ಸಾಮಾನ್ಯವಾಗಿ ನಾವು ಬೆಳಗ್ಗೆ ಹೊತ್ತಿನಲ್ಲಿ ಊರಿಂದಾಚೆ ಇರುವ ಹೊಲಗದ್ದೆಗಳಲ್ಲಿ ನವಿಲುಗಳು (Peacock) ಗುಂಪು ಗುಂಪಾಗಿ ಓಡಾಡುವುದನ್ನು ನೋಡಿರುತ್ತೇವೆ. ಸುಂದರ ನವಿಲುಗಳನ್ನು ನೋಡುವುದಕ್ಕೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ವಿಶ್ವದ ಅತ್ಯಂತ ಸುಂದರವಾದ ಪಕ್ಷಿಗಳಲ್ಲಿ (Bird) ನವಿಲು ಒಂದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ನವಿಲು ಸುಮ್ಮನೆ ಅತ್ತಿಂದಿತ್ತ ಹೆಜ್ಜೆ ಹಾಕಿಕೊಂಡು ಓಡಾಡಿದರೂ ಸುಂದರವಾಗಿ ಕಾಣುತ್ತೆ ಮತ್ತು ಅದು ತನ್ನ ಹಸಿರು ಮತ್ತು ನೀಲಿ ಬಣ್ಣಗಳಿಂದ (Blue Color) ಕೂಡಿದ ಉದ್ದವಾದ ಗರಿಗಳನ್ನು ತೆರೆದುಕೊಂಡು ಓಡಾಡುತ್ತಿರುವಾಗಲಂತೂ ಅದನ್ನು ನೋಡುವುದು ಕಣ್ಣಿಗೆ (Eye) ಒಂದು ಹಬ್ಬವಿದ್ದಂತೆ ಅಂತ ಹೇಳಬಹುದು.
ಈಗಾಗಲೇ ನಾವು ನವಿಲಿನ ಸುಂದರವಾದ ವೀಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ನೋಡಿರುತ್ತೇವೆ. ಇಲ್ಲಿ ಇನ್ನೊಂದು ಹೊಸ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಬಣ್ಣ ಬಣ್ಣದ ಗರಿಗಳು ಮತ್ತು ಫ್ಯಾನ್ ಆಕಾರದ ಬಾಲ ಮತ್ತು ಅದರ ಪುಟ್ಟ ಪುಟ್ಟ ಕಣ್ಣುಗಳು ಮತ್ತು ಅದರ ಕುತ್ತಿಗೆಯನ್ನು ಮುಂದಕ್ಕೆ ಹಿಂದಕ್ಕೆ ಅಲುಗಾಡಿಸುತ್ತಾ ನೋಡುಗರನ್ನು ಬೆರಗುಗೊಳಿಸುತ್ತವೆ ಅಂತ ಹೇಳಬಹುದು. ಈಗ, ರಾಷ್ಟ್ರೀಯ ಪಕ್ಷಿಯನ್ನು ಒಳಗೊಂಡ ಸುಂದರವಾದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಮತ್ತು ನೆಟ್ಟಿಗರು ಅದನ್ನು ನೋಡಿ ಮಂತ್ರಮುಗ್ಧರಾಗಿದ್ದಾರೆ.
ಐಎಎಸ್ ಅಧಿಕಾರಿ ಹಂಚಿಕೊಂಡ ವೀಡಿಯೋದಲ್ಲಿ ಏನಿದೆ?
ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಸುಪ್ರಿಯಾ ಸಾಹು ಈ ಕ್ಲಿಪ್ ಅನ್ನು "ಭಾರತದ ರಾಷ್ಟ್ರೀಯ ಪಕ್ಷಿಯ ಮೋಡಿ ಮಾಡುವ ಸೌಂದರ್ಯ ಮತ್ತು ಸಾಟಿಯಿಲ್ಲದ ಸೊಬಗು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ನವಿಲಿನ ಚಲನೆ, ಅದರ ಭವ್ಯವಾದ ಬಾಲ ಮತ್ತು ನೀಲಿ, ಚಿನ್ನ ಮತ್ತು ಇತರ ಬಣ್ಣಗಳಲ್ಲಿ ಅದರ ವರ್ಣರಂಜಿತ ಗುರುತುಗಳನ್ನು ಈ ವೀಡಿಯೋ ಸಂಪೂರ್ಣವಾಗಿ ಸೆರೆ ಹಿಡಿದಿದೆ ಅಂತ ಹೇಳಬಹುದು.
ಇದನ್ನೂ ಓದಿ: ಹೆಸರು ಫ್ರೀಡಾ, 5 ವರ್ಷ, ಬೆಂಗಳೂರು ಏರ್ಪೋರ್ಟ್ನಲ್ಲಿ ಕಾಣೆಯಾಗಿದೆ!
38 ಸೆಕೆಂಡುಗಳ ಈ ಕ್ಲಿಪ್ ನಲ್ಲಿ ನವಿಲು ಹಾಗೆಯೇ ಒಂದು ದಿಬ್ಬದ ಹಿಂದಿನಿಂದ ಹಾಗೆಯೇ ಮೆಲ್ಲಗೆ ಬಂದು ಅಲ್ಲಿಯೇ ಸುತ್ತಲೂ ನಡೆದುಕೊಂಡು ಹೋಗುವುದನ್ನು ಮತ್ತು ಅರಣ್ಯದಲ್ಲಿನ ಸುತ್ತಮುತ್ತಲಿನ ಪರಿಸರವನ್ನು ಗಮನಿಸುವುದನ್ನು ನೋಡಬಹುದು. ಇದು ನಿಧಾನವಾಗಿ ಮುಂದಕ್ಕೆ ಚಲಿಸುವುದನ್ನು ಮತ್ತು ತನ್ನ ಸುಂದರವಾದ ಉದ್ದನೆಯ ಬಾಲವನ್ನು ಹಾಗೆಯೇ ಪ್ರದರ್ಶಿಸುವುದನ್ನು ಕಾಣಬಹುದು.
The grace,the enchanting beauty and the unmatched elegance of India's National Bird ❤️ #peacock #nationalbird @incredibleindia #mudumalai video -SS pic.twitter.com/XlHncgmtmP
— Supriya Sahu IAS (@supriyasahuias) November 26, 2022
ನವಿಲಿನ ವೀಡಿಯೋ ನೋಡಿ ಕಾಮೆಂಟ್ ಮಾಡಿದ ನೆಟ್ಟಿಗರು
ಕಾಮೆಂಟ್ ವಿಭಾಗದಲ್ಲಿ, ಕೆಲವು ಬಳಕೆದಾರರು ನವಿಲನ್ನು "ಸುಂದರವಾಗಿದೆ" ಅಂತ ಹೇಳಿದರೆ, ಇತರರು ಅದನ್ನು "ಭವ್ಯವಾಗಿದೆ" ಎಂದು ಹೇಳಿದ್ದಾರೆ.
"ಜನರು ಈ ರೂಪಕವನ್ನು ಬಳಸಿದಾಗ ಅದು ಎಷ್ಟು ಸೊಗಸಾಗಿದೆ ಎಂದು ಆ ಸುಂದರವಾದ ಕಣ್ಣುಗಳನ್ನು ನೋಡಿ ಹೇಳಬಹುದು" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ. "ಭಾರತದ ರಾಷ್ಟ್ರೀಯ ಪಕ್ಷಿ ತುಂಬಾ ಸುಂದರವಾಗಿದೆ" ಎಂದು ಇನ್ನೊಬ್ಬರು ಹೇಳಿದರು. "ನವಿಲಿನ ನಡಿಗೆ, ನಿಜವಾಗಿಯೂ ಅದ್ಭುತವಾಗಿದೆ" ಎಂದು ಮೂರನೆಯವನು ಕಾಮೆಂಟ್ ಮಾಡಿದರು. "ನಿಜವಾಗಿಯೂ ಸುಂದರವಾಗಿದೆ" ಎಂದು ನಾಲ್ಕನೆಯವರು ಕಾಮೆಂಟ್ ಮಾಡಿದರು.
ಇದನ್ನೂ ಓದಿ: 30 ವರ್ಷಗಳ ಹಿಂದೆ ಸಂರಕ್ಷಿಸಿದ ಭ್ರೂಣ, ಅವಳಿ ಮಕ್ಕಳನ್ನು ಪಡೆದ ದಂಪತಿ; ಅಚ್ಚರಿಯಾದರೂ ಇದು ಸತ್ಯ!
ಏತನ್ಮಧ್ಯೆ, ವರ್ಣರಂಜಿತ ಪಕ್ಷಿಗಳ ವೀಡಿಯೋಗಳು ನೆಟ್ಟಿಗರನ್ನು ಮೆಚ್ಚಿಸುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಸ್ವಲ್ಪ ಸಮಯದ ಹಿಂದೆ ಅಪರೂಪದ "ಸ್ಮೋಕಿಂಗ್ ಬರ್ಡ್" ನ ಬೆರಗುಗೊಳಿಸುವ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಿಗ್ಭ್ರಮೆಗೊಳಿಸಿತ್ತು. ಇಂಟರ್ನೆಟ್ ಬಳಕೆದಾರರು ಈ ಪಕ್ಷಿಯನ್ನು ಬೇರ್-ಗಂಟಲಿನ ಬೆಲ್ ಬರ್ಡ್ ಎಂದು ಗುರುತಿಸಿದ್ದಾರೆ, ಇದು ಮುಖ್ಯವಾಗಿ ಬ್ರೆಜಿಲ್ ನಲ್ಲಿ ಕಂಡು ಬರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ