ವಿದೇಶದಲ್ಲಿ ಶುರುವಾಯ್ತು ‘ಲಿಪ್​​ ಚಾಲೆಂಜ್​‘; ಭಾರತೀಯರನ್ನು ಹುಚ್ಚೆಬ್ಬಿಸಲಿದೆಯಾ ಈ ಕ್ರೇಜ್​​!

ಸೆಲೆಬ್ರಿಟಿಗಳು  ‘ಯೋಗ ಚಾಲೆಂಜ್‘​, ‘ಫಿಟ್​ನೆಸ್ ಚಾಲೆಂಜ್‘​ ಹುಟ್ಟು ಹಾಕಿದರೆ. ಇನ್ನೂ ಕೆಲವರು ವಿಚಿತ್ರ ‘ಕಿಕಿ ಚಾಲೆಂಜ್‘​, ‘ಜಿರಳೆ ಚಾಲೆಂಜ್‘​ಗಳನ್ನು ಹುಟ್ಟು ಹಾಕಿದ್ದಾರೆ. ಅನೇಕರು ಈ ಚಾಲೆಂಜ್​​ಗಳನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸಿದ್ದು ಆಗಿದೆ. ಇದೀಗ  ಹೊಸದಾದ ‘ಲಿಪ್​ ಚಾಲೆಂಜ್​‘ ಹುಟ್ಟಿಕೊಂಡಿದ್ದು, ಮತ್ತೊಮ್ಮೆ ಚಾಲೆಂಜ್​ ಪ್ರಿಯರನ್ನು ಹುಚ್ಚೆಬ್ಬಿಸಿದೆ.

news18-kannada
Updated:September 12, 2019, 7:52 AM IST
ವಿದೇಶದಲ್ಲಿ ಶುರುವಾಯ್ತು ‘ಲಿಪ್​​ ಚಾಲೆಂಜ್​‘; ಭಾರತೀಯರನ್ನು ಹುಚ್ಚೆಬ್ಬಿಸಲಿದೆಯಾ ಈ ಕ್ರೇಜ್​​!
ಪ್ರಾತಿನಿಧಿಕ ಚಿತ್ರ
  • Share this:
ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದಂತೆ ಏನಾದರೊಂದು ಸುದ್ದಿಯಾಗುತ್ತಲೇ ಇರುತ್ತದೆ. ಕೆಲವರು ಸುದ್ದಿಯಾಗಬೇಕು ಎಂದು ಸುದ್ದಿ ಮಾಡುವವರಾದರೆ ಇನ್ನು ಕೆಲವರು ಇದಾವುದರ ಗೋಜಿಗೆ ಹೋಗದೆ ಸುಮ್ಮನಿರುತ್ತಾರೆ. ಆದರೆ ಸಾಮಾಜಿಕ ಜಾಲತಾಣ ಸುದ್ದಿಯಾಗುವವರು, ಸುದ್ದಿಯನ್ನು ಬಯಸದವರು ಎಲ್ಲರನ್ನೂ ಸುದ್ದಿಯನ್ನಾಗಿಸುತ್ತದೆ.

ಫೇಸ್​ಬುಕ್​, ಟ್ವಿಟ್ಟರ್​, ಇನ್​ಸ್ಟಾಗ್ರಾಂ, ಟಿಕ್​ಟಾಕ್​, ಹೆಲೋ ಆ್ಯಪ್​ಗಳು ಬಂದ ಮೇಲೆ ಹೊಸ ಹೊಸ ಚಾಲೆಂಜ್​ಗಳು​ ಹುಟ್ಟಿಕೊಂಡಿವೆ. ಸೆಲೆಬ್ರಿಟಿಗಳು  ‘ಯೋಗ ಚಾಲೆಂಜ್‘​, ‘ಫಿಟ್​ನೆಸ್ ಚಾಲೆಂಜ್‘​ ‘ಕ್ಯಾಪ್​ ಚಾಲೆಂಜ್​‘ ಹುಟ್ಟು ಹಾಕಿದರೆ. ಇನ್ನೂ ಕೆಲವರು ವಿಚಿತ್ರ ‘ಕಿಕಿ ಚಾಲೆಂಜ್‘​, ‘ಜಿರಳೆ ಚಾಲೆಂಜ್‘​ಗಳನ್ನು ಹುಟ್ಟು ಹಾಕಿದ್ದಾರೆ. ಅನೇಕರು ಈ ಚಾಲೆಂಜ್​​ಗಳನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸಿದ್ದು ಆಗಿದೆ. ಇದೀಗ  ಹೊಸದಾದ ‘ಲಿಪ್​ ಚಾಲೆಂಜ್​‘ ಹುಟ್ಟಿಕೊಂಡಿದ್ದು, ಮತ್ತೊಮ್ಮೆ ಚಾಲೆಂಜ್​ ಪ್ರಿಯರನ್ನು ಹುಚ್ಚೆಬ್ಬಿಸಿದೆ.

 

ವಿದೇಶದಲ್ಲಿ ಪ್ರಾರಂಭವಾದ ಈ ‘ಲಿಪ್​ ಚಾಲೆಂಜ್‘​ ಇದೀಗ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ವಿಚಿತ್ರವಾದ ಈ ‘ಲಿಪ್ ​ಚಾಲೆಂಜ್‘​ ಮಾಡುವವರು ತುಟಿಯ ಮೇಲ್ಭಾಗವನ್ನು ಮೂಗಿನ ಕೆಳಗಿನ ಭಾಗದ ಚರ್ಮಕ್ಕೆ ಗಮ್​ ಬಳಸಿ ಅಂಟಿಸಿಕೊಳ್ಳುತ್ತಾರೆ. ನಂತರ ಅಂಟಿಸಿಕೊಂಡ ತುಟಿಗಳಿಗೆ ಲಿಫ್ಟ್​ಸ್ಟಿಕ್​ ಹಚ್ಚಿಕೊಳ್ಳುತ್ತಾರೆ. ಈ ರೀತಿ ಪ್ರಯೋಗ ಮಾಡಿದ ವಿಡಿಯೋವನ್ನು ಟ್ಟಿಟ್ಟರ್​ ಮತ್ತು ಟಿಕ್​ಟಾಕ್​ನಲ್ಲಿ ಹರಿಯಬಿಡುತ್ತಿದ್ದಾರೆ.ವಿದೇಶದಲ್ಲಿ ‘ಮ‘ ಕಾರದ ಬಳಕೆ ಕಡಿಮೆ. ತುಟಿಯನ್ನು ಮೂಗಿನ ಚರ್ಮಕ್ಕೆ ಅಂಟಿಸುವುದರಿಂದ ಮಾತನಾಡಲು ಕಷ್ಟವಾಗುವುದಿಲ್ಲ. ಹಾಗಾಗಿ ಲಿಪ್​​ ಚಾಲೆಂಜ್​ ವಿದೇಶದಲ್ಲಿ ಹೆಚ್ಚು ಟ್ರೆಂಡ್​ ಸೃಷ್ಟಿಸಿದೆ.

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ