ ಜಿಲ್ಲೆಯ ರಾಜೌನ್ ಬ್ಲಾಕ್ ಅಡಿಯಲ್ಲಿ ಖರೌನಿಯಿಂದ ಖದಂಪುರ್ ಗ್ರಾಮಕ್ಕೆ ಹೋಗುವ ರಸ್ತೆಗೆ ಸಂಬಂಧಿಸಿದೆ. ಎರಡೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಡಾಂಬರು ಕಂಡಿಲ್ಲ. ಸುಮಾರು 2 ಕಿಲೋ ಮೀಟರ್ ಉದ್ದ ರಸ್ತೆ ಇದಾಗಿತ್ತಂತೆ. ಈ ರಸ್ತೆಯಲ್ಲಿ 200 ಮೀಟರ್ ವರೆಗೆ ಮಾತ್ರ ಪಿಸಿಸಿ ಕಾಮಗಾರಿ ನಡೆದಿದೆ. ಖಾದಂಪುರ ಗ್ರಾಮದ ಜನರು ಈ ಮೂಲಕ ಬಂದು ಹೋಗುತ್ತಾರೆ.
ರಾತ್ರೋ ರಾತ್ರಿ ಮಾಯವಾಯ್ತಾ ರಸ್ತೆ?
ಬಂಕಾದಲ್ಲಿ ಸುಮಾರು 2 ಕಿಲೋ ಮೀಟರ್ ಉದ್ದದ ರಸ್ತೆಯೇ ರಾತ್ರೋರಾತ್ರಿ ಕಣ್ಮರೆಯಾಗಿದ್ಯಂತೆ! ಗ್ರಾಮದಲ್ಲಿ ನಿನ್ನೆ ರಾತ್ರಿವರೆಗೂ ಆ ರಸ್ತೆಯನ್ನು ಗ್ರಾಮಸ್ಥರು ನೋಡಿದ್ದರಂತೆ, ಅದರ ಮೇಲೆ ನಡೆದಾಡಿದ್ದರು, ವಾಹನ ಓಡಿಸಿದ್ದರಂತೆ. ಆದರೆ ಬೆಳಗ್ಗೆ ಎದ್ದು ನೋಡಿದರೆ ರಸ್ತೆಯೇ ಮಂಗಮಾಯವಾಗಿದ್ಯಂತೆ! ಗ್ರಾಮಸ್ಥರು ರಸ್ತೆ ಎಲ್ಲಿ ಹೋಯಿತು ಎಂದು ತಬ್ಬಿಬ್ಬಾದರು. ಬೆಳಗ್ಗೆ ಎದ್ದು ನೋಡಿದರೆ ರಸ್ತೆಯ ಸಂಪೂರ್ಣ ಭೌಗೋಳಿಕತೆಯೇ ಬದಲಾದಂತಿತ್ತು. ಗ್ರಾಮದ ಹಿರಿಯರಿಗೂ ಇದನ್ನು ನೋಡಿ ಆಶ್ಚರ್ಯವಾಯಿತು. ಬಾಲ್ಯದಿಂದಲೂ ಜನ ನೋಡುತ್ತಿದ್ದ ರಸ್ತೆ ಎಲ್ಲಿ ಮಾಯವಾಯಿತು ಅಂತ ಜನ ಹುಡುಕಾಡಿದ್ರಂತೆ!
ಇದನ್ನೂ ಓದಿ: Marriage Cancel: ಮದುವೆ ಮನೆಯಲ್ಲಿ 'ಕೋಳಿ' ಜಗಳ! ಸ್ನೇಹಿತರಿಗೆ ಚಿಕನ್ ಬಡಿಸಿಲ್ಲ ಅಂತ ತಾಳಿ ಕಟ್ಟಲ್ಲ ಎಂದ ವರ!
ಅಸಲಿಗೆ ಅಲ್ಲಿ ಆಗಿದ್ದೇನು?
ಅಸಲಿಗೆ ಇಲ್ಲಿ ಆಗಿದ್ದು ಇಷ್ಟು.. ಈ ರಸ್ತೆಯಲ್ಲಿ ಖೈರಾನಿ ಗ್ರಾಮದ ಕೆಲ ಪುಂಡರು ರಾತ್ರೋರಾತ್ರಿ ಉಳುಮೆ ಮಾಡಿ ಗೋಧಿ ಬಿತ್ತಿದ್ದರು. ರಸ್ತೆಯನ್ನು ಕಿತ್ತು, ಭೂಮಿ ಸಮತಟ್ಟು ಮಾಡಿ, ಅಲ್ಲಿ ಉಳುಮೆ ಮಾಡಿ, ಗೋಧಿ ಹಾಕಿದ್ದರು. ಹೀಗಾಗಿ ರಸ್ತೆ ಇದ್ದ ಕಡೆ ಈಗ ಹೊಲಗಳೇ ಕಾಣುತ್ತಿವೆ. ಸುಮಾರು ಒಂದು ಕಿಲೋಮೀಟರ್ ರಸ್ತೆಯನ್ನು ಉಳುಮೆ ಮಾಡಿ ಗೋಧಿ ಬಿತ್ತನೆ ಮಾಡಲಾಗಿದೆ.
ಅಧಿಕಾರಿಗಳಿಗೆ ಗ್ರಾಮಸ್ಥರಿಂದ ಅರ್ಜಿ
ಖೇರೋಣಿ, ಖಾದಾಂಪುರ ಗ್ರಾಮಗಳಿಗೆ ಹೋಗುವ ಮುಖ್ಯರಸ್ತೆಯಲ್ಲಿ ಗೋಧಿ ಬಿತ್ತನೆ ಮಾಡಲಾಗಿದೆ ಎಂದು ಗ್ರಾಮದ ಜನರು ತಿಳಿಸಿದರು. ಈ ಬಳಿಕ ಗ್ರಾಮಸ್ಥರೆಲ್ಲ ಸೇರಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಖಾದಂಪುರ ಗ್ರಾಮದ ಪ್ರಮೋದ್ ಸಿಂಗ್, ರಿತು ಕುಮಾರಿ, ಅಶುತೋಷ್ ಸಿಂಗ್, ಅನಿತಾದೇವಿ ಸೇರಿದಂತೆ 40 ಮಂದಿ ಸಿಒ ಮೊಯಿನುದ್ದೀನ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.
ಪುನಃ ರಸ್ತೆ ನಿರ್ಮಿಸುವಂತೆ ಮನವಿ
ನಮ್ಮ ಹಿರಿಯರೂ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಅಂದರೆ ದಶಕಗಳಿಂದ ಈ ರಸ್ತೆಯ ಮೂಲಕ ಗ್ರಾಮಕ್ಕೆ ಬಂದು ಹೋಗುತ್ತೇವೆ, ಆದರೆ ಈ ಬಾರಿ ಏಕಾಏಕಿ ಖೇರೋಣಿ ಗ್ರಾಮದ ಜನರು ಟ್ರ್ಯಾಕ್ಟರ್ ಮೂಲಕ ರಸ್ತೆ ಉಳುಮೆ ಮಾಡಿ ಅದರ ಮೇಲೆ ಗೋಧಿ ಬಿತ್ತಿದ್ದಾರೆ. ರಸ್ತೆ ಇದ್ದ ಜಾಗ ಈಗ ಸಂಪೂರ್ಣ ಹೊಲವಾಗಿ ಮಾರ್ಪಟ್ಟಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ. ಇದರೊಂದಿಗೆ ರಸ್ತೆಯಲ್ಲಿ ಮುಳ್ಳಿನ ಪೊದೆಗಳನ್ನು ಹಾಕಲಾಗಿದೆ. ಇದರಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಪುನಃ ಆ ರಸ್ತೆ ನಿರ್ಮಿಸಿಕೊಡಿ ಅಂತ ಮನವಿ ಮಾಡಿದ್ದಾರೆ.
ರಸ್ತೆ ನಿರ್ಮಾಣಕ್ಕೆ ಕೆಲವರಿಂದ ವಿರೋಧ
ಮತ್ತೊಂದೆಡೆ, ಖರೌನಿ ಗ್ರಾಮದ ಜನರು ತಮ್ಮ ರಸ್ತೆ ಎಂದು ಹೇಳುತ್ತಿರುವ ಜಮೀನು ನಮಗೆ ಸೇರಿದೆ ಎಂದು ಕೆಲವರು ತಕರಾರು ತೆಗೆದಿದ್ದಾರೆ. ಈ ಜಮೀನು ನಕ್ಷೆಯಲ್ಲಿಯೂ ಇದೆ, ಆದರೆ ಅವರು ಬಲವಂತವಾಗಿ ಖಾಸಗಿ ಭೂಮಿಯನ್ನು ರಸ್ತೆಯನ್ನಾಗಿ ಮಾಡುತ್ತಿದ್ದಾರೆ ಅಂತ ಆರೋಪಿಸಿದ್ದಾರೆ.
ಇದನ್ನೂ ಓದಿ: Cat Missing: ಹೆಸರು ಫ್ರೀಡಾ, 5 ವರ್ಷ, ಬೆಂಗಳೂರು ಏರ್ಪೋರ್ಟ್ನಲ್ಲಿ ಕಾಣೆಯಾಗಿದೆ!
ಘಟನೆ ಬಗ್ಗೆ ಸಿಒ ಹೇಳಿದ್ದೇನು?
ಇನ್ನು ಇಲ್ಲಿನ ಸಿಒ ಮೊಯಿನುದ್ದೀನ್ ಮಾತನಾಡಿ, ರಸ್ತೆ ಒತ್ತುವರಿ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಂದಾಯ ನೌಕರನನ್ನು ಕಳುಹಿಸಿ ತನಿಖೆ ನಡೆಸಲಾಗುವುದು. ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ