ಬಿಕ್ಕಿ ಬಿಕ್ಕಿ ಅತ್ತು ಎಪ್ರಿಲ್​ ಫೂಲ್​ ಎಂದ ನಿರ್ದೇಶಕ ಪವನ್​ ಕುಮಾರ್​

nataraj karanth
Updated:April 3, 2018, 6:40 PM IST
ಬಿಕ್ಕಿ ಬಿಕ್ಕಿ ಅತ್ತು ಎಪ್ರಿಲ್​ ಫೂಲ್​ ಎಂದ ನಿರ್ದೇಶಕ ಪವನ್​ ಕುಮಾರ್​
PC: Facebook
nataraj karanth
Updated: April 3, 2018, 6:40 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಎಪ್ರಿಲ್​ 03): ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಪವನ್​ ಕುಮಾರ್​ ಬಿಕ್ಕಿ ಬಿಕ್ಕಿ ಅತ್ತ ವೀಡಿಯೋ ಸಾಕಷ್ಟು ವೈರಲ್​ ಆಗಿದೆ, ಭಾನುವಾರದಂದು ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಗುಲ್ಟು ಚಿತ್ರದ ಕುರಿತು ಲೈವ್​ ಬಂದಿದ್ದ ಪವನ್​ ಗುಲ್ಟು ಒನ್​ ಚಿತ್ರ ನಿರ್ಮಿಸಿ, ಇದರಲ್ಲಿ ತಾವೇ ಹೀರೋ ಆಗಿ ನಟಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಪವನ್​ ಅಭಿಮಾನಿಗಳು ಎಪ್ರಿಲ್​ ಪೂಲ್​ ಮಾಡಬೇಡಿ ಎಂದು ಹೇಳಿದ್ದರು.

ಈ ಪ್ರತಿಕ್ರಿಯೆ ಕೇಳಿ ಬಂದ ಬೆನ್ನಲ್ಲೇ ಮತ್ತೊಂದು ವೀಡಿಯೋವನ್ನು ಫೇಸ್​ಬುಕ್​ನಲ್ಲಿ ಬಿಟ್ಟ ಪವನ್​, 6 ಕೋಟಿ  ಕನ್ನಡಿಗರು ನನಗೆ ಬೇಸರವುಂಟು ಮಾಡಿದ್ದೀರಿ ಎಂಬ ಶೀರ್ಷಿಕೆಯನ್ನಿಟ್ಟು ಕಣ್ಣೀರು ಸುರಿಸಿ 'ನಾನು ಒಂದು ಸಿನಿಮಾದಲ್ಲಿ ಹೀರೋ ಆಗುತ್ತೇನೆ ಎಂದು ಅನೌನ್ಸ್‌ ಮಾಡಿದರೆ ಅದನ್ನು ತಮಾಷೆ ಎನ್ನುತ್ತೀರಾ? ಏಪ್ರಿಲ್‌ ಫೂಲ್‌ ಎಂದು ಹೀಯಾಳಿಸುತ್ತೀರಾ?' ಎಂದು ಪ್ರಶ್ನಿಸಿದ್ದಾರೆ.

'ನಾನು ಪವನ್​ ಶೆಟ್ಟಿ ಅಲ್ಲ, ಪವನ್​ ಭಂಡಾರಿ ಅಲ್ಲ ನಾನು ಮಂಡ್ಯದಿಂದ ಬಂದಿಲ್ಲ ಎಂಬ ಕಾರಣಕ್ಕೆ ನಾನು ಹೀರೋ ಆಗಿ ಅಭಿನಯ ಮಾಡುತ್ತೇನೆ ಎಂದು ಹೇಳಿರುವುದನ್ನು ಜೋಕ್​ ಎಂದುಕೊಳ್ಳುತ್ತಾರೆ. ಜೆಪಿನಗದಲ್ಲಿ ಇರುವವರು ಯಾರೂ ಹೀರೋ ಆಗಬಾರದ ? ಬತ್ತದೆ, ಹೋಯ್ತದೆ ಅಂತ ಹೇಳಿದಾಕ್ಷಣ ನಾನು ಹೀರೋ ಆಗಕ್ಕೆ ಆಗಲ್ಷಾ ಎಂದು ಹೇಳಿ ಅತ್ತು ವೀಡಿಯೋವನ್ನು ಎಂಡ್​' ಮಾಡಿದ್ದಾರೆ.


Loading...ಈ ವೀಡಿಯೋ ಬಹಳಷ್ಟು ವೈರಲ್​ ಆಗಿತ್ತು, ವೀಡಿಯೋ ಕಂಡು ಹಲವಾರು ನಾಯಕರೂ ಸಹ ಪವನ್​ಗೆ ಸಾಂತ್ವಾನ ವ್ಯಕ್ತ ಪಡಿಸಿ ಬೆಂಬಲ ಸೂಚಿಸಿದ್ದರು. ಆದರೆ ಈ ಎರಡು ವಿಡಿಯೋಗಳು ಪ್ರಾಂಕ್‌ಗಳಾಗಿವೆ!. ಈ ಕುರಿತು ಸ್ವತಃ ಪವನ್​ ತಮ್ಮ ಖಾತೆಯಲ್ಲಿ ಸೋಮವಾರ ಮತ್ತೊಂದು ವೀಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಅಲ್ಲದೇ ತಮ್ಮ ಮೇಲಿಟ್ಟಿರುವ ಅಭಿಮಾನಕ್ಕೆ ಧನ್ಯವಾದ ಹೇಳಿದ್ದಾರೆ.
First published:April 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...